Posts

Showing posts from August, 2022

ದಿನಕ್ಕೊಂದು ಕಥೆ 1055

*🌻ದಿನಕ್ಕೊಂದು ಕಥೆ 🌻* *ಮಿಡಿತ*      "ಅವ್ವಾ..ss, ಬಾಕ್ಲು ಹಾಕ್ಕೋ..,ನಾ ಬತ್ತೀನೀ.."ಎಂದು ತನ್ನ ತಾಯಿಗೆ ಕೂಗಿ ಹೇಳಿದ ನಿಂಗಿಯ ಗಂಡ ಪರಶು,ಅವರ ಉತ್ತರಕ್ಕಾಗಿ ಕಾಯದೇ, ಎಂದಿನಂತೆ ಗಾರೆ ಕೆಲಸಕ್ಕೆಂದು ಮೊಪೆಡ್ ಸ್ಟಾರ್ ಮಾಡಿ, ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಆಟೋ ಆತನ ಪಕ್ಕಕ್ಕೆ ಬಂದು ನಿಂತಿತು.ಪರಶು ಇಣುಕಿ ನೋಡಿದ.ಅದರೊಳಗೆ ತನ್ನ ಪತ್ನಿ ಇರುವುದನ್ನು ಕಂಡು ಮನದಲ್ಲಿ"ಅರ್ರೇ.. ಇದೇನು  ಇವಳು ಭಾಗಕ್ಕನ ಮನೆ ಕೆಲಸಕ್ಕೆ ಹೋಗಿ ಇನ್ನೂ ಒಂದು ಗಂಟೆ ಕೂಡಾ ಆಗಿಲ್ಲ.. ಇದ್ಯಾಕೆ ರಿಕ್ಷಾ ದಲ್ಲಿ ಬಂದ್ಲು"ಎಂದು ಯೋಚಿಸುತ್ತಿದ್ದವ ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ"ಇದ್ಯಾಕೆ ನಿಂಗೀ.."ಎಂದು ಕೇಳುತ್ತಿದ್ದಂತೆ , ಆಕೆ ಕುಳಿತಲ್ಲಿಂದಲೇ "ಮತ್ತೆ..ಭಾಗಕ್ಕಾವ್ರು ಇಂದ ನಸಕ್ ನ್ಯಾಗೆ  ಹೂ ಕಿತ್ತಾಕೆ ಹೋಗಿ ತಲೆತಿರುಗಿ ಮೆಟ್ಲಮ್ಯಾಲಿಂದ ಬಿದ್ದು ತಲೆಗೆ ಏಟು ಮಾಡ್ಕೊಂಡಾವ್ರೆ.. ತಲೆಯಿಂದ ಸಾನೆ ರಕ್ತ ಹೋಗಿ ಪ್ರಜ್ಞೆ ತಪ್ಪಿತ್ತಂತೆ, ಹಿಂಗಾಗಿ ಅಪ್ಪಾರು ಮತ್ತೆ ಅವರ ಮಗ ಎಲ್ಲಾ ಸೇರಿ  ಅವರನ್ನ ಆಸ್ಪತ್ರೆಗೆ ಸೇರ್ಸಿದ್ದಾರಂತೆ... ಅಲ್ಲಿ ಅವ್ರ ರಕ್ತದ ಗುಂಪಿನ ರಕ್ತ ಸಿಗ್ತಿಲ್ಲಂತ ಎಲ್ಲಾ ಕಡೆ ಹುಡುಕ್ತಾವ್ರೆ... ಹಿಂಗಾಗಿ ಭಾಗಕ್ಕಾರ ಮಗಳು. ನನಗೆ ಪಾತ್ರೆ ತೊಳ್ದು ಬಿಟ್ಟು, ನೀ ಆಸ್ಪತ್ರೆಗೆ ಹೋಗೀರು ಎಂದು ಆಟೋ ಮಾಡಿ ಕಳ್ಸಕೊಟ್ಟವ್ರೆ.. ಅದ್ಕೆ  ಅತ್ತೆಗೆ ಒ

ದಿನಕ್ಕೊಂದು ಕಥೆ 1054

*🌻ದಿನಕ್ಕೊಂದು ಕಥೆ*🌻 *ನಿಮ್ಮ_ಆಲೋಚನಾ_ಶಕ್ತಿಯೇ_ನಿಮ್ಮ_ಸಂಪತ್ತು*  (ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ) ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?  ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ.. ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ. ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ. ಬೇರೆಯೊಬ್ಬ ಹೇಳಿದ - ನಾನು  ಚಾಕೊಲೇಟ್ಗಳನ್ನು ಖರೀದಿಸುತ್ತೇನೆ. ...ಆದರೆ..   ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ? ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!! ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು? ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ  ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!  ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದು..ಅವರತ್ರ ಹೇಳು... ನೀನ

ದಿನಕ್ಕೊಂದು ಕಥೆ 1053

*🌻ದಿನಕ್ಕೊಂದು ಕಥೆ🌻                                ಪ್ರಜೆಯೊಬ್ಬಳಿಗೆ ದೇಶದ  ಪ್ರಧಾನಿಯ ಪ್ರಾಮಿಸ್ !* ದೇಶದ ಪ್ರಧಾನಿಯೊಬ್ಬರು ಸಾಮಾನ್ಯ ಪ್ರಜೆಯೊಬ್ಬಳಿಗೆ ಮಾಡಿದ ಪ್ರಾಮಿಸ್ ಒಂದರ ಬಗೆಗಿನ ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ. ಬ್ರಿಟನ್ನಿನಲ್ಲಿ ವಿಕ್ಟೋರಿಯಾ ರಾಣಿಯ ಆಳ್ವಿಕೆಯಿದ್ದಾಗ, 1855ರಿಂದ 1865ರವರೆಗೆ ಲಾರ್ಡ್ ವಿಸ್ಕೌಂಟ್ ಪಾಮರ್ಸ್ಟನ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು. ರಾಣಿಯವರ ಮತ್ತು ಪ್ರಧಾನಿಗಳ ನಡುವೆ ಮನಸ್ತಾಪಗಳ ಶೀತಲ ಸಮರ ನಡೆಯುತ್ತಿತ್ತು. ಆದರೆ ಪ್ರಜಾಪ್ರಭುತ್ವದ ಮೂಲಕ ಪ್ರಧಾನಿಯಾಗಿದ್ದವರನ್ನು ಪದಚ್ಯುತಗೊಳಿಸಲು ರಾಣಿಯವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಸಹಿಸಿಕೊಳ್ಳಬೇಕಿತ್ತು! ಒಮ್ಮೆ ಸಚಿವ ಸಂಪುಟದ  ನಡೆಯುತ್ತಿತ್ತು. ಗಹನ ಚರ್ಚೆಯಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಧಾನಿಯವರು ಈಗಲೇ ಬರುತ್ತೇನೆನ್ನುತ್ತ ಹೊರಕ್ಕೆ ಹೋದರು. ಅರ್ಧ ಗಂಟೆಯ ನಂತರ ಹಿಂತಿರುಗಿ ಸಭೆಯನ್ನು ಮುಂದುವರೆಸಿದರು. ಎಲ್ಲರಿಗೂ ಸಂಪುಟದ ಸಭೆಯನ್ನು ಮಧ್ಯದಲ್ಲೇ ಬಿಟ್ಟು ಪ್ರಧಾನಿಯವರು ಹೋಗಿ ಬರುವಂತಹ ಘನಕಾರ್ಯ ಏನಿರಬಹುದೆನ್ನುವ ಕುತೂಹಲ! ಹಿರಿಯ ಮಂತ್ರಿಗಳೊಬ್ಬರು ಧೈರ್ಯದಿಂದ ಪ್ರಶ್ನೆಯನ್ನು ಕೇಳಿಬಿಟ್ಟರು! ಪ್ರಧಾನಿಯವರು ತಕ್ಷಣ ಹೇಳಲು ಪ್ರಾರಂಭಿಸಿದರು. ನಾನಿಂದು ಮುಂಜಾನೆ ಕಚೇರಿಗೆ ಬರುವಾಗ ರಸ್ತೆಯಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ನಡೆದು ಹೋಗುತ್ತಿದ್ದಳು. ಆಕೆಯ ಕೈಯಲ್ಲೊಂದು ಗಾಜಿನ ಜಾಡಿಯಿತ್ತು.  ನೆಲ ಜಾರುತ್