ದಿನಕ್ಕೊಂದು ಕಥೆ 933

ನಿಜಕ್ಕೂ ಇದು ಇಂಟರೆಸ್ಟಿಂಗ್ ಸ್ಟೋರಿಯೇ ಸರಿ, ಓದಿ ತಪ್ಪದೆ ಶೇರ್ ಮಾಡಿ.

ಅದು 1994, ಭಾರತದ ರಾಷ್ಟ್ರಪತಿಗಳಾಗಿದ್ದ ಶ್ರೀ ಶಂಕರಗ ದಯಾಳ್ ಶರ್ಮಾ ರವರು ಓಮನ್‌ ದೇಶದ ಮಸ್ಕಟ್ ಪ್ರವಾಸಕ್ಕೆ ತೆರಳಿದ್ದರು. ಭಾರತ ಸರ್ಕಾರದ ಏರ್ ಇಂಡಿಯಾ ವಿಮಾನ ಮಸ್ಕಟ್‌ಗೆ ತಲುಪಿದ ಕೂಡಲೇ ಮೂರು ಘಟನೆಗಳು ಅಲ್ಲಿ ಘಟಿಸಿದ್ದವು.

1. ಓಮನ್ ದೇಶದ ಸುಲ್ತಾನ ತನ್ನ ದೇಶಕ್ಕೆ ಆಗಮಿಸುವ ಯಾವ ಗಣ್ಯರನ್ನ ಬರಮಾಡಿಕೊಳ್ಳಲೂ ಆತ ಏರ್‌ಪೋರ್ಟ್‌ಗೆ ಹೋಗುತ್ತಿರಲಿಲ್ಲ. ಆದರೆ ಭಾರತದ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರು ಮಸ್ಕಟ್‌ಗೆ ಬಂದಾಗ ಮಾತ್ರ ಆತ ಅವರನ್ನ ಬರಮಾಡಿಕೊಳ್ಳಲು ಏರ್‌ಪೋರ್ಟ್‌ಗೆ ತೆರಳಿದ್ದ.

2.  ಭಾರತದ ರಾಷ್ಟ್ರಪತಿಗಳ ವಿಮಾನ ಯಾವಾಗ ಲ್ಯಾಂಡ್ ಆಯಿತೋ ಆಗ ಓಮನ್ ಸುಲ್ತಾನ ಏರ್‌ಪೋರ್ಟ್‌ಗೆ ಆಗಮಿಸಿದ್ದಲ್ಲದೆ ವಿಮಾನದ ಮೆಟ್ಟಿಲುಗಳನ್ನ ಹತ್ತಿ ಶಂಕರ್ ದಯಾಳ್ ಶರ್ಮಾರವರನ್ನ ಆತ್ಮೀಯವಾಗಿ ಬರಮಾಡಿಕೊಂಡಿದ್ದ.

3. ವಿಮಾನದಿಂದ ಭಾರತದ ರಾಷ್ಟ್ರಪತಿಗಳನ್ನ ಬರಮಾಡಿಕೊಂಡ ಬಳಿಕ ಶಂಕರ್ ದಯಾಳ್ ಶರ್ಮಾರವರಿಗಾಗಿ ಕಾರು ಹಾಗು ಅದರ ಚಾಲಕ ಕಾಯುತ್ತಿದ್ದ. ಓಮನ್ ಸುಲ್ತಾನ ಆ ಕಾರು ಚಾಲಕನಿಗೆ ಅಲ್ಲಿಂದ ಹೋಗು ಎಂದು ಸನ್ನೆಯ ಮೂಲಕ ತಿಳಿಸಿ ಭಾರತದ ರಾಷ್ಟ್ರಪತಿಗಳನ್ನ ಕಾರಿನಲ್ಲಿ ಕೂರಿಸಿಕೊಂಡು ತಾನೇ ಡ್ರೈವರ್ ಆಗಿ ಕಾರು ಚಲಾಯಿಸಿಕೊಂಡು ಹೊರಟುಹೋದ.

ತನ್ನ ದೇಶಕ್ಕೆ ಎಂಥಾ ಗಣ್ಯಾತಿ ಗಣ್ಯ ವ್ಯಕ್ತಿಗಳು ಬಂದರೂ ಸ್ವಾಗತಿಸೋಕೆ ಹೋಗದ ಓಮನ್ ಸುಲ್ತಾನನ ಈ ದಿಢೀರ್ ಬದಲಾವಣೆ ಕಂಡು ಪತ್ರಕರ್ತರು ಆತನನ್ನ ಪ್ರಶ್ನಿಸಿ “ಸುಲ್ತಾನರೇ ನೀವ್ಯಾಕೆ ಎಲ್ಲ ಪ್ರೋಟೋಕಾಲ್ ‌ಗಳನ್ನ ಉಲ್ಲಂಘಿಸಿ ಅವರನ್ನ ಬರಮಾಡಿಕೊಳ್ಳಲು ಏರ್‌ಪೋರ್ಟ್‌ಗೆ ತೆರಳಿದಿರಿ?” ಎಂದು ಕೇಳಿದಾಗ ಅದಕ್ಕೆ ಸುಲ್ತಾನ ಕೊಟ್ಟ ಉತ್ತರ ಹೀಗಿತ್ತು.

“ಮಿಸ್ಟರ್ ಶರ್ಮಾ ಭಾರತದ ರಾಷ್ಟ್ರಪತಿಗಳು ಅನ್ನೋ ಕಾರಣಕ್ಕಾಗಿ ನಾನು ಅವರನ್ನ ಸ್ವಾಗತಿಸಲು ಏರ್‌ಪೋರ್ಟ್‌ಗೆ ಹೋಗಲಿಲ್ಲ, ನಾನು ಭಾರತದಲ್ಲೇ ನನ್ನ ವಿದ್ಯಾಭ್ಯಾಸ ಮುಗಿಸಿದ್ದೇನೆ, ಅಲ್ಲಿ ನಾನು ಸಾಕಷ್ಟು ವಿಷಯಗಳನ್ನ ಕಲಿತಿದ್ದೇನೆ. ನಾನು ಪುಣೆಯಲ್ಲಿ ಓದಿತ್ತಿದ್ದ ಸಂದರ್ಭದಲ್ಲಿ ಶಂಕರ್ ದಯಾಳ್ ಶರ್ಮಾ ನನ್ನ ಪ್ರೊಫೆಸರ್ ಆಗಿದ್ದರು, ಅದಕ್ಕಾಗಿ ಅವರಿಗೆ ಗೌರವ ಸೂಚಿಸಲು ಅವರನ್ನ ಬರಮಾಡಿಕೊಳ್ಳಲು ನಾನು ಏರ್‌ಪೋರ್ಟ್‌ಗೆ ಹೋಗಿದ್ದು” ಎಂದಿದ್ದರು.

ಇದು ಭಾರತದ ಸಂಸ್ಕೃತಿಗೆ, ಇಲ್ಲಿನ ಶಿಕ್ಷಕರಿಗೆ ವಿದೇಶಗಳಲ್ಲಿರುವ ಗೌರವ..! ಭಾರತವೆಂದರೆ ಇಡೀ ವಿಶ್ವವೇ ನಮಿಸುವುದು ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳು ಅನ್ನೋದು ಅಂದು ಓಮನ್ ಸುಲ್ತಾನನಿಂದ ಜಗತ್ತಿಗೆ ತಿಳಿದಿತ್ತು.
ಕೃಪೆ:ವಾಟ್ಸಾಪ್ ಗ್ರೂಪ್.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059