Posts

Showing posts from November, 2021

ದಿನಕ್ಕೊಂದು ಕಥೆ 1034

*🌻ದಿನಕ್ಕೊಂದು ಕಥೆ🌻* *ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು!* ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದ

ದಿನಕ್ಕೊಂದು ಕಥೆ 1033

*🌻ದಿನಕ್ಕೊಂದು ಕಥೆ🌻* *ಬಡತನ ಸತ್ತು ಹೋದಾಗ* ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು. ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು . ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ

ದಿನಕ್ಕೊಂದು ಕಥೆ 1032

*🌻ದಿನಕ್ಕೊಂದು ಕಥೆ🌻* *ಆಸರೆ* ಲ್ಯಾಪ್ಟಾಪ್ ನೋಡುತ್ತಲೇ ಎಸ್ ವಾಟ್, ಎಂದು ಎದುರಿನಲ್ಲಿ ನಿಂತಿದ್ದ ಹುಡುಗಿಯನ್ನು ನೋಡದೇ ಕೇಳಿದಳು ಲತಾ...ಮೇಡಂ ನನಗೆ ಕೆಲಸದ ಅವಶ್ಯಕತೆ ತುಂಬಾನೆ ಇದೆ.  ಪಿಯುಸಿ ಮಾರ‍್ಕಕಾರ‍್ಡ್ ನೋಡಿ ಮೇಡಂ 90%...ಈಗ ಡಿಗ್ರಿ ಮಾಡ್ತಾ ಇದೀನಿ ಕರೆಸ್ಪಾಂಡೆನ್ಸ್ ಲ್ಲಿ...ಒಂದೇ ಒಂದು ತಿಂಗಳು ನನ್ನ ಕೆಲಸ ನೋಡಿ ,ಆಮೇಲೆ ಬೇಕಾದ್ರೆ ನನ್ನ  ತೆಗೆದುಹಾಕಿ...ನನ್ನ ತಮ್ಮ ಹೈಸ್ಕೂಲ್ ಓದ್ತಾ ಇದಾನೆ,ತಾಯಿಗೆ ಖಾಯಿಲೆಯಿಂದ ನರಳ್ತಾ ಇದಾಳೆ, ಹೆಚ್ ಆರ್ ಡಿಗ್ರಿ ಆಗಿಲ್ಲ ಕೆಲಸ ಕೊಡಲ್ಲ ಎಂದರು ಒಂದೇ ಸಮ ಹೇಳುತ್ತಿದ್ದ ಆ ಹುಡುಗಿಯನ್ನು ತಲೆ ಎತ್ತಿ ನೋಡಿದಳು ಕಂಪನಿಯ ಎಂ ಡಿ ಲತಾ... ಮುಗ್ದತೆಯ ಸಹಜ ಸುಂದರಿ...ಬಡತನದ ಛಾಯೆ ಅವಳು ತೊಟ್ಟಿರುವ ಬಟ್ಟೆಯಲ್ಲಿ ಎದ್ದು ಕಾಣುತ್ತಿತ್ತು.  ಕರುಣೆ ಮನದಲ್ಲಿ ಹಾದುಹೋದರೂ ಕಂಪನಿಯ ನಿಯಮದ ಪ್ರಕಾರ ಪದವಿ ಇಲ್ಲದೆ ಕೆಲಸ ಕೊಡುವಂತಿಲ್ಲ. ಐ ಮ್ ಸಾರಿ ,ಕಾಂಟ್ ಹೆಲ್ಪ್ ,ಟ್ರೈ ಆಫ್ಟರ್ ಡಿಗ್ರಿ ಎದ್ದು ಹೊರ ಹೊರಟಳು ಲತಾ. ಆ ಹುಡುಗಿ ದುಃಖ ನಿರಾಶೆಯಿಂದ ಕಣ್ಣೀರು ಒರೆಸುತ್ತಾ ನಿಂತಿದ್ದಳು. ರಾತ್ರಿ  ಮಲಗಿದರೂ ನಿದ್ದೆ ಕಣ್ಣಿಗೆ ಸುಳಿಯುತ್ತಿಲ್ಲ.ಯಾಕೊ ಆ ಹುಡುಗಿಯ ಧೈನ್ಯ ಮುಖ ಕಣ್ಣೇದುರೇ     ಬಿಂಬಿಸುತ್ತಿದೆ. ಏನಾದರೂ ಸಹಾಯ ಮಾಡಬೇಕಿತ್ತು. ಯಾಕೋ ಕಣ್ಣು          ಮಸಕಾಯಿತು ...ಲತಾಳ ಮನಸು ಹದಿನೈದು ವರ್ಷಗಳ ಹಿಂದಕ್ಕೆ ಓಡಿತು. ಹೌದು ನಾನು ಇದೇ ಪರಿಸ್ಥಿತಿಯಲ್ಲಿ ನಿಂತಿದ್ದೆ ಆ ದಿನ. ಬರ

ದಿನಕ್ಕೊಂದು ಕಥೆ 1031

*🌻ದಿನಕ್ಕೊಂದು ಕಥೆ🌻* *ಯಥಾರ್ಥ ಮಾನವೀಯತೆ* ಕಪಿಲ ನಗರದ ಮಹಾರಾಜ ಒಂದುದಿನ ಬೆಳಿಗ್ಗೆ ತನ್ನ ಕೈ ತೋಟದಲ್ಲಿ ಕುಳಿತು ಮಂತ್ರಿ, ಸೇನಾಧಿಪತಿಗಳ ಜತೆ ಗಹನವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಕೈತೋಟದ ಸುತ್ತಲೂ ಎತ್ತರವಾದ ಬಲಿಷ್ಠ ಗೋಡೆಯಿತ್ತು. ಗೋಡೆಯ ಆ ಬದಿಯಲ್ಲಿ ಬಯಲು ಪ್ರದೇಶವಿತ್ತು. ಒಬ್ಬ ವೃದ್ಧ ತನ್ನ ಮೊಮ್ಮಗನ ಜತೆಯಲ್ಲಿ ಆ ಕಡೆ ಬರುತ್ತಿದ್ದ. ತಾತ ಹಾಗೂ ಹುಡುಗನಿಗೆ ತುಂಬಾ ಹಸಿವಾಗುತ್ತಿತ್ತು. ರಾತ್ರಿಯಿಂದ ಉಪವಾಸ, ಗೋಡೆಯ ಪಕ್ಕದಲ್ಲಿ ನಡೆದು ಬರುವಾಗ ರಾಜನ ಕೈ ತೋಟದಲ್ಲಿರುವ ದೊಡ್ಡ ಮಾವಿನ ಕೊಂಬೆಯೊಂದು ಹೊರಗಡೆ ಬಾಗಿತ್ತು. ಅದರಲ್ಲಿ ಫಲಿತ ಮಾವಿನ ಹಣ್ಣುಗಳಿದ್ದವು. ವೃದ್ಧ ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಎತ್ತರದ ಕೊಂಬೆಗೆ ಹೊಡೆದ. ಮಾವಿನಹಣ್ಣು ಕೆಳಗೆ ಬಿತ್ತು. ಹುಡುಗ ಖುಷಿಯಿಂದ ಎತ್ತಿಕೊಂಡು ತಿನ್ನತೊಡಗಿದ. ಆದರೆ ಗೋಡೆಯ ಆ ಬದಿಯಲ್ಲಿ ಕುಳಿತಿದ್ದ ರಾಜನ ಹಣೆಗೆ ಕಲ್ಲು ಬಡಿದು ಹಣೆ ಸೀಳಿತು. ಮಂತ್ರಿ ಹಾಗೂ ಸೇನಾಧಿಪತಿ ಗಾಬರಿಗೊಂಡರು. ಕೂಡಲೇ ಗಾಯಕ್ಕೆ ಪಟ್ಟಿ ಕಟ್ಟಿದರು. ಹೊರಗೆ ಬಂದು ಇಣುಕಲಾಗಿ ಮುದುಕ ಹಾಗೂ ಹುಡುಗ ಕುಳಿತಿದ್ದರು. ಸೇನಾಧಿಪತಿ ಅವರಿಬ್ಬರನ್ನೂ ಹಿಡಿದು ರಾಜನೆದುರು ನಿಲ್ಲಿಸಿದರು. ಅವರಿಬ್ಬರೂ ವಂದಿಸಿ ಕ್ಷಮೆ ಬೇಡಿದರು. ತಕ್ಷಣವೇ ರಾಜ ಮುಗುಳ್ನಕ್ಕು ಆ ಬಡವನಿಗೆ ನೂರು ಚಿನ್ನದ ನಾಣ್ಯವನ್ನು ಕೊಡುವಂತೆ ಮಂತ್ರಿಗೆ ಸೂಚಿಸಿದ. ಇದನ್ನು ಕಂಡು ಸೇನಾಧಿಪತಿಗೆ ವಿಚಿತ್ರ ಎನಿಸಿತು. 'ಶಿಕ್ಷೆ ಕೊ

ದಿನಕ್ಕೊಂದು ಕಥೆ 1030

*🌻ದಿನಕ್ಕೊಂದು ಕಥೆ🌻*           *ಕಾಮನೆಗಳು* ಬಹಳ ಹಿಂದೆ ಪರ್ವತ ಪ್ರದೇಶದಲ್ಲಿ ಒಬ್ಬ ವೃದ್ಧನು  ವಾಸಿಸುತ್ತಿದ್ದನು. ಅವನ ಹೆಸರು 'ವಿಕ್ರಾಂತ ಯಾವಗಲ್'. ಕಡು ಬಡವ. ಈತನಿಗೆ ಒಂದು ಜೋಪಡಿ ತರಹದ ಗುಡಿಸಲು ಇತ್ತು. ಇವನು ತುಂಬಾ ಸೋಮಾರಿ ; ಹಾಗಾಗಿ ಜೀವನ ಮಾಡಲು  ಕಷ್ಟ ಪಡುತ್ತಿದ್ದನು. ವಿಕ್ರಾಂತ ಯಾವಗಲ್ಗೆ ಒಂದು ವಿಷಯ ತಿಳಿದಿತ್ತು. ಸಾಧು ಸನ್ಯಾಸಿಗಳು ತಮ್ಮ ಯೋಗಶಕ್ತಿಯಿಂದ ಸಿದ್ಧಿಗಳನ್ನು, ಮಾಡಬಲ್ಲರು, ಹಾಗೂ ಬೇಕಾದ ವಸ್ತುಗಳನ್ನು ಪಡೆಯಬಲ್ಲರು ಎಂದು ಕೇಳಿ ತಿಳಿದಿದ್ದನು. ಈಗ ಅವನ ತಲೆಯಲ್ಲಿ  ಯೋಚನೆಯೊಂದು  ಬಂದಿತು. ನಾನು ಯಾವ ಕೆಲಸವನ್ನೂ ಮಾಡದೆ ಸುಖವಾದ ಜೀವನ ನಡೆಸಬೇಕೆಂಬ ಆಸೆಯೊಂದು  ಮೊಳಕೆಯೊಡೆಯಿತು. ಇದನ್ನು ಪಡೆಯಬೇಕೆಂಬ ಆಕಾಂಕ್ಷೆಯಿಂದ, ಅವನು ಪರ್ವತದ ಮೇಲೆ ಹತ್ತಿ ಅಲ್ಲಿನ ಗವಿಗಳಲ್ಲಿ ವಾಸಮಾಡುವ ಯಾರಾದರೂ ಸಿದ್ಧಪುರುಷರನ್ನು ಭೇಟಿ ಮಾಡಿ ಮನದಿಚ್ಚೆಯನ್ನು  ಪೂರೈಸಿಕೊಳ್ಳಬೇಕೆಂದು ಹವಣಿಸಿದನು. ಇದಕ್ಕಾಗಿ ಸಾಧುಗಳನ್ನು ಹುಡುಕಲು  ಗವಿಗಳನ್ನು  ಹುಡುಕಿಕೊಂಡು ಹೊರಟನು. ಪರ್ವತದ ಮೇಲೆ ನಡೆಯುತ್ತಾ ಒಂದು ಕಡೆ ಹೋದಾಗ ಗವಿ ಕಂಡಿತು. ಅಲ್ಲೇ ತಪಸ್ಸು ಮಾಡುತ್ತಿದ್ದ ಸಾಧುವನ್ನು ಕಂಡನು. ಮತ್ತು ಅವರಿಗೆ ಭಕ್ತಿಯಿಂದ ಪ್ರಣಾಮ ಮಾಡಿದನು. ಸಾಧುಗಳು ಅವನನ್ನು ಸ್ವಾಗತಿಸಿ ಮಾತನಾಡಿಸಿ, ನೀನು ನಮ್ಮಲ್ಲಿಗೆ ಬಂದ ಉದ್ದೇಶ ಏನು ಎಂದು ಕೇಳಿದರು. ವಿಕ್ರಾಂತ್ ಯಾವಗಲ್ ನು, "ಪೂಜ್ಯ ಸಾಧು ಮಹಾರಾಜರೇ ! ನಾನೊಬ್ಬ ಕಡ