ದಿನಕ್ಕೊಂದು ಕಥೆ 906

*🌻ದಿನಕ್ಕೊಂದು ಕಥೆ🌻*                                                 *I.P.S.ಅಂಬಿಕಾ*

*ತಮಿಳುನಾಡಿನ "ದಿಂಡಿಗಲ್"* ಎಂಬ ಒಂದು ಪ್ರದೇಶ. ಅಲ್ಲಿ 14 ವರ್ಷದ ಒಬ್ಬ ಹುಡುಗಿ, ಆ ವಯಸ್ಸಿನಲ್ಲೇ ಅವಳಿಗೆ ಮದುವೆಯಾಗುತ್ತದೆ.ಮುಂದೆ ಅವಳಿಗೆ 18 ವರ್ಷ ತುಂಬುವಾಗ ಅವಳು ಎರಡು ಮಕ್ಕಳ ತಾಯಿಯಾಗಿರುತ್ತಾಳೆ.ಆ ಮಕ್ಕಳ ಹೆಸರು *ಅಳಿಗಣನ್, ಮತ್ತು ನಿಹಾರಿಕಾ* ಎಂದು ಈ ಮಕ್ಕಳ ಹೆತ್ತ ತಾಯಿಯ ಹೆಸರು *ಅಂಬಿಕಾ.*

ಇವಳ ಗಂಡ ಒಬ್ಬ ಸಾಮಾನ್ಯ *ಪೋಲಿಸ್ ಪೇದೆ.* ಒಂದು ದಿನ ಪೋಲಿಸ್ ಇಲಾಖೆಯ ಪರೇಡ್  ನಡೆಯುತ್ತಿರುತ್ತದೆ. ಪ್ರತಿ ದಿನ ಗಂಡ ತಿಂಡಿಗೆ ಬರುವ ಹೊತ್ತಾದರೂ ಆ ದಿನ ಬರುವುದಿಲ್ಲ. ಯಾಕೋ ಗಂಡ ಮನೆಗೆ ಬಂದಿಲ್ಲವೆಂದು *ಅಂಬಿಕಾ* ತನ್ನೆರಡು ಮಕ್ಕಳನ್ನು ಕರೆದುಕೊಂಡು ಗಂಡ ಇರುವ *ಪೋಲಿಸ್ ಠಾಣೆಗೆ* ಬರುತ್ತಾಳೆ.

ಅಲ್ಲಿ *ಪೋಲಿಸ್ ಪರೇಡ್* ನಡೆಯುತ್ತಿರುವಾಗ ತನ್ನ ಗಂಡನೂ ಸೇರಿದಂತೆ ನೂರಾರು ಪೋಲಿಸರು ಪರೇಡ್ ಮಾಡುತ್ತಿರುತ್ತಾರೆ. ಮೇಲೆ ಒಬ್ಬ ಅಧಿಕಾರಿ ನಿಂತಿರುತ್ತಾನೆ. ಎಲ್ಲಾ ಪೋಲಿಸರು ಆ ಅಧಿಕಾರಿಗೆ *ಸೆಲ್ಯೂಟ್* ಮಾಡುವುದನ್ನು ಅಂಬಿಕಾ ಗಮನಿಸುತ್ತಾಳೆ.

ಗಂಡ ಮನೆಗೆ ಬಂದಾಗ ಕೇಳುತ್ತಾಳೆ.
ಯಾರು ಅವರು ? ನೀವೆಲ್ಲಾ ಅವರಿಗ್ಯಾಕೆ ಸೆಲ್ಯೂಟ್ ಮಾಡುತ್ತೀರಿ ಎಂದು ಕೇಳುತ್ತಾಳೆ.ಆಗ ಆ ಪೋಲೀಸ ಪೇದೆ ಅವರು ನಮ್ಮ *ಐ.ಜಿ.* ಅವರೇ ನಮ್ಮ ಇಲಾಖೆಯ ದೊಡ್ಡ ಅಧಿಕಾರಿ. *I.P.S.* ಮಾಡಿದ್ದಾರೆ ಎಂದು ಹೇಳುತ್ತಾನೆ.

ಈ ಮಾತನ್ನು ಕೇಳಿದ ಅಂಬಿಕಾಗೆ ರಾತ್ರಿ ಪೂರ್ತಿ ನಿದ್ದೆ ಬರುವುದಿಲ್ಲ.ಬೆಳಿಗ್ಗೆ ಎದ್ದ ತಕ್ಷಣ ತನ್ನ ಗಂಡನಿಗೆ ಹೇಳುತ್ತಾಳೆ ನಾನು ಕೂಡಾ *I.P.S.* ಆಗಭೇಕು ಎಂದು. ಅವಳ ಆಸೆಗೆ ಗಂಡ ಪೋಲೀಸ್ ಪೇದೆ ಪ್ರೋತ್ಸಾಹಿಸುತ್ತಾನೆ.

ಮುಂದೆ ಅವಳು *ಎಸ್ ಎಸ್ ಎಲ್ ಸಿ, ಪಿ.ಯು.ಸಿ, ಡಿಗ್ರಿ* ಎಲ್ಲವನ್ನು ಎಕ್ಸಟ್ರನಲ್ ಕಟ್ಟಿ ತಮಿಳು ಭಾಷೆಯಲ್ಲಿ ಪಾಸಾಗುತ್ತಾಳೆ. ಮುಂದೆ ಮನೆಯಲ್ಲಿದ್ದರೆ ತನಗೆ ಓದುವುದಾಗುವುದಿಲ್ಲವೆಂದು ಗಂಡನಿಗೆ  ನಾನು *ಚೆನೈ* ಗೆ ಹೋಗಿ ಓದುತ್ತೇನೆ ಎನ್ನುತ್ತಾಳೆ. ಆಗ ಆ ಪೋಲೀಸ್ ಪೇದೆ ಚೆನೈನಲ್ಲಿ ಒಂದು *ಪಿ.ಜಿ.* ವ್ಯವಸ್ಥೆ ಮಾಡಿ ಓದಲು ಕಳಿಸುತ್ತಾನೆ.

1 ವರ್ಷ, 2 ವರ್ಷ, 3 ವರ್ಷ....ಕಳೆದರೂ ಆಕೆ  *I.P.S.* ನಲ್ಲಿ ಪಾಸಾಗುವುದಿಲ್ಲ. ಆಗ ಗಂಡ ಹೇಳುತ್ತಾನೆ. " ಮಕ್ಕಳು ದೊಡ್ಡವರಾಗುತ್ತಿದ್ದಾರೆ ನಾನು ಅವರನ್ನು ನೋಡಿಕೊಂಡು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಮನೆಗೆ ಬಂದು ಬಿಡು ನಿನಗೆ ಕಷ್ಟ ಆಗುತ್ತದೆ" ಎನ್ನುತ್ತಾನೆ.

ಆಗ ಅಂಬಿಕಾ ಇದೊಂದು ವರ್ಷ ನನಗೆ ಅವಕಾಶ ಕೊಡಿ ಈ ಬಾರಿ  *I.P.S* ಪರೀಕ್ಷೆ ಪಾಸ ಆಗದೇ ಹೋದರೆ ಮನೆಗೆ ಬಂದು ಸಂಸಾರ ಮಾಡಿಕೊಂಡು ಇರುತ್ತೇನೆ ಎಂದು ಕೇಳುತ್ತಾಳೆ.

ಆಗ ಆ ಪೇದೆ ಆಯ್ತು ಎಂದು ಮತ್ತೊಂದು ವರ್ಷ ಓದುವುದಕ್ಕೆ ಬಿಡುತ್ತಾನೆ. ಕೊನೆಯ ಪ್ರಯತ್ನವೆಂಬಂತೆ ಕೊನೆಗೆ ತನ್ನ ನಾಲ್ಕನೇ ಪ್ರಯತ್ನದಲ್ಲಿ ಅಂಬಿಕಾ *I.P.S.* ಪಾಸು ಮಾಡುತ್ತಾಳೆ.

*I.P.S.* ಪಾಸು ಮಾಡಿದ ಅಂಬಿಕಾ ಈಗ *ನಾರ್ಥ್ ಮುಂಬೈನಲ್ಲಿ* *S.P.* ಯಾಗಿ ಕೆಲಸ ಮಾಡುತ್ತಿದ್ದಾಳೆ.

ಇಂದು *ಭಾರತದ* ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ *I.P.S.* ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಲ್ಲವೇ..

*ಸಾಧನೆ ಮಾಡುವವರಿಗೆ ಇದೊಂದು ನಿದರ್ಶನ.*

  ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097