ದಿನಕ್ಕೊಂದು ಕಥೆ 910

*🌻ದಿನಕ್ಕೊಂದು ಕಥೆ🌻*                                            ಶ್ರೀ ಕೃಷ್ಣ ಪರಮಾತ್ಮ ಕಂಸನನ್ನು ಸಂಹಾರ ಮಾಡಿದ ನಂತರ ಕಂಸನ ಮಾವ ಜರಾಸಂಧ ಕೋಪಗೊಂಡನು ಕೃಷ್ಣನನ್ನು ಕೊಲ್ಲಲು 17 ಬಾರಿ  ಮಥುರಾ ಮೇಲೆ ದಾಳಿ ನಡೆಸುತ್ತಾನೆ. ಅದು ಹೇಗೆಂದರೆ ಭೂಮಂಡಲದಲ್ಲಿರುವ ಎಲ್ಲ ರಾಕ್ಷಸರನ್ನು ಒಟ್ಟು ಗೂಡಿಸಿ ಒಂದು ಮಹಾ ಸೈನ್ಯವನ್ನು ಒಟ್ಟುಗೂಡಿಸಿ ಒಮ್ಮೆಲೇ ಕೃಷ್ಣನ ಸೈನ್ಯದ ಮೇಲೆ ಧಾಳಿ ಮಾಡುತ್ತಾನೆ ಆದ್ರೆ ಅವನು ಎಷ್ಟೋ ಸಲ ಹೀಗೆ ಮಾಡಿದರೂ ಪ್ರತಿ ಸಲ ಸೋಲುಂಡು ಮರಳಿ ಹೋಗುತ್ತಾನೆ.

ವಿಶೇಷತೆ ಏನು ಅಂದ್ರೆ ಪ್ರತಿ ಸಲ ಜರಾಸಂಧ ಧಾಳಿ ಮಾಡಿದಾಗ ಶ್ರೀ ಕೃಷ್ಣನು ಇಡೀ ಸೈನ್ಯವನ್ನು ವಧಿಸುತ್ತಾನೆ ಆದ್ರೆ ಜರಾಸಂಧನನ್ನು ಮಾತ್ರ ಜೀವಂತವಾಗಿ ಬಿಡುತ್ತಾ ಇರುತ್ತಾನೆ

ಇದೆಲ್ಲವನ್ನೂ ನೋಡಿದ ಬಲರಾಮನು ಶ್ರೀ ಕೃಷ್ಣನಿಗೆ ಕೇಳುತ್ತಾನೆ.... ನೀನು ಎಲ್ಲರನ್ನೂ ಕೊಂದು ಜರಸಂಧಾನನ್ನು ಏಕೆ ಕೊಲ್ಲದೆ ಹಾಗೆ ಬಿಡುತ್ತಿಯಾ?
ಆಗ ಶ್ರೀ ಕೃಷ್ಣ ಹೇಳುತ್ತಾನೆ ...." ಭೂಮಿಯ ಮೂಲೆ ಮೂಲೆಗಳಲ್ಲಿರುವ ಎಲ್ಲಾ ದುಷ್ಟರನ್ನು ಹುಡುಕಿ ಅವರನ್ನು ಒಟ್ಟುಗೂಡಿಸಿ ಕೊಲ್ಲಲು ತುಂಬಾ ಸಮಯ ಮತ್ತು ಪ್ರಯಾಸ ಪಡಬೇಕಾಗುತ್ತದೆ ಅಲ್ಲವೇ ? ಆದರೆ ಜರಾಸಂಧ ನನ್ನ ಕೆಲಸವನ್ನು ಹಗುರ ಮಾಡುತ್ತಿದ್ದಾನೆ ,ನಾನು ಪ್ರತಿಸಲ ಅವನನ್ನು ಜೀವಂತವಾಗಿ ಬಿಟ್ಟಾಗಲೂ ಆತ ಭೂಮಂಡಲದ ಎಲ್ಲಾ ರಾಕ್ಷಕರನ್ನು ಒಂದೇ ಕಡೆ (................)  ಸೇರಿಸುತ್ತಾನೆ ಆಗ ನಾನು ಒಂದೇ ಸಲ ಎಲ್ಲರನ್ನೂ ಕೊಲ್ಲಲು ಸುಲಭವಾಗುತ್ತದೆ ಅಲ್ಲವೇ? ಎಲ್ಲಾ ದುಷ್ಟರು ಕೊನೆಗೊಂಡ ನಂತರ ಜರಾಸಂಧನ ಸರದಿ ಇದ್ದೆ ಇದೆ ಅಲ್ಲಿಯವರೆಗೂ ಅವನು ಜೀವಂತವಾಗಿ ಇರಲಿ.

ಸಂಗ್ರಹ:ವೀರೇಶ್ ಅರಸಿಕೆರೆ.

Comments

Post a Comment

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059