ದಿನಕ್ಕೊಂದು ಕಥೆ 977

ದಿನಕ್ಕೊಂದು ಕಥೆ
ಮೂರ್ತಿ ಚಿಕ್ಕದಾದರು 
ಕೀರ್ತಿ ದೊಡ್ಡದು..! 

ಈ ಮಾತು ಯಾಕೆ ಬಂತು ಗೊತ್ತಾ.. ಇವಾಗೆಲ್ಲಾ ಡಬಲ್ ಮೀನಿಂಗ್ ಗೆ ಈ ಮಾತನ್ನು ಬಳಸುತ್ತಾರೆ.. 

ನೆನಪಿಡಿ.. 

ಈ ಮಾತು ತುಂಬ ಅರ್ಥ ಗರ್ಭಿತವಾಗಿದೆ..

ಓದಿ..

ಹೀಗೆ ಒಂದು ಸಂದರ್ಭದಲ್ಲಿ ಕೈಯಲ್ಲಿನ ಬೆರಳುಗಳು.. ಪರಸ್ಪರ ಮಾತಾಡುತ್ತಿರಬೇಕಾದರೆ.. ನಮ್ಮಲ್ಲಿ ಯಾರು ಶ್ರೇಷ್ಠ ಎಂಬ ಮಾತು ಹಾದು ಹೋಯಿತು..

ಎಲ್ಲಾ ಬೆರಳುಗಳು ನಾವು ನಾವು ಎಂದು ಚೀರ ತೊಡಗಿದವು.. ಆಗ ಯಾರ್ಯಾರು ತಾವು ಹೇಗೆ ಯಾವುದರಲ್ಲಿ ಶ್ರೇಷ್ಠವೆಂದು ಹೇಳಿದರೆ ತೀರ್ಮಾನಿಸಲು ಸೂಕ್ತವಾಗುತ್ತದೆ ಎಂದು ಆಲೋಚಿಸಿ.. ಒಂದೋಂದಾಗೇ ತಮ್ಮ ಶ್ರೇಷ್ಠತೆಯನ್ನು ಹೇಳತೊಡಗಿದವು..

ಮೊದಲು ಹೆಬ್ಬೆರೆಳು ಹೇಳಿತು..

ನಾನು ನಿಮಗಿಂತಲೂ ಗಾತ್ರದಲ್ಲಿ.. ಉಪಮೆಯಲ್ಲಿ ( ಹೋಲಿಕೆ) ದೊಡ್ಡವ... ನಿಮ್ಮೆಲ್ಲರಿಗೂ ಹಿರಿಯಣ್ಣ..  ತಂದೆ ತಾಯಿಗೆ ನನ್ನನ್ನು ಹೋಲಿಸಲಾಗುತ್ತದೆ.. ಏಕಲವ್ಯ. ಅರ್ಜುನರಾದಿ ದ್ರೋಣರು ಕೂಡ ನನ್ನಿಂದಲೇ ಪ್ರಸಿದ್ಧರಾಗಿದ್ದು ಗೊತ್ತಾ ಎಂದು ಬೀಗಿತು.. ಎಲ್ಲಾ ಬೆರಳುಗಳು ಹೌದೆಂದೆವು..

ನಂತರ ತೋರು ಬೆರಳು ಹೇಳಿತು..

ನಾನು ತೋರು ಬೆರಳು.. ನಾನು ಪ್ರತಿಯೊಬ್ಬರ ಅಹಂ ನ ಸಂಕೇತ.. ನಾನು ನನ್ನದು ನನಗೆ ನಾನೇ ಎಂಬ ಸ್ವಂತಿಕೆಯ ಪ್ರತೀಕ.. ನಾನು ಪ್ರತಿಯೊಬ್ಬರ ಸೊಕ್ಕು ಧಿಮಾಕು ಜಂಭದ ಪ್ರತೀಕ ವೆಂದು ಜಂಭಪಟ್ಟಿತು.. ಎಲ್ಲಾ ಬೆರಳುಗಳು ತಲೆಯಾಡಿಸಿದವು..

ನಂತರ ನಡುಬೆರಳು ಎದ್ದು ನಿಂತಿತು..

ನಾನು ನಿಮ್ಮಲ್ಲಗಿರಿಂತ ಎತ್ತರ ಉದ್ದ ಗಾತ್ರ ಅಂದ ಚಂದದಲ್ಲಿ ಉತ್ತಮವಾಗಿದ್ದೀನಿ.. ನನಗೆ ಸಿಕ್ಸ ಪ್ಯಾಕಿದೆ..ನಾನು ಹ್ಯಾಂಡ್ಸಂ ಆಗಿದ್ದೀನಿ ಅಷ್ಟೇ ಯಾಕೇ  ನಾನು ನಿಮ್ಮೆಲ್ಲರಿಗೂ ಅಣ್ಣನಂತೆ.. ನಾನು ಅಧಿಕಾರ ಅಂತಸ್ತಿನ ಪ್ರತೀಕ ಎಂದಿತು.. ಎಲ್ಲಾ ಬೆರಳುಗಳು ಹೌದೆಂದೆವು..

ನಂತರ ಉಂಗುರ ಬೆರಳು ಎದ್ದು ನಿಂತಿತು..

ನಾನು ಉಂಗುರ ಬೆರಳು.. ದೇವರಿಗೆ ಕುಂಕುಮ ಹಚ್ಚುವದರಿಂದ ಹಿಡಿದು.. ಸಂಗಾತಿಗೆ ರಿಂಗ್ ತೊಡಿಸುವವರಿಗೂ ನಾನೇ ಬೇಕು.. ನಾನು ಐಶ್ವರ್ಯದ ಸಂಕೇತ.. ನಾನು ಶ್ರೀಮಂತಿಕೆ ಸಂಕೇತ..  ನನಗೆ ಹಾಕಿದ ಚಿನ್ನ ಕ್ಷಯವಾಗುವುದೇ ಇಲ್ಲಾ.. ನಾನು ಪ್ರತಿಯೊಬ್ಬರ ಸಿರಿ ಸುಖ ಸಂಪದದ ಸಂಕೇತವೆಂದು ಹೆಮ್ಮೆ ಪಟ್ಟುಕೊಂಡಿತು.. ಎಲ್ಲಾ ಬೆರಳುಗಳು ಹೌದೆಂದವು..

ಈಗ ಕಿರು ಬೆರಳ ಸರದಿ.. ಎಲ್ಲಾ ಬೆರಳುಗಳು ಕಿರುಬೆರಳನ್ನೇ ನೋಡ ತೊಡಗಿದವು..  ಮೆಲ್ಲಗೆ ನಕ್ಕವು..

ಕಿರುಬೆರಳು ಸಪ್ಪಗೆ ಮೋರೆ  ಹಾಕಿ ನಿಂತಿತ್ತು.. ಅದಕ್ಕೇನು ಅಂದವೇ ಚಂದವೇ.. ಹೆಬ್ಬೆರಳ ಹಾಗೇ ಶಕ್ತಿ ಇದೆಯೇ.
ತೋರುಬೆರಳಿನ ಹಾಗೇ ಅಹಂ ಇದೆಯೇ..
ನಡುಬೆರಳಿನ ಹಾಗೇ ಸಿಕ್ಸ ಪ್ಯಾಕ್ ಹ್ಯಾಂಡ್ಸಂ ಇದೆಯೇ..
ಉಂಗುರ ಬೆರಳಿನ ಥರ ಸಿರಿ  ಸುಖ ಸಂಪದ ಇದೆಯೇ..! 

ಕಿರುಬೆರಳು ಅಕ್ಷರಶಃ ಕಂಗಾಲಾಗಿ ಹೋಯಿತು.. ಕಿರುಬೆರಳಿನ ಕಣ್ಣಲ್ಲಿ ಸಣ್ಣದಾಗಿ ನೀರು ಜಿನುಗತೊಡಗಿತು.. ! 

ದೇವರೇ ನನಗೇಕೆ ನೀನು ಶಕ್ತಿ ಯುಕ್ತಿ ಅಂದ ಚಂದ ಸಿರಿ ಸೊಕ್ಕು ಕೊಡಲಿಲ್ಲಾ ಎಂದು ಅಳತೊಡಗಿತು. ಉಳಿದ ಬೆರಳುಗಳು ಜೋರಾಗಿ ನಗತೊಡಗಿದವು...

ಅಷ್ಟೋತ್ತು ಇದನ್ನೆಲ್ಲಾ ನೋಡುತ್ತಿದ್ದ ದೇವರು ಪ್ರತ್ಯಕ್ಷನಾದ! 

ಓ ದೇವರು .. ಎರಡು ಕೈಗಳು ದೇವರಿಗೆ ಕೈ ಮುಗಿದವು..! 

ದೇವರು ಕೇಳಿದ.. "ನಿಮ್ಮಲ್ಲಿ ನನ್ನ ದರ್ಶನ ಮೊದಲು ಯಾರಿಗೆ ಆಯಿತು" ..

ಹೆಬ್ಬೆರೆಳು ತಲೆ ಬಾಗಿತು.
ತೋರು ಬೆರಳು ನಾಚಿಕೆಯಿಂದ ತಲೆ ತಗ್ಗಿಸಿತು..
ನಡುಬೆರಳು ಮೌನ ವಾಯಿತು.
ಉಂಗುರ ಬೆರಳು ಸಪ್ಪಗಾಯಿತು..

ಒಡನೆಯೇ ಕಿರುಬೆರಳು ದೇವಾ ನನಗೆ ಉಳಿದ ಎಲ್ಲರಿಗಿಂತ ಮೊದಲು ದರ್ಶನವಾಯಿತು ಎಂದಿತು..

ದೇವರು ನಕ್ಕ..

ಉಳಿದ ಬೆರಳುಗಳು ಆಶ್ಚರ್ಯದಿಂದ ಕಿರುಬೆರಳನ್ನು ನೋಡ ತೊಡಗಿದವು! 

ವಾಹ್..! ಹೌದಲ್ಲವಾ..

ದೇವರು ನುಡಿದ.. ನಾವು ನಮ್ಮ.. ಕೆಲಸ ..ಕಾರ್ಯ.. ನಡೆ ನುಡಿ ಮಮಕಾರ ದಾನ ಧರ್ಮ ಪುಣ್ಯದ ಕೆಲಸಗಳಿಂದ ಔನ್ಯತ್ಯಕ್ಕೆ ಏರಬೇಕೆ ವಿನಃ ನಮ್ಮ ಒಣ ವೈಯ್ಯಾರದಿಂದಲ್ಲಾ..

ಇಲ್ಲಿ ಕೇಳಿ.. ಇನ್ನು ಮುಂದೆ ಎಲ್ಲರಿಗಿಂತಲೂ ಮೊದಲು ಕಿರುಬೆರಳಿಗೆ ನನ್ನ  ಮೊದಲ ದರ್ಶನವಾಗಲಿ. ಎಂದು ಆಶಿರ್ವದಿಸಿ ಕಿರು ಬೆರಳಿನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಹೇಳಿ ಅದೃಶ್ಯನಾದ..

ಕೃಪೆ : ಬಾಳಪ್ಪ ಪತ್ತಾರ್ . ಕನ್ನಡ ಶಿಕ್ಷಕರು. ಕೊಪ್ಪಳ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097