Posts

Showing posts from April, 2023

ದಿನಕ್ಕೊಂದು ಕಥೆ 1061

*🌻ದಿನಕ್ಕೊಂದು ಕಥೆ🌻* *ಸುಂದರ ಸಂದೇಶ* ಹೀಗೆ ಒಂದೂರಲ್ಲಿ ಒಬ್ಬ ರಾಜಾ ಇದ್ದ. ಅವನು  ಬಹಳ ವರ್ಷಗಳಿಂದ ತನ್ನ ಸಾಮ್ರಾಜ್ಯವನ್ನಿ ಆಳ್ತಿದ್ದ. ತಾನು ರಾಜನ ಪಟ್ಟಕ್ಕೇರಿದ ನಲವತ್ತನೇ ವರ್ಷದ ಆಚರಣೆಯನ್ನ ವಿಜೃಂಭಣೆಯಿಂದ ಆಚರಿಸಬೇಕೆಂಬ ಉದ್ದೇಶದಿಂದ ಒಂದು ಉತ್ಸವವನ್ನ ಏರ್ಪಡಿಸಿದ. ಆ ಉತ್ಸವಕ್ಕೆ ತನ್ನ ಆರಾಧ್ಯ ಗುರುಗಳನ್ನು ಹಾಗೂ ಮಿತ್ರ ದೇಶದ ರಾಜರು,ರಾಜಕುಮಾರರನ್ನು ಕೂಡ ಮರ್ಯಾದಾಪೂರ್ವಕವಾಗಿ ಆಮಂತ್ರಿಸಿದ್ದ. ಉತ್ಸವವನ್ನ ರೋಚಕವಾಗಿಸಲು ತನ್ನ ರಾಜ್ಯದ ಸುಪ್ರಸಿದ್ಧ ನರ್ತಕಿಯ ನಾಟ್ಯ ಕಾರ್ಯಕ್ರಮವನ್ನ ಆಸ್ಥಾನದಲ್ಲಿ ಏರ್ಪಡಿಸಿದ್ದ. ರಾಜನು ಒಂದು ದೊಡ್ಡ ಪಾತ್ರೆಯ ತುಂಬ ಬಂಗಾರದ ನಾಣ್ಯಗಳನ್ನ ತನ್ನ ಗುರುವಿನ ಕೈಯಲ್ಲಿ ಕೊಟ್ಟಿದ್ದ. ನರ್ತಕಿಯು ಒಳ್ಳೆಯ ಹಾಡು,ನರ್ತನದಿಂದ ಮನಸ್ಸನ್ನು ಉಲ್ಲಸಿತಗೊಳಿಸಿದಲ್ಲಿ,ಆಕೆಗೆ ಗುರುಗಳ ಹಸ್ತದಿಂದ ಆ ನಾಣ್ಯಗಳ ನೀಡಿಸಿ ಸನ್ಮಾನಿಸುವುದು ಆತನ ಇಚ್ಛೆಯಾಗಿತ್ತು. ರಾತ್ರಿಯೆಲ್ಲ ಹಾಡು,ನಾಟ್ಯ ನಡೆಯುತ್ತ ಬ್ರಾಹ್ಮೀ ಮುಹೂರ್ತದ ಸಮಯವೂ ಬಂದಿತು.ಆಕಸ್ಮಿಕವಾಗಿ ನರ್ತಕಿ ತಬಲ ಬಾರಿಸುವವನ್ನ ನೋಡುತ್ತಾಳೆ.ಪಾಪ ಅವನಿಗೆ ನಿದ್ದೆ ಕಣ್ತುಂಬಿ ಬಂದು ತೂಕಡಿಸುತ್ತಿರುತ್ತಾನೆ. ನರ್ತಕಿಗೆ ಗಾಬರಿಯಾಯಿತು. ನಿದ್ದೆಗಣ್ಣಿನಲ್ಲಿ ತಬಲದ ದಾಟಿಯನ್ನ ತಪ್ಪು ನುಡಿಸಿದಲ್ಲಿ ರಾಜನಿಗೆ ಕೋಪ ಬಂದು ಏನಾದರೂ ಶಿಕ್ಷೆ ಕೊಟ್ಟಾನು ಎಂಬ ಭಯದಿಂದ,ಆತನನ್ನು ಎಚ್ಚರಿಸಲು ಚೌಪದಿಯ ನುಡಿಯೊಂದನು ಹೇಳುತ್ತಾಳೆ. "ಸಮಯವು ಕಳೆದಿಹುದು ಬಹಳ