ದಿನಕ್ಕೊಂದು ಕಥೆ 38
🌻🌻 *ದಿನಕ್ಕೊಂದು ಕಥೆ*🌻🌻
💐 *ದುರಾಶೆ*💐
ಒಬ್ಬ ಸಿರಿವಂತನಿದ್ದ ಅವನ ವಯಸ್ಸು, ಎಂಬತ್ತು ವರ್ಷ. ಸಿರಿ – ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಜೀವನದಲ್ಲಿ ತೃಪ್ತಿ ಮಾತ್ರ ಎಳ್ಳಷ್ಟೂ ಇರಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಗಳಿಸಬೇಕೆಂಬ ಆಶೆ ಅವನಿಗೆ. ಓರ್ವ ಸಂತರ ಬಳಿ ಹೋದ. ಸಂತ ಕೇಳಿದ “ಬಂದ ಕಾರಣವೇನು?” ಸಿರಿವಂತನ ಹೇಳಿದ “ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದೇನೆ”. ಸಂತ ಕೇಳಿದ “ಅದೆಂಥ ಬಡತನ?” ಸಿರಿವಂತ ಹೇಳಿದ “ನೆರೆಯವರ ಮನೆ ಏಳೆಂಟು ಅಂತಸ್ತಿನದು. ನನ್ನದು ಕೇವಲ ಎರಡೇ ಅಂತಸ್ತಿನ ಮನೆ!” ಸಂತರು ಆತನ ಧನಲೋಭವನ್ನು ಕಂಡು ಮರುಗಿದರು.
“ಚಿಂತಿಯಿಲ್ಲ ನಿನಗೆ ಎಷ್ಟು ಬೇಕೋ ಅಷ್ಟು ಹರಳುಗಳನ್ನು ತೆಗೆದುಕೊಂಡು ಬೇಗನೇ ಬಾ. ಅದನ್ನೆಲ್ಲ ಚಿನ್ನ, ಬೆಳ್ಳಿ, ಮುತ್ತು, ರತ್ನ ಮಾಡಿಕೊಡುತ್ತೇನೆ” ಎಂದರು ಸಂತರು. “ಆಗಲಿ ಪೂಜ್ಯರೇ” ಎಂದು ಮನೆಗೆ ಹೋದ ಸಿರಿವಂತ. ಒಂದು ಕ್ಷಣವೂ ಬಿಡದೇ ಹಗಲು ರಾತ್ರಿ ಹರಳುಗಳ ಕೂಡಿಸಲು ತೊಡಗಿದ. ವರುಷ ಕಳೆದರೂ ಈತ ಹರಳುಗಳ ಕೂಡಿಸುವುದು ಮುಗಿಯಲೇ ಇಲ್ಲ. ಮನುಷ್ಯನ ಆಶೆಗೊಂದು ಕೊನೆಯು ಎಲ್ಲಿದೆ? ಸಂತರು ಈತನ ದಾರಿ ನೋಡಿ ನೋಡಿ ಹಿಮಾಲಯದತ್ತ ಹೊರಟು ಹೋದರು. ಸಿರಿವಂತನ ಪಾಲಿಗೆ ಉಳಿದದ್ದು ಮುತ್ತು – ರತ್ನಗಳಲ್ಲ; ಬರೀ ಕಲ್ಲು! ಹೊನ್ನಾಗಬೇಕಾಗಿದ್ದ, ಚಿನ್ನದ ಗಣಿಯಾಗಬೇಕಾಗಿದ್ದ ಆತನ ಜೀವನ ದುರಾಶೆಯಿಂದ ಕಲ್ಲು-ಮಣ್ಣಿನ ರಾಶಿಯಾಗಿತ್ತು!.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment