ದಿನಕ್ಕೊಂದು ಕಥೆ 921

*🌻ದಿನಕ್ಕೊಂದು ಕಥೆ🌻*
ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಅದ ನಂತರ, ತನ್ನ  ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೊಟೆಲಗೆ  ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿ  ಊಟಕ್ಕೆ ಎದುರು ನೋಡುತ್ತಿದ್ದರು ..

ಅದೆ ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ  ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟ ಊಟ ಗೋಸ್ಕರ ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾ ತನ್ನ ಸುರಕ್ಷೆಯ ಸೈನಿಕರಿಗೆ ಹೇಳಿದರು. ಆ ವ್ಯಕ್ತಿಯನ್ನು ಕೂಡ ತನ್ನ ಟೇಬಲ್ ಮೇಲೆ ಬಂದು ಕುಳಿತು ಕೊಳ್ಳಲಿ ಎಂದು.

ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾ ಅವರ ಟೇಬಲ್ ಮೇಲೆ ಬಂದು ಕುಳಿತುಕೊಂಡನು ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯ ಕೂಡ ಊಟ ಮಾಡಲು ಶುರು ಮಾಡಿದನು ಅದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿ ಆ ವ್ಯಕ್ತಿ ತಲೆ ಬಗ್ಗಿಸಕೊಂಡು ಆ ಹೋಟೆಲ್ ನಿಂದ ಹೊರಗಡೆ ಹೋದನು.

ಆ ವ್ಯಕ್ತಿ ಹೊರಗಡೆ ಹೋದ ನಂತರ ಮಂಡೇಲಾ ಅವರ ಸುರಕ್ಷೆಯ ಅಧಿಕಾರಿ ಹೇಳಿದನು. ಸರ್ ಅವರಿಗೆ ಜ್ವರ ಬಂದಿರಬಹುದು  ಊಟ ಮಾಡುವಾಗ ಕೈಗಳು ನಡುಗುತ್ತಿದ್ದವು.

ನೆಲ್ಸನ್ ಮಂಡೇಲಾ ನಸು ನಗುತ್ತಾ ಹೇಳಿದರು. ಆ ವ್ಯಕ್ತಿ ರೋಗ ಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದನೋ ಆ ಜೈಲಿನ ಜೈಲರ್ ಆ ವ್ಯಕ್ತಿ ಅಗಿದ್ದನು. ನನಗೆ ಬಹಳ ಹಿಂಸೆ ಕೊಟ್ಟಿದ್ದನು ಎಟು ತಿಂದು , ತಿಂದು ಸುಸ್ತಾಗಿ ನೀರು ಕೇಳಿದಾಗ, ಆ ವ್ಯಕ್ತಿ ನೀರು ಬೇಕು ಕುಡಿ ಎಂದು ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು.

ಈಗ ನಾನು ರಾಷ್ಟ್ರಪತಿ ಅಗಿದ್ದೇನೆ ...

ಆ ವ್ಯಕ್ತಿಗೆ ಮನವರಿಕೆ ಅಗಿದೆ
ತಾನು ಮಾಡಿದ ಕೆಲಸಕ್ಕೆ ಈಗ ತನಗೆ ಭಯಂಕರ ಶಿಕ್ಷೆ ಆಗಬಹುದು ಎಂದು, ಅದರೆ ಅದು ನನ್ನ ಚರಿತ್ರೆ ಅಲ್ಲ. ನನಗೆ ಅನಿಸುತ್ತದೆ ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ.
ಕೃಪೆ:ವಾಟ್ಸಪ್ ಗ್ರೂಪ್
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097