ದಿನಕ್ಕೊಂದು ಕಥೆ 1032

*🌻ದಿನಕ್ಕೊಂದು ಕಥೆ🌻*
*ಆಸರೆ*

ಲ್ಯಾಪ್ಟಾಪ್ ನೋಡುತ್ತಲೇ ಎಸ್ ವಾಟ್, ಎಂದು ಎದುರಿನಲ್ಲಿ ನಿಂತಿದ್ದ ಹುಡುಗಿಯನ್ನು ನೋಡದೇ ಕೇಳಿದಳು ಲತಾ...ಮೇಡಂ ನನಗೆ ಕೆಲಸದ ಅವಶ್ಯಕತೆ ತುಂಬಾನೆ ಇದೆ.  ಪಿಯುಸಿ ಮಾರ‍್ಕಕಾರ‍್ಡ್ ನೋಡಿ ಮೇಡಂ 90%...ಈಗ ಡಿಗ್ರಿ ಮಾಡ್ತಾ ಇದೀನಿ ಕರೆಸ್ಪಾಂಡೆನ್ಸ್ ಲ್ಲಿ...ಒಂದೇ ಒಂದು ತಿಂಗಳು ನನ್ನ ಕೆಲಸ ನೋಡಿ ,ಆಮೇಲೆ ಬೇಕಾದ್ರೆ ನನ್ನ  ತೆಗೆದುಹಾಕಿ...ನನ್ನ ತಮ್ಮ ಹೈಸ್ಕೂಲ್ ಓದ್ತಾ ಇದಾನೆ,ತಾಯಿಗೆ ಖಾಯಿಲೆಯಿಂದ ನರಳ್ತಾ ಇದಾಳೆ, ಹೆಚ್ ಆರ್ ಡಿಗ್ರಿ ಆಗಿಲ್ಲ ಕೆಲಸ ಕೊಡಲ್ಲ ಎಂದರು ಒಂದೇ ಸಮ ಹೇಳುತ್ತಿದ್ದ ಆ ಹುಡುಗಿಯನ್ನು ತಲೆ ಎತ್ತಿ ನೋಡಿದಳು ಕಂಪನಿಯ ಎಂ ಡಿ ಲತಾ...
ಮುಗ್ದತೆಯ ಸಹಜ ಸುಂದರಿ...ಬಡತನದ ಛಾಯೆ ಅವಳು ತೊಟ್ಟಿರುವ ಬಟ್ಟೆಯಲ್ಲಿ ಎದ್ದು ಕಾಣುತ್ತಿತ್ತು.  ಕರುಣೆ ಮನದಲ್ಲಿ ಹಾದುಹೋದರೂ ಕಂಪನಿಯ ನಿಯಮದ ಪ್ರಕಾರ ಪದವಿ ಇಲ್ಲದೆ ಕೆಲಸ ಕೊಡುವಂತಿಲ್ಲ. ಐ ಮ್ ಸಾರಿ ,ಕಾಂಟ್ ಹೆಲ್ಪ್ ,ಟ್ರೈ ಆಫ್ಟರ್ ಡಿಗ್ರಿ ಎದ್ದು ಹೊರ ಹೊರಟಳು ಲತಾ. ಆ ಹುಡುಗಿ ದುಃಖ ನಿರಾಶೆಯಿಂದ ಕಣ್ಣೀರು ಒರೆಸುತ್ತಾ ನಿಂತಿದ್ದಳು.

ರಾತ್ರಿ  ಮಲಗಿದರೂ ನಿದ್ದೆ ಕಣ್ಣಿಗೆ ಸುಳಿಯುತ್ತಿಲ್ಲ.ಯಾಕೊ ಆ ಹುಡುಗಿಯ ಧೈನ್ಯ ಮುಖ ಕಣ್ಣೇದುರೇ     ಬಿಂಬಿಸುತ್ತಿದೆ. ಏನಾದರೂ ಸಹಾಯ ಮಾಡಬೇಕಿತ್ತು. ಯಾಕೋ ಕಣ್ಣು          ಮಸಕಾಯಿತು ...ಲತಾಳ ಮನಸು ಹದಿನೈದು ವರ್ಷಗಳ ಹಿಂದಕ್ಕೆ ಓಡಿತು. ಹೌದು ನಾನು ಇದೇ ಪರಿಸ್ಥಿತಿಯಲ್ಲಿ ನಿಂತಿದ್ದೆ ಆ ದಿನ. ಬರೀ ಹತ್ತನೆಯ ತರಗತಿ ಓದಿದ ನನಗೆ ಜೀವನ ಸಾಗಿಸಲು ಸಂಪಾದನೆಯ ಅವಶ್ಶಕತೆ ಇತ್ತು.ಅಪ್ಪ ಜವಾಬ್ದಾರಿಗೆ ಹೆದರಿ ಪಲಾಯನ ಮಾಡಿದ್ದ,ಅಮ್ಕ ಎರಡು ಮನೆಯ ಅಡುಗೆ ಕೆಲಸ ಮಾಡಿ ಮಿಕ್ಕ ಊಟವನ್ನು ತಂದು  ನನಗೆ ಮತ್ತು ಅಕ್ಕ ತಂಗಿಯರ ಹೊಟ್ಟೆ ತುಂಬಿಸುತ್ತ ಇದ್ದದ್ದು ನೆನಪು ಬಂತು. ಅಕ್ಕನ ತಲೆಗೆ ವಿದ್ಯೆ ಹತ್ತದ ಕಾರಣ ಮನೆ ಕೆಲಸ ಮುಗಿಸಿ ಪಕ್ಕದ ಟೈಲರ್ ಅಂಗಡಿಯಲ್ಲಿ ಗುಂಡಿ,ಹುಕ್ಸ್,ರಿಂಗು,ಕಾಜ ಬಟನ್ ಮಾಡಿ ದಿನ 20ರ ಸಂಪಾದನೆ ತರಕಾರಿ ಖರ‍್ಚಿಗೆ ಆಗುತಿತ್ತು.ತಂಗಿ ಸಣ್ಣವಳು.ಹತ್ತನೆಯ ತರಗತಿ ಉತ್ತಮ ಅಂಕಗಳೊಡನೆ ಪಾಸಾಗಿ ಕಾಲೇಜು ಕನಸು ಕಾಣುತ್ತಿದ್ದಾಗಲೇ ಅಮ್ಮನ ಆರೋಗ್ಯ ಕೈ ಕೊಟ್ಟಿತ್ತು.
ಸಂಸಾರದ ಹೊಣೆ ಬಿದ್ದು ಓದುವ ಕನಸು ಕಮರಿತ್ತು.
  ನಾಕು ಹೊಟ್ಟೆ ತುಂಬಿಸಲು ದುಡಿಮೆಯ ಅನಿವಾರ್ಯತೆ,ಹತ್ತನೆಯ ತರಗತಿ ಓದಿದ ನಾನು ಎಲ್ಲಿ ಹುಡುಕಲಿ,ಯಾರನ್ನು ಕೇಳಲಿ ಎಂದು ಯೋಚಿಸುತ್ತಿರುವಾಗಲೇ ಬಾಗಿಲು ಬಡಿದ ಸದ್ದಿಗೆ ಎದ್ದು ಬಾಗಿಲು ತೆಗೆದಿದ್ದಳು ಲತಾ.ಹೊಲಿಯಲು ಕೊಟ್ಟ ಬ್ಲೌಸ್ ಬೇಗ ಬೇಕಾದರಿಂದ ಅಕ್ಕನನ್ನು ಕೇಳಲು ಬಂದಿದ್ದ ನಡುವಯಸಿನ ಯುವತಿಯನ್ನು ಒಳ ಕರೆದು ಅರ್ದ ಘಂಟೆಯಲ್ಲಿ ಕೊಡುವುದಾಗಿ ಕುಳಿತುಕೊಳ್ಳಲು ಹೇಳಿದಳು. ಕಾಫಿ ಮಾಡಿ ತಂದ ಲತಳನ್ನು ಮಾತಿಗೆಳೆದ ಯುವತಿ ತಾನೊಂದು ಸಣ್ಣ  ಖಾಸಗಿ  ಶಾಲೆ ನಡೆಸುತ್ತಿರುವ ಬಗ್ಗೆ ಹೇಳಿದರು. ಕೆಲಸದ ನಿರೀಕ್ಷೆಯಲ್ಲಿದ್ದ  ಲತಾ ದಯಮಾಡಿ ಶಾಲೆಯಲ್ಲಿ ಕೆಲಸ ಕೊಟ್ಟರೆ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಕೇಳಿದ್ದು ನೆನಪಾಯಿತು.. ಶಾಲೆಯ ಬೇಬಿ ಸಿಟ್ಟಿಂಗ್ ಗೆ ಒಂದು ಅಸಿಸ್ಟೆಂಟ್ ಬೇಕು ನಾಳೆ ಬಂದು ನೋಡು ಎಂದು ಅಡ್ರಸ್ ಕೊಟ್ಟು ರೆಡಿಯಾಗಿದ್ದ ಬ್ಲೌಸ್ ತೆಗೆದುಕೊಂಡು ಹೊರಟರು. ಆಸರೆ ಸಿಕ್ಕಂತಾಗಿ  ಮಾರನೇ ದಿನ ಶಾಲೆಗೆ ಹೋಗಿ ಮುಖಸ್ಥೆ ಜೊತೆ ಮಾತಾಡಿ ತನ್ನ ಮನೆಯ ಕಷ್ಟ,ಓದುವ ಹಂಬಲ ಎಲ್ಲವನ್ನೂ ವಿವರಿಸಿದ ನಂತರ ಬೆಳಗ್ಗೆ ನಾಕು ತಾಸು ಯುಕೆಜಿ ಬುಕ್ ಗಳಿಗೆ ಲೈನ್ ಹಾಕಿ ,ಹೋಮ್ವರ‍್ಕ್ ಚಕ್ ಮಾಡುವ ಕೆಲಸ ನಂತರ ಕಾಲೇಜಿಗೂ ಹೋಗಬಹುದು,ಎರಡು ಸಾವಿರ ಸಂಬಳ ಎಂದು ಜೀವನಕ್ಕೆ ದಾರಿದೀಪವಾದ ಆ ಮೇಡಂನ ತಂಪೊತ್ತಲ್ಲೆ ನೆನಸಬೇಕು.ಶಾಲೆ ಕೆಲಸ,ಟ್ಯೂಶನ್ ಹೇಳೊದು,ಕಾಲೇಜು ಓದು ಎಂದು ಮುಂದೆ ಸಾಗುತ್ತಾ ತಾಯಿ,ಅಕ್ಕ,ತಂಗಿಯ ಜೀವನಕ್ಕೆ ಆಸರೆಯಾಗಿದ್ದು,ತಾನು ಸ್ನಾತಕೋತ್ತರ ಪದವಿ ಪಡೆದು ಉನ್ನತ ಕೆಲಸದಲ್ಲಿದ್ದು ಸಾಧನೆಯೇ ಸರಿ. ಅಕ್ಕ ತಂಗಿಯರ ಮದುವೆ ಮಾಡಿ, ತಾಯಿಯನ್ನು ತನ್ನ ಬಳಿಯೇ ಇರಿಸಿಕೊಂಡು ,          ವಿದ್ಯಾವಂತನನ್ನು ಮದುವೆಯಾಗಿ ,ಮುದ್ದು ಮಕ್ಕಳ ತಾಯಾಗಿದ್ದು ಮನಸಿನ ಪುಟಗಳಲ್ಲಿ ಹಾದು ಹೋದವು. ವಿದ್ಯೆ ಒಂದು ನಿಜವಾದ ಆಸ್ತಿ. ಅಂದು ಬರೀ ದುಡಿಮೆ ಕಡೆ ಗಮನ ಹರಿಸಿದ್ದರೆ,ಈ ಸಾಧನೆ ಸಾದ್ಯವಿರಲಿಲ್ಲ.ಉನ್ನತವಾದ ಬದುಕಿಗೇ ವಿದ್ಯೇ ಆಭರಣ.ನಾನು ಅದೇ ಕಷ್ಟದ ಹಾದಿಯಲ್ಲಿ ನೆಡೆದರೂ,ಯಾಕೆ ಹಾಗೇ ಬಂದೆ, ಆ ಹುಡುಗಿಗೆ ಸಹಾಯ ಮಾಡಬೇಕಿತ್ತು ಎನಿಸಿತು.
ಮಾರನೇ ದಿನ ಆಫೀಸ್ ಹೋದ ಕೂಡಲೇ ನಿನ್ನೆ ಬಂದಿದ್ದ ಪಿಯುಸಿ ಹುಡುಗಿಯನ್ನು ಕರೆಸಲು ಹೇಳಿ ಕೆಲಸದಲ್ಲಿ ಮುಳುಗಿದಳು ಲತಾ.
ಒಂದು ತಾಸಿನಲ್ಲಿ ಅದೇ ಹುಡುಗಿ ಬಂದು ನಿಂತಳು.  ಲತಾ ಹುಡುಗಿಯನ್ನು ಕುಳಿತುಕೊಳ್ಳುವಂತೆ ಸೂಚಿಸಿ ಟೀ ಹೇಳಿದಳು. ಸಂಕೋಚದಿಂದ ಮುದುಡಿ ಕುಳಿತಿದ್ದಳು. ನಾಳೆಯಿಂದ ಕೆಲಸಕ್ಕೆ ಬಾ ಹಾಗೇ ಓದು ಮುಂದುವರೆಸು ಎನ್ನುತ್ತಿದ್ದಂತೇ ಜಗತ್ತನ್ನೇ ಗೆದ್ದಷ್ಟು ಸಂಭ್ರಮ ಮುಖದಲ್ಲಿ ಬಿಂಬಿಸಿತು. ಕೈ ಮುಗಿದು ಬದುಕಿಗೆ ಆಸರೆ ಆದಿರಿ ಎಂದಳು.ಟೀ ಕುಡಿ ಎನ್ನುವ ಆತ್ಮಿಯತೆಗೆ ಸೋತಳು ಆ ಹುಡುಗಿ. ಅಂದು ತನಗೆ ಸಹಾಯ ಮಾಡಿದ ಆ ದೇವತೆಗೆ ಕ್ರತಜ್ನತೆ ಸಲ್ಲಿಸಿದಳು ಲತಾ... ನಾನು ಲತಾ ಮೇಡಂನಂತಾಗಿ ,ಓದಿ ಸಾಧಿಸಿ ನನ್ನಂತ ಹುಡುಗಿಯರ  ಮತ್ತು ಅವರ ಕುಟುಂಬಗಳ ಬದುಕಿಗೆ ಸೂರು ಆಗಬೇಕೆಂದು ಕನಸು ಕಾಣುತ್ತಾ  ಹೊಸ ಹೆಜ್ಜೆ ಹಾಕಿದಳು ಆತ್ಮವಿಶ್ವಾಸ ದಿಂದಾ..ಆ ಹುಡುಗಿ......

ಕೃಪೆ:ಸುಮಾಗುರುರಾಜ್.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097