Posts

Showing posts from April, 2019

ದಿನಕ್ಕೊಂದು ಕಥೆ 913

ದಿನಕ್ಕೊಂದು ಕಥೆ                                                                              ವಿದ್ಯೆ ಕಲಿಸುವುದು ಶಾಲೆ ಬುದ್ಧಿ ಬೆಳೆಸುವುದು ಮನೆ* ಒಳ್ಳೆಯ ನೌಕರಿ ಸಿಗಬೇಕೆಂದರೆ ಫಸ್ಟ್​ರ್ಯಾಂಕ್ ಒಂದೇ ಬಂದರೆ ಸಾಕಾಗುವುದಿಲ್ಲ. ಬುದ್ಧಿಶಕ್ತಿ, ಜ್ಞಾನ, ವಿಚಾರಶಕ್ತಿ ಮೊದಲಾದವು ಬೇಕಾಗುತ್ತವೆ. ಇವ್ಯಾವನ್ನೂ ಶಾಲೆಗಳಲ್ಲಿ ಹೇಳುವುದಿಲ್ಲ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದುವುದಕ್ಕೆ ಶಾಲೆ ಮಾತ್ರ ಸಾಲದು, ತಂದೆ-ತಾಯಿ ಮಕ್ಕಳಿಗೆ ಮೊದಲ ಗುರುಗಳು. ಮಕ್ಕಳನ್ನು ಬೆಳೆಸುವ ಕ್ರಮ ಅವರ ವಯಸ್ಸಿಗೆ ತಕ್ಕ ಹಾಗೆ ಬದಲಾಗಬೇಕು. ಸಣ್ಣವರಿರುವಾಗ ಪಕ್ಕದಲ್ಲಿ ಮಲಗಿಸಿಕೊಂಡು ಕಥೆಗಳನ್ನು ಹೇಳಬೇಕು. ಟೀನೇಜ್ ಬಂದಾಗ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಸಬೇಕು. ಪೇಪರ್​ಗಳಲ್ಲಿನ ವಿಷಯಗಳನ್ನು ಡೈನಿಂಗ್ ಟೇಬಲ್​ನಲ್ಲಿ ರ್ಚಚಿಸಿದರೆ ಮಕ್ಕಳಲ್ಲಿ ಲೋಕಜ್ಞಾನ ಮಾತ್ರವಲ್ಲದೆ, ಕುಟುಂಬ ಸದಸ್ಯರ ನಡುವೆ ಕಮ್ಯುನಿಕೇಷನ್ ಕೂಡ ಬೆಳೆಯುತ್ತದೆ. ಮಕ್ಕಳಿಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳಬೇಕು. ಅವು ಅರ್ಥವಾಗಬೇಕೆಂದರೆ ದೊಡ್ಡವರು ಓದಬೇಕು. ಎಲ್ಲಿ ಸಿಗುತ್ತವೆ ಎಂದು ಕೆಲವರು ಕೇಳುತ್ತಾರೆ. ಇಂಟರ್​ನೆಟ್​ನಲ್ಲಿ ಅಂತಹ ರಾಶಿರಾಶಿ ಕಥೆಗಳಿವೆ. ಉದಾಹರಣೆಗೆ ಈ ಕಥೆ ನೋಡಿ-ಒಬ್ಬ ಹುಡುಗ ಹತ್ತನೆಯ ವಯಸ್ಸಿನಲ್ಲಿ ಹಣ್ಣು ಕದಿಯುವಾಗ ಸಿಕ್ಕಿಬಿದ್ದ. ಅವನಿಗೆ ತೋಟದ ಮಾಲಿ ಹೊಡೆಯುತ್ತಿದ್ದಾಗ, ‘ನನಗೆ ಅಪ್ಪ ಇಲ್ಲ, ದಯವಿಟ್ಟು ಬಿಟ್ಟುಬಿ