ದಿನಕ್ಕೊಂದು ಕಥೆ. 560

*🌻ದಿನಕ್ಕೊಂದು ಕಥೆ🌻*                  *ಒಂದು ಸಹಿಗೋಸ್ಕರ*
*ತಂದೆ ಜಿಲ್ಲಾಧಿಕಾರಿ* *ಕಾರ್ಯಾಲಯಕ್ಕೆ*
*ಅಲೆದಾಡುವುದನ್ನು ಕಂಡು* *ಐಎಎಸ್ ಆದ ಮಗಳು*

ಬಹಳ ವರ್ಷಗಳ ಹಿಂದೆ
ಮಹಾರಾಷ್ಟ್ರ ರಾಜ್ಯದ
ಸೋಲಾಪುರ ಜಿಲ್ಲೆಯ ಒಬ್ಬ ರೈತನು ಹೊಲದ ದಾಖಲೆಗಳಲ್ಲಿ
ಸಹಿ ಮಾಡಿಸಿಕೊಳ್ಳವುದಕ್ಕೆ ಜಿಲ್ಲಾಧಿಕಾರಿ ಕಛೇರಿಯನ್ನು , ರಾತ್ರಿ , ಹಗಲು , ಮಳೆ , ಚಳಿ , ಬಿಸಿಲು ಅನ್ನದೆ ಸುತ್ತುತ್ತಿದ್ದನು..

ಸರಕಾರಿ ಕೆಲಸ ಅಲ್ಲವೆ ಅಷ್ಟು ಸುಲಭವಾಗಿ ಎಲ್ಲಿ ಅಗುತ್ತೇವೆ.
ತಂದೆಯು ಅಲೆದಾಡುವುದನ್ನು ನೋಡಿದ ಮಗಳು ಅಪ್ಪ ಯಾಕೇ ಅಷ್ಟೊಂದು ಸುತ್ತಾಡುತ್ತಿರ , ಯಾವಾಗಲೂ ನೀವು ಮನೆಯಲ್ಲಿ ಇರುವುದಿಲ್ಲ..

ನೀವು ಯಾವಾಗಲೂ ವ್ಯಸ್ತವಾಗಿರುತ್ತಿರು ಈ ಕೆಲಸವನ್ನು ಯಾರು ಮಾಡಬೇಕು ಎಂದೆಲ್ಲಾ ಕೇಳುತ್ತಿದ್ದಳು ಅದಕ್ಕೆ ತಂದೆ ಒಂದೆ ಉತ್ತರವನ್ನು ಹೇಳುತ್ತಿದ್ದನು ನಮ್ಮ ಕೆಲಸವನ್ನು ಕಲೆಕ್ಟರ್ ಮಾಡಬೇಕು ಎಂದು...

ಆ ಸಮಯದಲ್ಲಿ #ಕಲೆಕ್ಟರ್ ಅನ್ನುವ ಶಬ್ದ ಅ ಒಂಬತ್ತು ವರ್ಷದ ಮಗುವಿನ ತಲೆಯಲ್ಲಿ
ಕುಳಿತುಕೊಂಡು ಬಿಟ್ಟಿತು..

ಅ ಸಮಯದಲ್ಲಿ ಅ ಬಾಲಕಿ #ರೋಹಿಣಿಯ ವಯಸ್ಸು 09 ವರ್ಷ
ಅಗಿನ ಸರಕಾರ ರೈತರಿಗೆ ಕೆಲವು ಘೋಷಣೆಗಳನ್ನು , ಘೋಷಿಸಿತು..

ಅದರ ಲಾಭ ಪಡೆಯಲು ಅ ರೈತನು ಹಗಲು ರಾತ್ರಿ ಅಲೆದಾಡುತ್ತಿದ್ದನು.

ತಂದೆಯ ಸ್ಥಿತಿಯನ್ನು ನೋಡಿದ ಮಗಳು ತಾನು ಕಲೆಕ್ಟರ್ ಅಗಿ ಜನರಿಗೆ ಸೇವೆ ಮಾಡಬೇಕು ಅನ್ನುವ ಧೃಡ ನಿರ್ಧಾರ ಮಾಡಿದಳು..

ರೋಹಿಣಿಯ ತಂದೆ 65 ವರ್ಷಗಳಿಂದ ಸ್ವಯಂ ಸೇವಕರು ಅಗಿ ಕೆಲಸ ಮಾಡುತ್ತಿದ್ದರು..
ಅಗ ತಂದೆಗೆ ರೋಹಿಣಿ ಒಂದೆ ಮಾತು ಹೇಳಿದಳು ಅಪ್ಪ ನಾನು ಕಲೆಕ್ಟರ್ ಅಗುತ್ತೇನೆ ಎಂದು..

ಅದಕ್ಕೆ ಅಪ್ಪನು ಕಲೆಕ್ಟರ್ ಅಗು ತಾಯಿ , ಅದರೆ ಬಡವರಿಗೆ ಹೆಚ್ಚಾಗಿ ಸಹಾಯ ಮಾಡು ಎಂದು ಹೇಳಿದ್ದನು..

ಅ ಘಟನೆ ನಡೆದ 23 ವರ್ಷಗಳ ನಂತರ ರೋಹಿಣಿ ತನ್ನ ಕಲೆಕ್ಟರ್ ಕನಸನ್ನು ನನಸು ಮಾಡಿಕೊಂಡಿದ್ದಳು..

ತಂದೆಯ ಅಶಯದಂತೆ
ತನಗೆ ಇಷ್ಟವಾದ ಕಲೆಕ್ಟರ್ ನೌಕರಿ ಮಾಡಲು ಶುರು ಮಾಡಿದಳು , ಕಲೆಕ್ಟರ್ ಕಛೇರಿ ಇಂದ ಅಗುವ ಕೆಲಸಗಳನ್ನು ಬೇಗನೆ ಮಾಡುವಂತೆ ಕಛೇರಿಯ ಇತರ ಅಧಿಕಾರಿಗಳಿಗೆ ಪ್ರೇರಣೆ ಕೊಡುತ್ತಿದ್ದಳು..

ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ರೋಹಿಣಿ ಅವರು ಅಲ್ಲಿಯ ಸ್ಥಳೀಯ ಜನರಿಗೆ ತೊಂದರೆ ಅಗಬಾರದು ಎಂದು ತಮಿಳು ಕಲೆತು , ಅಲ್ಲಿನ ಜನರ ಸಮಸ್ಯೆಗಳನ್ನು ಅರಿತುಕೊಂಡ ಅವರಿಗೆ ಸಹಾಯ ಮಾಡುತ್ತಾಳೆ..

ಸೇಲಂ ಜಿಲ್ಲೆಯಲ್ಲಿ 170
ಐ,ಎ,ಎಸ್ ಪುರುಷ ಅಧಿಕಾರಿಗಳ ನಂತರ #ಪ್ರಥಮ_ಮಹಿಳ_ಐಎಎಸ್ ಅಧಿಕಾರಿಯಾಗಿ ರೋಹಿಣಿ ಅವರು ಬಂದಿದ್ದರು..

ರೋಹಿಣಿ ಅವರ ಕಾರ್ಯ ಶೈಲಿ
ಸೇಲಂ ಜಿಲ್ಲಾ ಜನತೆಗೆ ಬಹಳ ಇಷ್ಟವಾಗಿದೆ..

ತನ್ನ ಜವಾಬ್ದಾರಿಗಳನ್ನು ಅರಿತುಕೊಂಡು ಜಿಲ್ಲೆಯ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ , ಮಹಿಳ ಸಶಕ್ತಿಕರಣ ವಿಷಯವಾಗಿ ನಿರಂತರ ಕೆಲಸ ಮಾಡುತ್ತಿದ್ದಾಳೆ..

ಇಂದಿನ ದಿನಗಳಲ್ಲಿ ಸೇಲಂ ಜಿಲ್ಲೆಯಲ್ಲಿ ಸ್ವಚ್ಚತಾ ವಿಷಯ ಬಗ್ಗೆ ಜನರಲ್ಲಿ ಜಗುರುಕತೆ ಮೂಡಿಸುತ್ತಿದ್ದಾಳೆ..

ರೋಹಿಣಿ ತರಹ ಅಧಿಕಾರಿಗಳು ಈ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.                            ಕೃಪೆ :ಕನ್ನಡವೆ ಸತ್ಯ ಕನ್ನಡವೆ ನಿತ್ಯ.                                                   ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097