ದಿನಕ್ಕೊಂದು ಕಥೆ 935
*🌻ದಿನಕ್ಕೊಂದು ಕಥೆ🌻*
ಹಿಂದೂಗಳ ವಿಗ್ರಹ ಪೂಜೆಯನ್ನು ವಿರೋಧಿಸಿದ ರಾಜನಿಗೆ ಸ್ವಾಮಿ ವಿವೇಕಾನಂದರು ಆ ರಾಜನ ಆಸ್ಥಾನದಲ್ಲೆ ಹೇಗೆ ನೀರಿಳಿಸಿದರು ಅಂತ ಹೇಳ್ತೀನಿ ಬನ್ನಿ ...
ನಿಮ್ಮಲ್ಲಿ ಯಾರಾದರೂ ವಿಗ್ರಹ ಪೂಜಾ ವಿರೋಧಿಗಳು ಇದ್ದರೆ ಬಹುಶಃ ಈ ಘಟನೆ ಓದಿದ ನಂತರ ನೀವು ಕೂಡ ದೇವರ ವಿಗ್ರಹ ಪೂಜೆ ಮಾಡಬಹುದು....
ಹೌದು ಹಿಂದೂ ಸಮಾಜವನ್ನು ಅನ್ಯಧರ್ಮಿಯರ ಜೊತೆ ನಮ್ಮ ಹಿಂದೂ ಬುದ್ಧಿ ಜೀವಿಗಳು ಸೇರಿಕೊಂಡು ಹಿಯಾಳಿಸುತ್ತಿರುವುದು ನಾವು ಕಲ್ಲಿನ ವಿಗ್ರಹಗಳಿಗೆ ಮತ್ತು ಭಾವಚಿತ್ರಗಳಿಗೆ ಪೂಜೆ ಮಾಡ್ತೀವಿ ಅಂತ .....
#ಸ್ವಾಮಿ_ವಿವೇಕಾನಂದರು ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತಿರುವಾಗ #ಮಂಗಳಸಿಂಗ್ ಎಂಬ ಮಹಾರಾಜ ಸ್ವಾಮೀಜಿಯನ್ನು ತನ್ನ ಆಸ್ಥಾನಕ್ಕೆ ಬರುವಂತೆ ಒಂದು ಆಮಂತ್ರಣ ಕೊಡುತ್ತಾನೆ ... ಸ್ವಾಮೀಜಿ ಕೂಡ ಅವನ ಆಹ್ವಾನಕ್ಕೆ ಗೌರವ ಕೊಟ್ಟು ಆಸ್ಥಾನಕ್ಕೆ ಹೋಗುತ್ತಾರೆ ...
ಮಹಾರಾಜ ವಿವೇಕಾನಂದರನ್ನು ಕುರಿತು ಸ್ವಾಮೀಜಿ ನನಗೆ ಈ ಹಿಂದೂಗಳ ವಿಗ್ರಹ ಪೂಜೆ ಮೂರ್ತಿ ಭಜನೆ ದೇವರ ಭಾವಚಿತ್ರಕ್ಕೆ ಪೂಜೆ ಇಂತ ಪದ್ಧತಿಗಳಲ್ಲಿ ನಂಬಿಕೆಯಿಲ್ಲ... ಕಲ್ಲಿಗೆ ಪೂಜೆ ಮಾಡಿದರೆ ದೇವರಿಗೆ ಪೂಜೆ ಮಾಡಿದ ಹಾಗೆ ಅಂತಾರಲ್ಲ ಹೇಗೆ ನಂಬುವುದು ಅಂತ ಧಿಮಾಕಿನಿಂದ ಕೇಳುತ್ತಾನೆ... ಆಗ ಸ್ವಾಮೀಜಿ ಹೇಳ್ತಾರೆ ನಿಮ್ಮ ಅಭಿಪ್ರಾಯದಲ್ಲಿ ತಪ್ಪೇನು ಇಲ್ಲ ಮಹಾರಾಜ ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳ ವ್ಯಕ್ತಪಡಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ ನಮ್ಮ ಹಿಂದೂಧರ್ಮ ಅವರವರ ಭಾವನೆಗಳಿಗೆ ತಕ್ಕಂತೆ ಪೂಜೆ ಮಾಡ್ತಾರೆ ಹಾಗಂತ ಪೂಜೆ ಮಾಡದವರನ್ನು ಕೆಟ್ಟವರು ಅಂತ ಹೇಳೋದು ಕೂಡ ತಪ್ಪಾಗುತ್ತೆ...
ಆಸ್ಥಾನದಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ ಏನಿದು ಸ್ವಾಮಿಗಳು ಮಹಾರಾಜನ ಅಭಿಪ್ರಾಯವನ್ನೇ ಸರಿ ಅಂತ ಹೇಳ್ತಿದ್ದಾರೆ .... ಆಗ ಸ್ವಾಮೀಜಿ ಇನ್ನೂ ಮಾತು ಮುಗಿಸಿರಲಿಲ್ಲ ತಕ್ಷಣ ಸ್ವಾಮೀಜಿ ಅಲ್ಲೇ ಇದ್ದ ಆ ಮಹಾರಾಜದ ಭಾವಚಿತ್ರ ತರಲು ಹೇಳ್ತಾರೆ ... ಮಹಾರಾಜನ ಸನ್ನೆಯಂತೆ ದಿವಾನ ಆ ಭಾವಚಿತ್ರ ತಂದು ಸ್ವಾಮೀಜಿಗೆ ಕೊಡ್ತಾನೆ.... ಮಹಾರಾಜ ಮಂಗಳಸಿಂಗ್ ಕುತೂಹಲದಿಂದ ಈ ಸನ್ಯಾಸಿ ಏನ್ ಮಾಡ್ತಾರೆ ಅಂತ ಯೋಚಿಸುತ್ತಿರುವಾಗಲೇ ....
ತಕ್ಷಣ ಆ ಭಾವಚಿತ್ರವನ್ನು ಕೆಳಗಡೆ ಇಟ್ಟ ಸ್ವಾಮೀಜಿ ದಿವಾನನತ್ತ ತಿರುಗಿ ಬಾ ಇಲ್ಲಿ ಇಲ್ಲಿರುವ ನಿಮ್ಮ ಮಹಾರಾಜರ ಭಾವಚಿತ್ರದ ಮೇಲೆ ಉಗುಳು ಎನ್ನುತ್ತಾರೆ... ತಕ್ಷಣವೇ ನಿಂತಲ್ಲೆ ತರತರ ನಡುಗಿ ಹೋಗುತ್ತಾನೆ ಆ ದಿವಾನ ತಕ್ಷಣ ಸ್ವಾಮೀಜಿ ಬನ್ನಿ ನಿಮ್ಮಲ್ಲಿ ಯಾರಾದರೂ ಸರಿ ನಿಮ್ಮ ರಾಜನ ಭಾವಚಿತ್ರದ ಮೇಲೆ ಉಗಿಯಬಹುದು ಹ್ನೂ ಬನ್ನಿ ಅಂದಾಗ ಸಭಿಕರೆಲ್ಲ ಹೆದರಿ ಹಿಂದಕ್ಕೆ ಸರಿಯುತ್ತಾರೆ....
ತಕ್ಷಣ ದಿವಾನ ಹತ್ತಿರ ಬಂದು ಏನ್ ಹೇಳ್ತೀದೀರಾ ಸ್ವಾಮಿ ಇದು ನಮ್ಮ ಮಹಾರಾಜರ ಭಾವಚಿತ್ರ ಅವರ ಮುಂದೆಯೇ ಇದರ ಮೇಲೆ ಉಗುಳಿ ಅಂತೀರಲ್ಲ ನಿಮಗೆಷ್ಟು ಧೈರ್ಯ???
ಆಗ ಸ್ವಾಮೀಜಿ ಹೇಳ್ತಾರೆ ನೋಡು ದಿವಾನ್ ಈ ಭಾವಚಿತ್ರದಲ್ಲಿ ನಿಮ್ಮ ಮಹಾರಾಜರೇನು ಸಜೀವವಾಗಿ ಇಲ್ಲ ಅವರೇನು ಇದರಲ್ಲಿ ಉಸಿರಾಡುತ್ತಿಲ್ಲ ಈ ಚಿತ್ರದಲ್ಲಿ ಅವರ ದೇಹದ ಮಾಂಸ ಖಂಡಗಳು ಇಲ್ಲಾ .... ಆದರೂ ನಾನು ಇದರ ಮೇಲೆ ಉಗಿ ಅಂದಾಗ ನೀವೆಲ್ಲಾ ಹೆದರಿಕೊಂಡ್ರಿ ಕಾರಣ ಇಷ್ಟೇ .. ಈ ಭಾವಚಿತ್ರದಲ್ಲಿ ನಿಮ್ಮ ಮಹಾರಾಜ ಇಲ್ಲದಿದ್ದರೂ ಅವರ ಛಾಯೆಯನ್ನು ಇದರಲ್ಲಿ ಕಾಣುತ್ತಿದ್ದೀರ... ನಿಮ್ಮ ರಾಜನಿಗೆ ಎಷ್ಟು ಗೌರವ ಕೊಡ್ತೀರೊ ಅಷ್ಟೇ ಗೌರವ ಈ ಭಾವಚಿತ್ರಕ್ಕೂ ಕೊಡ್ತೀರ.... ಒಂದು ಕಡೆಯಿಂದ ಈ ಚಿತ್ರ ನಿಮ್ಮ ಮಹಾರಾಜನಲ್ಲದಿರಬಹುದು ಆದರೆ ನಿಮ್ಮೆಲ್ಲರ ಭಾವನೆಯಲ್ಲಿ ಈ ಚಿತ್ರ ನಿಮ್ಮ ಮಹರಾಜನೇ.... ತಕ್ಷಣ ಮಂಗಳಸಿಂಗ್ ರಾಜನತ್ತ ತಿರುಗಿದ ಸ್ವಾಮೀಜಿ...
ನೋಡು ಮಹಾರಾಜ ಪ್ರತಿಯೊಬ್ಬ ಹಿಂದೂವು ತನ್ನ ಅಂತರಂಗದಲ್ಲಿರುವ ದೇವರಿಗೆ ಕಲ್ಲಿನ ಮುಖಾಂತರವೊ ಅಥವಾ ಭಾವಚಿತ್ರದ ಮುಖಾಂತರವೊ ಒಂದು ರೂಪ ಕೊಟ್ಟು ಪೂಜೆ ಮಾಡ್ತಾನೆ ... ಯಾವ ಹಿಂದೂವು ಕೂಡ ಓ ಕಲ್ಲೆ ನನಗೆ ಒಳ್ಳೇದು ಮಾಡು ಓ ಭಾವಚಿತ್ರವೇ ನನಗೆ ಒಳ್ಳೇದು ಮಾಡು ಅನ್ನೋದಿಲ್ಲ... ಮುಂದಿರುವ ದೇವರ ವಿಗ್ರಹ ಕಲ್ಲು ಅಂತ ಗೊತ್ತಿದ್ದರೂ ಸಹ ಅದರಲ್ಲಿ ದೇವರನ್ನು ಕಾಣುತ್ತ ತಮ್ಮ ಅಂತರಂಗವನ್ನು ಸಂತೋಷಪಡಿಸಿಕೊಳ್ಳುತ್ತಾರೆ ನಮ್ಮ #ಹಿಂದೂಗಳು ....
#ಹಿಂದುತ್ವದಲ್ಲಿ ಯಾರಿಗೂ ಹೀಗೆ ಪೂಜಿಸಬೇಕು ಅನ್ನೊ ಕಡ್ಡಾಯ ನಿಯಮವಿಲ್ಲ ಅವರವರ ಧಾರ್ಮಿಕ ಆದರ್ಶಗಳಿಗೆ ತಕ್ಕಂತೆ ಪೂಜೆ ಮಾಡ್ತಾರೆ ಅಷ್ಟೇ...ಇಷ್ಟು ಹೇಳುವಾಗಲೇ ಮಂಗಳಸಿಂಗ್ ತನ್ನ ಸೋಲನ್ನು ಒಪ್ಪಿಕೊಂಡಿದ್ದ ಯಾಕಂದ್ರೆ ವಿವೇಕಾನಂದರ ಸಮರ್ಥನೆ ಹಾಗಿತ್ತು....
ಕೊನೆಯದಾಗಿ ಸ್ನೇಹಿತರೆ ಮೇಲಿನ ಘಟನೆ ನೋಡಿ ವಿವೇಕಾನಂದರು ಆಗಿನ ಕಾಲದಲ್ಲೆ ಹಿಂದುತ್ವದ ಸಮರ್ಥನೆ ಹೇಗೆ ಮಾಡಿದ್ದಾರೆ ಅಂತ ..... ನಿಮ್ಮಲ್ಲಿ ಕೆಲವರಿಗೆ ವಿಗ್ರಹದಲ್ಲಿ ದೇವರಿಲ್ಲ ಅನ್ನೋ ನಂಬಿಕೆ ಇದ್ರೆ ಇವತ್ತೇ ಹೋಗಿ ನಿಮ್ಮ ತಂದೆತಾಯಿ ಭಾವಚಿತ್ರಕ್ಕೆ ಅಥವಾ ನಿಮ್ಮ ಮನೆದೇವರ ವಿಗ್ರಹಗಳ ಮೇಲೆ ಉಗಿದುಬಿಡಿ ನೋಡುವ .... ಆಗೋದಿಲ್ಲ ಯಾಕಂದ್ರೆ ನೀವು ಹಾಗೆ ಮಾಡಲು ಹೋದರೆ ಯಾವುದೊ ಒಂದು ಶಕ್ತಿ ನಿಮ್ಮನ್ನು ತಡೆಯುತ್ತೆ ಬೇಕಾದ್ರೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ನೋಡಿ ......
ಈ ಲೇಖನ ಬರೆದ ಉದ್ದೇಶ ಇಷ್ಟೇ ಇವತ್ತಿನ ಕಾಲದಲ್ಲಿ ದಿನನಿತ್ಯ ಹಿಂದೂಗಳ ಭಾವನೆಗಳ ಮೇಲೆ ಅನ್ಯಧರ್ಮಿಯರಿಗಿಂತ ನಮ್ಮ ಸ್ವಧರ್ಮಿಯರೇ ದಾಳಿ ಮಾಡುತ್ತಿರುವುದರಿಂದ ನಮ್ಮ ವಿವೇಕಾನಂದರ ಈ ಸುಂದರ ಘಟನೆ ನೆನಪಿಗೆ ಬಂತು ಮತ್ತು ಇಂತಹ ಸಮಯದಲ್ಲಿ ವಿವೇಕಾನಂದರ ಚಿಂತನೆಗಳು ತುಂಬಾ ಅವಶ್ಯ....
Comments
Post a Comment