ದಿನಕ್ಕೊಂದು ಕಥೆ 971
*🌻ದಿನಕ್ಕೊಂದು ಕಥೆ🌻*
*ನಿಮ್ಮನ್ನು ನೀವು ಸಾಬೀತು ಮಾಡಬೇಕಿರುವುದು ಎಲ್ಲಿ ಗೊತ್ತೇ?*
ಒಂದು ಸ್ಪರ್ದೆ ಏರ್ಪಾಟಾಗಿತ್ತು ," ಪ್ರತಿಯೊಬ್ಬರೂ ನೀವು ಸಾಕಿರುವ ಪ್ರಾಣಿಯನ್ನು ಕರೆತನ್ನಿ ಯಾವುದು ವೇಗವಾಗಿ ಓಡುತ್ತದೆಯೋ ಅದಕ್ಕೆ ಪ್ರಶಸ್ತಿ ಕೊಡುತ್ತೇವೆ" ಎಂದರು.
ಊರವರೆಲ್ಲರೂ ತಮ್ಮತಮ್ಮ ಮನೆಯಲ್ಲಿದ್ದ ನಾಯಿಗಳನ್ನು ಹಿಡಿದು ತಂದು,ಈಗ ವೇಗವಾಗಿ ಓಡಿ ಸ್ಪರ್ದೆ ಗೆಲ್ಲಬೇಕೆಂದು ಅವರವರ ನಾಯಿಗೆ ಹೇಳಿಕೊಟ್ಟರು.
ಅದರಲ್ಲೊಬ್ಬ ಸಾಕಿದ ಚಿರತೆಯನ್ನೂ ಕೂಡ ತಂದಿದ್ದ! ಸೇರಿದ್ದ ಸಾರ್ವಜನಿಕರು ದಿಗ್ಭ್ರಮೆಯಾಗಿದ್ದರು,'ಚಿರತೆಯ ಸರಿಸಮನಾಗಿ ಈ ನಾಯಿಗಳು ಓಡುವುದುಂಟಾ?' ಎಂದು.
ಸ್ಪರ್ದೆ ಶುರುವಾದದ್ದೇ ತಡ ಎಲ್ಲಾ ನಾಯಿಗಳೂ ದೌಡಾಯಿಸಿದವು,ಧೂಳೆಬ್ಬಿಸಿಕೊಂಡು ಪೇರಿ ಕಿತ್ತವು,ಮೊದಲ ಸ್ಥಾನ ಪಡೆಯಲು ಉಲ್ಕಾ ವೇಗ ಕಾಪಾಡುತ್ತಾ ಓಡತೊಡಗಿದವು ಆದರೆ ಚಿರತೆ ಮಾತ್ರ ಉಹ್ಞೂಂ, ಅಲುಗಾಡಲಿಲ್ಲ,ನಿರುಮ್ಮಳವಾಗಿ ಸುಮ್ಮನೆ ಕೂತಿತ್ತು. ಅದನ್ನು ನೋಡಿ ಸಿಟ್ಟಾದ ಮಾಲೀಕ ಚಿರತೆಯ ಬಳಿ ಹೋಗಿ 'ನಿನಗೇನು ಬರಬಾರದ್ದು ಬಂದಿದೆ? ಯಾಕೆ ಹೀಗೆ ಮಾಡಿದೆ? ಓಡಿದ್ದಿದ್ದರೆ ನೀನೇ ಅಲ್ಲವಾ ಗೆಲ್ಲುತ್ತಿದ್ದದ್ದು' ಎಂದ.
ಆಗ ಚಿರತೆಯು 'ಕೆಲವು ಸಲ ಎಲ್ಲರಿಗಿಂತ ನಾವೇ ಶ್ರೇಷ್ಟ ಎಂದು ಪ್ರತಿಪಾದಿಸಹೊರಡುವುದು ಅನೇಕ ಸಲ ನಮಗೆ ನಾವೇ ಅವಮಾನ ಮಾಡಿಕೊಂಡದ್ದಕ್ಕೆ ಸಮಾನವಾಗುತ್ತದೆ,ಅದಲ್ಲದೆ ಅನಗತ್ಯ ಜಾಗದಲ್ಲಿ ನಮ್ಮನ್ನು ನಾವು ಸಾಬೀತುಪಡಿಸಬೇಕಾದ ಅವಶ್ಯಕತೆಯೇ ಇರುವುದಿಲ್ಲ,ಹಾಗಾಗಿ ನನ್ನ ವೇಗದ ಜೊತೆ ನಾಯಿಗಳ ವೇಗದ ಸ್ಪರ್ದೆ ಇಟ್ಟಾಗ ನಾನು ಸುಮ್ಮನಿರುವುದೇ ಸೂಕ್ತ ಉತ್ತರ ಎನಿಸಿಕೊಳ್ಳುತ್ತದೆ ' ಎಂದಿತು.
•••
ನೀವೂ ಅಷ್ಟೇ ಎಲ್ಲ ಜಾಗದಲ್ಲೂ ನೀವೆಂದರೇನು ಎಂದು ಅರ್ಥ ಮಾಡಿಸಲು ಹೊರಡಬೇಡಿ,ತಾತ್ಸಾರವಷ್ಟೇ ಕೆಲವು ಜಾಗಗಳಲ್ಲಿ ಸೂಕ್ತ ಉತ್ತರವಾಗಿರುತ್ತದೆ,ಕೇವಲ ಒಂದು ಅಸಹ್ಯಕರ ನೋಟ ಸಾಕು.
ಕೃಪೆ: ವಾಟ್ಸ್ ಆ್ಯಪ್ ಗ್ರೂಪ್.
ಸಂಗ್ರಹ:ವೀರೇಶ್ ಅರಸಿಕೆರೆ.
************/**************
*🌻ದಿನಕ್ಕೊಂದು ಕಥೆ🌻*
*ಸವಾಲು ಹಾಕಿದ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ ಮೈಸೂರು ಮಹಾರಾಜ ಯಾರು ಗೊತ್ತಾ..?*
ಕಂಠೀರವ ನರಸಿಂಹರಾಜ ಒಡೆಯರ್ ಕಾಲದ(1888-1940) ಆಡಳಿತಾವಧಿಯಲ್ಲಿ ಮೈಸೂರು ಎಲ್ಲ ರಂಗದಲ್ಲಿ ಹೆಸರು ಗಳಿಸಿ ಮರೆಯುತ್ತಿತ್ತು. ಅಂದಿನ ಕಾಲದಲ್ಲಿ ತಿರುಚನಪಳ್ಳಿಯ ಪೈಲ್ವಾನನೊಬ್ಬ ತುಂಬ ಪ್ರಖ್ಯಾತ ಕುಸ್ತಿಪಟು. ಈತನ ವಿರುದ್ಧ ಎಂತಹ ಘಟನುಘಟಿ ಪೈಲ್ವಾನವ್ರು ತರಗುಟ್ಟುತಿದ್ದರು. ಈತನ ವಿರುದ್ಧ ಯಾವ ಕುಸ್ತಿ ಪಟುವೂ ಗೆದ್ದು ಬೀಗಿರಲಿಲ್ಲ.
ತನ್ನಂತ ಶಕ್ತಿಶಾಲಿ ಕುಸ್ತಿಪಟು ಯಾರು ಇಲ್ಲವೆಂದು ಭಾವಿಸಿದ ತಿರುಚನಪಳ್ಳಿಯ ಪೈಲ್ವಾನ್, ಓಮ್ಮೆ ಮೈಸೂರಿಗೆ ಭೇಟಿ ನೀಡಿ ಲಂಗೋಟಿ(ಕುಸ್ತಿ ಆಡಲು ಬಳಸುವ ಬಟ್ಟೆ)ಯನ್ನು ಊರು ಹೊರಾವರಣದಲ್ಲಿರುವ ಮರಕ್ಕೆ ನೇತು ಹಾಕಿ, ಯಾರದರೂ ಕುಸ್ತಿಪಟು ನನ್ನ ವಿರುದ್ಧ ಜಯಶಾಲಿಯಾದರೆ ಈ ಲಂಗೋಟಿಯನ್ನು ತೆಗೆಯುತ್ತೇನೆ. ಇಲ್ಲವಾದರೆ ನಾನು ಬದುಕಿರುವವರೆಗೂ ಈ ನೇತುಹಾಕಿರುವ ಲಂಗೋಟಿ ಕೆಳಗೆ ತಲೆ ತಗ್ಗಿಸಿ ನಡೆಯಬೇಕು ಎಂದು ಜನತೆಯನ್ನು ಅವಮಾನಿಸಿ ತೆರಳಿದ್ದ ಈ ಪೈಲ್ವಾನ್.ಇದರಿಂದ ಕೆರಳಿದ ಅನೇಕ ಮೈಸೂರಿನ ಕುಸ್ತಿಪಟುಗಳು, ತಿರುಚನಪಳ್ಳಿಗೆ ತೆರಳಿ, ಪೈಲ್ವಾನ್‍ನೊಡನೆ ಕಾದಾಡಿ ಸೋತು ಸುಣ್ಣವಾಗಿ ಬರುತ್ತಿದ್ದರು. ಸೋಲಿನ ಮಾತುಗಳನ್ನು ಕೇಳಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ತಾವೇ ಮಾರುವೇಷದಲ್ಲಿ ತಿರುಚನಪಳ್ಳಿಗೆ ತೆರಳಿದ್ರು.
ತಿರುಚನಪಳ್ಳಿಯಲ್ಲಿ ಮಾರುವೇಷ ತೆಗೆದು ಅಖಾಡಕ್ಕಿಳಿದು ಹೋರಾಟ ಮಾಡಿದ ಮಹಾರಾಜ, ಆ ಪೈಲ್ವಾನನ್ನು ಸೆದೆಬಡಿದು, ಮಣ್ಣು ಮುಕ್ಕಿಸಿದರು. ನಂತರ ಅಲ್ಲಿಂದ ಪೈಲ್ವಾನನ್ನು ಕರೆದುಕೊಂಡು ಬಂದು, ಮರಕ್ಕೆ ನೇತು ಹಾಕಿದ ಲಂಗೋಟಿಯನ್ನು ತೆಗೆಸಿದರು.
ಇದರಿಂದ ಸಂತೋಷಗೊಂಡ ಜನತೆ ಕಂಠೀರವ ನರಸಿಂಹರಾಜ ಒಡೆಯರ್‍ವರರಿಗೆ ಜಯಘೋಷಣೆಗಳನ್ನು ಕೂಗಿದರು. ಅಲ್ಲಿಂದ ‘ರಣಧೀರ’ ಕಂಠೀರವ ನರಸಿಂಹರಾಜ ಒಡೆಯರ್ ಎಂಬ ಹೆಸರು ಖ್ಯಾತಿಗೆ ಬಂತು. ಈ ಮಹಾರಾಜರು ಸ್ವತಃ ಉತ್ತಮ ಕುಸ್ತಿಪಟುಗಳು ಕೂಡ ಆಗಿದ್ದು, ಪ್ರತಿನಿತ್ಯ ಚಾಮುಂಡಿಬೆಟ್ಟದಲ್ಲಿರುವ ಸಾವಿರ ಮೆಟ್ಟಲುಗಳನ್ನು ಹತ್ತುವಾಗ, ತಮ್ಮ ಹೆಗಲ ಮೇಲೆ ಬಲಿಷ್ಠ ಕರುವೊಂದನ್ನು ಹೆಗಲಮೇಲೆ ಇಟ್ಟುಕೊಂಡು ನಡೆಯುತ್ತಿದ್ದರು ಎಂಬ ಇತಿಹಾಸವು ಕೂಡ ಇದೆ.
ರಾಜಮಹಾರಾಜರು ಅರಮನೆಯೊಳಗೆ ಕುಸ್ತಿ ಅಭ್ಯಾಸ ಮಾಡಿ, ದೇಹಸಿರಿಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ, ಕಂಠೀರವ ನರಸಿಂಹರಾಜ ಒಡೆಯರ್‍ರೊಬ್ಬರು ತಮ್ಮ ಸಂಸ್ಥಾನದ ಸ್ಥಾನಮಾನಕ್ಕಾಗಿ ಸಾರ್ವಜನಿಕವಾಗಿ ಕುಸ್ತಿ ಮಾಡಿದ ಕುಸ್ತಿ ಪಟು. ಇಂದಿಗೂ ಮೈಸೂರು ಕುಸ್ತಿಯ ತವರೂರಾಗಿದೆ.
ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment