ದಿನಕ್ಕೊಂದು ಕಥೆ. ,07

🌻🌻ದಿನಕ್ಕೊಂದು ಕಥೆ🌻🌻
💐ಧರ್ಮಸೂತ್ರ💐
ಒಂದು ನದಿಯು ಆಳವಾದ ಕೊಳ್ಳದತ್ತ ರಭಸದಿಂದ ಹರಿಯುತ್ತಿತ್ತು. ಒಬ್ಬ ದಾರಿಕಾರನು ಆ ನದಿಯಲ್ಲಿ ಈಸುಬಿದ್ದ, ಹುಮ್ಮಸದಿಂದ ಮುಂದೆ ಮುಂದೆ ಹೋದ. ಸೆಳವಿಗೆ ಸಿಕ್ಕ. ಈಜಿ ಈಜಿ ಕೈಸೋತವು. ಇನ್ನೇನು ಮುಳುಗುವುದರಲ್ಲಿದ್ದ; ಅಷ್ಟರಲ್ಲಿ ಹಿರಿಯರೊಬ್ಬರು ಅಲ್ಲಿಗೆ ಆಗಮಿಸಿದರು. ಅಪಾಯದಲ್ಲಿದ್ದ ಈತನನ್ನು ಕಂಡ ಕೂಡಲೇ ಹಗ್ಗವನ್ನು ನೀರಿಗೆ ಎಸೆದು ‘ಹಿಡಿ’ ಎಂದರು. ಅದೇ ಸಮಯಕ್ಕೆ ಎಲ್ಲಿಂದಲೋ ಮರದ ತುಂಡು ಅಲ್ಲಿ ತೇಲಿ ಬಂತು; ಯಾವುದು ಹಿಡಿಯುವುದು? ಹಗ್ಗವನ್ನೋ? ಮರದ ತುಂಡನ್ನೋ? ದಾರಿಕಾರ ಮರದ ತುಂಡನ್ನೇ ಹಿಡಿದ.
ಹಿರಿಯನು ಹೇಳಿದ ‘ಮರದ ತುಂಡನ್ನು ಬಿಡು ಹಗ್ಗವನ್ನು ಹಿಡಿ’ ‘ಹಗ್ಗ ಸಣ್ಣದು, ಮರ ದೊಡ್ಡದು. ದೊಡ್ದದನ್ನೇ ಹಿಡಿಯಬೇಕು. ನನಗಿಷ್ಟೂ ತಿಳಿಯದೇ ?’ ಎಂದ ಅವನು ಮರವನ್ನೇ ಹಿಡಿದ; ಮರದೊಂದಿಗೆ ಆಳವಾದ ಕೊಳಕ್ಕೆ ಬಿದ್ದು ಮರಣವನ್ನಪ್ಪಿದ. ಧರ್ಮದ ಸೂತ್ರವು ಸಣ್ಣದಾದರೂ ರಕ್ಷಿಸುತ್ತದೆ.

💐ದೇವರೇ_ದೊಡ್ಡವನು 💐
ಒಬ್ಬ ರಾಜನು ಅತ್ಯಂತ ಜನಪ್ರಿಯನಾಗಿದ್ದ. ಬಲಿಷ್ಠ ಸಾಮ್ರಾಟನಾದ ಆತನಿಗೆ ಸಿರಿಸಂಪದ ಯಥೇಚ್ಚವಾಗಿತ್ತು. ಆದರೆ ಅಷ್ಟೇ ಧಾರ್ಮಿಕನಾಗಿದ್ದ. ಒಂದು ದಿನ ರಾಜನು ಸಾಗರದ ದಡದಲ್ಲಿ ಕುಳಿತಿದ್ದ. ಸಾಗರದ ಭವ್ಯತೆಯನ್ನು ಅನುಭವಿಸುತ್ತಿದ್ದ. ಇದೇ ಸಮಯವೆಂದು ಹೊಗಳುಭಟ್ಟರು ರಾಜನನ್ನು ಸುತ್ತಿಸತೊಡಗಿದರು. ‘ರಾಜರೇ’ ನೀವು ಜಗದೊಡೆಯರು. ನಿಮ್ಮನ್ನು ಎದುರಿಸುವ ಸಾಮರ್ಥ್ಯ ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ!’
  “ಹಾಗಲ್ಲ ನಾನು ಈ ಪ್ರಪಂಚದ ಎದುರು ಅತ್ಯಂತ ಸಣ್ಣವ. ಸುಮ್ಮನೆ ನನ್ನನ್ನು ಸುತ್ತಿಸಬೇಡಿ” ಎಂದು ರಾಜ ವಿನಂತಿಸಿದ. ಆದರೆ ಹೋಗಳುಭಟ್ಟರು ಕೇಳಲಿಲ್ಲ. ಮತ್ತೆ ಹೇಳಿದರು- “ಸಾಧ್ಯವಿಲ್ಲ. ನೀವು ಅಜೆಯರು ನಿಮ್ಮನ್ನು ಎದುರಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈಗ ನೀವು ಆಜ್ಞೆ ಮಾಡಿದರೆ ಈ ಸಾಗರವೂ ಹಿಂದೆ ಸರಿಯುತ್ತದೆ.”
  ‘ಹೀಗೋ, ಬನ್ನಿ ನೋಡೋಣ’ ಎಂದ ರಾಜ. ‘ಸಾಗರವೇ ಹಿಂದೆ ಸರಿ’ ಎಂದ, ಒಂದು ಕ್ಷಣ ಸಾಗರ ಹಿಂದೆ ಸರಿದಂತಾಯಿತು. ಮರುಕ್ಷಣವೆ ಬೆಟ್ಟದೆತ್ತರದ ತೆರೆ ರಾಜನತ್ತಲೇ ಧಾವಿಸಿತು. ಭಟ್ಟಂಗಿಗಳು ಹೇಳದೇ ಕೇಳದೇ ಓಡಿ ಹೋಗಿದ್ದರು. ಈ ಪ್ರಪಂಚದಲ್ಲಿ ಪರಮಾತ್ಮನೇ ದೊಡ್ಡವನು?.

ಶ್ರೀ ಸಿದ್ಧೇಶ್ವರ ಸ್ವಾಮಿಜಿ.                            ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059