Posts

Showing posts from August, 2023

ದಿನಕ್ಕೊಂದು ಕಥೆ 1065

*🌻ದಿನಕ್ಕೊಂದು ಕಥೆ🌻* *ಅಳಿಲಿನ ಜಾಣತನ* ವಿಕ್ರಮ ಎಂಬ ವ್ಯಕ್ತಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನಿಗೆ ಮರದ ಮೇಲಿಂದ ವಿಚಿತ್ರ ಶಬ್ಧವೊಂದು ಕೇಳಿಸಿತು. ಅದೇನೆಂದು ನೋಡಿದಾಗ, ಹಾವೊಂದು ಮರದ ರೆಂಬೆಯಲ್ಲಿ ತನ್ನ ಬಾಲ ಸಿಕ್ಕಿಸಿಕೊಂಡು ಒದ್ದಾಡುತ್ತಿತ್ತು. ಹಾವು ವಿಕ್ರಮನನ್ನು ಕಂಡು "ಅಯ್ಯಾ ನಿನ್ನ ಕತ್ತಿಯಿಂದ ಈ ರೆಂಬೆಯನ್ನು ಸೀಳು. ನನ್ನ ಬಾಲ ಬಿಡಿಸಿಕೊಳ್ತಿನಿ." ಎಂದು ಬೇಡಿಕೊಂಡಿತು. "ಅದು ಸರಿ, ಆದರೆ, ನೀನು ನನ್ನನ್ನು ಕಚ್ಚಿದರೆ?" ಎಂದು ಕೇಳಿದ ವಿಕ್ರಮ. ಹಾವು "ಖಂಡಿತ ಕಚ್ಚೋದಿಲ್ಲ" ಎಂದು ಮಾತು ಕೊಟ್ಟಿತು. ಅವನು ತನ್ನ ಕತ್ತಿಯಿಂದ ರೆಂಬೆಯ ಸಂದಿಯನ್ನು ಅಗಲಗೊಳಿಸಿದಾಗ ಹಾವು ತನ್ನ ಬಾಲವನ್ನು ಬಿಡಿಸಿಕೊಂಡಿತು. ಬಳಿಕ ಹಾವು "ಅಯ್ಯಾ, ನಿನ್ನ ಕೋಲನ್ನು ಮರದ ರೆಂಬೆಗೆ ಹಿಡಿ. ನಾನು ಕೆಳಗಿಳಿದು ಬರುತ್ತೇನೆ."ಎಂದು ನುಡಿಯಿತು. ಹಾವು ತನ್ನನ್ನು ಕಚ್ಚುವುದಿಲ್ಲ ಎಂದು ಮಾತು ಕೊಟ್ಟಿದ್ದುದರಿಂದ ವಿಕ್ರಮ ಧೈರ್ಯವಾಗಿ ಕೋಲನ್ನು ರೆಂಬೆಗೆ ಹಿಡಿದ. ಹಾವು ಕೆಳಗಿಳಿದು ಬಂದು ಅವನ ಮೈಸುತ್ತ ಬಲವಾಗಿ ಸುತ್ತಿಕೊಂಡಿತು. ಆಗ ಅವನು ಗಾಬರಿಯಿಂದ, "ಅಯ್ಯೋ ಇದೇನು ಮಾಡುತ್ತ ಇದ್ದೀಯಾ?" ಎಂದು ಕೇಳಿದ. "ನಿನ್ನನ್ನು ಸಾಯಿಸುತ್ತೇನೆ" ಎಂದಿತು ಹಾವು. "ನಿನ್ನ ಪ್ರಮಾಣ ಏನಾಯಿತು?" ಎಂದು ಸಂಕಟದಿಂದ ಕೇಳಿದ. "ನಾನು ಪ್ರಮಾಣ ಮಾಡಿದ್ದೇನೋ ನಿಜ. ಆದರೆ, ಅದು

ದಿನಕ್ಕೊಂದು ಕಥೆ 1064

ದಿನಕ್ಕೊಂದು ಕಥೆ  ಆತ್ಮಾಭಿಮಾನ ಕೆದಕಿದಾಗ ಅದೊಂದು ಮೊಬೈಲ್ ಅಂಗಡಿ. ಅಂದು ಎಂದಿನಂತೆ ಉತ್ತಮ ವ್ಯಾಪಾರವಿತ್ತು. ಅಮಿತ್ ಅಂದರೆ ಮಾಲಿಕನಿಗೆ ಬಹಳ ಅಚ್ಚು ಮೆಚ್ಚು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಗಿರಾಕಿ ಅಂಗಡಿಯೊಳಗೆ ಕಾಲಿಟ್ಟರೆ ಬರಿಗೈನಲ್ಲಿ ಹೋಗುತ್ತಿರಲಿಲ್ಲ. ಅಮಿತ್ ತನ್ನ ಚಾಲಾಕಿತನದಿಂದ ವ್ಯಾಪಾರ ಕುದುರಿಸುತ್ತಿದ್ದ. ಇದು ಮಾಲಿಕನ ಮೇಲೆ ಬಹಳನೇ ಪ್ರಭಾವ ಬೀರಿತ್ತು. ಅಂದು ಬಂದಿದ್ದ ಒಂದೆರಡು ಗಿರಾಕಿಗಳು ತೆರಳಿದ ಮೇಲೆ ಅಮಿತ್ ಅಂಗಡಿಯಲ್ಲಿ ಕುಳಿತು ಅದೇನೋ ಯೋಚಿಸುತ್ತಿದ್ದ. ಇನ್ನೂ ಚಿಗುರು ಮೀಸೆಯ ಯುವಕ. ಸಹಜವಾಗಿಯೇ ಜೀವನದಲ್ಲಿ ನೂರಾರು ಕನಸುಗಳು. ಅಮಿತ್  ತನ್ನದೇ ಲೋಕದಲ್ಲಿ ತಲ್ಲೀನನಾಗಿದ್ದ. ಪಕ್ಕದಲ್ಲೇ ಕುಳಿತಿದ್ದ ಮಾಲಿಕ ಅಮಿತ್ ಯಾವುದೋ ಯೋಚನೆಯಲ್ಲಿರುವುದನ್ನು ಗಮನಿಸಿದ. "ಏನು ಮಾರೆಯಾ ಬಹಳ ಯೋಚನೆ ಮಾಡುತ್ತಿದ್ದಿ?" ಎಂದು ಮಾಲಿಕ ಕೇಳಿದಾಗಲೇ ಅಮಿತ್ ವಾಸ್ತವಕ್ಕೆ ಮರಳಿದ್ದು. ಅಮಿತ್ ಆ ದಿನ "ನಾನು ಒಂದು ಮೊಬೈಲ್ ಅಂಗಡಿ ತೆರೆದಿದ್ದರೆ ಎಷ್ಟು ಚೆನ್ನಾಗಿತ್ತು" ಎಂದು ಯೋಚಿಸುತ್ತಿದ್ದ. ತನ್ನ ಸ್ವಂತ ಅಂಗಡಿಯನ್ನು ಕಲ್ಪಿಸಿಕೊಂಡು ಅದೆಲ್ಲೋ ದಿಟ್ಟಿಸುತ್ತಿದ್ದ. ಮಾಲಿಕನ ಪ್ರಶ್ನೆಗೆ ವಾಸ್ತವಕ್ಕೆ ಮರಳಿದ ಅಮಿತ್ " ಧಣಿಗಳೇ ನನಗೂ ಒಂದು ಮೊಬೈಲ್ ಅಂಗಡಿ ತೆರೆಯಬೇಕೆಂದು ಆಸೆಯಾಗುತ್ತಿದೆ" ಎಂದು ಉತ್ತರಿಸಿದ. ಮಾಲಿಕ ಮನಸ್ಸಿನಲ್ಲೇ ನಕ್ಕು ಬಿಟ್ಟ. ಕೈಯಲ್ಲಿ ಬಿಡಿಗಾಸು ಇಲ್ಲ. ತಿಂಗಳ