ದಿನಕ್ಕೊಂದು ಕಥೆ. 626

*🌻ದಿನಕ್ಕೊಂದು ಕಥೆ🌻                                        ಅಮೂಲ್‌ ಜನಕನ ನೆನೆಯುತ್ತ...*                                     ಭಾರತದ ಡೈರಿ ಇತಿಹಾಸದಲ್ಲಿ 2014ರಿಂದ ಭಾರತದಾದ್ಯಂತ ಎಲ್ಲ ಪ್ರಮುಖವಾದ ಡೈರಿ ಸಂಘಟನೆಗಳು ಒಟ್ಟಿಗೆ ಸೇರಿ ನವೆಂಬರ್‌ ಇಪ್ಪತ್ತಾರನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಭಾರತದ ಕ್ಷೀರ ಕ್ರಾಂತಿಯ ಪಿತಾಮಹರಾದ ಡಾ.ವರ್ಗೀಸ್‌ ಕುರಿಯನ್‌ ಅವರ ಹುಟ್ಟಿದ ಹಬ್ಬದ ಸ್ಮರಣೆಗೆ ಆಚರಿಸಲಾಗುತ್ತಿದೆ. ಸೆಪ್ಟೆಂಬರ್‌ 2012ರಲ್ಲಿ ತಮ್ಮ 90ನೆಯ ವಯಸ್ಸಿನಲ್ಲಿಈ ಮಹಾಪುರುಷ ದಿವಂಗತರಾದಾಗ ರಾಷ್ಟ್ರೀಯ ಡೈರಿ ಅಭಿವೃದ್ಧಿ ಬೋರ್ಡ್‌, ರಾಷ್ಟ್ರಿಯ ಡೈರಿ ಸಂಸ್ಥೆ, ಮತ್ತು 22 ರಾಜ್ಯಗಳ ಹಾಲು ಒಕ್ಕೂಟಗಳು ಇಡೀ ವಿಶ್ವದಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ಗಳಿಸುವಂತೆ ಮಾಡಿದ ಕ್ಷೀರ ಕ್ರಾಂತಿಯ ಹರಿಕಾರ ಡಾ. ಕುರಿಯನ್‌ರವರಿಗೆ ಭಾರತ ರತ್ನ ನೀಡಬೇಕೆಂದು ಒಕ್ಕೊರಲಿನಿಂದ ಒತ್ತಾಯ ಮಾಡಿದವು.ಬಡತನದ ಬೇಗೆಯಿಂದ ಬಸವಳಿದಿದ್ದ ಗ್ರಾಮೀಣ ಭಾಗದ ಜನತೆಗೆ ಬೆಳಕು ಮತ್ತು ಬದುಕನ್ನು ನೀಡಿದವರು ಡಾ. ವರ್ಗೀಸ್‌ ಕುರಿಯನ್‌. ಬಡತನ ನಿರ್ಮೂಲನೆಗೆ ಹೆಣೆದ ಸಾವಿರಾರು ಯೋಜನೆಗಳು ಯಶಸ್ಸು ನೀಡಲಿಲ್ಲ. ಇದಕ್ಕೆ ಹತ್ತು ಹಲವಾರು ಕಾರಣಗಳು ಇರಬಹುದು. ಇಂತಹಸಾವಿರಾರು ವಿಫಲ ಯೋಜನೆಗಳ ನಡುವೆಯೂ ಅಪವಾದವೆಂಬಂತೆ ಡಾ. ಕುರಿಯನ್‌ ಮತ್ತು ಅವರ ತಂಡದ ಅಮೂಲ್‌ ಮಾದರಿ ಹೈನುಗಾರಿಕೆ,ಹೊನಲು ಕಾರ್ಯಾಚರಣೆ ಪ್ರಚಂಡ ಯಶಸ್ಸನ್ನು ಕಂಡಿತು. ಡಾ. ಕುರಿಯನ್‌ ಮತ್ತು ಅವರ ತಂಡ ಅತ್ಯಂತ ಕ್ಲಿಷ್ಟಪರಿಸ್ಥಿತಿಯಲ್ಲಿ, ಹಾಲು ಉತ್ಪನ್ನಗಳನ್ನು ಬಳಸುವ ಪ್ರತಿ ಭಾರತೀಯನ ಬಾಳಿನಲ್ಲಿ ಪ್ರವೇಶಿಸಿದ್ದರೂ, ಬಹಳ ಜನರಿಗೆ ಅರಿವೇ ಆಗದ ಕೋಟ್ಯಂತರ ಗ್ರಾಮೀಣ ಹೆ„ನುಗಾರ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.ಡಾ. ವರ್ಗೀಸ್‌ ಕುರಿಯನ್‌ ಭಾರತವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ಮತ್ತು ವಿಶ್ವದಲ್ಲಿಯೇ ಪ್ರಥಮ ರಾಷ್ಟ್ರವನ್ನಾಗಿಸಿದ ಹಾಗೂ ಪ್ರಪಂಚದಲ್ಲಿಯೇ ಬಹತ್‌ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವಾದ "ಹೊನಲು ಕಾರ್ಯಾಚರಣೆ'ಯ ಶಿಲ್ಪಿ. ಭಾರತದ ರೈತರಲ್ಲಿ ಆತ್ಮ ವಿಶ್ವಾಸ, ಸ್ವಾವಲಂಬನೆ ಮತ್ತು ಶಕ್ತಿ ತುಂಬಿದ ಡಾ.ಕುರಿಯನ್‌ ತಮ್ಮ ಕನಸನ್ನು ಸಾಕಾರಗೊಳಿಸಲು ಇಡೀ ಜೀವಮಾನವನ್ನು ಮುಡುಪಾಗಿಸಿದವರು. ಭಾರತದಲ್ಲಿ ಹಾಲು ಸಹಕಾರಿ ಸಂಘಟನೆಯ ರೂವಾರಿ ಅವರು.ಡಾ. ಕುರಿಯನ್‌ ಅವರ ಸಾಧನೆಗಳ ಬಗೆಗೆ ನಾವೆಲ್ಲ ಹೆಮ್ಮೆ ಪಡಬೇಕು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸಲು ಸಂಸ್ಥೆಗಳ ಸರಮಾಲೆಯನ್ನುಕಟ್ಟಿ ಪೌಷ್ಠಿಕ ಹಾಗೂ ಆರೋಗ್ಯಪೂರ್ಣ ಹಾಲನ್ನು ಉತ್ಪಾದಿಸಿ, ಅದು ಕೋಟ್ಯಂತರ ಜನರನ್ನು ತಲುಪುವಂತಹ ವ್ಯವಸ್ಥೆಯನ್ನುರೂಪಿಸಿ ಪ್ರಪಂಚದಲ್ಲೇ ಅತೀ ದೊಡ್ಡ ಆಹಾರ ಮಾರುಕಟ್ಟೆ ವ್ಯಾಪಾರವನ್ನು, ದೇಶದ ದೊಡ್ಡ ಆಹಾರ ಲಾಂಛನ"ಅಮೂಲ್‌'ನ್ನು ಹುಟ್ಟುಹಾಕಿದ ದಾರ್ಶನಿಕ. ಪ್ರತಿ ವ್ಯಕ್ತಿಗೆ ನಿಗ ದಿತ ಪ್ರಮಾಣದ ಹಾಲು ಸಿಗುವ ಮತ್ತು ಗ್ರಾಮೀಣ ಭಾರತದಲ್ಲಿ ಹೆ„ನುಗಾರಿಕೆಗೆ ಅತಿ ಹೆಚ್ಚುಉದ್ಯೋಗ ನೀಡುವ ಹಾಗೆ ಮಾಡಿದರು. ಅವರು ಹುಟ್ಟು ಹಾಕಿದ ಸಹಕಾರಿಸಂಸ್ಥೆಗಳು ಮಹಿಳೆಯರಿಗೆ ಅಧಿಕಾರ ನೀಡುವ ಮತ್ತುತಳಮಟ್ಟದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿ ಸಮಾಜವನ್ನುಬದಲಿಸುವ ಶಕ್ತಿಯುತ ಪ್ರತಿನಿ ಧಿಗಳನ್ನಾಗಿಸಿವೆ. ಕುರಿಯನ್‌ ಭಾರತದಲ್ಲಿನ ಬಹತ್‌ ಹಾಲು ಸಹಕಾರಿ ಸಂಘಟನೆಯ ರೂವಾರಿಯೂ ಹೌದು. ಆನಂದ್‌ನಲ್ಲಿ ತಾವು ಉತ್ಪಾದಿಸಿದ ಹಾಲನ್ನು ಮಾರಲು ಹೆ„ನುಗಾರರ ಸಣ್ಣ ಗುಂಪೊಂದು ಮಾಡಿಕೊಂಡಿದ್ದ ಕೈರಾ ಜಿಲ್ಲೆ ಕೋ ಆಪರೇಟಿವ್‌ ಮಿಲ್ಕ್ ಪ್ರೊಡ್ನೂಜರ್ ಲಿ., ಗೆ ಸೇವೆ ಸಲ್ಲಿಸಲು ಡಾ. ಕುರಿಯನ್‌ ಬಂದಿದ್ದೇ ಒಂದು ಆಕಸ್ಮಿಕ.ಕೇರಳದ ಕಲ್ಲಿಕೋಟೆಯಲ್ಲಿ ದಿನಾಂಕ 26-11-1921ರಂದು ಜನ್ಮತಾಳಿದ ಡಾ. ವರ್ಗೀಸ್‌ ಕುರಿಯನ್‌ ಮದರಾಸು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಪದವಿಯನ್ನು ಪಡೆದು 1945-46 ರಲ್ಲಿ ಅಮೆರಿಕದ ಮಿಚಿಗನ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಲೋಹ ವಿಜ್ಞಾನ ಮತ್ತು ನ್ಯೂಕ್ಲಿಯರ್‌ ಫಿಜಿಕ್ಸ್  ನಲ್ಲಿ ಮಾಸ್ಟರ್ ಪದವಿ ಪಡೆದು ಡೆ„ರಿ ಇಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿರುತ್ತಾರೆ.ಭಾರತ 1970ರಲ್ಲಿ ಉತ್ಪಾದಿಸುತ್ತಿದ್ದ 22 ಮಿಲಿಯನ್‌ ಟನ್‌ ಹಾಲು ಉತ್ಪಾದನೆ 1996ರ ವೇಳೆಗೆ 66.2 ಮಿಲಿಯನ್‌ ಟನ್‌ಗೆ ಏರಿತು. ಇದಕ್ಕೆ ಕಾರಣ ಹೊನಲು ಕಾರ್ಯಾಚರಣೆ, ಹಾಲು ಉತ್ಪಾದನೆ, ಸಾಗಾಣಿಕೆ, ಮಾರುಕಟ್ಟೆ, ನವೀಕರಣ ಇತ್ಯಾದಿಗಳ ಆಧುನೀಕರಣ. ಬಹುಮುಖ್ಯವಾಗಿಹೊನಲು ಕಾರ್ಯಾಚರಣೆಯು ಹಳ್ಳಿಗಾಡಿನ ಕೋಟ್ಯಂತರ ಜನರಿಗೆ ಸಂಭಾವನೆಯ ವೃತ್ತಿಯಾಯಿತು. 1996ರಿಂದ 2016ರ ವೇಳೆಗೆ ಹಾಲಿನ ಉತ್ಪಾದನೆ 66.2 ಮಿಲಿಯನ್‌ ಮೆಟ್ರಿಕ್‌ ಟನ್‌ನಿಂದ 160***1962ರಲ್ಲಿ ಚೀನಾದೊಡನೆ ಯುದ್ದದ ಕರಾಳಛಾಯೆ ರಾಷ್ಟ್ರವನ್ನು ಕವಿದಿತ್ತು. ಒಂದು ತುರ್ತು ಸಭೆಗೆ ಹಾಜರಾಗುವಂತೆ ಪ್ರಧಾನಿಯವರ ಕಚೇರಿಯಿಂದ ಡಾ.ಕುರಿಯನ್‌ರವರಿಗೆ ಕರೆಬಂತು. ಸಭೆಯಲ್ಲಿ ಸೇನೆಯ ಕೆಲವು ಜನರಲ್‌ಗ‌ಳು ಮತ್ತು ಹಿರಿಯ ಅ ಕಾರಿಗಳು ಇದ್ದರು. ಭಾರತೀಯ ಸೇನೆಗೆ ಹಾಲಿನಪುಡಿಯ ಅಗತ್ಯವಿತ್ತು. ನಾವು ಎಷ್ಟು ಪ್ರಮಾಣದ ಹಾಲಿನ ಪುಡಿಯನ್ನು, ಎಷ್ಟು ಬೇಗ ಸರಬರಾಜು ಮಾಡಲು ಸಾಧ್ಯವೆಂದು ಕೇಳಿದರು. ''ಒಂದು ಸಾವಿರ ಟನ್‌ಗಳನ್ನು ಆರು ತಿಂಗಳಲ್ಲಿ'' ಎಂದು ಡಾ.ಕುರಿಯನ್‌ ಹೇಳಿದರು. ಅದು ಸಾಲದು ಎಂದುಒಬ್ಬ ಜನರಲ್‌ ಹೇಳಿದ. ""ಸರಿ ಹಾಗಾದರೆ 1500 ಟನ್‌'' ಎಂದು ಡಾ.ಕುರಿಯನ್‌ ಹೇಳಿದರು. ಅವರು ಅದೂ ಸಾಲದೆಂದರು. ''ನಾವುಕಾಲಹರಣ ಮಾಡುವುದನ್ನು ನಿಲ್ಲಿಸೋಣ. ನಿಮಗೆ ಎಷ್ಟು ಟನ್‌ ಬೇಕು ಎಂದು ಡಾ.ಕುರಿಯನ್‌ ಹೇಳಿದರು. ಸೇನೆಯ ಜನರಲ್‌ನಮಗೆ 2750 ಟನ್‌ಗಳು ಬೇಕು ಎಂದು ತಿಳಿಸಿದರು. ಡಾ.ಕುರಿಯನ್‌ರವರು ಯಾವುದೇ ಯೋಚನೆಯೂ ಮಾಡದೇ ನಾನು ಆರು ತಿಂಗಳಲ್ಲಿ 2750 ಟನ್‌ ಹಾಲಿನಪುಡಿಯನ್ನು ಸೇನೆಗೆ ಸರಬರಾಜು ಮಾಡುತ್ತೇನೆ ಎಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದರು. ಪ್ರಧಾನ ಮಂತ್ರಿ ಕಛೇರಿಯ ಹಿರಿಯ ಅಧಿಕಾರಿಗಳು, ನಿಮಗೆ ಸರ್ಕಾರದಿಂದ ಯಾವ ಸಹಾಯಬೇಕು ತಿಳಿಸಿರಿ ಎಂದಾಗ, "ನನಗೆ ಯಾವ ಸಹಾಯವು ಬೇಕಿಲ್ಲ, ಇದು ತುರ್ತು ಪರಿಸ್ಥಿತಿ ಆಗಿರುವುದರಿಂದ ಅಮುಲ್‌ ತುರ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು, ಸರ್ಕಾರದಿಂದ ಹಣ ಕೀಳಲು ಹೊರಟರೆ ಅದು ಆಯೋಗ್ಯ ಸಂಸ್ಥೆಯಾದೀತು. ನನಗೇನು ಬೇಕಿಲ್ಲ'' ಎಂದು ತಿಳಿಸಿದರು ಮತ್ತು ವಾಗ್ಧಾನ ಮಾಡಿದಂತೆ ಸೇನೆಗೆ ಸರಬರಾಜು ಮಾಡಿದರು, ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಡಾ.ವರ್ಗಿಸ್‌ ಕುರಿಯನ್‌ ರವರ ಮಾರ್ಬಲ್‌ ಶಿಲೆಯ ಪುತ್ಥಳಿ ಮತ್ತು ಕಂಚಿನ ಪುತ್ಥಳಿಯನ್ನು ಅಮೆರಿಕದ ಮಿಚಿಗನ್‌ ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮತ್ತು ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಆವರಣದಲ್ಲಿ ಸ್ಥಾಪಿಸಲಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ್‌ರವರು ಡಾ.ವರ್ಗಿಸ್‌ ಕುರಿಯನ್‌ ರ ಪುತ್ಥಳಿಯನ್ನು ಅಮೆರಿಕದ ಮಿಚಿಗನ್‌ ವಿ.ವಿಗೆ ದಾನ ನೀಡಿದ್ದು, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ವಿಶೇಷ.                            *ಕೃಪೆ:ಡಿವಿ ಮಲ್ಲಿಕಾರ್ಜಜುನ(ಲೇಖಕರು: ಉಪ ವ್ಯವಸ್ಥಾಪಕರು (ಅಭಿಯಂತರ),ಕೆ.ಎಂ.ಎಫ್‌ - ಶಿವಮೊಗ್ಗ ಹಾಲು ಒಕ್ಕೂಟ)*.                                            ಸಂಗ್ರಹ :ವೀರೇಶ್ ಅರಸಿಕೆರೆ.

Comments

  1. ಉಪಯುಕ್ತ ಲೇಖನ ನೀಡಿದ್ದಕ್ಕೆ ಅಭಿನಂದನೆಗಳು

    ReplyDelete

Post a Comment

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097