ದಿನಕ್ಕೊಂದು ಕಥೆ. 559

*🌻ವಿಜಯ ದಶಮಿ🌻*                             *9 ದಿನ ತಾಯಿ ಬಳಿ ಇರಬೇಕೆಂದು “ದುರ್ಗೆ”ಗೆ ಶಿವನ ವರ”ದಸರಾ ನವರಾತ್ರಿ” ಹಿಂದಿನ ಕುತೂಹಲ ಕಥೆ*

ದಸರಾ ಹಬ್ಬ ಎಂದರೆ ಎಲ್ಲರಿಗೂ ಗೊತ್ತಿರುವುದೇ. ಕೆಟ್ಟದರ ಮೇಲೆ ಗೆಲುವು ಸಾಧಿಸಿದರ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ದುರ್ಗಾ ಮಾತೆ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಆ ಕ್ಷಣಗಳನ್ನು ನೆನಪಿಸಿಕೊಳ್ಳಲು ಜನ ಹಬ್ಬ ಮಾಡಿಕೊಳ್ಳುತ್ತಾರೆ. ದುರ್ಗೆಯನ್ನು ನವರಾತ್ರಿಗಳ ಕಾಲ ವಿವಿಧ ರೂಪಗಳಲ್ಲಿ ಭಕ್ತರು ಪೂಜಿಸುತ್ತಾರೆ. ಆ ಬಳಿಕ ಕೊನೆಯ ದಿನ ವಿಜಯದಶಮಿ ಬರುತ್ತದೆ. ಆ ದಿನ ಉತ್ಸವಗಳನ್ನು ವೈಭವದಿಂದ ಮಾಡುತ್ತಾರೆ. ಅನೇಕ ಕಡೆ ದಸರಾ ಉತ್ಸವಗಳು ವೈಭವವಾಗಿ ನಡೆಯುತ್ತವೆ. ಆದರೆ ಅದೇ ದಿನ ಬಹಳಷ್ಟು ಮಂದಿ ಆಯುಧ ಪೂಜೆ ಸಹ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಸರಾ ಹಬ್ಬದ ಬಗ್ಗೆ ಕೆಲವೊಂದು ಕುತೂಹಲಕರವಾದ ವಿಷಯಗಳನ್ನು ಈಗ ತಿಳಿದುಕೊಳ್ಳೋಣ.

ಪೂರ್ವದಲ್ಲಿ ಮಹಿಷಾಸುರ ಎಂಬ ರಾಕ್ಷಸ ಜನರನ್ನು ಹಿಂಸಿಸುತ್ತಿದ್ದ. ದೇವತೆಗಳನ್ನೂ ಹಿಂಸಿಸುತ್ತಿದ್ದ. ಆದರೆ ಹೆಸರಿಗೆ ತಕ್ಕಂತೆ ಮಹಿಷ ಎಂದರೆ (ಕೋಣ), ಅವನ ತಲೆ ಕೋಣದಂತೆ ಇತ್ತು. ಈ ಹಿನ್ನೆಲೆಯಲ್ಲಿ ಅವನನ್ನು ಸಂಹರಿಸಲು ದೇವತೆಗಳು ದುರ್ಗಾದೇವಿಯನ್ನು ಸೃಷ್ಟಿಸಿದರು. ಆದರೆ ದುರ್ಗೆಯನ್ನು ನೋಡಿದ ಮಹಿಷಾಸುರ ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಮದುವೆಯಾಗುವಂತೆ ಕೋರುತ್ತಾರೆ. ಆದರೆ ದುರ್ಗಾಮಾತೆ ಆತನಿಗೆ ಷರತ್ತುಗಳನ್ನು ವಿಧಿಸುತ್ತಾಳೆ. ತನ್ನ ಜತೆಗೆ ಯುದ್ದ ಮಾಡಿ ಗೆದ್ದರೆ ಮದುವೆಯಾಗುತ್ತೇನೆಂದು ದುರ್ಗೆ ಹೇಳುತ್ತಾಳೆ. ಹಾಗಾಗಿ ಮಹಿಷಾಸುರ ದುರ್ಗೆಯ ಜತೆ ಯುದ್ಧ ಮಾಡುತ್ತಾನೆ. ಅದು 9 ದಿನಗಳ ಕಾಲ ನಡೆಯುತ್ತದೆ. ಕೊನೆಗೆ 9ನೇ ದಿನ ದುರ್ಗಾಮಾತೆ ಮಹಿಷಾಸುರನನ್ನು ಸಂಹರಿಸುತ್ತಾಳೆ. ಆತನ ತಲೆ ಛೇದಿಸುತ್ತಾಳೆ. ಹಾಗಾಗಿ ಜನ ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಅಂದಿನಿಂದ ವಿಜಯ ದಶಮಿ ಹಬ್ಬವನ್ನು ಜನ ಆಚರಿಸುತ್ತಿದ್ದಾರೆ. ಆ ರಾಕ್ಷಸನ ಕೋಣದ ತಲೆಯನ್ನು ದೇವಿ ಛೇದಿಸುತ್ತಾಳಾದ್ದರಿಂದ ಇನ್ನೂ ಕೆಲವು ಕಡೆ ಕೋಣವನ್ನು ಕಡಿಯುವ ಸಂಪ್ರದಾಯ ಇದೆ.

ಇನ್ನು ದುರ್ಗಾಮಾತೆ 9 ದಿನಗಳ ಕಾಲ 9 ರೂಪಗಳಲ್ಲಿ ದರ್ಶನ ನೀಡುತ್ತಾರೆ ಎಂಬುದು ಗೊತ್ತು. ಆದರೆ ಮೊದಲ ಮೂರು ದಿನ ದುರ್ಗಾ ದೇವಿ ರೂಪದಲ್ಲಿ, ಬಳಿಕ 3 ದಿನ ಲಕ್ಷ್ಮಿ ದೇವಿ ರೂಪದಲ್ಲಿ, ಆ ಬಳಿಕ ಕೊನೆಯ ಮೂರು ದಿನ ಸರಸ್ವತಿ ದೇವಿ ರೂಪದಲ್ಲಿ ನಮಗೆ ದರ್ಶನ ನೀಡುತ್ತಾರೆ. ಹಾಗಾಗಿ 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ರೂಪದಲ್ಲಿ ಮಾತೆ ಭಕ್ತರಿಗೆ ದರ್ಶನ ನೀಡುತ್ತಾರೆ. ಆದರೆ ಪೂರ್ವದಲ್ಲಿ ಶ್ರೀರಾಮನು ದುರ್ಗಾದೇವಿಯನ್ನು 9 ದಿನಗಳ ಕಾಲ ಪೂಜಿಸಿದನಂತೆ. ಹಾಗಾಗಿ ರಾಮನು ರಾವಣನನ್ನು ಸುಲಭವಾಗಿ ಸಂಹರಿಸಲು ಸಾಧ್ಯವಾಯಿತು. ಇನ್ನು ದುರ್ಗಾಮಾತೆಯ ನವರಾತ್ರಿಗೆ ಸಂಬಂಧಿಸಿದಂತೆ ಇನ್ನೊಂದು ವಿಷಯವೂ ಇದೆ. ಅದೇನೆಂದರೆ.. ಪ್ರತಿ ವರ್ಷ 9 ದಿನಗಳ ಕಾಲ ತನ್ನ ತಾಯಿ ಬಳಿ ಇರುವ ವರವನ್ನು ಶಿವನ ಬಳಿ ಪಡೆದಿದ್ದಾಳೆ. ಇದರ ಪ್ರಕಾರ ತನ್ನ ತಾಯಿಯಾದ ಭೂದೇವಿ ಬಳಿ ದುರ್ಗೆ ಪ್ರತಿವರ್ಷ 9 ದಿನಗಳ ಕಾಲ ಬರುತ್ತಾಳೆ. ಹಾಗಾಗಿ ಆ ದಿನಗಳಲ್ಲಿ ನಾವು ನವರಾತ್ರಿಗಳನ್ನು ಆಚರಿಸುತ್ತೇವೆ. ಕೊನೆಯ ದಿನ ದಸರಾ ಆಚರಿಸುತ್ತಿದ್ದೇವೆ.

ಬಹಳಷ್ಟು ಪ್ರದೇಶಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ ಅಲ್ಲವೇ. ಕಬ್ಬಿಣದ ಸಲಕರಣೆಗಳು, ಕೆಲಸದ ಸಾಮಗ್ರಿಗೆ ಪೂಜೆ ಮಾಡುತ್ತಾರೆ. ಆದರೆ ಬೆಂಗಳೂರಿನ ಕೆಲವು ಕಡೆ ಕಂಪ್ಯೂಟರ್‌ಗಳು, ಸಿಡಿಯಂಥ ಎಲೆಕ್ಟ್ರಾನಿಕ್ ಪರಿಕರಗಳಿಗೂ ಪೂಜೆ ಮಾಡಲಾಗುತ್ತದೆ. ಇದೂ ಸಹ ಒಂದು ವಿಧವಾದ ಆಯುಧ ಪೂಜೆ ಎಂಬುದು ನಂಬಿಕೆ. ಇನ್ನು ಕೆಲವು ಕಡೆ ದಸರಾ ಹಬ್ಬದ ನಿಮಿತ್ತ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ. ಇವಿಷ್ಟು ದಸರಾಗೆ ಸಂಬಂಧಿಸಿದ ಕೆಲವು ಆಸಕ್ತಿಕರ ವಿಷಯಗಳು..!       

ಆಧಾರ : ಕನ್ನಡ.ಎಪಿ2ಟಿಜಿ
ಕೃಪೆ :ಕಿಶೋರ್.                                     ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059