Posts

Showing posts from June, 2017

ದಿನಕ್ಕೊಂದು ಕಥೆ. 467

*🌻ದಿನಕ್ಕೊಂದು ಕಥೆ🌻                                        ದೇವರನ್ನು ನಂಬುವವರನ್ನು ನಾವೂ ನಂಬಬಹುದು !* ಆಸಕ್ತಿಕರವಾದ ಘಟನೆಯೊಂದು ಇಲ್ಲಿದೆ. ನಮ್ಮ ನಂಬಿಕೆಗಳು ಏನೇ ಇರಲಿ. ಆದರೆ ಇಲ್ಲಿರುವುದು ದೇವರನ್ನು ನಂಬುವವರ ಮತ್ತು ನಂಬದವರ ನಡುವೆ ನಡೆಯಿತೆನ್ನಲಾದ ಪುಟ್ಟ ಘಟನೆ. ಫ್ರಾನ್ಸ್ ಪಾರ್ಲಿಮೆಂಟಿನ ಹಿರಿಯ ಸದಸ್ಯರೊಬ್ಬರು ಪ್ರವಾಸದಲ್ಲಿದ್ದರು. ರಾತ್ರಿಯಾಗಿತ್ತು. ಯಾವುದೋ ಒಂದು ಸಣ್ಣ ನಗರ ಸಿಕ್ಕಿತು. ಅಲ್ಲೊಂದು ಪುಟ್ಟ ಹೋಟೆಲ್ ಕಂಡಿತು. ರಾತ್ರಿ ತಂಗಿದ್ದು ಮರುದಿನ ಪ್ರಯಾಣ ಮುಂದುವರಿಸಿದರಾಯಿತು ಎಂದುಕೊಂಡು ಹಿರಿಯರು ಹೋಟೆಲ್ ಪ್ರವೇಶಿಸಿದರು. ಆ ನಡುರಾತ್ರಿಯಲ್ಲಿ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಿರಿಯ ಗುಮಾಸ್ತರು ಈ ಹಿರಿಯರನ್ನು ಸ್ವಾಗತಿಸಿದರು. ಅವರಿಗೆ ಕೊಠಡಿಯನ್ನೂ ಕೊಟ್ಟರು. ಕೊಠಡಿಯ ಬಾಡಿಗೆಯನ್ನು ಮುಂಗಡವಾಗಿಯೇ ಪಾವತಿ ಸುವುದು ಅಲ್ಲಿನ ಪದ್ಧತಿ.  ಹಿರಿಯರು ಕೊಠಡಿಯ ಬಾಡಿಗೆ ಎಷ್ಟೆಂದು ಕೇಳಿದರು. ಗುಮಾಸ್ತರು ಹೇಳಿದಷ್ಟು ಬಾಡಿಗೆಯನ್ನು ತಕ್ಷಣ ಪಾವತಿಸಿದರು. ಗುಮಾಸ್ತರು ಬಾಡಿಗೆ ಸ್ವೀಕರಿಸುವಾಗ ‘ಈ ಹಣಕ್ಕೆ ನಾಳೆ ಬೆಳಗ್ಗೆ ರಸೀತಿ ಕೊಡುತ್ತೇನೆ. ಏಕೆಂದರೆ ನಗದು ಸ್ವೀಕರಿಸಿ ರಸೀತಿ ಕೊಡುವ ಗುಮಾಸ್ತೆ ಈಗ ಇಲ್ಲಿಲ್ಲ. ಬೆಳಗ್ಗೆ ಬರುತ್ತಾರೆ. ಆಗ ರಸೀತಿ ಕೊಡಿಸಿಕೊಡುತ್ತೇನೆ. ಈಗ ಬೇಕಿದ್ದರೆ ಒಂದು ಕಾಗದದಲ್ಲಿ ಹಣ ಸಂದಾಯವಾಗಿದೆಯೆಂದು ಬರೆದು ನಾನೇ ಸಹಿ ಮಾಡಿಕೊಡುತ್ತೇನೆ. ಆಗಬಹುದೇ?’ಎಂದು ಕ

ದಿನಕ್ಕೊಂದು ಕಥೆ. 466

*🌻ದಿನಕ್ಕೊಂದು ಕಥೆ🌻*                                                  ರವಿ ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬರನ್ನು ನೋಡಲು ದೂರದ ಊರಿಗೆ ಬೈಕಿನಲ್ಲಿ ಪ್ರಯಾಣ ಆರಂಭಿಸಿದ್ದ. .. ಮಾರ್ಗಮಧ್ಯೆ ಕಂಡ ಹಳ್ಳಿಯ ಅಂಗಡಿಯೊಂದರಲ್ಲಿ ಹಣ್ಣುಹಂಪಲುಗಳನ್ನು ಖರೀದಿಸಿ ಇನ್ನೇನು ಬೈಕ್ ಹತ್ತಬೇಕೆನ್ನುವಷ್ಟರಲ್ಲಿ ಬಲಗಾಲಿನ ಪಾದದ ಮೇಲೆ ಏನೋ ಚಲಿಸುತ್ತಿರುವಂತೆ ಭಾಸವಾಯಿತು. ಕೂಡಲೇ ಕಾಲನ್ನು ಒದರಿ ಹಿಂದೆ ಸರಿದು ನಿಂತ . ಒದರಿದ ರಭಸಕ್ಕೆ ಮೂಗುದಾರದ ಗಾತ್ರದ, ತೋಳುದ್ದದ ಹಾವೊಂದು ಮೂರ್ನಾಲ್ಕು ಮಾರು ದೂರದಲ್ಲಿ ರಪ್ಪನೆ ಟಾರು ರೋಡಿನ ಮೇಲೆ ಬಿತ್ತು . ರವಿಗೆ ಪಾದದ ಮೇಲೆ ವಸ್ತುವೊಂದು ಸರಿಯುತ್ತಿದಾಗ ಕಿಂಚಿತ್ತೂ ಭಯವಾಗಿರಲಿಲ್ಲ. ಆದರೆ ಅದು ಹಾವಾಗಿ ಕಣ್ಣೆದುರು ಬಿದ್ದಾಗ ಭಯವಾಗತೊಡಗಿತು. ಅದು ನಾಗರಹಾವೆಂದು ಖಾತ್ರಿಯಾದಾಗ ಭಯ ಇಮ್ಮಡಿಯಾಯಿತು . ಅದರಿಂದ ತನಗೆ ಅಪಾಯವಾಗಬಹುದೆಂಬ ಕಾರಣಕ್ಕೆ ಆತನಿಗೆ ಭಯವಾಗಲಿಲ್ಲ. ಅವನ ಭೀತಿಗೆ ಬೇರೆಯದೇ ಕಾರಣವಿತ್ತು . ಎದುರಿಗೆ ಬಸ್ಟ್ಟಾಂಡಿನಲ್ಲಿ ಏಳೆಂಟು ಜನ ಹರಟೆ ಹೊಡೆಯುತ್ತಾ ನಿಂತಿದ್ದರು. ಪಕ್ಕದ ಗೂಡಂಗಡಿಯಲ್ಲಿ ಇಬ್ಬರು ಬೀಡಿ ಸೇದುತ್ತಾ ನಿಂತಿದ್ದರು. ಆಚೆಬದಿಯಲ್ಲಿ ಒಬ್ಬ ಹಸುಕರುಗಳನ್ನು ಅಟ್ಟಿಕೊಂಡು ಜಮೀನಿನ ಕಡೆಗೆ ಹೊರಟಿದ್ದ. ಅವರಲ್ಲಿ ಒಬ್ಬನ ಕಣ್ಣಿಗೆ ಆ ಹಾವು ಕಾಣಿಸಿಕೊಂಡುಬಿಟ್ಟರೂ ಅದರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕವೇ ರವಿಯ ಭಯಕ್ಕೆ ಮೂಲಕಾರಣವಾಗಿತ್

ದಿನಕ್ಕೊಂದು ಕಥೆ. 465

*🌻ದಿನಕ್ಕೊಂದು ಕಥೆ🌻                                                  ಎಲ್ಲ ವೃತ್ತಿಗಳೂ ಸಮಾನ*. ಈ ಜಗತ್ತಿನಲ್ಲಿ ಜನಿಸಿದ ಮಾನವನು ಅನೇಕ ತರದ ವೃತ್ತಿ, ಕಸುಬು, ಉದ್ಯೋಗಗಳನ್ನು ಮಾಡುತ್ತಾನೆ. ಇಂತಹ ಉದ್ಯೋಗಗಳ ಪೈಕಿ ಕೆಲವು ಮೇಲ್ಮಟ್ಟದವು ಎಂದು ಗೌರವ ಪಡೆದರೆ, ಕೆಲವು ಕೆಳಮಟ್ಟದವು- ಎಂಬ ಕಾರಣಕ್ಕಾಗಿ ಗೌರವವನ್ನು ಪಡೆಯುವುದಿಲ್ಲ. ಆದರೆ ಮಾನವನು ಮಾಡುವ ಕಾರ್ಯಗಳಲ್ಲಿ ಮೇಲು-ಕೀಳು ಎಂಬ ಭಾವವಿಲ್ಲದೆ ಸರ್ವರೂ ವೃತ್ತಿ ಗೌರವದಿಂದ ತಮ್ಮ-ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ನೀಡುವ ಹೃದಯ ಸ್ಪರ್ಶಿ ಪ್ರಸಂಗವು ಇಲ್ಲಿದೆ. ಒಂದು ಹಳ್ಳಿಯಲ್ಲಿ ಒಬ್ಬ ಜಮೀನ್ದಾರ ಮತ್ತು ಅವನ ನೌಕರ ಇಬ್ಬರೂ ಜತೆ-ಜತೆಯಾಗಿಯೇ ತೀರಿಕೊಂಡರು. ಇಬ್ಬರೂ ಯಮಲೋಕಕ್ಕೆ ತಲಪಿದಾಗ ಯಮಧರ್ಮರಾಜನು ಜಮೀನ್ದಾರನೊಡನೆ, ನಾಳೆಯಿಂದ ನೀವು ನೌಕರನ ಕೆಲಸ ಮಾಡಬೇಕು. ನೌಕರ ಕೆಲಸವಿಲ್ಲದೆ ಆರಾಮವಾಗಿರಲಿ ಎಂದಾಗ ಒಪ್ಪಿಕೊಂಡರೂ, ಜಮೀನ್ದಾರನಿಗೆ ತಲೆಬಿಸಿಯಾಯಿತು. ಆತ ''ಹೇ ಧರ್ಮರಾಜ, ನನಗೇಕೆ ಇಂಥ ಶಿಕ್ಷೆ? ನಾನು ಪ್ರತಿನಿತ್ಯ ದೇವಪೂಜೆ ಮೊದಲಾದ ಕರ್ತವ್ಯಗಳನ್ನು ಮಾಡುತ್ತಿದ್ದೇನೆ,'' ಎಂದು ಹೇಳಿದ. ಯಮಧರ್ಮರಾಜನು ನೌಕರನೊಡನೆ, ''ನೀನೇನು ಮಾಡುತ್ತಿದ್ದೀಯಾ?,''ಎಂದು ಕೇಳಿದಾಗ ಆತ, ''ಸ್ವಾಮಿ, ನಾನೋ ಬಡ ನೌಕರ. ದಿನವಿಡೀ ಧಣಿಗಳ ಗದ್ದೆಯಲ್ಲಿ ದುಡಿದು, ದೊರೆತ ಮಜೂರಿಯಲ್ಲಿ ಬದುಕುತ್ತಿದ್ದೆ. ಪ

ದಿನಕ್ಕೊಂದು ಕಥೆ. 464

*🌻ದಿನಕ್ಕೊಂದು ಕಥೆ🌻*                                           ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ವಾಸಿಸುತ್ತಿದ್ದರು ಇವರಿಬ್ಬರು ಮಣ್ಣಿನಿಂದ ಮಡಿಕೆ ಮಾಡುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು               ಒಂದ ದಿನ ತಮ್ಮ ಕೆಲಸ ಮುಗಿಸಿ ಊಟ ಮಾಡುತ್ತಿರುವಾಗ ಹೊರಗಡೆ ಬಾಗಿಲು ಯರೋ ತಟ್ಟಿದಂತಾಯಿತು ತಮ್ಮನ್ನು ಎದ್ಧು ಹೊಗಿನೊಡಲು ಒಬ್ಬ ಬೀಕ್ಷುಕ ನಿಂತಿದ್ದ .ಬೀಕ್ಷುಕ ಎರಡು ದಿನದಿಂದ ಊಟ ಮಾಡಿಲ್ಲಾ ಎಂದಾಗ ತಮ್ಮನ ಹೃದಯ ಕರಗಿ ಒಳಗೆ ಹೋಗಿ ಬಟ್ಟಲಿನ ತುಂಬಾ ಅನ್ನ ತಂದು ಕೊಟ್ಟ ಬೀಕ್ಷುಕ ದಿನವೂ ಇದನ್ನೆ ಮುಂದುವರಿಸಿದ              ಒಂದ ದಿನ ತಮ್ಮ ಊರಲ್ಲಿ ಇರಲ್ಲಿಲ್ಲಾ ಅಣ್ಣ ಮಾತ್ರ ಇದ್ದ ಬೀಕ್ಷುಕ ಬೀಕ್ಷೇ ಕೇಳಲು ಬಂದ ಆಗ ಅಣ್ಣ ಅವನ ಕೈ ಹಿಡಿದು ಒಳಗಡೆ ಕರೆದುಕೊಂಡ ಹೋಗಿ ಮಡಿಕೆ ಮಾಡುವುದನ್ನ ಹೆಳಿಕೊಟ್ಟ ಮುಂದೆ ಎರಡು ದಿನ ಬೀಕ್ಷುಕ ಬರಲೇ ಇಲ್ಲಾ ತಮ್ಮನಿಗೆ ಈ ಘಟನೆ ತಿಳಿಯಲ್ಲಿಲ್ಲಾ                  ಈ ಘಟನೆ ನಡೆದ ಐದು ವರುಷದ ನಂತರ ಒಬ್ಬ ಸಾಹುಕಾರ ಬರುವನೆಂದು ಸುದ್ದಿ ಹರಡಿತು ಆಗ ಆ.. ಸಾಹುಕಾರ ಯಾರ ಇರಬಹುದೆಂದು ಅಣ್ಣ ತಮ್ಮಂದಿರು ಹೊರಗೆ ಬಂದು ಕಾಯತೊಡಗಿದರು               ಸ್ವಲ್ಪ ಹೊತ್ತಿಗೆ ಸಾಹುಕಾರನ ಕಾರು ಬಂದು ನಿಂತಿತು ಕಾರಿನಿಂದ ಇಳಿದವನೆ ಕೈಯಲ್ಲಿ ಬೆಳ್ಳಿಯ ತಂಬಿಗೆ ಹಿಡಿದು ಅಣ್ಣನಿಗೆ ಬಂದು ಹೇಳಿದ ಸ್ವಾಮಿ ನಾನು ದಿನವೂ ನಿಮ್ಮ ಮನೆಗೆ ಬೀಕ್ಷೆಗೆ ಬರುತ್ತಿದ್ದೆ ನಿಮ್ಮ ತಮ್ಮ

ದಿನಕ್ಕೊಂದು ಕಥೆ. 463

*🌻ದಿನಕ್ಕೊಂದು ಕಥೆ🌻                                  ಸಂಪತ್ತು ಬಂದಿತ್ತು, ಸ್ವಾತಂತ್ರ್ಯ ಹೊರಟು ಹೋಗಿತ್ತು!* ಒಂದು ಪಕ್ಷಿಯು ಸಿರಿವಂತರ ಮನೆಯ ಮರದಲ್ಲಿ ವಾಸವಾಗಿತ್ತು. ಅತ್ತಿಂದಿತ್ತ ಹಾರಾಡಿ ಹಾಯಾಗಿತ್ತು. ಅಂದು ಹಬ್ಬದ ದಿನ ಮನೆಯವರೆಲ್ಲರೂ ಬೆಲೆಬಾಳುವ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಸಂತಸದಿಂದ ಓಡಾಡುತ್ತಿದ್ದರು. ಅದನ್ನು ನೋಡಿದ ಪಕ್ಷಿಗೂ ವಿಶೇಷವಾದ ಉಡುಗೆ ತೊಡುಗೆಗಳನ್ನು ಧರಿಸುವ ಆಸೆಯಾಯಿತು. ಅದನ್ನು ಸಿರಿವಂತನಿಗೆ ತಿಳಿಸಿದಾಗ, ಸಿರಿವಂತನ ಮನ ಕರಗಿತು. ಆ ಪಕ್ಷಿಗೆ ಕೆಳಗೆ ಕರೆದು ಬೆಲೆಬಾಳುವ ಉಡುಗೆ ತೊಡುಗೆಗಳಿಂದ ಅದನ್ನು ಅಲಂಕರಿಸಿದ. ಕಾಲಿಗೆ ಗೆಜ್ಜೆಯನ್ನು ಹಾಕಿದ! ಈಗ ಪಕ್ಷಿಯು ಹಾರಲು ಹೋದರೆ ಅದರ ಪಕ್ಕಗಳು ಬಿಚ್ಚಲಿಲ್ಲ, ಕಾಲೂ ಕೀಳಲಿಲ್ಲ! ಸಂಪತ್ತು ಬಂದಿತ್ತು, ಸ್ವಾತಂತ್ರ್ಯ ಹೊರಟು ಹೋಗಿತ್ತು! ****************************** ರಾವಣನು ಸೀತಾದೇವಿಯನ್ನು ಅಪಹರಣ ಮಾಡಿದ. ಆನಂತರ ಶ್ರೀರಾಮನು ಘನಘೋರ ಯುದ್ಧವನ್ನು ಮಾಡಿ ಲಂಕೆಯನ್ನು ಬೂದಿ ಮಾಡಿ ಸೀತಾದೇವಿಯನ್ನು ಅರಮನೆಗೆ ಕರೆತಂದ. ಶ್ರೀರಾಮಚಂದ್ರನೊಂದಿಗೆ ಮತ್ತೊಮ್ಮೆ ಸಿಂಹಾಸನವನ್ನೇರಿ ಅಸಂಖ್ಯ ಪ್ರಜೆಗಳ ಆದರ-ಅಭಿಮಾನವನ್ನು ಸ್ವೀಕರಿಸುತ್ತ ಸೀತಾದೇವಿ ಆನಂದವಾಗಿರುವುದಿತ್ತು. ಅಷ್ಟರಲ್ಲಿ ಅಗಸನ ಒಂದು ಮಾತು ಬೆಟ್ಟದಾಕಾರದ ತೆರೆಯಾಗಿ ಬಂದು ಇವರ ಬಾಳ ನೌಕೆಗೆ ಅಪ್ಪಳಿಸಿತು. ಸ್ವತಃ ಶ್ರೀರಾಮನೇ ಲಕ್ಷ ್ಮಣನನ್ನು ಕರೆದು ಸೀತಾದೇವಿಯನ್ನು ಅರ

ದಿನಕ್ಕೊಂದು ಕಥೆ. 462

*🌻ದಿನಕ್ಕೊಂದು ಕಥೆ🌻                                 ತಂದೆಯ ಋುಣ* ತನ್ನ ತಂದೆಯು ಅಪ್ರಯೋಜಕವಾದ ಹಸುಗಳನ್ನು ದಾನ ಮಾಡುತ್ತಿರುವುದನ್ನು ಕಂಡು, ಅದರಿಂದ ತನ್ನ ತಂದೆಗೆ ಯಾವ ಪುಣ್ಯವೂ ಬರುವುದಿಲ್ಲ ಎಂದು ಅರಿತ ನಚಿಕೇತನು, ಈ ವಿಷಯವನ್ನು ತಂದೆಯ ಗಮನಕ್ಕೆ ತಂದ. ''ನನ್ನನ್ನು ಯಾರಿಗೆ ಕೊಡುವೆ?'' ಎಂದು ಪದೇ ಪದೇ ಕೇಳಿದ. ''ನಿನ್ನನ್ನು ಯಮನಿಗೆ ಕೊಡುವೆ'' ಎಂದು ತಂದೆ ನುಡಿದರು. ಇದರ ಪರಿಣಾಮವಾಗಿ ನಚಿಕೇತನು ಯಮನ ಬಳಿಗೆ ತೆರಳುವಂತಾಗಿ, ಯಮನು ನಚಿಕೇತನಿಗೆ ವರಗಳನ್ನು ಕೇಳುವಂತೆ ಆಜ್ಞಾಪಿಸುತ್ತಾನೆ. ನಚಿಕೇತನು, ''ಎಲೈ ಮೃತ್ಯು ದೇವತೆಯೆ, ಮೂರು ವರಗಳಲ್ಲಿ ಮೊಟ್ಟಮೊದಲನೆಯದಾಗಿ, ತನ್ನ ತಂದೆಯ ಕೋಪವು ಶಮನವಾಗಲಿ ಎಂದು ಆಶೀರ್ವದಿಸು. ನಾನು ಹಿಂದಿರುಗಿದಾಗ ನನ್ನನ್ನು ನನ್ನ ತಂದೆಯು ಪ್ರೀತಿಸುವಂತಾಗಲಿ''. ತಂದೆಯ ಕೋಪವು ಮಗುವಾದ ನಚಿಕೇತನ ಮನಸ್ಸಿನಲ್ಲಿ ಭಾರವಾಗಿತ್ತು. ಆದ್ದರಿಂದ ಕೋಪವು ಕೂಡಲೇ ಉಪಶಮನವಾಗಬೇಕೆಂದು ಮೊದಲ ವರವಾಗಿಯೇ ಕೇಳಿದನು. ಅತೀ ಸರಳವಾದ ಮನಸ್ಸು, ಸರಳ ಪ್ರಶ್ನೆ, ಸರಳ ಅವಶ್ಯಕತೆಗಳು. ನೀವು ಮಹಾನರಾದಷ್ಟೂ ನಿಮ್ಮ ಅವಶ್ಯಕತೆಗಳು ಮತ್ತು ಬಯಕೆಗಳು ಸರಳವಾಗಿರುತ್ತವೆ. ನಿಮ್ಮ ಬಯಕೆ ಅತೀ ಸರಳ ? ''ಎಲ್ಲರೂ ಸಂತೋಷವಾಗಿರಲಿ. ಯಾವ ಕ್ಲೇಶವೂ ಇಲ್ಲದಿರಲಿ''. ಇದು ನಚಿಕೇತನು ಕೇಳಿದ ಇನ್ನೊಂದು ವರ. ಅನೇಕ ಸಲ ಸಾಧಕರಾಗಿ ನೀವು ಧ್ಯಾ

ದಿನಕ್ಕೊಂದು ಕಥೆ. 461

*🌻ದಿನಕ್ಕೊಂದು ಕಥೆ🌻*                                               ಒಬ್ಬ ಮಹಾರಾಜ ವಿಹಾರಕ್ಕೆ ಹೋದಾಗ ಬೆಟ್ಟದ ಮೇಲೆ ಒಂದು ಸುಂದರವಾದ ಬಂಡೆಗಲ್ಲು ಕಂಡಿತು. ಅದರ ಮೇಲೆ ತನ್ನ ಹೆಸರು ಬರೆಯಿಸಿದರೆ ತಾನು ಶಾಶ್ವತವಾಗಿ ಉಳಿದು ಬಿಡುತ್ತೇನೆಂದುಕೊಂಡ. ರಾಜನು ಶಿಲ್ಪಿಯನ್ನು ಕರೆದುಕೊಂಡು ಮರುದಿನ ಬೆಟ್ಟಕ್ಕೆ ಹೋಗಿ ನೋಡಿದರೆ, ಆ ಬಂಡೆಯ ಮೇಲೆ ಒಂದಿಷ್ಟೂ ಜಾಗವಿಲ್ಲದಂತೆ ಹಿಂದಿನ ರಾಜರು ತಮ್ಮ ಹೆಸರು ಕೆತ್ತಿಸಿದ್ದರು. ಈ ಜಗತ್ತಿನಲ್ಲಿ ಯಾರೂ ಶಾಶ್ವತರಲ್ಲ ಎಂಬ ಅರಿವು ಈಗ ರಾಜನಿಗೆ ಆಗಿತ್ತು! ****************************** ಜಾಗ್ರದಲ್ಲಿರುವಂತೆ ಇಲ್ಲಿಯೂ ಸುಖ-ದುಃಖ, ಮಾನ-ಅಪಮಾನ, ಜಯ-ಅಪಜಯ, ಏರಾಟ-ಹೋರಾಟ ಎಲ್ಲವೂ ಇದೆ. ಆದರೆ ಅದು ಕ್ಷ ಣಿಕವಾಗಿದೆ, ಕಾಲ್ಪನಿಕವಾಗಿದೆ ಅಷ್ಟೆ! ಜಾಗ್ರದಲ್ಲಿ ಪೂರೈಸಲಾರದ ಆಸೆ ಆಕಾಂಕ್ಷೆಗಳು ಇಲ್ಲಿ ಸುಲಭವಾಗಿ ಪೂರೈಸಿಕೊಳ್ಳಬಹುದಷ್ಟೆ! ಭಿಕ್ಷ ಕುನಿಗೊಂದು ಕನಸು ಬಿತ್ತು. ಅವನಿದ್ದ ಊರಿನ ರಾಜನು ತೀರಿಕೊಂಡ. ಆ ರಾಜನಿಗೆ ಮಕ್ಕಳೇ ಇರಲಿಲ್ಲ. ಒಂದು ಆನೆಯ ಸೊಂಡಿಲಿಗೆ ಹಾರಕೊಟ್ಟು ಬಿಟ್ಟರು. ಅದೂ ಯಾರ ಕೊರಳಿಗೆ ಹಾಕುವುದೋ ಅವರೇ ರಾಜರೆಂದು ಸಾರಿದರು. ನೇರವಾಗಿ ಆನೆ ಭಿಕ್ಷಕುನ ಹತ್ತಿರ ಹೋಗಿ ಅವನಿಗೇ ಹಾರ ಹಾಕಿತು. ಅದ್ಧೂರಿಯಿಂದ ಮೆರವಣಿಗೆ ಮಾಡಿ ಭಿಕ್ಷು ಕನನ್ನು ಅರಮನೆಗೆ ಕರೆತಂದರು. ಇನ್ನೇನು ಭಿಕ್ಷುಕ ಸಿಂಹಾಸನ ಏರಲಿದ್ದ. ಅಷ್ಟರಲ್ಲಿ ಸೊಳ್ಳೆ ಕಚ್ಚಿ ಭಿಕ್ಷುಕನು ಎದ್ದು ನೋಡಿದರೆ ಅ

ದಿನಕ್ಕೊಂದು ಕಥೆ. 460

*🌻ದಿನಕ್ಕೊಂದು ಕಥೆ🌻* *ಶ್ರೇಷ್ಠ ಕಲೆ ಯಾವುದು?* ಸಾಮಾನ್ಯವಾಗಿ ಜನರಲ್ಲಿ ತುಸು ಜ್ಞಾನ, ಚಾತುರ‍್ಯವಿದ್ದಾಗ, 'ನನಗೆ ಸರಿ ಸಮಾನರಾದವರು ಯಾರಿದ್ದಾರೆ?' ಎಂಬ ಅಹಂಕಾರ ಬೆಳೆದು ಬಿಡುವುದುಂಟು. ಇದಕ್ಕಾಗಿಯೇ 'ಅಲ್ಪ ವಿದ್ಯಾ ಮಹಾ ಗರ್ವಿ' ಎಂಬ ಮಾತು ಹುಟ್ಟಿರುವುದು. ಆದರೆ, ನಿಜವಾದ ವಿದ್ವಾಂಸರು, ಸಾಧಕರು, ಕಲಾವಿದರು ತಮಗೇನೂ ತಿಳಿದಿಲ್ಲ ಎಂಬಂತೆ ನಿಗರ್ವಿಗಳಾಗಿರುತ್ತಾರೆ. ಸಾಧಕರ ಈ ನಿರಹಂಕಾರಿ ಮನೋಭಾವವನ್ನು ತಿಳಿಸುವ ಒಂದು ಅರ್ಥಪೂರ್ಣ ಪ್ರಸಂಗ ಇಲ್ಲಿದೆ. ಒಮ್ಮೆ ಸ್ವರ್ಗದಲ್ಲಿ ನಾರದರು ಮತ್ತು ತುಂಬುರರ ನಡುವೆ 'ನಮ್ಮಿಬ್ಬರಲ್ಲಿ ಶ್ರೇಷ್ಠ ಕಲಾವಿದರು ಯಾರು?' ಎಂಬ ಕುರಿತು ವಿವಾದ ಉಂಟಾಯಿತು. ಅವರಿಬ್ಬರ ನಡುವೆ ಅದು ಬಗೆಹರಿಯದಿದ್ದಾಗ ತಮ್ಮ ವಿವಾದವನ್ನು ಬಗೆಹರಿಸುವಂತೆ ಭಗವಾನ್‌ ವಿಷ್ಣುವಿನ ಬಳಿ ಹೋಗಿ ವಿನಂತಿಸಿದರು. ಆಗ ಮುಗುಳು ನಗುತ್ತಾ ವಿಷ್ಣು ದೇವರು ಹೇಳಿದರು: 'ಸಂಗೀತದ ಮಟ್ಟಿಗೆ ನಾನು ಅಷ್ಟೇನೂ ಪಳಗಿದವನಲ್ಲ. ಮಹಾನ್‌ ಕಲಾವಿದರಾದ ಹನುಮಂತರ ಬಳಿಗೆ ಹೋಗಿ. ಅವರು ಸೂಕ್ತ ತೀರ್ಮಾನವನ್ನು ನೀಡಬಲ್ಲರು'. ವಿಷ್ಣುವಿನ ಮಾತನ್ನು ಒಪ್ಪಿದ ತುಂಬುರ ಮತ್ತು ನಾರದ ಇಬ್ಬರೂ ಅಂತಿಮ ನಿರ್ಣಯವನ್ನು ಪಡೆಯಲೆಂದು ನೇರವಾಗಿ ಹಿಮಾಲಯದ ಕಡೆಗೆ ಹೊರಟರು. ಅಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಂಜುಗುಡ್ಡೆಗಳ ನಡುವೆ ಕುಳಿತು ಮಧುರ ಕಂಠದಲ್ಲಿ ಹಾಡುವ ಹನುಮಂತನನ್ನು ಕಂಡರು. ಹನುಮಂತರು ತಮ್