ದಿನಕ್ಕೊಂದು ಕಥೆ. 718

    ದಿನಕ್ಕೊಂದು ಕಥೆ                                                                  ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ  ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ.

ಒಂದು: ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ.

ಎರಡು: ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ.

ಇದು ಬಿಟ್ಟು ಮೂರನೆಯ ಕಾರಣವೇ ಇಲ್ಲ.

ಪ್ರಸಂಗ:
ಕೃಷ್ಣ ಪರಮಾತ್ಮನು ದುರ್ಯೋಧನನ ಮನೆಗೆ ಸಂಧಾನಕ್ಕೆ ಹೋದಾಗ ದುರ್ಯೋಧನನು ಪಂಚಭಕ್ಷ್ಯ ಪರಮಾನ್ನವನ್ನು ಅಡುಗೆ ಮಾಡಿಸಿರುತ್ತಾನೆ‌. ಅತಿಥಿಯಾಗಿ ಬಂದಂತಹ ಭಗವಂತನೊಂದಿಗೆ ಭಕ್ತಿಯಿಂದ ನಡೆದುಕೊಳ್ಳದೆ, ತನ್ನ ವೈಭವ, ಐಶ್ವರ್ಯವನ್ನು ತೋರಿಸಿಕೊಳ್ಳಲು  ಅಹಂಕಾರದಿಂದ ಶ್ರೀ ಕೃಷ್ಣನನ್ನು ದುರ್ಯೋಧನನು ಊಟಕ್ಕೆ ಆಹ್ವಾನಿಸುತ್ತಾನೆ. ಆಗ ಪರಮಾತ್ಮನು " ನ ಚ ಸಂಪ್ರೀಯಸೆ ರಾಜನ್ ನಚೈವ ಆಪತ್ಗತಾ: ವಯಂ" (ನೀನು ಪ್ರೀತಿಯಿಂದ ಕರೆಯುತ್ತಿಲ್ಲ, ನಾನು ಗತಿಯಿಲ್ಲದೆ ಬಂದಿಲ್ಲ) ಎಂದು ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸುತ್ತಾನೆ.

ಹಾಗಾದರೆ ಶ್ರೀ ಕೃಷ್ಣನು ಯಾರ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ ಎಂದರೆ:
ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸಿದ ನಂತರ ಶ್ರೀ ಕೃಷ್ಣನು ದಾಸಿಯ ಮಗನೆಂದು ದುರ್ಯೋಧನನು ಹೀಯಾಳಿಸುತ್ತಿದ್ದಂತಹ ಪರಮ ಜ್ಞಾನಿಯಾದ ವಿದುರನ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ.

ಈ ಕಥೆಯ ಸಾರಾಂಶವೆಂದರೆ ಭಗವಂತನಿಗೆ ನಮ್ಮ ಪಂಚಭಕ್ಷ್ಯ ಪರಮಾನ್ನದ ಅವಶ್ಯಕತೆ ಇಲ್ಲ. ನಾವು ನಮ್ಮ ಡಾಂಭಿಕತೆ, ಅಹಂಕಾರವನ್ನು ಬಿಟ್ಟು, ಭಕ್ತಿಯಿಂದ ಪೂಜಿಸಿದರೆ ಭಗವಂತನು ನಮ್ಮನ್ನು ಬಿಗಿದಪ್ಪಿಕೊಂಡು ಜ್ಞಾನಾಮೃತವನ್ನು ಉಣಿಸುತ್ತಾನೆ.          ಕೃಪೆ :ಸಣ್ಣ ಕಥೆ ವಾಟ್ಸ್ ಆಪ್ ಗ್ರೂಪ್.ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059