ದಿನಕ್ಕೊಂದು ಕಥೆ. 91
🌻🌻 *ದಿನಕ್ಕೊಂದು ಕಥೆ*🌻🌻
💐 *ಸಾಪೇಕ್ಷ_ಜೀವನ* 💐
ಒಂದು ಗುಡ್ಡದ ಎದುರು ಒಂದು ಪುಷ್ಟವಾದ ಎಮ್ಮೆ ನಿಂತಿತ್ತು. ಒಂದು ದಿನ ಆ ಎಮ್ಮೆಯ ಮಾಲೀಕ ಗುಡ್ಡವನ್ನೆರಿದ. ವಿಶಾಲ ಆಗಸ, ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾದ. ಅಕಸ್ಮಾತ್ತಾಗಿ ಆತನ ದೃಷ್ಟಿ ಕುಟೀರದ ಎದುರು ಕಟ್ಟಿದ್ದ ಎಮ್ಮೆಯತ್ತ ಹರಿಯಿತು. ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಯಲ್ಲ” ಎಂದು ಉದ್ಗರಿಸಿದ.
ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಕೆಳಗಿದ್ದ ಎಮ್ಮೆಯು ತನ್ನ ಮಾಲೀಕನನ್ನು ನೋಡಿ “ನಮ್ಮ ಮಾಲೀಕ ಎಷ್ಟು ಕುಳ್ಳನಾಗಿ ಕಾಣುತ್ತಾನಲ್ಲ!” ಎಂದಿತು. ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು. ಎಮ್ಮೆಯ ದೃಷ್ಟಿಯಲ್ಲಿ ಮಾಲೀಕ ಚಿಕ್ಕವ! ನಿಜವಾಗಿ ಯಾರು ಚಿಕ್ಕವರು? ಯಾರೂ ಅಲ್ಲ; ಅದು ಒಬ್ಬರನ್ನೊಬ್ಬರು ಹೋಲಿಸಿ ಕೊಂಡಾಗ ಬರುವ ಭಾವನೆ ಅಷ್ಟೆ. ಇದು ಸಾಪೆಕ್ಷಿಕತೆ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಸಂಗ್ರಹ: ವೀರೇಶ್ ಅರಸಿಕೆರೆ
Comments
Post a Comment