Posts

Showing posts from September, 2018

ದಿನಕ್ಕೊಂದು ಕಥೆ 880

*🌻ದಿನಕ್ಕೊಂದು ಕಥೆ🌻* *ನೀವು ಅವರಿಗೆ ಇಂದು ‘ಹಲೋ’ ಹೇಳಿದಿರಾ?* ಕುತೂಹಲ ಹುಟ್ಟಿಸುವಂತಹ ವ್ಯಕ್ತಿತ್ವ ವಿಕಸನ ಉಪನ್ಯಾಸಕರೊಬ್ಬರು ಅಮೇರಿಕಾದಲ್ಲಿದ್ದಾರೆ. ಅವರ ಹೆಸರು ಚಾಲ್ಸರ್  ಅವರು ಒಂದು ವಿಚಿತ್ರ ಪ್ರಶ್ನೆ ಕೇಳಿಯೇ ತಮ್ಮ ಉಪನ್ಯಾಸಗಳನ್ನು ಪ್ರಾರಂಭಿಸುತ್ತಾರೆ. ಆ ಪ್ರಶ್ನೆ ಏನೆಂದರೆ ‘ನಿಮ್ಮ ಪ್ಯಾರಾಚೂಟನ್ನು ಇಂದು ಯಾರು ಪ್ಯಾಕ್ ಮಾಡಿಕೊಟ್ಟರು?’ ಬದುಕಿನಲ್ಲಿ ಎಂದೂ ವಿಮಾನವನ್ನೇರದ ಅಥವಾ ಪ್ಯಾರಾಚೂಟ್ ಬಳಸದ ಸಭಿಕರು ಈ ಪ್ರಶ್ನೆ ಕೇಳಿ ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಆಗ ಚಾಲ್ಸರ್ ತಮ್ಮ ನಿಜಜೀವನದ ಅನುಭವವನ್ನು ಹೀಗೆ ಹೇಳುತ್ತಾರೆ. ‘ನಾನು ವಿಯೇಟ್ನಾಮ್ನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದೆ. ಯಶಸ್ವಿಯಾಗಿ ಯುದ್ಧ ವಿಮಾನವನ್ನು ಚಲಾಯಿಸುತ್ತಿದ್ದೆ. ಆದರೆ ಕೊನೆಯ ಬಾರಿ ನಾನಿದ್ದ  ಒಂದು ಕ್ಷಿಪಣಿಗೆ ತುತ್ತಾಗಿ ನುಚ್ಚು ನೂರಾಯಿತು. ಸುಟ್ಟು ಭಸ್ಮವಾಯಿತು. ಅದೃಷ್ಟವಶಾತ್ ನಾನು, ಕ್ಷಿಪಣಿ ಬಂದು ವಿಮಾನಕ್ಕೆ ಅಪ್ಪಳಿಸುವುದಕ್ಕೆ ಮುಂಚೆ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹೊರಕ್ಕೆ ಜಿಗಿದುಬಿಟ್ಟೆ. ಪ್ರಾಣವೇನೋ ಉಳಿಯಿತು. ಆದರೆ ನಾನು ಕಮ್ಯುನಿಸ್ ವಿಯೇಟ್ನಾಮಿನಲ್ಲಿ ಯುದ್ಧ ಖೈದಿಯಾಗಿ ಆರು ವರ್ಷ ಕಳೆಯಬೇಕಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ನಾನು ಪೈಲಟ್ ಕೆಲಸ ಬಿಟ್ಟು ‘ವ್ಯಕ್ತಿತ್ವ ವಿಕಸನ’ ಉಪನ್ಯಾಸಗಳನ್ನು ನೀಡುವ ವೃತ್ತಿಯನ್ನು ಕೈಗೆತ್ತಿಕೊಂಡೆ. ಒಮ್ಮೆ ನಾನು ಉಪಾಹಾರ ಗೃಹವೊಂದರಲ್ಲಿ ಕುಳಿತಿದ್ದಾಗ  ಟೇಬಲ್ಲಿನಲ

ದಿನಕ್ಕೊಂದು ಕಥೆ 879

*🌻ದಿನಕ್ಕೊಂದು ಕಥೆ🌻* *ಸಿಕ್ಕಿರುವುದು ಲೆಕ್ಕಕ್ಕಿಲ್ಲ! ಸಿಕ್ಕದೆ ಇರುವುದಕ್ಕೆ ದುಃಖ!* ಮನುಷ್ಯನ ಮನಸ್ಸು ಎಷ್ಟು ವಿಚಿತ್ರವೆಂಬುದಕ್ಕೆ ಮೇಲಿನ  ಸಾಕ್ಷಿ! ನಮಗೆ ಏನೆಲ್ಲಾ ಸಿಕ್ಕಿರುತ್ತದೆಯೋ ನಾವು ಅದನ್ನು ಲೆಕ್ಕಕ್ಕಿಡುವುದಿಲ್ಲ. ಆದರೆ ನಮಗೆ ಇರಬಹುದಾದ ಒಂದೆರಡರ ಬಗ್ಗೆ ದುಃಖಿಸುತ್ತೇವೆ! ಇಲ್ಲಿ ಕೆಳಗೆ ನಿರೂಪಿತವಾಗಿರುವ ಎರಡು ಘಟನೆಗಳು ಮೇಲಿನ ಮಾತುಗಳನ್ನು ಎತ್ತಿ ತೋರಿಸುತ್ತವೆ. *ಮೊದಲನೆಯದ್ದು*:- ಮೆಕ್ಸಿಕೋ ದೇಶದಲ್ಲಿ ಒಂದು ಪ್ರಕೃತಿ ವೈಚಿತ್ರ ಇದೆಯಂತೆ. ಅಲ್ಲಿನ ಪರ್ವತ ಪ್ರದೇಶವೊಂದರಲ್ಲಿ ಬಿಸಿನೀರಿನ ಬುಗ್ಗೆಗಳು ಇವೆಯಂತೆ. ಅವು ಸದಾ ಬಿಸಿನೀರನ್ನು ಚಿಮ್ಮುತ್ತಲೇ ಇರುತ್ತವೆ. ಇನ್ನೂ ವಿಚಿತ್ರವೆಂದರೆ ಈ ಬಿಸಿನೀರಿನ ಬುಗ್ಗೆಯ ಪಕ್ಕದಲ್ಲೇ ತಣ್ಣೀರು ಚಿಮ್ಮುವ ತಣ್ಣೀರು  ಇರುತ್ತವೆ. ಅಲ್ಲಿನ ಮಹಿಳೆಯರು ಕೊಳೆ ಬಟ್ಟೆಗಳನ್ನು ತಂದು ಮೊದಲು ಬಿಸಿ ನೀರಿನಲ್ಲಿ ಒಗೆದು, ಆನಂತರ ತಣ್ಣೀರಿನಲ್ಲೂ ಜಾಲಿಸುತ್ತಾರೆ. ಖರ್ಚಿಲ್ಲದೆ ಅವರ ಬಟ್ಟೆಗಳು ಶುಭ್ರವಾಗುತ್ತವೆ. ಇದನ್ನು ಗಮನಿಸಿದ ವಿದೇಶಿಯರೊಬ್ಬರು ಮಹಿಳೆಯರನ್ನು ‘ಬಿಸಿನೀರಿನ ತಣ್ಣೀರಿನ ಬುಗ್ಗೆಗಳು ಅಕ್ಕಪಕ್ಕದಲ್ಲಿ ಇರುವುದರಿಂದ ನಿಮ್ಮ ಬಟ್ಟೆ ಒಗೆಯುವ ಕಾರ್ಯ ಅತಿ ಸುಲಭವಾಗಿ ಮುಗಿಯುತ್ತದೆ. ಪ್ರಕೃತಿ ನಿಮಗೆಷ್ಟು ಸಹಾಯ ಮಾಡಿದೆಯಲ್ಲವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಮಹಿಳೆಯರು ಪ್ರಕೃತಿ ಎಲ್ಲಾ ಸರಿಯಾಗಿಯೇ ಮಾಡಿದೆ. ಆದರೆ ಸ್ವಲ್ಪ ಕೊರತೆಯನ್ನು ಉಳಿಸಿದೆ.  ಮತ್ತು

K-Set, ಮತ್ತು TET ತರಬೇತಿ...

*ಶಿಕ್ಷಣಲೋಕ ಕನ್ನಡದ ಆನ್‍ಲೈನ್ ಕೋಚಿಂಗ್ ಸೆಂಟರ್* ಕೆ-ಸೆಟ್ ಮತ್ತು ಟಿ.ಇ.ಟಿ ಗಾಗಿ ನಮ್ಮಲ್ಲಿ ಆನ್‍ಲೈನ್ ಕೋಚಿಂಗ್ ನೀಡಲಾಗುತ್ತದೆ. 📌ಪ್ರತಿದಿನವೂ ಪ್ರತಿ ವಿಷಯಕ್ಕೂ ಒಂದು ಗಂಟೆ ಲೈವ್ ಆನ್‍ಲೈನ್ ಕ್ಲಾಸ್ ಇರುತ್ತದೆ. 📌ಪ್ರತಿಯೊಂದು ವಿಷಯಕ್ಕೂ ಅಪ್ಡೇಟೆಡ್ ನೋಟ್ಸ್ ನೀಡಲಾಗುತ್ತದೆ. 📌ಆಡೀಯೋ ನೋಟ್ಸ್ (ನೀವು ಪ್ರಯಾಣದಲ್ಲಿ ಅಥವಾ ಬೇರೆ ಯಾವುದೇ ಕೆಲಸ ಮಾಡುತ್ತಲೇ ಆಡೀಯೋ ನೋಟ್ಸ್ ಕೇಳಬಹುದು) 📌ಸಂಪನ್ಮೂಲ ವ್ಯಕ್ತಿಗಳಿಂದ ಆನ್‍ಲೈನ್ ಲೈವ್ ಕ್ಲಾಸ್. 📌 ಮೊಬೈಲ್ ಆಥವಾ ನಿಮ್ಮ ಲ್ಯಾಪ್‍ಟಾಪ್ / ಡೆಸ್ಕ್ ಟಾಪ್ ಮೂಲಕ ಕ್ಲಾಸ್ ಕೇಳಬಹುದು, ನಿಮ್ಮ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ಪಡೆಯಬಹುದು. 📌ಪ್ರತೀ ವಾರ ಆನ್‍ಲೈನ್ ಪರೀಕ್ಷೆ ನೆಡೆಸಲಾಗುತ್ತದೆ. ಸಂಭಾವ್ಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲಾಗುತ್ತದೆ. *Apply ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ* www.shikshanalooka.cf *Please ನಿಮ್ಮ ಎಲ್ಲಾ ಸ್ನೇಹಿತರಿಗೂ ಈ ಮೆಸೇಜ್ ಫಾರ್ವರ್ಡ್ ಮಾಡಿ*

ದಿನಕ್ಕೊಂದು ಕಥೆ 878

*🌻ದಿನಕ್ಕೊಂದು ಕಥೆ🌻                                                  ತಾನೊಬ್ಬನೇ ತಿನ್ನಬೇಕೆನ್ನುವುದು ನರಕವಾದರೆ, ಸ್ವರ್ಗ ಯಾವುದು?* ಸ್ವರ್ಗ ನರಕಗಳ ಕತೆಗಳನ್ನು ಹೇಳುವವರನ್ನು ನೀವು ಅವುಗಳನ್ನು ನೋಡಿದ್ದೀರಾ ಎಂದು ಕೇಳಿ ನೋಡಿ. ಬೇರೆಯವರು ತಲೆ ಆಡಿಸುವಂತೆ ಕತೆ ಹೇಳುವ ಅವರು ಇಲ್ಲವೆಂದು ತಲೆ ಅಲ್ಲಾಡಿಸುತ್ತಾರೆ. ಕತೆ ಹೇಳುವವರು ಯಾರೂ ಅವುಗಳನ್ನು ಹೋಗಿ ನೋಡಿಲ್ಲ. ಹೋಗಿದ್ದಿದ್ದರೆ ಕತೆ ಹೇಳಲು ಅವರು ಇಲ್ಲಿ ಇರುತ್ತಿರಲಿಲ್ಲ. ನಮಗೂ ಅವರಿಗೂ ಗೊತ್ತಿರುವುದೆಲ್ಲ ಕಲ್ಪನೆಯ ಕತೆಗಳು ಮಾತ್ರ! ಈಗ ಅಂತಹದ್ದೇ ಒಂದು ಅರ್ಥಪೂರ್ಣ ಕಾಲ್ಪನಿಕ ಕತೆ ಇಲ್ಲಿದೆ! ಒಮ್ಮೆ ವಿದ್ವಜ್ಜನರ ಸಮಿತಿಯಲ್ಲಿ ಸ್ವರ್ಗ–ನರಕಗಳು ಎಂದರೆ ಏನೆಂದು ಚರ್ಚೆ ನಡೆಯಿತು. ಜನ ಎಲ್ಲಿ ನರಳುತ್ತಾರೋ ಅದು ನರಕವೆಂದೂ, ಜನ ಎಲ್ಲಿ ಆನಂದದಿಂದ ಇರುತ್ತಾರೋ ಅದು ಸ್ವರ್ಗವೆಂದೂ ಸಮಿತಿ ಒಮ್ಮತದಿಂದ ಒಪ್ಪಿಕೊಂಡರಂತೆ. ಸ್ವರ್ಗ–ನರಕಗಳನ್ನು ನೋಡಿ ಮಾಡುವ ಅಪರೂಪದ ಅವಕಾಶ ಅವರಿಗೆ ಕಲ್ಪಿಸಿಕೊಡಲಾಯಿತಂತೆ! ಅವರ ಮೊದಲ ಭೇಟಿ ನರಕಕ್ಕೆ. ಅವರಿಗೆ ಆಶ್ಚರ್ಯ ಉಂಟುಮಾಡಿದ ವಿಷಯವೆಂದರೆ ಅದಕ್ಕೆ ನರಕವೆಂಬ ಹೆಸರಿದ್ದರೂ, ಅದೂ ಶ್ರೀಮಂತ ಪ್ರದೇಶವಾಗಿತ್ತು. ಊಟದ ಮನೆಯಲ್ಲಿ ಯಥೇಚ್ಚ ತಿಂಡಿ–ತಿನಿಸುಗಳಿದ್ದವು. ಆದರೆ ಅಲ್ಲಿದ್ದ ಜನ ಮಾತ್ರ ಹಸಿವೆಯಿಂದ ಸೊರಗಿದ್ದರು. ಯಾರ ಮುಖದ ಮೇಲೂ ಕಳೆಯೇ ಇಲ್ಲ. ಸಿಟ್ಟು ಸೆಡವು ಎದ್ದು ತೋರುತ್ತಿದ್ದವು. ಪರಸ್ಪರ ಜಗಳವಾಡುತ್ತಿದ್ದರು. ಒಬ್

ದಿನಕ್ಕೊಂದು ಕಥೆ 877

*🌻ದಿನಕ್ಕೊಂದು ಕಥೆ🌻                                                              ಹುಲಿಯ ಪ್ರಾಣ ಉಳಿಸಿದ್ದು ಪವಾಡವೋ, ಅಭ್ಯಾಸ ಬಲವೋ ?* ಕುತೂಹಲಕಾರಿಯಾದ ನಿಜಜೀವನದ ಘಟನೆಯೊಂದು ಇಲ್ಲಿದೆ. ಈ ಘಟನೆಯು ಹುಬ್ಬಳ್ಳಿಯ ಸಿದ್ಧಾರೂಢ ಮಿಷನ್‌ನವರು ಪ್ರಕಟಿಸಿರುವ ‘ಶ್ರೀ ಸಿದ್ಧಮಹಿಮಾಂಬುಧಿ’ ಪುಸ್ತಕದಲ್ಲಿ ನಿರೂಪಿತವಾಗಿದೆ. ಹುಬ್ಬಳ್ಳಿಯಲ್ಲಿದ್ದ ಮಹಾಪುರುಷ ಶ್ರೀ ಸಿದ್ಧಾರೂಢರ ಭಕ್ತ ಕಾಶೀನಾಥ ಛತ್ರೆ ಎಂಬುವವರು ಸರ್ಕಸ್ ಕಂಪನಿ ಮಾಲೀಕರು. ಒಮ್ಮೆ ಅವರ ಸರ್ಕಸ್ ಕಂಪನಿಯು ಚೀನಾ ದೇಶದ ರಾಜಧಾನಿ ಬೀಜಿಂಗ್‌ನಲ್ಲಿ ಪ್ರದರ್ಶನಗಳನ್ನು ನೀಡುತ್ತಿತ್ತು. ಅಪಾರ ಜನಪ್ರಿಯತೆಯನ್ನೂ ಗಳಿಸಿತ್ತು. ಆಗಿನ ಕಾಲದಲ್ಲಿ  ಸರ್ಕಸ್ ಕಂಪನಿಗಳು ಚೀನಾ ಮುಂತಾದ ವಿದೇಶಗಳಲ್ಲೂ ಪ್ರದರ್ಶನ ನೀಡುವುದು ಸರ್ವೇ ಸಾಮಾನ್ಯವಾದ ವಿಷಯವಾಗಿತ್ತು. ಒಮ್ಮೆ ಸರ್ಕಸ್ಸಿನಲ್ಲಿದ್ದ ಶಂಕರ ಎಂಬ ಹೆಸರಿನ ಹುಲಿ ಆಕಸ್ಮಿಕವಾಗಿ ಪಂಜರದಿಂದ ತಪ್ಪಿಸಿಕೊಂಡುಬಿಟ್ಟಿತು. ಊರಲ್ಲೆಲ್ಲ ಸುತ್ತಾಡತೊಡಗಿತು. ಊರಿನ ಜನ ಗಾಬರಿಗೊಂಡಿದ್ದರೂ ಗುಂಪುಗೂಡಿ ಹುಲಿಯನ್ನು ಹಿಂಬಾಲಿಸತೊಡಗಿದರು. ಜನರ ಗುಂಪನ್ನು ನೋಡಿ ಹುಲಿ ಗಾಬರಿಗೊಂಡು ಊರ ಮಧ್ಯದಲ್ಲಿದ್ದ ಗಿಡಗಳ ಪೊದೆಯಲ್ಲಿ ಅವಿತುಕೊಂಡು ಕುಳಿತುಬಿಟ್ಟಿತು. ಹುಲಿ ಹೊರಬಂದರೆ ಏನಾಗುತ್ತದೋ ಎಂದು ಜನರಿಗೂ ಭಯ. ಸರಕಾರದವರು ಇಪ್ಪತ್ನಾಲ್ಕು ಗಂಟೆಯೊಳಗೆ ಹುಲಿಯನ್ನು ಹಿಡಿಯದಿದ್ದರೆ  ಗುಂಡಿಟ್ಟು ಸಾಯಿಸಲಾಗುವುದು ಎಂದು ಕಾಶೀನಾಥರಿಗೆ ಎಚ್

ದಿನಕ್ಕೊಂದು ಕಥೆ 876

*🌻ದಿನಕ್ಕೊಂದು ಕಥೆ🌻*                                                               ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ... ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ... ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ ನೋಡುತ್ತಾನೆ... ಆತನ ಸಿಟ್ಟು ನೆತ್ತಿಗೇರಿತು.. ಏನಮ್ಮಾ ನಿಮ್ಮ ಕಣ್ಣು ಕುರುಡಾಗಿದೆಯಾ? ಈ ಮೊಬೈಲ್ ಫೋನಿನ ಬೆಲೆ ಎಷ್ಟು ಅಂತ ಗೊತ್ತಾ ನಿಮಗೆ...? ಇಪ್ಪತ್ತನಾಲ್ಕು ಸಾವಿರ ರುಪಾಯಿಗಳನ್ನು ಕೊಟ್ಟು ಖರೀದಿಸಿ ಒಂದು ತಿಂಗಳು ಕೂಡಾ ಆಗಿಲ್ಲ......  ನಿಜವಾಗಿಯೂ ಅಮ್ಮಾ... ಇತೀಚಿನ ದಿನಗಳಿಂದ ನಿಮ್ಮಿಂದ ತುಂಬಾ ನಷ್ಟಗಳನ್ನು ಅನುಭವಿಸುತ್ತಿದ್ದೇನೆ..... ಆತನ ಮಾತುಗಳನ್ನೆಲ್ಲಾ ಕೇಳುತ್ತಾ ಭಯ ಮತ್ತು ಬೇಸರದಲ್ಲಿ ನಡುಗುತ್ತಾ ನಿಂತಿದ್ದಾರೆ ಆ ತಾಯಿ... ಆಕೆ ಮೆಲ್ಲನೆ ಹೇಳುತ್ತಾಳೆ - ಕಂದಾ.. ನಾನು ಮಾತ್ರೆಗಳನ್ನು ತೆಗೆಯುವಾಗ ಕೈ ತಾಗಿ ಕೆಳಕ್ಕೆ ಬಿದ್ದದ್ದು.... ಬೇಕೂಂತ ಕೆಳಕ್ಕೆ ಹಾಕಿದ್ದಲ್ಲ ಪುಟ್ಟಾ... ಬಯ್ಯಬೇಡ ನನ್ನ ಮಗುವೇ.... ಆಕೆಯ ಕಣ್ಣುಗಳಿಂದ ಕಣ್ಣೀರು ಸುರಿಯತೊಡಗಿತು.... ಇನ್ನು ಅಳುತ್ತಾ ಇರಿ... ನನ್ನ ಬೆಲೆಬಾಳುವ ಮೊಬೈಲ್ ಒಡೆದು ಹಾಕಿದ್ದೀರಲ್ಲಾ.... ಆತನ ರಂಪಾಟ ಕೇಳುತ್ತಾ ಅಡುಗೆ ಮನೆಯಲ್ಲಿದ್ದ ಆತನ ಪತ್ನಿ ಶಾಲಿನಿ ಅಲ್ಲಿಗೆ ಬಂದಳು. ಯಾಕೆರೀ...? ಅಮ್ಮನಿಂದ ಅರಿಯದೆ