ದಿನಕ್ಕೊಂದು ಕಥೆ. 462

*🌻ದಿನಕ್ಕೊಂದು ಕಥೆ🌻                                 ತಂದೆಯ ಋುಣ*

ತನ್ನ ತಂದೆಯು ಅಪ್ರಯೋಜಕವಾದ ಹಸುಗಳನ್ನು ದಾನ ಮಾಡುತ್ತಿರುವುದನ್ನು ಕಂಡು, ಅದರಿಂದ ತನ್ನ ತಂದೆಗೆ ಯಾವ ಪುಣ್ಯವೂ ಬರುವುದಿಲ್ಲ ಎಂದು ಅರಿತ ನಚಿಕೇತನು, ಈ ವಿಷಯವನ್ನು ತಂದೆಯ ಗಮನಕ್ಕೆ ತಂದ. ''ನನ್ನನ್ನು ಯಾರಿಗೆ ಕೊಡುವೆ?'' ಎಂದು ಪದೇ ಪದೇ ಕೇಳಿದ. ''ನಿನ್ನನ್ನು ಯಮನಿಗೆ ಕೊಡುವೆ'' ಎಂದು ತಂದೆ ನುಡಿದರು. ಇದರ ಪರಿಣಾಮವಾಗಿ ನಚಿಕೇತನು ಯಮನ ಬಳಿಗೆ ತೆರಳುವಂತಾಗಿ, ಯಮನು ನಚಿಕೇತನಿಗೆ ವರಗಳನ್ನು ಕೇಳುವಂತೆ ಆಜ್ಞಾಪಿಸುತ್ತಾನೆ.

ನಚಿಕೇತನು, ''ಎಲೈ ಮೃತ್ಯು ದೇವತೆಯೆ, ಮೂರು ವರಗಳಲ್ಲಿ ಮೊಟ್ಟಮೊದಲನೆಯದಾಗಿ, ತನ್ನ ತಂದೆಯ ಕೋಪವು ಶಮನವಾಗಲಿ ಎಂದು ಆಶೀರ್ವದಿಸು. ನಾನು ಹಿಂದಿರುಗಿದಾಗ ನನ್ನನ್ನು ನನ್ನ ತಂದೆಯು ಪ್ರೀತಿಸುವಂತಾಗಲಿ''. ತಂದೆಯ ಕೋಪವು ಮಗುವಾದ ನಚಿಕೇತನ ಮನಸ್ಸಿನಲ್ಲಿ ಭಾರವಾಗಿತ್ತು. ಆದ್ದರಿಂದ ಕೋಪವು ಕೂಡಲೇ ಉಪಶಮನವಾಗಬೇಕೆಂದು ಮೊದಲ ವರವಾಗಿಯೇ ಕೇಳಿದನು. ಅತೀ ಸರಳವಾದ ಮನಸ್ಸು, ಸರಳ ಪ್ರಶ್ನೆ, ಸರಳ ಅವಶ್ಯಕತೆಗಳು. ನೀವು ಮಹಾನರಾದಷ್ಟೂ ನಿಮ್ಮ ಅವಶ್ಯಕತೆಗಳು ಮತ್ತು ಬಯಕೆಗಳು ಸರಳವಾಗಿರುತ್ತವೆ. ನಿಮ್ಮ ಬಯಕೆ ಅತೀ ಸರಳ ? ''ಎಲ್ಲರೂ ಸಂತೋಷವಾಗಿರಲಿ. ಯಾವ ಕ್ಲೇಶವೂ ಇಲ್ಲದಿರಲಿ''. ಇದು ನಚಿಕೇತನು ಕೇಳಿದ ಇನ್ನೊಂದು ವರ.

ಅನೇಕ ಸಲ ಸಾಧಕರಾಗಿ ನೀವು ಧ್ಯಾನ ಮಾಡಿದಾಗ, ''ನನಗೇನೂ ಆಗುತ್ತಿಲ್ಲ'' ಎನ್ನುತ್ತೀರಿ. ಏಕೆಂದು ಗೊತ್ತೆ? ಏಕೆಂದರೆ ನಿಮ್ಮ ಪುಣ್ಯ ನಿಮ್ಮ ಪಿತೃಗಳಿಗೆ ವರ್ಗಾವಣೆಯಾಗುತ್ತಿದೆ, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀವು ಧ್ಯಾನ ಮಾಡಿದಾಗ ಅಥವಾ ಏನಾದರೂ ಒಳ್ಳೆಯದನ್ನು ಮಾಡಿದಾಗ, ಅದರ ಸ್ವಲ್ಪ ಭಾಗ, ಆ ಒಳ್ಳೆಯ ಕಂಪನಗಳು ತಾನಾಗಿಯೇ ಅವರಿಗೆ ತಲುಪುತ್ತದೆ. ನಿಮ್ಮ ಹಳೆಯ ಸಾಲವನ್ನು ತೀರಿಸಿಕೊಂಡಂತೆ. ಸ್ವಲ್ಪ ಧ್ಯಾನ ಮಾಡಿದಾಗ, ಈ ದೇಹವನ್ನು ನಿಮಗೆ ನೀಡಿದವರಿಗೆ ಸ್ವಲ್ಪ ಪುಣ್ಯ ಹೋಗುತ್ತದೆ. ಯಾರೋ ನಿಮಗೆ ಈ ದೇಹವನ್ನು ಕೊಟ್ಟರು. ಅದರಿಂದಾಗಿ ನೀವು ಮಾಡುತ್ತಿರುವ ಎಲ್ಲವನ್ನೂ ಮಾಡುತ್ತಿರುವಿರಿ. ಆದ್ದರಿಂದ ನಿಮ್ಮ ಪುಣ್ಯ ತಾನಾಗಿಯೇ ಅವರಿಗೆ ಹೋಗುತ್ತದೆ. ಪಿತ್ರಾರ್ಜಿತವಾದ ಆಸ್ತಿಯಂತೆ - ನಿಮ್ಮ ತಂದೆ, ತಾಯಿ ಅಥವಾ ಬೇರೆ ಯಾರಾದರೂ ನಿಮಗೆ ಅವರ ಆಸ್ತಿಯನ್ನು ಕೊಡುತ್ತಾರೆ ಮತ್ತು ನೀವು ಅದನ್ನು ಪಡೆಯುತ್ತೀರಿ. ಅದು ಅವರ ಸಾಲವಾಗಿರಬಹುದು ಅಥವಾ ಗಳಿಕೆಯಾಗಿರಬಹುದು. ಇವೆಲ್ಲವೂ ಸುಮ್ಮನೆ ನಿಮ್ಮ ತಲೆಯ ಮೇಲೆ ಹಾಗೆಯೇ ಬೀಳುತ್ತದೆ. ಅದೇ ರೀತಿಯಾಗಿ ಸೂಕ್ಷ್ಮ ಜಗತ್ತಿನಲ್ಲೂ ಈ ವಿಷಯಗಳು ಒಬ್ಬರಿಂದೊಬ್ಬರಿಗೆ ಹೋಗುತ್ತದೆ. ಓರ್ವ ಸನ್ಯಾಸಿ ಜೀವಂತವಾಗಿರುವಾಗಲೇ ತಮ್ಮ ಎಲ್ಲಾ ಕರ್ತವ್ಯಗಳನ್ನು, ಮಾಡಬೇಕಾದ ಕಾರ್ಯಗಳನ್ನು ಮಾಡಿ ತಮ್ಮ ಕೈತೊಳೆದುಕೊಂಡು ಬಿಡುತ್ತಾರೆ. ಪಿತೃಗಳೊಂದಿಗೆ ಯಾವ ರೀತಿಯ ಸಂಬಂಧವೂ ಇರುವುದಿಲ್ಲ. ಅದೇ ಸನ್ಯಾಸತ್ವ, ಚತುರ್ಥಾಶ್ರಮ.

ಮೊದಲ 25 ವರ್ಷಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಕಲಿಯುವುದು ? ವಿದ್ಯಾರ್ಥಿ ಜೀವನ. ಮುಂದಿನ 25 ವರ್ಷಗಳು ಗೃಹಸ್ಥಾಶ್ರಮಿಯಾಗಿ ಜೀವನವನ್ನು ಆನಂದಿಸುವುದು. ಮದುವೆಯಾಗಿ ಮಕ್ಕಳನ್ನು ಪಡೆಯುವುದು. ಜೀವನದ ಮೂರನೆಯ ಭಾಗ ? 50 ರಿಂದ 75 ವರ್ಷಗಳವರೆಗೆ ವಾನಪ್ರಸ್ಥ, ಸಾಮಾಜಿಕ ಕಾರ್ಯಕರ್ತರಾಗುವುದು. ''ನನ್ನದು, ನನ್ನದು, ನನ್ನದು'' ಎಂಬುದಿರುವುದಿಲ್ಲ. ಸಮಾಜದ ಎಲ್ಲರಿಗಾಗಿಯೂ ನೀವಿದ್ದೀರಿ. ನಿಮ್ಮನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತೀರಿ. ಎಲ್ಲರ ಹಿತೈಷಿಗಳಾಗುತ್ತೀರಿ. ''ನನ್ನ ಮಗುವು ಮಾತ್ರ'' ಎಂಬುದರಿಂದ ''ನಮ್ಮ ಮಕ್ಕಳು'' ಎಂದು ಸೀಮಿತವಾದ ಕುಟುಂಬದಿಂದ ನಿಸ್ಸೀಮಿತವಾದ ಸಮಾಜದವರೆಗೆ ವಿಸ್ತಾರವಾಗುವುದು. ಜೀವನದ ಕೊನೆಯ ಭಾಗ ? 75 ರಿಂದ 100 ವರ್ಷಗಳವರೆಗೆ ಸನ್ಯಾಸಿಯಾಗಿ ಜೀವಿಸಬೇಕು. ''ನಾನೇನೂ ಅಲ್ಲ, ನನಗೇನೂ ಬೇಡ'' ಎಂಬ ಸ್ಥಿತಿಯಲ್ಲಿರುತ್ತೀರಿ. ಇವು ಜೀವನದ ನಾಲ್ಕು ಆಶ್ರಮಗಳು. ಕೆಲವರು ಮೊದಲನೆಯ ಆಶ್ರಮದಿಂದ ನಾಲ್ಕನೆಯ ಆಶ್ರಮಕ್ಕೆ ಜಿಗಿಯುತ್ತಾರೆ. ಮಧ್ಯದ ಆಶ್ರಮಗಳನ್ನು ಅವರು ಪಾಲಿಸಬೇಕಾಗಿರುವುದಿಲ್ಲ.

ಮರಣ ಸಮೀಪಿಸುತ್ತಿರುವಾಗ ಕೆಲವರು ಆಹಾರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕೆಲವರು ಜೀವನದ ಕೊನೆಯಲ್ಲಿ ಹೆಚ್ಚು ಆಹಾರಕ್ಕಾಗಿ ಬಯಸುತ್ತಾರೆ. ವಿಷಯ ಹಾಗಿದ್ದಲ್ಲಿ, ಅವರು ಕಾಲವಾಗಿ ಹೋದ ಹತ್ತು ದಿನಗಳಲ್ಲಿ, ಕಾಲವಾಗಿ ಹೋದವರು ಇಷ್ಟ ಪಡುತ್ತಿದ್ದ ಆಹಾರವನ್ನು ಜನರಿಗೆ ಬಡಿಸುವುದು ಒಳ್ಳೆಯದು. ಈ ಆಹಾರದ ವಾಸನೆಯನ್ನು ಆತ್ಮವು ಅನುಭವಿಸಿದಾಗ, ''ಸರಿ, ಈಗ ಇದನ್ನು ನಾನು ತಿಂದಿದ್ದೇನೆ'' ಎಂದು ಅವರಿಗೆ ಅನಿಸುತ್ತದೆ. ಅವರಿಗೆ ಒಂದು ರೀತಿಯ ಸಾಂತ್ವನ ಸಿಕ್ಕಂತಾಗುತ್ತದೆ.

ಕೃಪೆ:ರವಿ ಶಂಕರ ಗುರೂಜೀ.                 ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097