Posts

Showing posts from April, 2018

ದಿನಕ್ಕೊಂದು ಕಥೆ 785

*🌻ದಿನಕ್ಕೊಂದು ಕಥೆ🌻                               ಷೋರೂಮ್ ಮಾಲೀಕನಾದ ಗ್ಯಾರೇಜ್ ಸೀನ* ಈತನ ಹೆಸರು ಶ್ರೀನಿವಾಸ್ ರಾವ್ ಜಾಧವ್. ಆದರೆ ಅಷ್ಟುದ್ದ ಹೆಸರು ಹೇಳಿದರೆ, ಬಹುಶಃ ಯಾರಿಗೂ ಈತನ ಪರಿಚಯ ಸಿಗುವುದಿಲ್ಲ. ಅದೇ ‘ಗ್ಯಾರೇಜ್ ಸೀನ’ ಎಂದರೆ ನಮ್ಮ ಏರಿಯಾದಲ್ಲೆಲ್ಲ ಚಿರಪರಿಚಿತ. ಏಕೆಂದರೆ, ಮೈಸೂರಿನ ಸಿದ್ಧಾರ್ಥ ಬಡಾವಣೆಯ ಬಹುತೇಕ ಎಲ್ಲರ ಮನೆಯಲ್ಲೂ ದ್ವಿಚಕ್ರ ವಾಹನ ಇದ್ದೇ ಇರುತ್ತದೆ. ಕಳೆದ 30 ವರ್ಷಗಳಲ್ಲಿ ಅಂಥ ವಾಹನಗಳು ಯಾವ ಸಣ್ಣ ದೊಡ್ಡ ತೊಂದರೆ ಅನುಭವಿಸಿದ್ದರೂ, ಶೇ. 90 ಪ್ರಕರಣಗಳಲ್ಲಿ ಅದನ್ನು ಸರಿ ಮಾಡಿಕೊಟ್ಟಿರಬಹುದಾದ ವ್ಯಕ್ತಿ ನಮ್ಮ ಗ್ಯಾರೇಜ್ ಸೀನ. ಸೀನ ನನಗೆ ಪರಿಚಯವಾದದ್ದು ಕ್ರಿಕೆಟ್ ಮೈದಾನದಲ್ಲಿ. ನಾವವನನ್ನು ಹತ್ತು ಬಾರಿ ಆಡಲು ಕರೆದರೆ, ಅವನು ನಾಲ್ಕೈದು ಬಾರಿ ಮಾತ್ರ ಬರುತ್ತಿದ್ದ. ಏಕೆಂದರೆ, ನಾವೆಲ್ಲ ಪೆನ್ನು ಹಿಡಿಯಲು ಕಲಿಯುತ್ತಿದ್ದ ವಯಸ್ಸಿಗಾಗಲೇ ಸೀನ ಸ್ಪ್ಯಾನರ್ ಹಿಡಿದಿದ್ದ. ನಾವೆಲ್ಲರೂ ಕಾಲೇಜು ಮೆಟ್ಟಿಲೇರುವ ಹೊತ್ತಿಗೆ ಸೀನ ಪರಿಣತ ಟೂವೀಲರ್ ಮೆಕ್ಯಾನಿಕ್ ಆಗಿ ಹೆಸರು ಸಂಪಾದಿಸಿದ್ದ. ಕಾಲೇಜು ಮೆಟ್ಟಿಲನ್ನು ಅರ್ಧ ಮಾತ್ರವೇ ಏರಿದ್ದರೂ, ಸನ್ನಡತೆ-ಕಾರ್ಯಕೌಶಲದಿಂದ ಎಲ್ಲರ ಗೌರವ, ಪ್ರೀತಿ ಸಂಪಾದಿಸಿದ. ನಾನು ನನ್ನದೇ ವೃತ್ತಿಪಯಣದಲ್ಲಿ ಬಿಜಿಯಾಗಿದ್ದ ಕಳೆದೆರಡು ದಶಕಗಳಲ್ಲಿ ಸೀನನನ್ನು ಭೇಟಿ ಮಾಡಿದ್ದೆನಾದರೂ ದೀರ್ಘವಾದ ಸಂಭಾಷಣೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ನಾನು ಮೈಸೂರಿಗೆ

ದಿನಕ್ಕೊಂದು ಕಥೆ 784

*🌻ದಿನಕ್ಕೊಂದು ಕಥೆ🌻                  ಪವಾಡಗಳು ಮುಖ್ಯವಲ್ಲ* ಧರ್ಮಕ್ಕೆ ಸಂಬಂಧಿಸಿದ ಕತೆ, ಕಾವ್ಯ, ಪುರಾಣಗಳಲ್ಲಿ ಜನಸಾಮಾನ್ಯರ ಆಸಕ್ತಿ, ಗಮನಗಳನ್ನು ಸೆಳೆಯಲೆಂದು ಕೆಲವೊಂದು ಅದ್ಭುತವಾದ, ಚಮತ್ಕಾರದ, ಪವಾಡದ ಪ್ರಸಂಗಗಳನ್ನು ಜೋಡಿಸುವುದಿದೆ. ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ಕೆಲವು ಅಲ್ಪ ಜ್ಞಾನಿಗಳು ಧಾರ್ಮಿಕ ರಂಗದ ಸಾಧನೆ, ಸಿದ್ಧಿಗಳು ಕೇವಲ ಚಮತ್ಕಾರದ ಶಕ್ತಿ, ಪವಾಡಗಳ ಸಂಪಾದನೆ ಮಾತ್ರವೆಂದು ಭಾವಿಸುವುದಿದೆ. ಅಂಥವರ ಕಣ್ಣು ತೆರೆಯಿಸುವಂತಹ ಒಂದು ಪ್ರಸಂಗ ಇಲ್ಲಿದೆ. ಸ್ವಾಮಿ ರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ರಂಗದ ಸಾಧನೆಯ ಮೂಲಕ ಇಡೀ ವಿಶ್ವದ ಗಮನವನ್ನು ಸೆಳೆದಿದ್ದರು. ಆದರೆ ಕೆಲವು ಸಂತರಿಗೆ ಈ ಕುರಿತು ಮತ್ಸರ ಉಂಟಾಗಿತ್ತು. ಅಂತಹ ಮತ್ಸರಿಗಳಲ್ಲಿ ಒಬ್ಬ ಯೋಗಿಯೂ ಇದ್ದನು. ಆತನು ಪರಮಹಂಸರ ಬಳಿ ಬಂದು ಹೇಳಿದ- ''ಮಹಾಶಯರೇ, ನೀವು ನನ್ನ ಮುಂದೆ ಒಂದು ಚಮತ್ಕಾರ ಮಾಡಿ ತೋರಿಸಿದರೆ ನಾನು ನಿಮ್ಮನ್ನು ಶ್ರೇಷ್ಠ ಪರಮಹಂಸರೆಂದು ಒಪ್ಪುತ್ತೇನೆ. ಹನುಮಂತನು ಒಂದೇ ಜಿಗಿತದಲ್ಲಿ ಸಮುದ್ರ ದಾಟಿದ್ದ. ನೀವು ಅಂತಹುದೇ ಚಮತ್ಕಾರ ಮಾಡಿ ತೋರಿಸಿರಿ. ನೀರಿನ ಮೇಲೆ ನಡೆಯಿರಿ''. ಮುಗುಳುನಗುತ್ತಾ ಪರಮಹಂಸರು ನುಡಿದರು- ''ನಿನಗೆ ತಪ್ಪು ಕಲ್ಪನೆ ಉಂಟಾಗಿದೆ. ನಾನು ಅಂತಹ ಚಮತ್ಕಾರ ಮಾಡಲಾರೆನು. ನೀರಿನ ಮೇಲೆ ನಡೆಯಲು ಸಾಧ್ಯವಿಲ್ಲ''. ಆಗ ಯೋಗಿಯು ಸಿಟ್ಟಾಗಿ ಗರ್ಜಿ

ದಿನಕ್ಕೊಂದು ಕಥೆ 783

*🌻ದಿನಕ್ಕೊಂದು ಕಥೆ🌻                                         ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ !* ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ’ ಎನ್ನುವ ಸತ್ಯ ವಾಕ್ಯದ ಬಗ್ಗೆ ಇರುವ ಈ ಪ್ರಸಂಗ ಮಹಾಭಾರತ ಗ್ರಂಥದಲ್ಲಿ ಬರುತ್ತದೆ. ಒಮ್ಮೆ ಧರ್ಮರಾಯ ತನ್ನ ಅರಮನೆಯ ಮುಂಭಾಗದಲ್ಲಿ ಕುಳಿತು ರಾಜ ಕಾರ್ಯದಲ್ಲಿ ಮಗ್ನರಾಗಿದ್ದರು. ಆಗ ಅಲ್ಲಿಗೆ ಒಬ್ಬ ಭಿಕ್ಷುಕ ಬಂದು ಏನಾದರೂ ದಾನ ನೀಡಿ ಸಹಾಯ ಮಾಡಿ ಎಂದು ಬೇಡಿಕೊಂಡ. ಧರ್ಮರಾಯನಿಗೆ ಕೈತುಂಬ ಕೆಲಸವಿತ್ತು. ನಾನೀಗ ಕಾರ್ಯಮಗ್ನನಾಗಿದ್ದೇನೆ. ನಾಳೆ ಬೆಳಿಗ್ಗೆ ಬಂದರೆ ಏನಾದರೂ ಕೊಡುತ್ತೇನೆ ಎಂದ. ಭಿಕ್ಷುಕ ಹೊರಟುಹೋದ. ಹತ್ತಿರದಲ್ಲೇ ಇದ್ದ ಭೀಮಸೇನ ತಕ್ಷಣ ಎದ್ದು ಹೋಗಿ ನಗಾರಿಯನ್ನು ಬಾರಿಸತೊಡಗಿದ. ನಗಾರಿಯ ಸದ್ದು ಕೇಳಿ ಧರ್ಮರಾಜ ಕೊಂಚ ಅಸಹನೆಯಿಂದಲೇ ತಮ್ಮಾ! ನಿನಗೇನಾಗಿದೆ? ನಗಾರಿ ಏಕೆ ಬಾರಿಸುತ್ತಿದ್ದೀಯ? ಎಂದು ಪ್ರಶ್ನಿಸಿದರು. ಭೀಮಸೇನ ಅಣ್ಣಾ! ನನಗಿಂದು ಬಹಳ ಸಂತೋಷವಾಗಿದೆ! ಏಕೆಂದರೆ ನೀನು ಕಾಲವನ್ನು ಗೆದ್ದಿದ್ದೀಯ. ಏಕೆಂದರೆ ನಾಳೆ ಆ ಭಿಕ್ಷುಕನಿಗೆ ದಾನ ನೀಡುವೆನೆಂದು, ಅದನ್ನು ಸ್ವೀಕರಿಸಲು ಬರಬೇಕೆಂದು ಹೇಳಿದ್ದೀಯೆ. ಅಂದರೆ ನಾಳೆ ನೀನು ಬದುಕಿರು ತ್ತೀಯೆಂದು ಭರವಸೆ ನಿನಗಿದೆ. ಹಾಗೆಯೇ ಭಿಕ್ಷುಕನೂ ಬದುಕಿರುತ್ತಾನೆಂಬ ಭರವಸೆಯೂ ನಿನಗಿದೆ. ಅಷ್ಟೇ ಅಲ್ಲ, ಇಂದು ನೀನು ರಾಜ್ಯ ವನ್ನಾಳುತ್ತಿದ್ದೀಯ. ನಿನ್ನ ಕೈಯ್ಯಲ್ಲಿ ಧನಲಕ್ಷ್ಮಿ ಇದ್ದಾಳೆ. ಲಕ್ಷ್ಮಿ

ದಿನಕ್ಕೊಂದು ಕಥೆ 782

*🌻ದಿನಕ್ಕೊಂದು ಕಥೆ🌻*                                      ಮನೆಯ ಎದುರಿನ ಮರದ ನೆರಳಿನಲ್ಲಿ ಒಂದು ಕುರಿಮರಿ ಕುಳಿತಿತ್ತು . ಒಂದು ತಿಂಗಳೂ ತುಂಬಿರದ ಪುಟಾಣಿ ಮರಿಯು ಬೆಣ್ಣೆ ಮುದ್ದೆಯಂತೆ ಅಲುಗಾಡದೇ ಕುಳಿತಿತ್ತು . ನಾನು ಎರಡು ಮೂರು ನಿಮಿಷಗಳಿಂದ ಅದನ್ನು ತದೇಕಚಿತ್ತದಿಂದ ಗಮನಿಸುತ್ತಲೇ ಇದ್ದೆ . ಅದು ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತನ್ನದೇ ಲೋಕದಲ್ಲಿ ಧ್ಯಾನಸ್ಥನಾಗಿ ಕುಳಿತಿತ್ತು. ಒಂದೆರಡು ಬಾರಿ ಕೈ ಅಲುಗಾಡಿಸಿದೆ . ಅದರ ಗಮನ ಸೆಳೆಯಲು ಕೈ ಅಲುಗಾಡಿಸಿದೆ .‌ಮೆಲ್ಲಗೆ ಶಿಳ್ಳೆ ಹಾಕಿದೆ. ಅದು ಕ್ಯಾರೇ ಅನ್ನಲಿಲ್ಲ. ಅದರ ಪ್ರಶಾಂತ ಮುಖವನ್ನು ದಿಟ್ಟಿಸುತ್ತಿದ್ದಂತೆ ಮನದೊಳಗಿನ ಕೊಳದ ಅಲ್ಲೋಲ ಕಲ್ಲೋಲವೆಲ್ಲ ಕ್ಷಣಕಾಲ ತಿಳಿಯಾಗಿ  ಮನಸ್ಸಿಗೆ ಆಹ್ಲಾದವಾಯಿತು. ಅಷ್ಟರಲ್ಲಿ ನನ್ನ ನೋಟದ ಫ್ರೇಮಿನೊಳಗೆ ಕಂದು ಬಣ್ಣದ ನಾಯಿಯೊಂದು ಪ್ರವೇಶಿಸಿತು. ಶಿಲೆಯಂತೆ ಅಲುಗಾಡದೇ ಕುಳಿತಿದ್ದ ಕುರಿಮರಿ ಆ ನಾಯಿಯನ್ನು ಕಂಡೊಡನೆ 'ಬ್ಯಾ ಬ್ಯಾ ಬ್ಯಾ ' ಎಂದು ಅರಚತೊಡಗಿತು . ನಾನು ನಿನ್ನನ್ನು ನೋಡಿದೆ: ನಿಲ್ಲು - ಎಂಬಂತಿತ್ತು ಅದು ಅರಚಿದ ಧಾಟಿ.  ಕುರಿಮರಿಯನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ನಾಯಿ ಅದರ ಸದ್ದು ಕೇಳಿದೊಡನೆ ಗಕ್ಕನೆ ನಿಂತಿತು . ನಾಯಿ ಹಿಂತಿರುಗಿ ಬಂದು ಕುರಿಮರಿಯ ಸನಿಹದಲ್ಲಿ ನೆರಳಿಗೆ ಮೈಚಾಚಿ ಮಲಗುತ್ತಿದ್ದಂತೆ ಕುರಿಮರಿ ಸದ್ದು ನಿಲ್ಲಿಸಿತು. ಒಂಟಿಯಾಗಿ ಕುಳಿತಿದ್ದ ಕುರಿಮರಿ ಲವಲವಿಕೆಯಿಂದ ಕ

ದಿನಕ್ಕೊಂದು ಕಥೆ 781

*🌻ದಿನಕ್ಕೊಂದು ಕಥೆ🌻*                                          ನಮ್ಮ  ನಾಯಿಗೆ ಹುಷಾರಿಲ್ಲ, ಬನ್ನಿ  ಎಂದು ಪಕ್ಕದ ಹಳ್ಳಿಯ ಹುಡುಗ ಕರೆ ಮಾಡಿದ್ದ. ಅಲ್ಲಿಗೆ ಹೋಗುವವರೆಗೂ ಅದು ಅವನದೇ ಸಾಕುನಾಯಿ ಎಂದು ತಿಳಿದುಕೊಂಡಿದ್ದೆ . ಹೋದ ಮೇಲೆ ತಿಳಿಯಿತು ; ಅದು ಯಾರಿಗೂ ಸೇರಿದ್ದಲ್ಲ.‌ ಅದೊಂದು ಬೀದಿನಾಯಿ.  ಅದರ ಸಂಕಟ ನೋಡಲಾಗದೇ ಒಂದಷ್ಟು ಹುಡುಗರು ಅವನಿಂದ ಕರೆ ಮಾಡಿಸಿದ್ದರು . ನಾಯಿ ಬಿದ್ದಿದ್ದ ಸ್ಥಳಕ್ಕೆ ಬರುವಷ್ಟರಲ್ಲಿ ಹತ್ತಾರು ಹುಡುಗರು ಮುತ್ತಿಕೊಂಡರು . ಅವರ ಸ್ಪಂದನೆಯನ್ನು ನೋಡಿದರೆ ಅದು ಅವರೆಲ್ಲರಿಗೂ ಇಷ್ಟದ ನಾಯಿಯೆಂದು ಸುಲಭವಾಗಿ ಗ್ರಹಿಸಬಹುದಿತ್ತು . ನಾನು ನಾಯಿಗೆ ಚಿಕಿತ್ಸೆ ನೀಡಲು ‌ಶುರು ಮಾಡುತ್ತಿದ್ದಂತೆ ಆ ಹುಡುಗರೆಲ್ಲ‌ ಕನಿಕರದಿಂದ ಸುತ್ತುವರಿದು ಸಹಕರಿಸತೊಡಗಿದರು . 'ಮಾಡಕ್ಕೆ ಕೇಮಿಯಲ್ಲ ಮೂದೇವ್ಗಳ್ಗೆ " ಸಮೀಪದಲ್ಲಿ ಇದ್ದ ಜಗಲಿಯ ಮೇಲಿನಿಂದ ಹೆಂಗಸಿನ ಅಪಹಾಸ್ಯದ ದನಿ ಕೇಳಿ ಬಂತು . ಆ ಹುಡುಗರು ಕಿವಿಗೆ ಹಾಕಿಕೊಳ್ಳಲಿಲ್ಲ. ತಮ್ಮ ಪಾಡಿಗೆ ನಾಯಿಯನ್ನು ಒತ್ತಿ ಹಿಡಿದು ಕುಳಿತಿದ್ದರು. "ಅದು ಅವ್ರಪ್ಪಿಂದ್ರ ಉಳೋ ಎತ್ತು ನೋಡು , ಅದ್ಕೆ ಅಷ್ಟು ಮುತುವರ್ಜಿ ವಯ್ಸಿ ಡಾಕ್ಟ್ರ ಕರ್ಸವ್ರೆ " ಮತ್ತೊಂದು ‌ಗೇಲಿ ಮಾತು ತೇಲಿ ಬಂತು . ಹುಡುಗರು ‌ಅದಕ್ಕೂ ವಿಚಲಿತರಾಗಲಿಲ್ಲ. "ತಕ್ಕಂಡೋಗಿ‌ ಬೀಸಾಡೊದ್ಬಿಟ್ಟು, ಬೀದಿನೆಲ್ಲ ಗಲೀಜ್ ಮಾಡ್ಲಿ ಅಂತ ಅದ್ಕೆ ಇಂಜೆಸನ್ ಹಾಕಸ್ತಾ ಅವೆ