ದಿನಕ್ಕೊಂದು ಕಥೆ. 230

🌻🌻 *ದಿನಕ್ಕೊಂದು ಕಥೆ*🌻🌻                                             *ಇದು ಸಿನಿಮಾ ಕತೆಯಲ್ಲ, ನನ್ನ ಜೀವನದಲ್ಲಿ ನಡೆದ ಸಂಗತಿ. ಇದು ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ.*

*ಅದೊಂದು ದಿನ ದೀರ್ಘ ಹೊತ್ತಿನ ಮೀಟಿಂಗ್ ಮುಗಿಸಿ ಊಟ ಮಾಡಲೆಂದು ಹೋಟೆಲ್‌ವೊಂದಕ್ಕೆ ಹೋಗಿ ಊಟ ಆರ್ಡರ್ ಮಾಡಿದೆ. ಹಾಗೆ ಆರ್ಡರ್ ಕೊಟ್ಟ ಊಟವನ್ನು ಕಾದು ಕುಳಿತಿರುವಾಗ ಅಲೆಮಾರಿಯಾದ ಪುಟ್ಟ ಬಾಲಕನೊಬ್ಬ ಹೋಟೆಲ್ ನ ತಿಂಡಿಗಳ ಮೇಲೆ ಕಣ್ಣಿಟ್ಟು ನಿಂತಿರುವುದು ಕಾಣಿಸಿತು. ಕೂಡಲೇ ಆ ಹುಡುಗನಿಗೆ ಒಳಗೆ ಬರುವಂತೆ ಸನ್ನೆ ಮಾಡಿ ಕರೆದೆ. ನನ್ನನ್ನು ಗಮನಿಸಿದ ಆ ಬಾಲಕ, ತನ್ನ ಪುಟ್ಟ ಸಹೋದರಿಯನ್ನೂ ಕರೆದು ಕೊಂಡು ಒಳಗೆ ಬಂದ. ನಿಮಗೇನು ಬೇಕು ಎಂದು ಕೇಳಿದಾಗ ಇದೇ ಬೇಕು ಎಂದು ಆ ಬಾಲಕ ನನ್ನ ಪ್ಲೇಟ್‌ನತ್ತ ಕೈ ತೋರಿಸಿದ. ಇನ್ನೊಂದು ಪ್ಲೇಟ್ ಊಟಕ್ಕೆ ಮತ್ತೆ ಆರ್ಡರ್ ಕೊಟ್ಟೆ. ಆ ಊಟವನ್ನು ಬಡಿಸುವಾಗ ಬಾಲಕ ಕಣ್ಣು ಖುಷಿಯಿಂದ ಅರಳುತ್ತಿತ್ತು. ಜತೆಗೆ ಒಂದಷ್ಟು ಅಳುಕು!.*

*ಅವರಿಬ್ಬರಿಗೆ ಸಿಕ್ಕಾಪಟ್ಟೆ ಹಸಿವಾಗಿದ್ದಿರಬೇಕು. ಊಟ ನೋಡಿದೊಡನೆ ಗಬಗಬನೆ ತಿನ್ನಲು ಆತ ಮುಂದಾದರೂ ಪುಟ್ಟ ಸಹೋದರಿ ಆತನನ್ನು ತಡೆದಳು. ಊಟಕ್ಕೆ ಮುನ್ನ ಕೈ ತೊಳೆದಿಲ್ಲ ಎಂಬುದನ್ನು ಆಕೆ ನೆನಪಿಸಿದ್ದಳು. ಕೈ ತೊಳೆದು ಬಂದ ಅವರಿಬ್ಬರು ಪರಸ್ಪರ ಮುಖ ನೋಡಿಕೊಂಡು ಖುಷಿಯಾಗಿ ಉಣ್ಣುತ್ತಿದ್ದರು. ಊಟ ಮುಗಿಸಿ ಕೈ ತೊಳೆದು ಅವರು ಖುಷಿ ಖುಷಿಯಾಗಿಯೇ ಹೊರಗೆ ನಡೆದದ್ದನ್ನು ನಾನು ನೋಡುತ್ತಾ ಕುಳಿತೆ. ಅವರನ್ನು ನೋಡುತ್ತಾ ನಾನು ನನ್ನ ಊಟವನ್ನೇ ಮರೆತಿದ್ದೆ. ನನಗೆ ಆಮೇಲೆ ಊಟ ಮಾಡಬೇಕೆಂದೂ ಅನಿಸಿರಲೂ ಇಲ್ಲ.*

*ಬಿಲ್ ಕೊಡಿ ಎಂದು ಕೇಳಿದೆ. ಹೋಟೆಲ್‌ನ ಮಾಣಿ ಬಿಲ್ ಕೈಗಿತ್ತಾಗ ನನಗೆ ಅಚ್ಚರಿ!*

*ಊಟದ ಬಿಲ್ ಬದಲು ಅದರಲ್ಲಿ ಹೀಗೆ ಬರೆಯಲಾಗಿತ್ತು*

*ಮಾನವೀಯತೆಗೆ ಬಿಲ್ ನೀಡಬಲ್ಲ ಯಂತ್ರ ಇಲ್ಲಿಲ್ಲ, ನಿಮಗೆ ಒಳ್ಳೆಯದಾಗಲಿ...*
ಕೃಪೆ :ಕನ್ನಡ ಪ್ರಭ ದಿನ ಪತ್ರಿಕೆ.                       ಸಂಗ್ರಹ: ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059