Posts

Showing posts from February, 2022

ದಿನಕ್ಕೊಂದು ಕಥೆ 1040

*🌻 ದಿನಕ್ಕೊಂದು ಕಥೆ🌻* ನೂರು ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಧಾಮ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಮಾಡಬಹುದು ಅಂತಾ ವಾರ್ಡನ್ ಹೇಳಿದರು. ಉಪ್ಪಿಟ್ಟಿನವರು ಆಗಲೂ “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತಾ ಹಠಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತಾ ರಚ್ಚೆ ಹಿಡಿದರು. ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. ಇಪ್ಪತ್ತುಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಕುಸುಗುಟ್ಟಿದರು. ಉಳಿದ 80 ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮರುದಿನ ಮತದಾನ. ಉಪ್ಪಿಟ್ಟುಪ್ರಿಯ ಇಪ್ಪತ್ತು ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ ಎಂಬತ್ತು ಜನರ ಮತಗಳು ಹೀಗಿದ್ದವು: ಮಸಾಲೆ ದೋಸೆ - 18 ಜನ ಆಲೂ ಪರಾಠ - 16 ಜನ ಪೂರಿ ಸಾಗು - 14 ಜನ ಮ್ಯಾಗಿ - 12 ಜನ ಇಡ್ಲಿ ಸಾಂಬಾರ್ - 10 ಜನ ಟೋಸ್ಟ್ ಆಮ್ಲೆಟ್ - 10 ಜನ ಬಹುಮತ ಉ

ದಿನಕ್ಕೊಂದು ಕಥೆ 1039

ದಿನಕ್ಕೊಂದು ಕಥೆ 🙏🏼🙏🏼ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ  🙏🏼🙏🏼 ಶನಿ ಮಹಾರಾಜನ ಮಹಿಮೆ  ಎಲ್ಲರಿಗೂ ಗೊತ್ತಿದೆ,  ಶನಿಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೆ  ಬಿಟ್ಟಿಲ್ಲ. ಅಂದಮೇಲೆ  ಮನುಷ್ಯನನ್ನು ಬಿಟ್ಟಾನೆಯೇ, ಇಂತಹ ಶನಿದೇವನಿಗೆ, ದೇವಾನು ದೇವತೆಗಳು  ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ  ಗಣಪತಿ ಪೂಜೆ ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ ಜನ ಹೋಗುವುದನ್ನು ನೋಡಿರುತ್ತೇವೆ, ಹಾಗೆಯೇ  ಪ್ರಥಮ ಪೂಜಕ,  ಆದಿ ದೈವ, ವಿಘ್ನನಿವಾರಕ, ವಿದ್ಯಾಗಣಪತಿ, ಹೀಗೆ ನಾನಾ ಹೆಸರುಗಳಿಂದ ಕರೆಯುವ  ಗಣೇಶನನ್ನು ಪೂಜಿಸಿದರೆ ಶನಿ ದೋಷ  ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಒಂದು ಕಥೆಯಿದೆ.  ಒಂದು ದಿನ ಗಣೇಶ  ನಿಧಾನವಾಗಿ ವಾಯು ವಿಹಾರ  ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ  ಬರುತ್ತಿದ್ದ . ಗಿಡ್ಡ ಬುಡ್ಡಕ್ಕೆ ,ಮುದ್ದು ಮುದ್ದಾಗಿರುವ   ಗಣೇಶನನ್ನ ನೋಡಿ  ಶನಿಗೆ ಕೀಟಲೆ ಮಾಡಬೇಕೆನಿಸಿತು.  ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗೆ ಹೊರಟ, ಗಣೇಶ ತನ್ನ ಕಡೆಗೆ  ಶನಿ ಬರುವುದನ್ನು ನೋಡಿದ, ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು. ಶಿವನಿಗೆ ಹೆದರದ  ಪಾರ್ವತಿ ಪುತ್ರ ಗಣೇಶ  ಇನ್ನು ಶನಿಗೆ ಹೆದರುತ್ತಾನಾ ? ಗಣೇಶ ತಕ್ಷಣ ಓಡತೊಡಗಿದ, ಶನಿಯು ಹಿಂದೆ ಒಡಿದ

ದಿನಕ್ಕೊಂದು ಕಥೆ 1038

ದಿನಕ್ಕೊಂದು ಕಥೆ ಬಿಡಿ ಅತ್ತೆ ಇಲ್ಲೇ ಚೆನ್ನಾಗಿದೆ ಶಿವಪುರ ಎಂಬ ಊರಿನಲ್ಲಿ ಪಾರ್ವತಮ್ಮ ಎಂಬ ವಿಧವೆ ಇದ್ದಳು. ಅವಳಿಗೆ ಒಬ್ಬನೇ ಮಗ ರಮೇಶ, ರಮೇಶನಿಗೆ ತಾಯಿಯ ಮಾತು ವೇದವಾಕ್ಯ ಜೊತೆಗೆ ಸ್ವಲ್ಪ ಪೆದ್ದು ಕೂಡ. ಆತನು ಪ್ರಾಪ್ತವಯಸ್ಸಿಗೆ ಬಂದಾಗ ಪಾರ್ವತಮ್ಮ ಮಗನಿಗೆ ಮದುವೆ ಮಾಡಲು ಯೋಚಿಸುತ್ತಾಳೆ. ಆದರೆ ಅವಳ ಸಂಬಂಧಿಕರಾರು ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಹಾಗೂ ಹೀಗೂ ಪಕ್ಕದ ಊರಿನಲ್ಲಿ ಒಂದು ಹೊಸ ಸಂಬಂಧ ನೋಡಿ ಮಗನಿಗೆ ಮದುವೆ ಮಾಡುತ್ತಾಳೆ. ಮದುವೆ ಆದ ಸ್ವಲ್ಪ ದಿನದ ಮೇಲೆ ಮಗ ಅತ್ತೆ ಮನೆಗೆ ಮೊದಲನೆ ಸಾರಿ ಹೋಗಬೇಕಾಗುತ್ತೆ. ಅವನು ಸ್ವಲ್ಪ ದಡ್ಡ ಮತ್ತು ಮುಂಗೋಪಿಯಾದ್ದರಿಂದ ತಾಯಿ ಮಗನಿಗೆ ನೋಡು ರಮೇಶ ನೀನು ಮೊದಲನೆ ಸಾರಿ ಅತ್ತೆ ಮನೆಗೆ ಹೋಗುತ್ತಿರುವುದು. ಅಲ್ಲಿಗೆ ಹೋದ ಮೇಲೆ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಎಂದು ಹೇಳಬೇಡ. ಅದು ಏನೇ ಆಗಲಿ ಹೇಗೇ ಇರಲಿ ಮೊದಲನೆ ಸಾರಿ ಯಾದ್ದರಿಂದ ತಾಳ್ಮೆಯಿಂದ ಚೆನ್ನಾಗಿದೆ ಎಂದು ಹೇಳು. ಯಾವುದಕ್ಕೂ ಕೋಪಿಸಿಕೊಳ್ಳಬೇಡ ಎಂದು ಬುದ್ಧಿ ಹೇಳಿ ಕಳುಹಿಸಿಕೊಡುತ್ತಾಳೆ. ಮಗ ಸಂಜೆ ಹೊತ್ತಿಗೆ ಅತ್ತೆಯ ಮನೆಗೆ ಹೋಗುತ್ತಾನೆ. ಮಬ್ಬು ಕತ್ತಲು. ಅತ್ತೆಯ ಮನೆಯಲ್ಲಿ ಕೈಕಾಲು ತೊಳೆಯಲು ಮನೆಯ ಹೊರಗಡೆ ಜಾಗ ಇರುತ್ತೆ. ಅದರ ಪಕ್ಕದಲ್ಲೇ ಬಚ್ಚಲು ನೀರು ತುಂಬಲು ಒಂದು ಗುಂಡಿಯನ್ನು ಮಾಡಿರುತ್ತಾರೆ, ಅಳಿಯನಿಗೆ ಕೈ ಕಾಲು ತೊಳೆಯಲು ಅತ್ತೆ ಕೂಗುತ್ತಾಳೆ. ಅಳಿಯ ಬಂದು ಕೈ ಕಾಲು ತೊಳೆಯಲು ಕಲ್ಲಿನ ಮೇಲೆ ನಿಲ್ಲುತ

ದಿನಕ್ಕೊಂದು ಕಥೆ 1037

ಒಬ್ಬ ಹುಡುಗನಿದ್ದ. ಶಾಲೆಗೆ ಹೋಗುವ ವಿಷಯದಲ್ಲಿ ತುಂಬಾ ಸೋಮಾರಿ. ಶಾಲೆಯ ಶಿಕ್ಷಕರ ಪ್ರಕಾರ useless fellow. ಮನೆಯಲ್ಲಿ ಮಲಗುವುದು, ಊಟ ಮಾಡುವುದು, ಊರು ಸುತ್ತುವುದು ಇದೇ ಅವನ ಕೆಲಸ. ಊರು ಸುತ್ತಲು ಹೋದಾಗ ಜೀರುಂಡೆಗಳನ್ನು ಹಿಡಿಯುವುದು, ವಿವಿಧ ರೀತಿಯ ಕಲ್ಲುಗಳು, ಮೂಳೆಗಳನ್ನು ಸಂಗ್ರಹಿಸುವುದು ಅವುಗಳನ್ನು ವರ್ಗೀಕರಿಸುವುದು ಇವನ ಹವ್ಯಾಸ. ಹಾಳು ಹುಡುಗನಿಂದಾಗಿ ಮನೆಯೊಂದು ಮ್ಯೂಸಿಯಂ ಆಗಿ ಬಿಟ್ಟಿತ್ತು. ಅಮ್ಮನಿಗೆ ಎತ್ತಿ ಹೊರಗೆಸೆದು ಮನೆಯನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಅಪ್ಪನಿಗೆ ಮಗನನ್ನು ವೈದ್ಯನಾಗಿಸಬೇಕೆಂಬ ಬಯಕೆ. ಅಂತೂ ಇಂತೂ ಮಗನಿಗೊಂದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡೇ ಬಿಟ್ಟ. ಮಗನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಬೇಕೆಂದಾಗ ಕಾಲೇಜಿಗೆ ಹೋಗುವುದು ಬೇಜಾರಾದಾಗ ಅದೇ ಕಲ್ಲು, ಮೂಳೆ, ಜೀರುಂಡೆಗಳು. ಹಾಗೂ ಹೀಗೂ ಒಂದೂವರೆ ವರ್ಷ ಮಣ್ಣು ಹೊತ್ತು ಕಾಲೇಜು ಬಿಟ್ಟ. ಅಮ್ಮ ಅಪ್ಪ ಇಬ್ಬರೂ ನಿರಾಶರಾದರು. ಅದೇ ಸಮಯದಲ್ಲಿ ಲಂಡನ್ ನ ಸೌತ್ಹಾಂಪ್ಟನ್ ನಿಂದ ಎಚ್ ಎಂ ಎಸ್ ಬೀಗಲ್ ಎಂಬ ಹಡಗೊಂದು ಪ್ರಪಂಚ ಪರ್ಯಟನೆಗೆ ಹೊರಡಲಿದೆ ಎಂಬ ಪ್ರಕಟಣೆ ಹೊರಬಿತ್ತು. ಈತ ಹೆಸರು ನೋಂದಾಯಿಸಿದ. ಆ ಹಡಗಿನಲ್ಲಿ ಪ್ರಕೃತಿ ತಜ್ಞನಾಗಿ ಆಯ್ಕೆಯಾದ ಅಪ್ಪ ಅಮ್ಮನಿಗೂ ಅದೇ ಬೇಕಿತ್ತು ಹೋಯಿತು ಮಾರಿ ಎಂದು ನಿಟ್ಟುಸಿರು ಬಿಟ್ಟರು. ಹಡಗು ದಶಂಬರ 27 1831 ರಂದು ಬಂದರನ್ನು ಬಿಟ್ಟಿತು. ಅದರೊಂದಿಗೆ 22 ರ ಯುವಕ ಕೂಡಾ. ಸುತ್ತಲೂ ಘೋರ ಕಡಲು. ತಲೆ ಸು