Posts

Showing posts from July, 2016

ದಿನಕ್ಕೊಂದು ಕಥೆ 38

🌻🌻 *ದಿನಕ್ಕೊಂದು ಕಥೆ*🌻🌻 💐 *ದುರಾಶೆ*💐    ಒಬ್ಬ ಸಿರಿವಂತನಿದ್ದ ಅವನ ವಯಸ್ಸು, ಎಂಬತ್ತು ವರ್ಷ. ಸಿರಿ – ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಜೀವನದಲ್ಲಿ ತೃಪ್ತಿ ಮಾತ್ರ ಎಳ್ಳಷ್ಟೂ ಇರಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಗಳಿಸಬೇಕೆಂಬ ಆಶೆ ಅವನಿಗೆ. ಓರ್ವ ಸಂತರ ಬಳಿ ಹೋದ. ಸಂತ ಕೇಳಿದ “ಬಂದ ಕಾರಣವೇನು?” ಸಿರಿವಂತನ ಹೇಳಿದ “ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದೇನೆ”. ಸಂತ ಕೇಳಿದ “ಅದೆಂಥ ಬಡತನ?” ಸಿರಿವಂತ ಹೇಳಿದ “ನೆರೆಯವರ ಮನೆ ಏಳೆಂಟು ಅಂತಸ್ತಿನದು. ನನ್ನದು ಕೇವಲ ಎರಡೇ ಅಂತಸ್ತಿನ ಮನೆ!” ಸಂತರು ಆತನ ಧನಲೋಭವನ್ನು ಕಂಡು ಮರುಗಿದರು.   “ಚಿಂತಿಯಿಲ್ಲ ನಿನಗೆ ಎಷ್ಟು ಬೇಕೋ ಅಷ್ಟು ಹರಳುಗಳನ್ನು ತೆಗೆದುಕೊಂಡು ಬೇಗನೇ ಬಾ. ಅದನ್ನೆಲ್ಲ ಚಿನ್ನ, ಬೆಳ್ಳಿ, ಮುತ್ತು, ರತ್ನ ಮಾಡಿಕೊಡುತ್ತೇನೆ” ಎಂದರು ಸಂತರು. “ಆಗಲಿ ಪೂಜ್ಯರೇ” ಎಂದು ಮನೆಗೆ ಹೋದ ಸಿರಿವಂತ. ಒಂದು ಕ್ಷಣವೂ ಬಿಡದೇ ಹಗಲು ರಾತ್ರಿ ಹರಳುಗಳ ಕೂಡಿಸಲು ತೊಡಗಿದ. ವರುಷ ಕಳೆದರೂ ಈತ ಹರಳುಗಳ ಕೂಡಿಸುವುದು ಮುಗಿಯಲೇ ಇಲ್ಲ. ಮನುಷ್ಯನ ಆಶೆಗೊಂದು ಕೊನೆಯು ಎಲ್ಲಿದೆ? ಸಂತರು ಈತನ ದಾರಿ ನೋಡಿ ನೋಡಿ ಹಿಮಾಲಯದತ್ತ ಹೊರಟು ಹೋದರು. ಸಿರಿವಂತನ ಪಾಲಿಗೆ ಉಳಿದದ್ದು ಮುತ್ತು – ರತ್ನಗಳಲ್ಲ; ಬರೀ ಕಲ್ಲು! ಹೊನ್ನಾಗಬೇಕಾಗಿದ್ದ, ಚಿನ್ನದ ಗಣಿಯಾಗಬೇಕಾಗಿದ್ದ ಆತನ ಜೀವನ ದುರಾಶೆಯಿಂದ ಕಲ್ಲು-ಮಣ್ಣಿನ ರಾಶಿಯಾಗಿತ್ತು!.                           ಕೃಪೆ:ಶ್ರೀ ಸಿದ್ಧೇಶ

ದಿನಕ್ಕೊಂದು ಕಥೆ 03

🌻🌻 *ದಿನಕ್ಕೊಂದು ಕಥೆ*🌻🌻 💐 *ಹೃದಯ-ದಾರಿದ್ರ್ಯ* 💐   ರಾಜನ ಆಸ್ಥಾನದಲ್ಲಿ ಒಬ್ಬ ಹಿರಿಯ ಶಿಲ್ಪಕಲಾವಿದನಿದ್ದ. ಒಂದು ದಿನ ಒಬ್ಬ ತರುಣ ಕಲಾವಿದ ಅದೇ ಆಸ್ಥಾನಕ್ಕೆ ಬಂದ. ತನ್ನ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜನಿಗೆ ಕೇಳಿಕೊಂಡ. ಉದಾರಿಯಾದ ರಾಜನು ಒಪ್ಪಿದ. ತರುಣ ಶಿಲ್ಪಿ ಒಂದು ಸುಂದರ ಮೂರ್ತಿಯನ್ನು ನಿರ್ಮಿಸಿದ. ಅದನ್ನು ಕಂಡು ರಾಜನಿಗೆ ಬಹಳ ಆನಂದವಾಯಿತು! “ಇಂಥ ಮೂರ್ತಿಯನ್ನು, ನನ್ನ ಆಯುಷ್ಯದಲ್ಲಿಯೇ ನೋಡಿರಲಿಲ್ಲ!” ಎಂದು ಉದ್ಗರಿಸಿದ. ಆಸ್ಥಾನದ ಹಿರಿಯ ಶಿಲ್ಪಿಗೂ ಅದು ಅದು ಮೆಚ್ಚುಗೆ ಆಯಿತು. “ಇದು ನಿಜವಾಗಿಯೂ ಸುಂದರ ಮೂರ್ತಿ!” ಎಂದ ಹಿರಿಯ ರಾಜಶಿಲ್ಪಿ.   ರಾಜನ ಆಜ್ಞೆಯಂತೆ ಮರುದಿನ ಅರಮನೆಯಲ್ಲಿ ಆ ತರುಣ ಶಿಲ್ಪಿಗೆ ಸತ್ಕಾರನಿಶ್ಚಯಿಸಿದರು. ಅದೇ ಸಂದರ್ಭದಲ್ಲಿ ರಾಜನು ಹಿರಿಯ ಶಿಲ್ಪಿಗೆ ಹೇಳಿದ “ತಾವು ಒಪ್ಪಿದರೆ ಈ ತರುಣ ಶಿಲ್ಪಿ ತಮ್ಮ ಸ್ಥಾನಕ್ಕೆ ಬರಲಿ ಹೇಗೂ ತಮಗೆ ಒಯಾಸ್ಸಾಗಿದೆ.” ಹಿರಿಯ ಶಿಲ್ಪಿ ಹಿಂದೆಮುಂದೆ ನೋಡದೆ “ಆಗಲಿ ಮಹಾಪ್ರಭು ಇಂಥ ಶ್ರೇಷ್ಠ ಶಿಲ್ಪಿ ನನ್ನ ತರುವಾಯ ತಮ್ಮ ಆಸ್ಥಾನಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ!” ಆ ಶಿಲ್ಪಿಯ ಔದಾರ್ಯಕ್ಕೆ ಎಲ್ಲರೂ ಮೆಚ್ಚಿದರು.   ಹಿರಿಯ ಶಿಲ್ಪಿ ಮನೆಗೆ ಹೋಗಿ ಅಂದುಕೊಂಡ “ನಾಳೆಯಿಂದ ಆ ತರುಣನೇ ರಾಜಶಿಲ್ಪಿ. ಇನ್ನು ಮೇಲೆ ನನಗೆ ಗೌರವ, ರಾಜಭೋಗವಿಲ್ಲ. ಹೇಗಾದರೂ ಮಾಡಿ ಆ ತರುಣ ಶಿಲ್ಪಯನ್ನು ಈ ನಾಡಿನಿಂದ ಅಥವಾ ಬದುಕಿನಿಂದ ದೂರ ಸರಿಸಬೇಕು!” ಕ

ದಿನಕ್ಕೊಂದು ಕಥೆ 04

🌻🌻 *ದಿನಕ್ಕೊಂದು ಕಥೆ*🌻🌻                                            💐 *ಮೋಸಕ್ಕೆ ಪ್ರತಿಮೋಸ*💐 ಹಸಿರು ಹುಲ್ಲಿನ ಮೈದಾನದಲ್ಲಿ ಕುದುರೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಒಂದು ತೋಳ ಆಹಾರವನ್ನರಸುತ್ತಾ ಬಂದು ಆ ಕುದುರೆಯನ್ನು ನೋಡಿತು. ಅದರ ದುಷ್ಟ ಪುಷ್ಟ ಮೈ ನೋಡಿದಾಗ ತೊಳದ ಬಾಯಲ್ಲಿ ನೀರೂರಿತು. ಈ ಕುದುರೆಯ ಮಾಂಸ ತನಗೆ ತಿನ್ನಲು ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಅಂದುಕೊಂಡಿತು. ಆ ಕುದುರೆಯನ್ನು ಮೋಸಮಾಡಿ ಕೊಂದರೆ ಒಂದು ವಾರದ ಸಮೃದ್ಧ ಭೋಜನ ತನ್ನದಾಗುವರೆಂದು ತೋಳ ಯೋಚಿಸಿತು. ಆ ಉದ್ದೇಶದೊಡನೆಯೇ ಕುದುರೆಯ ಸಮೀಪಕ್ಕೆ ಬಂತು. "ಅಯ್ಯಾ ಅಶ್ವರಾಜ, ನಾನೊಬ್ಬ ಸುಪ್ರಸಿದ್ಧ ವೈದ್ಯ. ಆಸೇತು ಹಿಮಾಚಲದವರೆಗೆ ಸುತ್ತಾಡಿ ಪಶುಗಳ ರೋಗ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿ ವಾಸಿ ಮಾಡಿದ್ದೇನೆ, ನಿನ್ನ ಆರೋಗ್ಯವೂ ಸ್ವಲ್ಪ ಕೆಟ್ಟಿರುವಂತೆ ಕಾಣುತ್ತದೆ. ಅದಕ್ಕಾಗಿ ನಾನೊಮ್ಮೆ ನಿನ್ನನ್ನು ಪರೀಕ್ಷಿಸಿ ಔಷಧಿ ನೀಡುತ್ತೇನೆ, ಅದರಿಂದಾಗಿ ನಿನ್ನ ಕಾಯಿಲೆ ಬೇಗನೆ ಗುಣವಾಗುವುದು" ಅಂದಿತು. ಕುದುರೆಯು ಸಾಮಾನ್ಯದ್ದೇನಲ್ಲ. ಅದು ತೊಳದ ನಯ ವಂಚನೆಯ ಸುಳಿವು ಹಿಡಿಯಿತು. ಹಾಗೂ ಅದಕ್ಕೆ ಸರಿಯಾದ ಪಾಠವನ್ನು ಕಲಿಸುವೆನೆಂಬ ನಿರ್ಣಯಕ್ಕೆ ಬಂತು. "ವೈದ್ಯ ಮಹಾಶಯ, ನೀನು ಬಹಳ ಒಳ್ಳೆಯ ಸಮಯಕ್ಕೆ ಬಂದೆ ನಾನೇ ವೈದ್ಯನನ್ನು ಹುಡುಕಿಕೊಂಡು ಹೋಗಬೇಕೆಂದಿದ್ದೆ, ಈಗ ಆ ತೊಂದರೆಯೇ ತಪ್ಪಿಹೋಯಿತು

ದಿನಕ್ಕೊಂದು ಕಥೆ 01

🌻🌻ದಿನಕ್ಕೋಂದು ಕಥೆ🌻🌻 ಪ್ರೇಮ ಒಂದು ಪರೀಕ್ಷೆ ಮತ್ತು ಪ್ರತ್ಯಕ್ಷ ಪ್ರಮಾಣ. ಅದನ್ನೇ ಮಹಾವೀರನು ಅಹಿಂಸೆ ಎಂದು ಕರೆದಿರುವುದು. ಅಹಿಂಸೆಯ ಅರ್ಥ ಬೇರೆಯವರಿಗೆ ದುಃಖವನ್ನು ಕೊಡಬೇಡ ಎಂಬುದಷ್ಟೇ ಅಲ್ಲ. ಅನ್ಯರಿಗೆ ದುಃಖ ನೀಡುವ ಭಾವವನ್ನು ಬಲವಂತವಾಗಿ ನಿಗ್ರಹಿಸುವವರು ತಮಗೇ ದುಃಖ ಕೊಟ್ಟುಕೊಳ್ಳಲು ಆರಂಭಿಸುತ್ತಾರೆ. ದುಃಖ ನೀಡಲು ಎಷ್ಟು ಇಚ್ಛೆ ಇರುವುದೆಂದರೆ ಬೇರೆಯವರಿಗೆ ದುಃಖ ನೀಡುವುದನ್ನು ಬಲವಂತವಾಗಿ ತಡೆದರೆ ಆಗ ಅವರು ತಮಗೇ ದುಃಖ ಕೊಟ್ಟುಕೊಳ್ಳುವುದನ್ನು ಆರಂಭಿಸುವರು. ಹಲವು ಫಕೀರ, ಸಾಧುಗಳು ತಮ್ಮ ಶರೀರವನ್ನು ಹಿಂಸೆಗೆ ಒಳಪಡಿಸಿಕೊಳ್ಳಲು ಕಾರಣವೇನೆಂದರೆ ದುಃಖ ನೀಡುವ, ಸತಾಯಿಸುವ ಆನಂದವನ್ನು ಬೇರೆಯವರಿಂದ ಪಡೆಯುವ (ಬೇರೆಯವರಿಗೆ ದುಃಖವನ್ನು ನೀಡುವ ಮೂಲಕ) ಬದಲು, ಆ ಆನಂದವನ್ನು ಅವರು ನಿಲ್ಲಿಸಿಬಿಟ್ಟಿರುವುದರಿಂದ, ಅವರು ತಮ್ಮ ಶರೀರವನ್ನೇ ಸತಾಯಿಸುತ್ತಿರುವರು. ಹೊಟ್ಟೆಯ ಮೇಲೆ, ಸೊಂಟದ ಮೇಲೆ ಮುಳ್ಳುಗಳ ಪಟ್ಟಿಯನ್ನು ಧರಿಸುವ ಫಕೀರರಿದ್ದಾರೆ. ಆ ಮೂಲಕ ಆ ಮುಳ್ಳುಗಳು ಅವರ ಸೊಂಟದಲ್ಲಿ ಚುಚ್ಚುತ್ತಾ ಗಾಯವನ್ನು ಉಂಟು ಮಾಡಲಿ ಎಂಬುದು ಅವರ ಉದ್ದೇಶ. ಕೆಲವು ಫಕೀರರು ಚಪ್ಪಲಿಯ ಮೇಲೆ ಮೊಳೆಗಳನ್ನು ಇರಿಸಿಕೊಂಡು, ಅವು ಪಾದದ ಮೇಲೆ ಚುಚ್ಚಿ ಗಾಯವನ್ನು ಉಂಟು ಮಾಡಿ ಅವುಗಳಿಂದ ಸದಾ ರಕ್ತ ಸುರಿಯುತ್ತಿರುವಂತೆ ಮಾಡಿಕೊಳ್ಳುತ್ತಾರೆ. ಕೆಲವರು ತಮ್ಮ ಕಣ್ಣುಗಳನ್ನೇ ಕಿತ್ತುಕೊಳ್ಳುತ್ತಾರೆ. ಇವರು ತಮ್ಮ ಹಿಂಸಾ ಪ್ರವೃತ್ತಿಯನ್ನು ಹೊರಗಡೆ ಪ

ದಿನಕ್ಕೊಂದು ಕಥೆ. 05

🌻🌻ದಿನಕ್ಕೋಂದು ಕಥೆ🌻🌻                                   ಒಂದು ನಿರ್ದಿಷ್ಟವಾದ ಪ್ರಾಣಿಯು ಭೂಮಿಯ ಮೇಲೆ ಒಂದು ನಿರ್ದಿಷ್ಟವಾದ ಕಂಪನವನ್ನು ತರುತ್ತದೆ. ಒಂದು ಪ್ರಾಣಿಯು ಈ ಭೂಮಿಯ ಮೇಲೆ ಇಲ್ಲವಾದರೆ ಆಗ ಜಗತ್ತಿನಲ್ಲಿ ಬದಲಾವಣೆಗಳಾಗುತ್ತವೆ. ಒಂದು ನಿರ್ದಿಷ್ಟ ಸಂಖ್ಯೆ ಇಲ್ಲವಾದರೆ ಈ ವಿಶ್ವವೇ ಇರುವುದಿಲ್ಲ. ಇದೇ ಸ್ಟ್ರಿಂಗ್ ಸಿದ್ಧಾಂತ. ಈ ವಿಶ್ವದಲ್ಲಿ ಒಂದು ನಿರ್ದಿಷ್ಟ ವಸ್ತುವು ಇಲ್ಲವಾದರೆ ಅದು ಮುಗಿದು ಹೋಗುತ್ತದೆ. ಒಂದು ಇರುವೆಯಿಲ್ಲದೆಯೂ ಈ ಜಗತ್ತು ಇರಲು ಸಾಧ್ಯವಿಲ್ಲ. ಪ್ರತಿಯೊಂದು ಪ್ರಾಣಿಯೂ ಭೂಮಿಯ ಮೇಲೆ ಒಂದು ನಿರ್ದಿಷ್ಟ ಶಕ್ತಿಯನ್ನು ತರುತ್ತದೆ. ಪ್ರತಿಯೊಂದು ಗ್ರಹಕ್ಕೂ ಸ್ಪಂದಿಸುವ ಒಂದು ನಿರ್ದಿಷ್ಟವಾದ ಪ್ರಾಣಿಯಿದೆ ಮತ್ತು ಆ ಪ್ರಾಣಿಯು ಆ ಗ್ರಹದ ತರಂಗಗಳನ್ನು ಹೊರಸೂಸುತ್ತಿರುತ್ತದೆ. ಅದೇ ರೀತಿಯಾಗಿ ಒಂದು ನಿರ್ದಿಷ್ಟ ಗ್ರಹವು ದೇಹದ ಒಂದು ನಿರ್ದಿಷ್ಟ ಭಾಗದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ, ಒಂದು ಗಿಡ, ಒಂದು ಗ್ರಹ, ದೇಹದ ಒಂದು ಭಾಗ, ಒಂದು ಪ್ರಾಣಿ, ಒಂದು ಕಾಳು, ಒಂದು ಹೂವು, ಎಲ್ಲವೂ ಸಂಬಂಧಪಟ್ಟಿವೆ. ಪ್ರತಿಯೊಂದಕ್ಕೂ ಒಂದು ದೇವತೆಯಿದೆ. ಎಷ್ಟೊಂದು ರೀತಿಯ ದೇವತೆಗಳಿದ್ದಾರೆ ಮತ್ತು ಎಲ್ಲವೂ ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಎನ್ನುವುದು ಒಂದು ಅದ್ಭುತವಾದ ವಿಜ್ಞಾನ. ಉದಾಹರಣೆಗೆ ಶನಿ ಗ್ರಹವು ಕಾಗೆಗೆ, ಎಳ್ಳಿಗೆ, ನಿಮ್ಮ ಹಲ್ಲಿಗೆ ಮತ್ತು ದವಡೆಗಳಿಗೆ ಸಂಬಂಧಪಟ್ಟಿದೆ. ಪ್ರತಿಯೊಂದು ಗ್ರಹಕ್ಕ

ದಿನಕ್ಕೊಂದು ಕಥೆ. 06

🌻🌻ದಿನಕ್ಕೊಂದು ಕಥೆ🌻🌻                                          💐ಸುಪ್ರಿಯ ಮತ್ತು ಮಹಾತ್ಮ ಬುದ್ದ 💐 ಒಮ್ಮೆ ಗೌತಮ ಬುದ್ಧರು ವೈಶಾಲಿಯಲ್ಲಿದ್ದ ಸಮಯದಲ್ಲಿ ಭಾರೀ ಕ್ಷಾಮ ಉಂಟಾಯಿತು. ಮಳೆ ಇಲ್ಲದೆ, ನೀರಿಲ್ಲದೆ, ಬೆಳೆ ಇಲ್ಲದೆ ಜನರು ಸಂಕಷ್ಟಕ್ಕೊಳಗಾದರೂ. ಆಹಾರವಿಲ್ಲದೆ ಬಡವರು ಕೃಶರಾಗಿ ಸಾಯ ತೊಡಗಿದರು. ಕರುಣಾಮಯಿ ಬುದ್ಧದೇವರಿಗೆ ಈ ದಾರುಣ ದೃಶ್ಯ ನೋಡಿ ಬಹಳ ದುಃಖವಾಗತೊಡಗಿತು. ಭೀಕರ ಕ್ಷಾಮ ನಿವಾರಣೆಗೆ ಏನು ಉಪಾಯ ಮಾಡುವುದೇ? ಅವರ ಕಷ್ಟ ಹೇಗೆ ನಿವಾರಣೆ ಮಾಡುವುದು ಎಂದು ಆಲೋಚಿಸ ತೊಡಗಿದರು. ಬುದ್ಧದೇವರು ಇರುವ ಆಶ್ರಮದ ಪಕ್ಕದಲ್ಲಿ ತುಂಬಾ ಧನಿಕರು, ವ್ಯಾಪಾರಿಗಳು ವಾಸಿಸುತ್ತಿದ್ದರು. ಅವರು ಆಗಾಗ ಬುದ್ಧ ದೇವರ ದರ್ಶನಕ್ಕೆ ಬರುತ್ತಿದ್ದರು. ಅವರಿಗಾರಿಗೂ ಅಣ್ಣಾ ನೀರಿಲ್ಲದೆ ಬಳಲುವ ಬಡವರ ಮೇಲೆ ಕರುಣೆ ಇರಲಿಲ್ಲ. ಆಗ ಬುದ್ಧ ದೇವರು ಹೇಳಿದರು. "ಸಹೋದರರೇ, ಇಂತಹ ಕ್ಷಾಮದ ಕಷ್ಟದಿಂದ ಹೊಟ್ಟೆಗಿಲ್ಲದೆ ಸಾಯುವ ಜನರಿಗೆ ಆಹಾರ ಧಾನ್ಯ, ಹಣವನ್ನು ದಾನ ಮಾಡಿ ಜನರ ಉದ್ಧಾರ ಮಾಡಿದರೆ ಲೋಕೋದ್ಧಾರ ಮಾಡಿದಂತೆ. ಜನರ ಸೇವೆ ಜನಾರ್ದನ ಸೇವೆ. ನಿಮ್ಮಲ್ಲಿ ಯಾರಿಗಾದರೂ ದಾನ-ಧರ್ಮ ಮಾಡಬೇಕಾದಲ್ಲಿ ಮುಂದಕ್ಕೆ ಬನ್ನಿ. ಯಾರಾ ಮುಂದೆ ಬರುತ್ತೀರಿ?. ಬುದ್ಧದೇವರ ಪ್ರಶ್ನೆಗೆ ಯಾರೊಬ್ಬ ಧನಿಕನೂ ಮುಂದಕ್ಕೆ ಬರಲಿಲ್ಲ. "ಈಗ ಆಲೋಚನೆ ಮಾಡಿ ಕುಳಿತುಕೊಳ್ಳುವ ಸಮಯವಲ್ಲ. ಜನರ ಪ್ರಾಣ ಉಳಿಸುವುದು ಮುಖ್ಯ. ಮುಂದಕ್ಕೆ ಬನ್ನಿರಿ

ದಿನಕ್ಕೊಂದು ಕಥೆ. ,07

🌻🌻ದಿನಕ್ಕೊಂದು ಕಥೆ🌻🌻 💐ಧರ್ಮಸೂತ್ರ💐 ಒಂದು ನದಿಯು ಆಳವಾದ ಕೊಳ್ಳದತ್ತ ರಭಸದಿಂದ ಹರಿಯುತ್ತಿತ್ತು. ಒಬ್ಬ ದಾರಿಕಾರನು ಆ ನದಿಯಲ್ಲಿ ಈಸುಬಿದ್ದ, ಹುಮ್ಮಸದಿಂದ ಮುಂದೆ ಮುಂದೆ ಹೋದ. ಸೆಳವಿಗೆ ಸಿಕ್ಕ. ಈಜಿ ಈಜಿ ಕೈಸೋತವು. ಇನ್ನೇನು ಮುಳುಗುವುದರಲ್ಲಿದ್ದ; ಅಷ್ಟರಲ್ಲಿ ಹಿರಿಯರೊಬ್ಬರು ಅಲ್ಲಿಗೆ ಆಗಮಿಸಿದರು. ಅಪಾಯದಲ್ಲಿದ್ದ ಈತನನ್ನು ಕಂಡ ಕೂಡಲೇ ಹಗ್ಗವನ್ನು ನೀರಿಗೆ ಎಸೆದು ‘ಹಿಡಿ’ ಎಂದರು. ಅದೇ ಸಮಯಕ್ಕೆ ಎಲ್ಲಿಂದಲೋ ಮರದ ತುಂಡು ಅಲ್ಲಿ ತೇಲಿ ಬಂತು; ಯಾವುದು ಹಿಡಿಯುವುದು? ಹಗ್ಗವನ್ನೋ? ಮರದ ತುಂಡನ್ನೋ? ದಾರಿಕಾರ ಮರದ ತುಂಡನ್ನೇ ಹಿಡಿದ. ಹಿರಿಯನು ಹೇಳಿದ ‘ಮರದ ತುಂಡನ್ನು ಬಿಡು ಹಗ್ಗವನ್ನು ಹಿಡಿ’ ‘ಹಗ್ಗ ಸಣ್ಣದು, ಮರ ದೊಡ್ಡದು. ದೊಡ್ದದನ್ನೇ ಹಿಡಿಯಬೇಕು. ನನಗಿಷ್ಟೂ ತಿಳಿಯದೇ ?’ ಎಂದ ಅವನು ಮರವನ್ನೇ ಹಿಡಿದ; ಮರದೊಂದಿಗೆ ಆಳವಾದ ಕೊಳಕ್ಕೆ ಬಿದ್ದು ಮರಣವನ್ನಪ್ಪಿದ. ಧರ್ಮದ ಸೂತ್ರವು ಸಣ್ಣದಾದರೂ ರಕ್ಷಿಸುತ್ತದೆ. 💐ದೇವರೇ_ದೊಡ್ಡವನು 💐 ಒಬ್ಬ ರಾಜನು ಅತ್ಯಂತ ಜನಪ್ರಿಯನಾಗಿದ್ದ. ಬಲಿಷ್ಠ ಸಾಮ್ರಾಟನಾದ ಆತನಿಗೆ ಸಿರಿಸಂಪದ ಯಥೇಚ್ಚವಾಗಿತ್ತು. ಆದರೆ ಅಷ್ಟೇ ಧಾರ್ಮಿಕನಾಗಿದ್ದ. ಒಂದು ದಿನ ರಾಜನು ಸಾಗರದ ದಡದಲ್ಲಿ ಕುಳಿತಿದ್ದ. ಸಾಗರದ ಭವ್ಯತೆಯನ್ನು ಅನುಭವಿಸುತ್ತಿದ್ದ. ಇದೇ ಸಮಯವೆಂದು ಹೊಗಳುಭಟ್ಟರು ರಾಜನನ್ನು ಸುತ್ತಿಸತೊಡಗಿದರು. ‘ರಾಜರೇ’ ನೀವು ಜಗದೊಡೆಯರು. ನಿಮ್ಮನ್ನು ಎದುರಿಸುವ ಸಾಮರ್ಥ್ಯ ಈ ಪ್ರಪಂಚದಲ್ಲಿ ಯ

ದಿನಕ್ಕೊಂದು ಕಥೆ. 02

🌻🌻ದಿನಕ್ಕೊಂದು ಕಥೆ 🌻🌻 💐ಆತ್ಮ ಸಂತಸ💐   ಮರದ ಮೇಲೊಂದು ಕಾಗೆಯು ವಸವಾಗಿತ್ತು. ಆ ಕಾಗೆಯ ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ. ಅದೇ ಮರದಲ್ಲಿದ್ದ ಗಿಳಿ ಮತ್ತು ಗುಬ್ಬಿಯ ಹತ್ತಿರ ಎಲ್ಲರೂ ಧಾವಿಸುವರು. ಏನಾದರೂ ತಿಂಡಿ-ತಿನಿಸನ್ನು ಅವುಗಳಿಗೆ ಕೊಡುವರು. ಈ ಕಾಗೆಯನ್ನು ಮಾತ್ರ ಯಾರೂ ಮಾತನಾಡಿಸುವವರೇ ಇರಲಿಲ್ಲ. ಆದರೂ ಕಾಗೆ ಮಾತ್ರ ನಿತ್ಯವೂ ಕಸಕಡ್ಡಿಗಳನ್ನು ಎತ್ತಿಹಾಕಿ, ಪರಿಸರವನ್ನು ನಿರ್ಮಳಗೊಳಿಸುತ್ತಲಿತ್ತು!   ಒಂದು ದಿನ ವೃಕ್ಷದಲ್ಲಿದ್ದ ದೇವತೆ ಕಾಗೆಗೆ ಕೇಳಿತು. “ ಕಾಗೆಯೇ ಯಾರೂ ನಿನ್ನನ್ನು ಮಾತನಾಡಿಸುವುದಿಲ್ಲ. ಆದರೂ ನೀನು ಸತ್ಕಾರ್ಯದಲ್ಲಿ ತೊಡಗಿರುವಿಯಲ್ಲ ಏಕೆ?” ಕಾಗೆ ಹೇಳಿತು- “ಈ ಜಗದ ಜನರಿಗಾಗಿ ನಾನು ದುಡಿಯುತ್ತಿಲ್ಲ. ನನ್ನ ಆತ್ಮಸಂತೋಷಕ್ಕಾಗಿ ನಾನು ದುಡಿಯುತ್ತಿದ್ದೇನೆ. ಒಂದು ವೇಳೆ ಈ ಜನರ ಮಾತಿಗೆ ಕಿವಿಗೊಟ್ಟಿದ್ದರೆ ನಾನು ಬದುಕುವುದೇ ಸಾಧ್ಯವಿರಲಿಲ್ಲ. ಇಂದು ನನಗೆ ಈ ಜಗವೇ ಸ್ವರ್ಗವಾಗಿದೆ!!” ಶ್ರೀ ಸಿದ್ಧೇಶ್ವರ ಸ್ವಾಮೀಜಿ,.                     ಸಂಗ್ರಹ: ವೀರೇಶ್ ಅರಸಿಕೆರೆ.

ದಿನಕ್ಕೊಂದು ಕಥೆ 08

🌻🌻ದಿನಕ್ಕೊಂದು ಕಥೆ 🌻🌻 💐ಅರಿವಿನ_ಜ್ಯೋತಿ 💐 ಚೀನಾ ದೇಶದಲ್ಲಿ ಒಬ್ಬ ಶ್ರೇಷ್ಠ ಗುರುವಿದ್ದ. ಸತ್ಯ ಸಾಕ್ಷಾತ್ಕಾರ ಮಾಡಿಕೊಂಡ ಗುರುವೆಂದು ದೇಶದ ತುಂಬೆಲ್ಲ. ಆತನ ಹೆಸರು. ಜಪಾನದ ಉತ್ತರ ಭಾಗದಿಂದ ಒಬ್ಬ ಮನುಷ್ಯ ಆ ಗುರುವಿನ ಬಳಿಗೆ ಬಂದ. ಆತನ ವಯಸ್ಸು ನಲವತ್ತು ವರ್ಷ. ಸಿರಿ ಸಂಪತ್ತಿಗೇನೂ ಕೊರತೆ ಇರಲಿಲ್ಲ. “ಬುದ್ಧಂ ಶರಣಂ ಗಚ್ಚಾಮಿ” ಎಂದು ಗುರುಗಳಿಗೆ ನಮಿಸಿ ಕುಳಿತ. “ಏನು ವಿಶೇಷ?” ಎಂದು ಗುರುಗಳು ಕೇಳಿದರು.    “ನನಗೆ ಧನ-ಕನಕ, ಸತಿ-ಸುತರು, ಕೀರ್ತಿವಾರ್ತೆ ಯಾವುದಕ್ಕೂ ಕೊರತೆ ಇಲ್ಲ. ಆದರೆ ಒಂದೇ ಒಂದಾಶೆ-ನಿರ್ವಾಣ ಹೊಂದಬೇಕು, ಸತ್ಯದರ್ಶನ ಮಾಡಿಕೊಳ್ಳಬೇಕು. ಆಯುಷ್ಯ ಇರುವುದರಲ್ಲಿ ಅದೊಂದಾದರೆ ನನ್ನ ಜೀವನ ಸಾರ್ಥಕ, ಏನು ಮಾಡಲಿ ಹೇಳಿ ಗುರುಗಳೇ” ಎಂದ ಶಿಷ್ಯ.   “ಏನಿಲ್ಲ ಇದೊಂದು ಬಡಿಗೆ ಹಿಡಿ. ನಿನಗೆ ನಿರ್ವಾಣವಾಗುತ್ತದೆ” ಎಂದು ಹೇಳಿ ಗುರುಗಳು ಐದಡಿ ಮನುಷ್ಯನಿಗೆ ಆರಡಿ ಎತ್ತರದ ಬಡಿಗೆ ಕೊಟ್ಟರು. ಜಪತಪ ಯೋಗ ಧ್ಯಾನಾದಿಗಳು ಮಾಡಬೇಕಿಲ್ಲ. ಸುಮ್ಮನೆ ಬಡಿಗೆ ಹಿಡಿದರೆ ಮುಕ್ತರಾಗುವುದಾದರೆ ಎಂಥ ಆನಂದ! ಆದರೆ ಅದರಿಂದ ನಿರ್ವಾಣ ಹೇಗಾಗುತ್ತದೆ ಎಂದಾಗುತ್ತದೆ ಎಂದು ಶಿಷ್ಯನೂ ಕೇಳಲಿಲ್ಲ, ಗುರುಗಳೂ ಹೇಳಲಿಲ್ಲ.   ಅಂದಿನಿಂದ ಸಿರಿವಂತನು ಕೂತರೆ ನಿಂತರೆ ಬಡಿಗೆ ಹಿಡಿದುಕೊಂಡೇ ಇರುತ್ತಿದ್ದ. ಮಕ್ಕಳಾದವು, ಮೊಮ್ಮಕ್ಕಳಾದವು. ಇನ್ನೂ ಬಡಿಗೆ ಹಿಡಿದೇ ಇದ್ದ. ಸತ್ಯವೇನೋ ಕಾಣಲಿಲ್ಲ. ಇಪ್ಪತ್ತು ವರ್ಷವಾದರೂ ನಿರ್ವಾಣವೇನೂ ದೊರೆ

ದಿನಕ್ಕೊಂದು ಕಥೆ. 219

🌻🌻ಸಣ್ಣ ಕಥೆ🌻🌻                                  ಟೌನಿನಲ್ಲಿ ತನ್ನ ಮಗ ಕೆಲಸ ಮಾಡುತ್ತಿದ್ದ ಹೋಟೆಲಿಗೆ ಆಕಸ್ಮಿಕವಾಗಿ ಬಂದುಬಿಟ್ಟಿದ್ದಳು ಆಕೆ. ತಟ್ಟೆ ಎತ್ತುತ್ತಿರುವಾಗ ಎದುರಿನ ಮೇಜಿನಲ್ಲಿ ತನ್ನ ತಾಯಿಯನ್ನು ನೋಡಿ  ಆತನ ಎದೆ ಕಂಪಿಸಿತು. ಉಂಡ ಹರಿವಾಣಕ್ಕೆ   ಒಮ್ಮೆಯೂ ಕೈ ಹಾಕದೇ ಸಾಕಿಸಿಕೊಂಡವನೀಗ ಎಲ್ಲರ ಎಂಜಲು ಬಳಿಯುತ್ತಿರುವುದನ್ನು ಕಣ್ಣಾರೆ ನೋಡಿ ತಾಯಿಯ ಅಂತಃಕರಣ  ಮರುಗಿ ನೀರಾಯಿತು. ಬಡಪಾಯಿಗಳಿಬ್ಬರ ಕಣ್ಣುಗಳೂ ಸಂಧಿಸಿದಾಗ ತುಟಿಗಳು ಸ್ಥಬ್ಧವಾದವು..ಅವರ ಹೃದಯಗಳು ಒಂದನ್ನೊಂದು ಅಪ್ಪಿ  ಮರುಗಿದ್ದು ಯಾರಿಗೂ ಕಾಣಲಿಲ್ಲ.. ಸಾವಿರಾರು ಮಂದಿಯ ಎಂಜಲು ಬಳಿದಿದ್ದವನು ತನ್ನ ತಾಯಿ ಉಂಡ ತಟ್ಟೆಯನ್ನು ಮೊಟ್ಟಮೊದಲ ಬಾರಿಗೆ ಎತ್ತಿ ಜೀವಮಾನದ  ಸಂತಸ ಅನುಭವಿಸಿದ. ಅದೂ ಕೂಡಾ ಯಾರಿಗೂ ಕಾಣಿಸಲಿಲ್ಲ, ಅವಳ ಹೊರತು. ★★ ಮಗ ಸೊಸೆ ಹಬ್ಬ ಮುಗಿಸಿ ನಗರಕ್ಕೆ ಹೊರಡಲು ಅನುವಾಗುತ್ತಿದ್ದರು. ಅವ್ವ ರಾಗಿ ಹಿಟ್ಟಿನ ಡಬ್ಬ,  ಖಾರದಪುಡಿ ಡಬ್ಬ,ಉಪ್ಪಿನಕಾಯಿ ಜರಡಿ,  ಹಪ್ಪಳ ಸಂಡಿಗೆ ,ಹುಣಸೆಹಣ್ಣು ಎಲ್ಲವನ್ನೂ ತಂದು ಕಾರಿನ ಡಿಕ್ಕಿಗೆ ತುಂಬಿದಳು . ಇನ್ನೇನು ಕಾರು ಹೊರಡಬೇಕು ಅನ್ನುವಷ್ಟರಲ್ಲಿ ಸೊಸೆಗೆ ಅದೇನೋ ನೆನಪಾಗಿ , "ತೆಂಗಿನ ಕಾಯಿ ಮರ್ತು ಬಿಟ್ರಲ್ಲಾ ಅತ್ತೆ " ಎಂದು ಕೂಗಿಕೊಂಡಳು. ಆಕೆ, "ಬಂದೆ ತಡಿಯವ್ವ " ಎನ್ನುತ್ತಾ ಒಂದೇ ಉಸುರಿನಲ್ಲಿ ತೆಂಗಿನ ಕಾಯಿ ಚೀಲ ಹೊತ್ತು ಓಡಿ ಬರುವಾಗ ಪಿನ್ನು ಹಾಕಿ