ದಿನಕ್ಕೊಂದು ಕಥೆ 925
*🌻ದಿನಕ್ಕೊಂದು ಕಥೆ🌻*
ರವೀಂದ್ರನಾಥ್ ಟ್ಯಾಗೋರರು ಮರಣಶಯ್ಯೆಯಲ್ಲಿದ್ದರು.ಅವರ ಆತ್ಮೀಯ ಬಳಗ ಅಲ್ಲಿ ನೆರೆದಿತ್ತು.ಟ್ಯಾಗೋರರ ಕಂಗಳಲ್ಲಿ ಧಾರಾಕಾರವಾಗಿ ಕಣ್ಣೀರು ಇಳಿಯುತ್ತಿದ್ದವು..
ನೆರೆದ ಆತ್ಮೀಯರಲ್ಲೊಬ್ಬರು ಟ್ಯಾಗೋರರ ಕಂಗಳಲ್ಲಿ ಸುರಿಯುತ್ತಿದ್ದ ಕಣ್ಣೀರನ್ನು ನೋಡಿ ವಿಚಲಿತರಾಗುತ್ತಾರೆ.
ಅವರು ಟ್ಯಾಗೋರರನ್ನು ಕುರಿತು ಹೀಗೆ ಹೇಳುತ್ತಾರೆ
"lನೀವು ಪ್ರಬುದ್ಧರು,ಸಾರಸ್ವತ ಲೋಕದ ಅಮೂಲ್ಯ ಆಸ್ತಿ ಸಾವಿನ ಬಗ್ಗೆ ಏನೆಲ್ಲಾ ಬರೆದಿದ್ದೀರಿ.ಮಹಾನ್ ಸಾಧನೆಗೈದಿದ್ದೀರಿ ನೀವು ಸಾವಿಗಂಜುವುದೇ? ಟ್ಯಾಗೋರ್"ಎನ್ನುತ್ತಾರೆ
ಆಗ ಟ್ಯಾಗೋರ್ ರವರು ಉತ್ತರಿಸುತ್ತಾರೆ
"ಸ್ನೇಹಿತರೇ, ನಾನು ಸಾವಿಗೆ ಅಂಜಲಾರೆ.ಸಾವು ನನ್ನ ಪರಮ ಮಿತ್ರ ಎಂದೇ ಭಾವಿಸಿದ್ದೇನೆ", ಎಂದರು
" ಮತ್ತೇಕೆ ಕಣ್ಣೀರು?"
"ಇತ್ತೀಚೆಗೆ ಹೊಸ ಹೊಸ ಆಲೋಚನೆಗಳು ,ಚಿಂತನೆಗಳು ನನ್ನಲ್ಲಿ ಮೂಡತೊಡಗಿದ್ದವು.ಅವುಗಳನ್ನು ದಾಖಲಿಸಬೇಕೆಂಬ ಮಹದಾಸೆ ನನಗಿದೆ.ನನಗೆ ಗೊತ್ತಿದೆ ನಾನು ಬದುಕಲಾರೆ ಎಂದು ನನಗೆ ಮೂಡಿದ ಹೊಸ ಹೊಸ ಆಲೋಚನೆಗಳನ್ನು ಚಿಂತನೆಗಳನ್ನು ದಾಖಲಿಸದೇ ಹೋಗುತ್ತಿದ್ದೇನಲ್ಲ ಎಂಬ ನೋವು ನನಗಿದೆ.ಅದಕ್ಕಾಗಿ ದುಃಖಿತನಾಗಿದ್ದೇನೆ", ಎಂದು ಉತ್ತರಿಸುತ್ತಾರೆ ಟ್ಯಾಗೋರ್ ರವರು..
ಸಾವಿನ ಸಮಯದಲ್ಲೂ ಕವಿಯ ಕೊರಗು ಎಂತಹದ್ದು?ನೋಡಿ..ಜನಸಾಮಾನ್ಯರು ಊಹಿಸಲಸಾಧ್ಯ.ಮಹಾನ್ ಕವಿಯೇ ನಿಮ್ಮನ್ನು ಪಡೆದ ಭಾರತದ ಸಾರಸ್ವತ ಲೋಕ ಧನ್ಯ ಧನ್ಯ ಧನ್ಯ..
#ಮಹಿಮ
ಸಂಗ್ರಹ:ವೀರೇಶ್ ಅರಸಿಕೆರೆ
Comments
Post a Comment