ದಿನಕ್ಕೊಂದು ಕಥೆ. 590

ನಮ್ಮ ರಾಷ್ಟ್ರ ಭಕ್ತಿ .                                            ನಿನ್ನೆ ರಿಪಬ್ಲಿಕ್ ಟಿವಿಯಲ್ಲಿ ಒಂದು ಡಿಬೇಟ್ ನಡೀತಾಯಿತ್ತು ಕುತೂಹಲ ತಡಿಯಲಾರದೆ ಒಂದ್ ಅರ್ಧ ಗಂಟೆ ನೋಡಿದೆ. ಆ ಡಿಬೇಟಲ್ಲಿ ಒಂದ್ 6 ಜನ ಭಾಗವಹಿಸಿದ್ದರು ಅದರಲ್ಲಿ 3 ಜನ ಪರ ಇನ್ನುಳಿದ 3 ಜನ ವಿರೋಧ .

ವಿಷಯ ಏನಂದ್ರೆ ಚಿತ್ರಮಂದಿರದಲ್ಲಿ ಪ್ರಸಾರವಾಗೋ ರಾಷ್ಟ್ರಗೀತೆಗೆ ಎದ್ದು ಗೌರವ ಸೂಚಿಸೋದು ಕಡ್ಡಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬಗ್ಗೆ.

ಸಿನೆಮಾ ಮಂದಿರಗಳಲ್ಲಿ  ನಮ್ಮ ರಾಷ್ಟ್ರಗೀತೆ ಪ್ರಸಾರ ಮಾಡಬೇಕೋ ಬೇಡವೋ ಒಂದು ವೇಳೆ ಪ್ರಸಾರ ಮಾಡಿದ್ರು ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಕ್ಕೂ ಪರ ವಿರೋಧ ಚರ್ಚೆಗಳು ನಡೀತಾಯಿದ್ದವೂ.

ಇಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಬೇಡಾ ಅನ್ನೋರ ವಾದ ಏನಂದ್ರೆ ಬಾಹ್ಯ ಒತ್ತಡದಿಂದ ನಮ್ಮ ರಾಷ್ಟ್ರಭಕ್ತಿ ತೋರಿಸುವ ಅಗತ್ಯವಿಲ್ಲ . ನಾವೂ ಬೇಕಂದ್ರೆ ನಿಲ್ತಿವಿ ಇಲ್ಲಾ ಅಂದ್ರೆ ಇಲ್ಲಾ ಅನ್ನೋದು ಅವರ ವಾದವಾಗಿತ್ತು.

ಅವರನ್ನ ನೋಡಿ ನನಗೆ ಒಂದು ಕಥೆ ಜ್ಞಾಪಕಕ್ಕೆ ಬರ್ತಾಯಿದೆ ಇದನ್ನ ಮುಂಚೆನೆ ಒಂದ್ ಸರಿ ಪೋಸ್ಟ್ ಮಾಡಿದ್ದೆ.

ಜಪಾನ್ ದೇಶದ ಒಂದೂ ಚಿಕ್ಕ ಪಟ್ಟಣದಲ್ಲಿ ಒಬ್ಬ  ಶ್ರೀಮಂತನಿದ್ದ. ಅವನೂ ಒಂದು ದೊಡ್ಡ ಮನೆಯಲ್ಲಿ ಅವನೊಬ್ಬನೇ ವಾಸವಾಗಿದ್ದ . ಅವನಿಗೆ ದುಡ್ಡಿನ ಬಗ್ಗೆ ತುಂಬಾ ವ್ಯಾಮೋಹವಿತ್ತು.

ಒಂದೂ ರಾತ್ರಿ ಅವನು ಮಲಗಿದ್ದ ಬೆಳಗ್ಗಿನ ಜಾವದಲ್ಲಿ ಅವನ ಮನೆಗೆ ಕಳ್ಳ ನುಗ್ಗಿ ಮನೆಯಲ್ಲಿ ಇರೋ ಎಲ್ಲ ಬೆಲೆ ಬಾಳುವ ವಸ್ತುಗಳನ್ನ ದೋಚಿ ಅವನ್ನೆಲ್ಲ ಒಂದು  ಮೂಟೆಯಲ್ಲಿ ಕಟ್ಟಿದ್ದ.

ಅಷ್ಟರಲ್ಲಿ ಬೆಳಿಗ್ಗೆ 7 ಗಂಟೆಯಾಗಿತ್ತು ಕಳ್ಳ ಮೂಟೆ ತೊಗೊಂಡು ಇನ್ನೇನು ಕಿಟಕಿಯಿಂದ ಜಿಗಿಬೇಕು ಅನ್ನುವಷ್ಟರಲ್ಲಿ ಪಕ್ಕದ ಸ್ಕೂಲಿನ ಗಂಟೆ ಮೊಳಗಿತು.

ಗಂಟೆ ಶಬ್ದಕ್ಕೆ  ಆ ಶ್ರೀಮಂತನಿಗೆ ಎಚ್ಚರವಾಯಿತು ಎದ್ದು ನೋಡಿದ ಎದುರುಗಡೆ ಕಳ್ಳ ಅಲ್ಲಾಡದೆ ನಿಂತಿದ್ದ ಅಷ್ಟರಲ್ಲಿ ಶ್ರೀಮಂತ ಪೋಲೀಸರಿಗೆ ವಿಷಯ ತಿಳಿಸಿದ. ಪೋಲಿಸರು ಬಂದು ಕಳ್ಳನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದರು .

ನ್ಯಾಯಾಧೀಶರು ಶ್ರೀಮಂತನ ವಿಚಾರಣೆಯ ನಂತರ ಕಳ್ಳನಿಗೆ ಕೇಳಿದರು
ಅಲ್ಲಪ್ಪ ಕಳ್ಳತನ ಏನೋ ಮಾಡಿದಿಯಾ ಆದರೇ ಪೋಲಿಸರು ಬರೊವರ್ಗು ನೀನೂ ಅಲ್ಲೇ ನಿಂತಿದಿಯಾ ಯಾಕೆ?

ಕಳ್ಳ: ಸಾರ್ ನಾನು ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ ಸ್ಕೂಲಿನ ಗಂಟೆ ಸಪ್ಪಳ ಕೇಳಿಸ್ತಾ ಇತ್ತು  ನಂತರ ಮಕ್ಕಳು ನಮ್ಮ ರಾಷ್ಟ್ರಗೀತೆ ಹಾಡಕ್ಕೆ ಶುರುಮಾಡಿದರು. ನಾನೂ ಅಲ್ಲೇ ನಿಂತು ರಾಷ್ಟ್ರಗೀತೆ ಮುಗಿಯೋವರೆಗೂ ನಿಂತಿದ್ದೆ .
ಆವಾಗ ನನಗೇನೂ ಗೊತ್ತಾಗಲಿಲ್ಲ ನಂತರ ಎದುರುಗಡೆ ನೋಡಿದ್ರೆ ಪೋಲಿಸರು ನಿಂತಿದ್ರು . ಅವರು ನನ್ನನ್ನ ಬಂಧಿಸಿ ಜೈಲಿಗೆ ಕರೆದುಕೊಂಡು ಬಂದರು.

ವಿಚಾರಣೆಯ ಬಳಿಕ ನ್ಯಾಯಾಧೀಶರು ತೀರ್ಪನ್ನು ಕೊಡ್ತಾರೆ
ಕಳ್ಳನಿಗೆ ಬಿಡುಗಡೆ ಮತ್ತೂ ಶ್ರೀಮಂತನಿಗೆ 6 ತಿಂಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದರು.
ಕಾರಣ ಆ ಕಳ್ಳನಿಗೆ ಇರುವಷ್ಟು ದೇಶಭಕ್ತಿ ಆ ಶ್ರೀಮಂತನಿಗೆ ಇರಲಿಲ್ಲ.

ಈ ಕಥೆಯಿಂದ ನಮಗೆ ತಿಳಿದು ಬರೋದು ಏನಂದ್ರೆ ಬೇರೆ ದೇಶದಲ್ಲಿ ಕಳ್ಳತನ ಮಾಡೋದ್ ಗಿಂತ ರಾಷ್ಟ್ರಗೀತೆಗೆ ಅಪಮಾನ ಮಾಡೋದು ದೊಡ್ಡ ಅಪರಾಧ.
ಹೌದು ನನಗೂ ಅನಿಸ್ತಾಯಿದೆ ಈ ತರ ಕಾನೂನು ನಮ್ ದೇಶದಲ್ಲಿ ಏಕೆ ತರಬಾರದು ಅಂತ.

ದೇಶಕ್ಕಾಗಿ ನಮ್ಮ ವೀರ ಯೋಧರು 11 ಗಂಟೆಗಳಿಗೂ ಹೆಚ್ಚಿನ ಕಾಲ ಮಂಜುಗಡ್ಡೆಯ(ಸಿಯಾಚಿನ್ ಪ್ರದೇಶದಲ್ಲಿ) ಮೇಲೆ ನಿಂತ್ಕೊಂಡಿರ್ತಾರೆ ಆದ್ರೆ ಇವರು 52 ಸೆಕೆಂಡ್ ರಾಷ್ಟ್ರಗೀತೆಗೆ ಗೌರವ ತೋರಿಸಲು ನಿಂತ್ಕೊಳಕ್ಕೆ ಅಳ್ತಾರೆ.
ಆ ಸೈನಿಕರು ದೇಶಕ್ಕಾಗಿ ಪ್ರಾಣ ಕೊಡಕ್ಕೆ ರಡಿಯಾಗಿರ್ತಾರೆ ಅವರನ್ನ ನೋಡಿಯೂ ಇವರಲ್ಲಿ ಸ್ವಲ್ಪವೂ ದೇಶಭಕ್ತಿ ಚಿಗುರೊಡೆಯಲು ಸಾಧ್ಯವಿಲ್ಲವೇ.

ಅನೇಕ ದೇಶಭಕ್ತರ ಬಲಿದಾನದಿಂದ ನಮ್ಮ ದೇಶ ಸ್ವಾತಂತ್ರ್ಯ ಗೊಂಡಿದೆ ಅವರನ್ನ ನೆನಪಿಸಿಕೊಳ್ಳಕ್ಕೆ ವಾರಕ್ಕೆ ಒಂದು ನಿಮಿಷ ಎದ್ದು ನಿಲ್ಲುವಷ್ಟು ತಾಳ್ಮೆ ಅವರಿಗಿಲ್ಲ  ಅಂದ್ರೆ ಈ ದೇಶದಲ್ಲಿ ಇರಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ 👍.

ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಗೀತೆ , ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಇದು ಪ್ರತಿಯೊಬ್ಬನ ಭಾರತೀಯನ ಕರ್ತವ್ಯ .

#ಜೈಹಿಂದ್
#ವಂದೇ #ಮಾತರಂ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097