ದಿನಕ್ಕೊಂದು ಕಥೆ. 461
*🌻ದಿನಕ್ಕೊಂದು ಕಥೆ🌻* ಒಬ್ಬ ಮಹಾರಾಜ ವಿಹಾರಕ್ಕೆ ಹೋದಾಗ ಬೆಟ್ಟದ ಮೇಲೆ ಒಂದು ಸುಂದರವಾದ ಬಂಡೆಗಲ್ಲು ಕಂಡಿತು. ಅದರ ಮೇಲೆ ತನ್ನ ಹೆಸರು ಬರೆಯಿಸಿದರೆ ತಾನು ಶಾಶ್ವತವಾಗಿ ಉಳಿದು ಬಿಡುತ್ತೇನೆಂದುಕೊಂಡ. ರಾಜನು ಶಿಲ್ಪಿಯನ್ನು ಕರೆದುಕೊಂಡು ಮರುದಿನ ಬೆಟ್ಟಕ್ಕೆ ಹೋಗಿ ನೋಡಿದರೆ, ಆ ಬಂಡೆಯ ಮೇಲೆ ಒಂದಿಷ್ಟೂ ಜಾಗವಿಲ್ಲದಂತೆ ಹಿಂದಿನ ರಾಜರು ತಮ್ಮ ಹೆಸರು ಕೆತ್ತಿಸಿದ್ದರು. ಈ ಜಗತ್ತಿನಲ್ಲಿ ಯಾರೂ ಶಾಶ್ವತರಲ್ಲ ಎಂಬ ಅರಿವು ಈಗ ರಾಜನಿಗೆ ಆಗಿತ್ತು!
******************************
ಜಾಗ್ರದಲ್ಲಿರುವಂತೆ ಇಲ್ಲಿಯೂ ಸುಖ-ದುಃಖ, ಮಾನ-ಅಪಮಾನ, ಜಯ-ಅಪಜಯ, ಏರಾಟ-ಹೋರಾಟ ಎಲ್ಲವೂ ಇದೆ. ಆದರೆ ಅದು ಕ್ಷ ಣಿಕವಾಗಿದೆ, ಕಾಲ್ಪನಿಕವಾಗಿದೆ ಅಷ್ಟೆ! ಜಾಗ್ರದಲ್ಲಿ ಪೂರೈಸಲಾರದ ಆಸೆ ಆಕಾಂಕ್ಷೆಗಳು ಇಲ್ಲಿ ಸುಲಭವಾಗಿ ಪೂರೈಸಿಕೊಳ್ಳಬಹುದಷ್ಟೆ! ಭಿಕ್ಷ ಕುನಿಗೊಂದು ಕನಸು ಬಿತ್ತು. ಅವನಿದ್ದ ಊರಿನ ರಾಜನು ತೀರಿಕೊಂಡ. ಆ ರಾಜನಿಗೆ ಮಕ್ಕಳೇ ಇರಲಿಲ್ಲ. ಒಂದು ಆನೆಯ ಸೊಂಡಿಲಿಗೆ ಹಾರಕೊಟ್ಟು ಬಿಟ್ಟರು. ಅದೂ ಯಾರ ಕೊರಳಿಗೆ ಹಾಕುವುದೋ ಅವರೇ ರಾಜರೆಂದು ಸಾರಿದರು. ನೇರವಾಗಿ ಆನೆ ಭಿಕ್ಷಕುನ ಹತ್ತಿರ ಹೋಗಿ ಅವನಿಗೇ ಹಾರ ಹಾಕಿತು. ಅದ್ಧೂರಿಯಿಂದ ಮೆರವಣಿಗೆ ಮಾಡಿ ಭಿಕ್ಷು ಕನನ್ನು ಅರಮನೆಗೆ ಕರೆತಂದರು. ಇನ್ನೇನು ಭಿಕ್ಷುಕ ಸಿಂಹಾಸನ ಏರಲಿದ್ದ. ಅಷ್ಟರಲ್ಲಿ ಸೊಳ್ಳೆ ಕಚ್ಚಿ ಭಿಕ್ಷುಕನು ಎದ್ದು ನೋಡಿದರೆ ಅವನು ಅದೇ ಮುರುಕು ಧರ್ಮಶಾಲೆಯಲ್ಲಿದ್ದ!
ಜಾಗ್ರ, ಸ್ವಪ್ನಗಳನ್ನು ದಾಟಿ ನಿದ್ರೆಗೆ ಬಂದಾಗ ಅಲ್ಲಿ ಬಡವ-ಬಲ್ಲಿದ, ಸ್ತ್ರೀ-ಪುರುಷ, ಸತಿ-ಸುತರು, ಮಾನ-ಅಪಮಾನ ಏನೇನೂ ಇಲ್ಲ. ನಾನೆಂಬ ಅಹಂಭಾವವೇ ಅಲ್ಲಿ ಇಲ್ಲವೆನ್ನುವಷ್ಟು ಸೂಕ್ಷ್ಮವಾಗಿರುತ್ತದೆ. ಅಲ್ಲಿ ಸುಖ-ದುಃಖಗಳನ್ನು ಮೀರಿದ ಒಂದು ಬಗೆಯ ಗಾಢ ಅಂಧಕಾರದ ಶಾಂತಿ-ಪ್ರಶಾಂತಿ! ನಿದ್ರೆ ತಿಳಿದು ಎದ್ದಮೇಲೆ ಅದೇ ಹೋರಾಟ, ಬದುಕು-ಬವಣೆ!
ಕೃಪೆ :ಸಿದ್ದೇಶ್ವರ ಸ್ವಾಮೀಜಿಗಳು. ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment