ದಿನಕ್ಕೊಂದು ಕಥೆ. 464
*🌻ದಿನಕ್ಕೊಂದು ಕಥೆ🌻* ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ವಾಸಿಸುತ್ತಿದ್ದರು ಇವರಿಬ್ಬರು ಮಣ್ಣಿನಿಂದ ಮಡಿಕೆ ಮಾಡುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು
ಒಂದ ದಿನ ತಮ್ಮ ಕೆಲಸ ಮುಗಿಸಿ ಊಟ ಮಾಡುತ್ತಿರುವಾಗ ಹೊರಗಡೆ ಬಾಗಿಲು ಯರೋ ತಟ್ಟಿದಂತಾಯಿತು ತಮ್ಮನ್ನು ಎದ್ಧು ಹೊಗಿನೊಡಲು ಒಬ್ಬ ಬೀಕ್ಷುಕ ನಿಂತಿದ್ದ .ಬೀಕ್ಷುಕ ಎರಡು ದಿನದಿಂದ ಊಟ ಮಾಡಿಲ್ಲಾ ಎಂದಾಗ ತಮ್ಮನ ಹೃದಯ ಕರಗಿ ಒಳಗೆ ಹೋಗಿ ಬಟ್ಟಲಿನ ತುಂಬಾ ಅನ್ನ ತಂದು ಕೊಟ್ಟ ಬೀಕ್ಷುಕ ದಿನವೂ ಇದನ್ನೆ ಮುಂದುವರಿಸಿದ
ಒಂದ ದಿನ ತಮ್ಮ ಊರಲ್ಲಿ ಇರಲ್ಲಿಲ್ಲಾ ಅಣ್ಣ ಮಾತ್ರ ಇದ್ದ ಬೀಕ್ಷುಕ ಬೀಕ್ಷೇ ಕೇಳಲು ಬಂದ ಆಗ ಅಣ್ಣ ಅವನ ಕೈ ಹಿಡಿದು ಒಳಗಡೆ ಕರೆದುಕೊಂಡ ಹೋಗಿ ಮಡಿಕೆ ಮಾಡುವುದನ್ನ ಹೆಳಿಕೊಟ್ಟ ಮುಂದೆ ಎರಡು ದಿನ ಬೀಕ್ಷುಕ ಬರಲೇ ಇಲ್ಲಾ ತಮ್ಮನಿಗೆ ಈ ಘಟನೆ ತಿಳಿಯಲ್ಲಿಲ್ಲಾ
ಈ ಘಟನೆ ನಡೆದ ಐದು ವರುಷದ ನಂತರ ಒಬ್ಬ ಸಾಹುಕಾರ ಬರುವನೆಂದು ಸುದ್ದಿ ಹರಡಿತು ಆಗ ಆ.. ಸಾಹುಕಾರ ಯಾರ ಇರಬಹುದೆಂದು ಅಣ್ಣ ತಮ್ಮಂದಿರು ಹೊರಗೆ ಬಂದು ಕಾಯತೊಡಗಿದರು
ಸ್ವಲ್ಪ ಹೊತ್ತಿಗೆ ಸಾಹುಕಾರನ ಕಾರು ಬಂದು ನಿಂತಿತು ಕಾರಿನಿಂದ ಇಳಿದವನೆ ಕೈಯಲ್ಲಿ ಬೆಳ್ಳಿಯ ತಂಬಿಗೆ ಹಿಡಿದು ಅಣ್ಣನಿಗೆ ಬಂದು ಹೇಳಿದ ಸ್ವಾಮಿ ನಾನು ದಿನವೂ ನಿಮ್ಮ ಮನೆಗೆ ಬೀಕ್ಷೆಗೆ ಬರುತ್ತಿದ್ದೆ ನಿಮ್ಮ ತಮ್ಮ 4 _5 ದಿನ ನನಗೆ ಊಟ ಹಾಕಿದ್ದರು ನೀವು ಊಟದ ಬದಲು ಮಡಿಕೆ ಮಾಡುವ ವಿದ್ಯೆ ಹೇಳಿಕೋಟ್ಟಿರಿ ನೀವು ಕಲಿಸಿದ ವಿದ್ಯೆಯಿಂದ ನಾನು ಕ ಹಂತಕ್ಕೆ ತಲುಪಿರುವೆ ನಿಮ್ಮಿಬ್ಬರಿಗೆ ಕೃತಜ್ಞನಾಗಿದ್ದೆನೆ ಎಂದು ಹೇಳಿ ಬೆಳ್ಳಿ ತಂಬಿಗೆ ನೀಡಿ ಸಾಹುಕಾರ ಊರಿಗೆ ಹಿಂತಿರುಗಿದ
"ಅನ್ನದಾನವು ಶ್ರೇಷ್ಠ ಅನ್ನ ಬಟ್ಟೆ ದಾನ ಮಾಡಿದರೂ ಅದು ಕ್ಷಣಿಕ ಆದರೆ ವಿದ್ಯೆಯನ್ನು ಕೊಟ್ಟರೇ ಆ ವಿದ್ಯೆ ಯಿಂದ ಇಡಿ ಜೀವನ ಊಟ ಬಟ್ಟೆ ಒಳ್ಳೆಯ ಹೆಸರು ಪಡೆಯಬಹುದು. ಕೃಪೆ:ಈರಣ್ಣ ಅಗಸಿಮನೆ. ಸಂಗ್ರಹ :ವೀರೇಶ್ ಅರಸಿಕೆರೆ.
A mesmerising story....truly meaningful
ReplyDelete