ದಿನಕ್ಕೊಂದು ಕಥೆ. 02

🌻🌻ದಿನಕ್ಕೊಂದು ಕಥೆ 🌻🌻
💐ಆತ್ಮ ಸಂತಸ💐
  ಮರದ ಮೇಲೊಂದು ಕಾಗೆಯು ವಸವಾಗಿತ್ತು. ಆ ಕಾಗೆಯ ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ. ಅದೇ ಮರದಲ್ಲಿದ್ದ ಗಿಳಿ ಮತ್ತು ಗುಬ್ಬಿಯ ಹತ್ತಿರ ಎಲ್ಲರೂ ಧಾವಿಸುವರು. ಏನಾದರೂ ತಿಂಡಿ-ತಿನಿಸನ್ನು ಅವುಗಳಿಗೆ ಕೊಡುವರು. ಈ ಕಾಗೆಯನ್ನು ಮಾತ್ರ ಯಾರೂ ಮಾತನಾಡಿಸುವವರೇ ಇರಲಿಲ್ಲ. ಆದರೂ ಕಾಗೆ ಮಾತ್ರ ನಿತ್ಯವೂ ಕಸಕಡ್ಡಿಗಳನ್ನು ಎತ್ತಿಹಾಕಿ, ಪರಿಸರವನ್ನು ನಿರ್ಮಳಗೊಳಿಸುತ್ತಲಿತ್ತು!
  ಒಂದು ದಿನ ವೃಕ್ಷದಲ್ಲಿದ್ದ ದೇವತೆ ಕಾಗೆಗೆ ಕೇಳಿತು. “ ಕಾಗೆಯೇ ಯಾರೂ ನಿನ್ನನ್ನು ಮಾತನಾಡಿಸುವುದಿಲ್ಲ. ಆದರೂ ನೀನು ಸತ್ಕಾರ್ಯದಲ್ಲಿ ತೊಡಗಿರುವಿಯಲ್ಲ ಏಕೆ?” ಕಾಗೆ ಹೇಳಿತು- “ಈ ಜಗದ ಜನರಿಗಾಗಿ ನಾನು ದುಡಿಯುತ್ತಿಲ್ಲ. ನನ್ನ ಆತ್ಮಸಂತೋಷಕ್ಕಾಗಿ ನಾನು ದುಡಿಯುತ್ತಿದ್ದೇನೆ. ಒಂದು ವೇಳೆ ಈ ಜನರ ಮಾತಿಗೆ ಕಿವಿಗೊಟ್ಟಿದ್ದರೆ ನಾನು ಬದುಕುವುದೇ ಸಾಧ್ಯವಿರಲಿಲ್ಲ. ಇಂದು ನನಗೆ ಈ ಜಗವೇ ಸ್ವರ್ಗವಾಗಿದೆ!!”

ಶ್ರೀ ಸಿದ್ಧೇಶ್ವರ ಸ್ವಾಮೀಜಿ,.                     ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059