ದಿನಕ್ಕೊಂದು ಕಥೆ. 96

🌻🌻 *ದಿನಕ್ಕೊಂದು ಕಥೆ*🌻🌻                 ಅಮೇರಿಕದೋಳೊಬ್ಬಳು ಪ್ರೊಪೋಸ್ ಮಾಡಿದಾಗ ಸ್ವಾಮಿ ವಿವೇಕಾನಂದ ನಡ್ಕೊಂಡ ರೀತಿ .

ಒಂದ್ಸಲಿ ಸ್ವಾಮಿ ವಿವೇಕಾನಂದ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಕ್ಕೆ ಅಮೇರಿಕಕ್ಕೆ ಹೋಗಿದ್ರಂತೆ. ಅವರ ಬುದ್ಧಿವಂತಿಕೆ ನೋಡಿ ನಿಬ್ಬೆರಗಾದ ಅಮೇರಿಕನ್ ಹೆಂಗಸೊಬ್ಬಳಿಗೆ ಒಂದು ವಿಚಿತ್ರವಾದ ಆಸೆ ಶುರುವಾಯಿತಂತೆ.

ಹೋಗಿ ಕೇಳೇ ಬಿಟ್ಳಂತೆ, ‘ನನ್ನ ಮದುವೆ ಆಗ್ತೀರಾ?’ ಅಂತ.

ಆಗ ವಿವೇಕಾನಂದರು ‘ಈ ಯೋಚನೆ ಯಾಕೆ ಬಂತು?’ ಅಂದ್ರಂತೆ.

ಅದಕ್ಕೆ ಆಕೆ, ‘ನಿಮ್ಮ ಬುದ್ಧಿವಂತಿಕೆ ನೋಡಿ ನಾನು ಮೂಕವಿಸ್ಮಿತಳಾಗಿಬಿಟ್ಟಿದೀನಿ. ನನಗೆ ನಿಮ್ಮ ಥರಾನೇ ಒಂದು ಮಗು ಬೇಕು, ಕೊಡ್ತೀರಾ? ನನ್ನ ಮದುವೆ ಆಗ್ತೀರಾ?’ ಅಂದಳಂತೆ.

ಆಗ ವಿವೇಕಾನಂದರು ಥಟ್ಟಂತ ಕೊಟ್ಟ ಉತ್ತರ ಹೀಗಿತ್ತಂತೆ:

‘ನಿಮ್ಮ ಆಸೆ ನನಗೆ ಅರ್ಥ ಆಯಿತು. ಆದರೆ ಅಂಥ ಒಂದು ಮಗೂನ ಹೆರೋದು... ಅದು ಬುದ್ಧಿವಂತವಾಗಿದೆಯೋ ಇಲ್ಲವೋ ಅಂತ ಅರ್ಥ ಮಾಡ್ಕೊಳೋದು... ಇದೆಲ್ಲ ಬಹಳ ದೊಡ್ಡ ಪ್ರಕ್ರಿಯೆ... ತುಂಬಾ ಸಮಯ ತೊಗೊಳೋ ಕೆಲಸ... ಕೊನೆಗೆ ಬೇಕಾದ ಫಲ ಸಿಗದೇನೂ ಇರಬಹುದು. ಆದ್ದರಿಂದ ಅದಕ್ಕಿಂತ ಒಳ್ಳೇ ಆಯ್ಕೆ ಕೊಡ್ತೀನಿ, ಕೇಳಿ: ನಿಮಗೆ ನನ್ನ ಥರ ಇರೋ ಬುದ್ಧಿವಂತ ಮಗು ಬೇಕು ತಾನೇ? ನಾನೇ ಇದೀನಲ್ಲ, ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿಕೊಂಡು ಬಿಡಿ... ನನ್ನ ತಾಯಿಗೆ ಸಮಾನ ನೀವು... ಇದರಿಂದ ನಿಮ್ಮ ಆಸೆ ಈಡೇರಿ ನೆಮ್ಮದಿ ಸಿಗುತ್ತದೆ...’

ಉತ್ತರ ಕೇಳಿ ಆಕೆ ದಂಗಂತೆ!

ಈ ಮೇಲಿನ ‘ಘಟನೆ’ ನಿಜವಾದ ಘಟನೆನೋ ಅಲ್ಲವೋ ಅನ್ನೋದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಇದು ಹಲವಾರು ಪುಸ್ತಕಗಳಲ್ಲಿ ಮುದ್ರಣ ಆಗಿದೆ.

ನಿಜ ಅಲ್ಲದೆ ಹೋದರೂ ಘಟನೆಯಲ್ಲಿ ಬರೋ ವ್ಯಕ್ತಿಗೆ ವಿವೇಕಾನಂದರ ಅದ್ಭುತವಾದ ವ್ಯಕ್ತಿತ್ವವಂತೂ ಇದ್ದಂತಿದೆ.

ಯಾಕೆ ಅಂತೀರಾ? 30-09-1893ನೇ ದಿವಸ ಬಾಸ್ಟನ್ ಈವನಿಂಗ್ ಟ್ರಾನ್ಸ್ಕ್ರಿಪ್ಟ್ ಅನೋ ಪೇಪರಲ್ಲಿ ತಮ್ಮ ಮದುವೇ ಪ್ಲಾನ್ ಬಗ್ಗೆ ಕೇಳಿದಾಗ ಅವರು ಕೊಟ್ಟ ಈ ಉತ್ತರ ಅಚ್ಚಾಗಿದೆ:

‘ಪ್ರತಿಯೊಬ್ಬ ಹೆಂಗಸಿನಲ್ಲೂ ನನಗೆ ಆ ದಿವ್ಯ ತಾಯಿ ಕಾಣುವಾಗ ನಾನೇಕೆ ಮದುವೆ ಆಗಲಿ? ನಾನು ಈ ತ್ಯಾಗಗಳನ್ನೆಲ್ಲ ಯಾಕೆ ಮಾಡುತ್ತಿದ್ದೇನೆ? ಭವಬಂಧನದಿಂದ ಪಾರಾಗಿ, ಎಲ್ಲಾ ಸಂಗಗಳಿಂದಲೂ ಮುಕ್ತನಾಗಿ, ಪುನರ್ಜನ್ಮ ಬಾರದಂತೆ ಮುಕ್ತಿ ಹೊಂದುವುದಕ್ಕೆ. ಸತ್ತ ಕೂಡಲೆ ದೇವರಲ್ಲಿ ಒಂದಾಗುವ ಆಸೆ ನನ್ನದು. ಬುದ್ಧನಾಗುವ ಆಸೆ ನನ್ನದು.’ (ಮೂಲ)

ಇಂದ್ರಿಯನಿಗ್ರಹದಲ್ಲಿ ಇಷ್ಟು ಪಳಗಿರುವ ವ್ಯಕ್ತೀನೇ, ಇಂತಹ ಅದ್ಭುತವಾದ ಮುಮುಕ್ಷುವೊಬ್ಬನೇ ಆ ಅಮೇರಿಕದವಳಿಗೆ ಅಂಥ ಉತ್ತರ ಕೊಡಕ್ಕೆ ಸಾಧ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.
ಕೃಪೆ : ಕಿಶೋರ್.                                    ಸಂಗ್ರಹ : ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097