Posts

Showing posts from September, 2019

ದಿನಕ್ಕೊಂದು ಕಥೆ 937

*🌻ದಿನಕ್ಕೊಂದು ಕಥೆ🌻* ಕೃಷ್ಣ ಮತ್ತು ಸುಧಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು  ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, *ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು* ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುಧಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ *ಇದು ಮಿತಿ ಮೀರಿದೆ. ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ* ಎಂದು ಕೋಪದಿಂದ  ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು. ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು. ಕೃಷ್ಣ, *ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?* ಅದಕ್ಕೆ ಸುಧಾಮನ  ಉತ್ತರ *ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನ

ದಿನಕ್ಕೊಂದು ಕಥೆ 936

*🌻ದಿನಕ್ಕೊಂದು ಕಥೆ🌻* *ಉಡುಗೊರೆ* ********** ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ. ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು. ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ. ಮಕ್ಕಳಿಗೆ ಫೋನಾಯಿಸುತ್ತಾರೆ "ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ" ಎಂದು. ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ. ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ "ನಿಮಗೊಂದು ವಿಷಯ ತಿಳಿಸಬೇಕಿದೆ "ಎಂದು. "ನನ್ನ ನಿವೃತ್ತಿಯಾಗಿದೆ ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್  ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು" ಇಚ್ಛೆ ವ್ಯಕ್ತಪಡಿಸುತ್ತಾರೆ ಅದಕ್ಕೆ ಮಕ್ಕಳು ಹೇಳುತ್ತಾರೆ "ಮೊದಲು ಸ

ದಿನಕ್ಕೊಂದು ಕಥೆ 935

*🌻ದಿನಕ್ಕೊಂದು ಕಥೆ🌻* ಹಿಂದೂಗಳ ವಿಗ್ರಹ ಪೂಜೆಯನ್ನು ವಿರೋಧಿಸಿದ ರಾಜನಿಗೆ ಸ್ವಾಮಿ ವಿವೇಕಾನಂದರು ಆ ರಾಜನ ಆಸ್ಥಾನದಲ್ಲೆ ಹೇಗೆ ನೀರಿಳಿಸಿದರು ಅಂತ ಹೇಳ್ತೀನಿ ಬನ್ನಿ ... ನಿಮ್ಮಲ್ಲಿ ಯಾರಾದರೂ ವಿಗ್ರಹ ಪೂಜಾ ವಿರೋಧಿಗಳು ಇದ್ದರೆ ಬಹುಶಃ ಈ ಘಟನೆ ಓದಿದ ನಂತರ ನೀವು ಕೂಡ ದೇವರ ವಿಗ್ರಹ ಪೂಜೆ ಮಾಡಬಹುದು.... ಹೌದು ಹಿಂದೂ ಸಮಾಜವನ್ನು ಅನ್ಯಧರ್ಮಿಯರ ಜೊತೆ ನಮ್ಮ ಹಿಂದೂ ಬುದ್ಧಿ ಜೀವಿಗಳು ಸೇರಿಕೊಂಡು ಹಿಯಾಳಿಸುತ್ತಿರುವುದು ನಾವು ಕಲ್ಲಿನ ವಿಗ್ರಹಗಳಿಗೆ ಮತ್ತು ಭಾವಚಿತ್ರಗಳಿಗೆ ಪೂಜೆ ಮಾಡ್ತೀವಿ ಅಂತ ..... #ಸ್ವಾಮಿ_ವಿವೇಕಾನಂದರು ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತಿರುವಾಗ #ಮಂಗಳಸಿಂಗ್ ಎಂಬ ಮಹಾರಾಜ ಸ್ವಾಮೀಜಿಯನ್ನು ತನ್ನ ಆಸ್ಥಾನಕ್ಕೆ ಬರುವಂತೆ ಒಂದು ಆಮಂತ್ರಣ ಕೊಡುತ್ತಾನೆ ... ಸ್ವಾಮೀಜಿ ಕೂಡ ಅವನ ಆಹ್ವಾನಕ್ಕೆ ಗೌರವ ಕೊಟ್ಟು ಆಸ್ಥಾನಕ್ಕೆ ಹೋಗುತ್ತಾರೆ ... ಮಹಾರಾಜ ವಿವೇಕಾನಂದರನ್ನು ಕುರಿತು ಸ್ವಾಮೀಜಿ ನನಗೆ ಈ ಹಿಂದೂಗಳ ವಿಗ್ರಹ ಪೂಜೆ ಮೂರ್ತಿ ಭಜನೆ ದೇವರ ಭಾವಚಿತ್ರಕ್ಕೆ ಪೂಜೆ ಇಂತ ಪದ್ಧತಿಗಳಲ್ಲಿ ನಂಬಿಕೆಯಿಲ್ಲ... ಕಲ್ಲಿಗೆ ಪೂಜೆ ಮಾಡಿದರೆ ದೇವರಿಗೆ ಪೂಜೆ ಮಾಡಿದ ಹಾಗೆ ಅಂತಾರಲ್ಲ ಹೇಗೆ ನಂಬುವುದು ಅಂತ ಧಿಮಾಕಿನಿಂದ ಕೇಳುತ್ತಾನೆ... ಆಗ ಸ್ವಾಮೀಜಿ ಹೇಳ್ತಾರೆ ನಿಮ್ಮ ಅಭಿಪ್ರಾಯದಲ್ಲಿ ತಪ್ಪೇನು ಇಲ್ಲ ಮಹಾರಾಜ ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳ ವ್ಯಕ್ತಪಡಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ ನಮ

ದಿನಕ್ಕೊಂದು ಕಥೆ 934

*🌻ದಿನಕ್ಕೊಂದು ಕಥೆ🌻* ಮೈಕಲ್ ಜಾಕ್ಸನ್ --- ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ..... ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. . ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು. ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ. ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು ಮಲಗಲು ಆತ ಉಪಯೋಗಿಸುತ್ತಿದ್ದ.. ತನ್ನ ಅಂಗಾಂಗಗಳಿಗೆ ಏನಾದರೂ ತೊಂದರೆ ಆದರೆ, ತಕ್ಷಣ ಹಾನಿಗೀಡಾದ ಅಂಗಾಂಗವನ್ನು ಶಸ್ತ್ರಕ್ರಿಯೆ ಮಾಡಿಸಿ ಬೇರೆ ಅವಯವವನ್ನು ಕಸಿ ಮಾಡಲು ಅವಯವ ದಾನಿಗಳನ್ನೂ ಆತ ಇರಿಸಿದ್ದ....!! ಈ ಅವಯವ ದಾನಿಗಳ ದೈನಂದಿನ ಖರ್ಚುಗಳನ್ನು ಆತನೇ ಬರಿಸುತ್ತಿದ್ದ. 150 ವರ್ಷಗಳ ಕಾಲ ಬದುಕಬೇಕೆಂಬ ಕನಸುಗಳೊಂದಿಗೆ ಆತನ ಜೀವನ ನೌಕೆಯು ಸಾಗುತ್ತಿತ್ತು...... ಆದರೆ, ಆತ ಪರಾಜಯಗೊಂಡ... 2009 ಜೂನ್ 25 ರಂದು ಆತನ 50 ನೆಯ ವಯಸಲ್ಲಿ ಆತನ ಹೃದಯವು ನಿಶ್ಚಲವಾಯಿತು.. ಆತ ನೇಮಿಸಿದ್ದ ಆ 12 ಡಾಕ್ಟರ್ ಗಳ ಶ್ರಮವು ವಿಫಲವಾಯಿತು.... ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ ಮುಂತಾದ ಸ್ಥಳಗಳಿಂದ ಬಂದಿದ್ದ ಡಾಕ್ಟರ್ ಗಳ ಸಂಯುಕ್ತ ಪರಿಶ್ರಮದಿಂದಲೂ ಆತನನ್ನು ರಕ

ದಿನಕ್ಕೊಂದು ಕಥೆ 933

ನಿಜಕ್ಕೂ ಇದು ಇಂಟರೆಸ್ಟಿಂಗ್ ಸ್ಟೋರಿಯೇ ಸರಿ, ಓದಿ ತಪ್ಪದೆ ಶೇರ್ ಮಾಡಿ. ಅದು 1994, ಭಾರತದ ರಾಷ್ಟ್ರಪತಿಗಳಾಗಿದ್ದ ಶ್ರೀ ಶಂಕರಗ ದಯಾಳ್ ಶರ್ಮಾ ರವರು ಓಮನ್‌ ದೇಶದ ಮಸ್ಕಟ್ ಪ್ರವಾಸಕ್ಕೆ ತೆರಳಿದ್ದರು. ಭಾರತ ಸರ್ಕಾರದ ಏರ್ ಇಂಡಿಯಾ ವಿಮಾನ ಮಸ್ಕಟ್‌ಗೆ ತಲುಪಿದ ಕೂಡಲೇ ಮೂರು ಘಟನೆಗಳು ಅಲ್ಲಿ ಘಟಿಸಿದ್ದವು. 1. ಓಮನ್ ದೇಶದ ಸುಲ್ತಾನ ತನ್ನ ದೇಶಕ್ಕೆ ಆಗಮಿಸುವ ಯಾವ ಗಣ್ಯರನ್ನ ಬರಮಾಡಿಕೊಳ್ಳಲೂ ಆತ ಏರ್‌ಪೋರ್ಟ್‌ಗೆ ಹೋಗುತ್ತಿರಲಿಲ್ಲ. ಆದರೆ ಭಾರತದ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರು ಮಸ್ಕಟ್‌ಗೆ ಬಂದಾಗ ಮಾತ್ರ ಆತ ಅವರನ್ನ ಬರಮಾಡಿಕೊಳ್ಳಲು ಏರ್‌ಪೋರ್ಟ್‌ಗೆ ತೆರಳಿದ್ದ. 2.  ಭಾರತದ ರಾಷ್ಟ್ರಪತಿಗಳ ವಿಮಾನ ಯಾವಾಗ ಲ್ಯಾಂಡ್ ಆಯಿತೋ ಆಗ ಓಮನ್ ಸುಲ್ತಾನ ಏರ್‌ಪೋರ್ಟ್‌ಗೆ ಆಗಮಿಸಿದ್ದಲ್ಲದೆ ವಿಮಾನದ ಮೆಟ್ಟಿಲುಗಳನ್ನ ಹತ್ತಿ ಶಂಕರ್ ದಯಾಳ್ ಶರ್ಮಾರವರನ್ನ ಆತ್ಮೀಯವಾಗಿ ಬರಮಾಡಿಕೊಂಡಿದ್ದ. 3. ವಿಮಾನದಿಂದ ಭಾರತದ ರಾಷ್ಟ್ರಪತಿಗಳನ್ನ ಬರಮಾಡಿಕೊಂಡ ಬಳಿಕ ಶಂಕರ್ ದಯಾಳ್ ಶರ್ಮಾರವರಿಗಾಗಿ ಕಾರು ಹಾಗು ಅದರ ಚಾಲಕ ಕಾಯುತ್ತಿದ್ದ. ಓಮನ್ ಸುಲ್ತಾನ ಆ ಕಾರು ಚಾಲಕನಿಗೆ ಅಲ್ಲಿಂದ ಹೋಗು ಎಂದು ಸನ್ನೆಯ ಮೂಲಕ ತಿಳಿಸಿ ಭಾರತದ ರಾಷ್ಟ್ರಪತಿಗಳನ್ನ ಕಾರಿನಲ್ಲಿ ಕೂರಿಸಿಕೊಂಡು ತಾನೇ ಡ್ರೈವರ್ ಆಗಿ ಕಾರು ಚಲಾಯಿಸಿಕೊಂಡು ಹೊರಟುಹೋದ. ತನ್ನ ದೇಶಕ್ಕೆ ಎಂಥಾ ಗಣ್ಯಾತಿ ಗಣ್ಯ ವ್ಯಕ್ತಿಗಳು ಬಂದರೂ ಸ್ವಾಗತಿಸೋಕೆ ಹೋಗದ ಓಮನ್ ಸುಲ್ತಾನನ ಈ ದಿಢೀರ್ ಬದಲಾವಣ