ದಿನಕ್ಕೊಂದು ಕಥೆ 937

*🌻ದಿನಕ್ಕೊಂದು ಕಥೆ🌻*

ಕೃಷ್ಣ ಮತ್ತು ಸುಧಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು  ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, *ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು* ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು.

ಸುಧಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ *ಇದು ಮಿತಿ ಮೀರಿದೆ. ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ* ಎಂದು ಕೋಪದಿಂದ  ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು. ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು.
ಕೃಷ್ಣ, *ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*

ಅದಕ್ಕೆ ಸುಧಾಮನ  ಉತ್ತರ
*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ  ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*

*ಸ್ನೇಹಿತರೇ,*

ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ, ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ. *ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.... ಒಳ್ಳೆಯ ದಿನಗಳಲ್ಲಿ ದುರಹಂಕಾರ ಮಾಡಬೇಡಿ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದಿರಿ.*

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097