ದಿನಕ್ಕೊಂದು ಕಥೆ. 751
*🌻ದಿನಕ್ಕೊಂದು ಕಥೆ🌻 ಸಾಧನೆ ಸಾಧಕನ ಸ್ವತ್ತು, ಹೊರತು ಸೋಮರಿಗಳ ಸ್ವತ್ತಲ್ಲ.*
ಜಾಕ್ ಮಾ ಒಂದು ಸಮಯದಲ್ಲಿ ಕೆಲಸಕ್ಕಾಗಿ ಪರದಾಡುತ್ತಿದ್ದ ಇವರು ಮುಂದೆ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು ಬನ್ನಿ ಇವರ ಜೀವನದ ಬಗ್ಗೆ ಮೊದಲಿನಿಂದ ತಿಳಿದುಕೊಳ್ಳೋಣ…
ಸೆಪ್ಟೆಂಬರ್ 10 1964 ರಂದು ಜಾಕ್ ಮಾ ಅವರು ಚೈನಾದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು.
ಇವರು ತಮ್ಮ 13 ನೇ ವಯಸ್ಸಿನಲ್ಲೇ ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡಲು ಆರಂಭಿಸಿದರು.
ಇವರು ಫಾರಿನರ್ ಗಳ ಜೊತೆ ಇಂಗ್ಲಿಷ್ ನಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದರು 9 ವರ್ಷ ಈ ಕೆಲಸ ಮಾಡಿದರು ಹಾಗಾಗಿ ಇವರಿಗೆ ಇಂಗ್ಲಿಷ್ ನಲ್ಲಿನ ಜ್ಞಾನ ತುಂಬಾ ಹೆಚ್ಚಿತು.
ಈ ಕೆಲಸ ಮಾಡುತ್ತಿದ್ದಾಗ ಒಬ್ಬ ವಿದೇಶಿ ಸ್ನೇಹಿತ ಇವರ ಚೈನೀಸ್ ಹೆಸರು ಹೇಳಲು ಕಷ್ಟ ಎಂದು ಇವರಿಗೆ ಜಾಕ್ ಎನ್ನುವ ಹೆಸರನ್ನ ಇಟ್ಟರು.
ಇವರಿಗೆ ಓದಿನಲ್ಲಿ ಅಷ್ಟು ಆಸಕ್ತಿ ಇರದ ಕಾರಣ 4ನೇ ತರಗತಿಯಲ್ಲಿ ಎರಡು ಬಾರಿ 8ನೇ ತರಗತಿಯಲ್ಲಿ 3 ಬಾರಿ ಫೇಲ್ ಆಗಿದ್ದರು …ಕೊನೆಗೆ ಹೇಗೋ ಪಾಸ್ ಮಾಡಿ ಇಂಗ್ಲಿಷ್ ನಲ್ಲಿ ಡಿಗ್ರಿ ಪಡೆದರು.
ನಂತರ ಕೆಲಸ ಹುಡುಕಲೆಂದು 30 ಬೇರೆ ಬೇರೆ ಕಂಪನಿಗಳಿಗೆ ಅರ್ಜಿ ಹಾಕಿದ್ದರು ಆದರೆ ಎಲ್ಲಾ ಕಡೆ ತಿರಸ್ಕೃತರಾದರು.
ಕೆ.ಎಫ್.ಸಿ ಮೊದಲ ಬಾರಿಗೆ ಚೈನಾ ದಲ್ಲಿ ಬಂದಾಗ ಇಲ್ಲಿ ಕೆಲಸಕ್ಕಾಗಿ 24 ಜನ ಅರ್ಜಿ ಹಾಕಿದ್ದರು ಅದರಲ್ಲಿ 23 ಜನ ಸೆಲೆಕ್ಟ್ ಆದರೂ ಜಾಕ್ ಮಾ ಒಬ್ಬರು ಮಾತ್ರ ರಿಜೆಕ್ಟ್ ಆದರು.
ನಂತರ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿದ್ದರು ಒಟ್ಟು 5 ಮಂದಿಯಲ್ಲಿ ಮತ್ತೆ ಜಾಕ್ ಒಬ್ಬರನ್ನ ಬಿಟ್ಟು ಬೇರೆಲ್ಲರು ಸೆಲೆಕ್ಟ್ ಆದರು.
ಇವರಿಗೆ ಇಂಗ್ಲಿಷ್ ಜ್ಞಾನ ಚೆನ್ನಾಗಿದ್ದ ಕಾರಣ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು ಆಗ ಇವರ ಸಂಬಳ ತಿಂಗಳಿಗೆ ಕೇವಲ 12 ಡಾಲರ್.
ಒಮ್ಮೆ ಸ್ನೇಹಿತನನ್ನು ಭೇಟಿ ಮಾಡಲು ಜಾಕ್ ಅಮೇರಿಕಾಕ್ಕೆ ಹೋದರು ಅಲ್ಲಿ ಮೊದಲ ಬಾರಿಗೆ ಇಂಟರ್ನೆಟ್ ನೋಡಿದರು ಇದಕ್ಕೂ ಮೊದಲು ಇವರು ಯಾವಾಗಲೂ ಇಂಟರ್ನೆಟ್ ಬಳಸಿರಲಿಲ್ಲಾ.
ಇವರು ಇಂಟರ್ನೆಟ್ ನಲ್ಲಿ ಬೀರ್ ಬಗ್ಗೆ ಹುಡುಕಾಟ ನಡೆಸಿದರು ಅಲ್ಲಿ ಬೇರೆ ಬೇರೆ ದೇಶಗಳಿಂದ ಇದರ ಬಗ್ಗೆ ಮಾಹಿತಿ ಮಾಹಿತಿ ದೊರಕಿತು ಆದರೆ ಅವರಿಗೆ ಚೈನಾ ಎನ್ನುವ ಹೆಸರು ಎಲ್ಲೂ ಕಾಣಿಸಲಿಲ್ಲಾ.
ಈಗಾಗಿ ಇವರು ಚೈನಾದ ಬಗ್ಗೆ ಸಾಮಾನ್ಯ ವಿಷಯಗಳನ್ನ ಹುಡುಕಾಟ ನಡೆಸಿದರು ಆಗ ಇಂಟರ್ನೆಟ್ ನಲ್ಲಿ ಚೈನಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುವುದು ತಿಳಿದುಬಂತು ಇದರಿಂದ ಅವರಿಗೆ ತುಂಬಾ ದುಃಖವಾಯಿತು.
ಆಗ ಚೈನಾದಲ್ಲಿ ಇಂಟರ್ನೆಟ್ ಅಷ್ಟೊಂದು ಪ್ರಖ್ಯಾತವಿರಲಿಲ್ಲಾ ಇದೆ ಸರಿಯಾದ ಸಮಯ ಎಂದು ಜಾಕ್ ಮಾ ತಮ್ಮದೇ ಆದ ವೆಬ್ ಸೈಟ್ ಮಾಡಿ ಅದಕ್ಕೆ ಚೈನಾ ಎಲ್ಲೋ ಪೇಜ್ ಎಂದು ಹೆಸರಿಟ್ಟರು.
ಇವರ ವ್ಯಾಪಾರದ ಆಲೋಚನೆ ಚೆನ್ನಾಗಿದ್ದರೂ ಕೆಲವೇ ವರ್ಷಗಳಲ್ಲಿ ಇದನ್ನ ಮುಚ್ಚುವ ಪರಿಸ್ಥಿತಿ ಬಂದಿತು ನಂತರ ಇದನ್ನ ಮುಚ್ಚಲೇ ಬೇಕಾಯಿತು.
ಇಷ್ಟೆಲ್ಲಾ ಸೋಲುಗಳನ್ನ ಕಂಡರು ಛಲ ಬಿಡದೆ ತಮ್ಮ ತಪ್ಪುಗಳನ್ನ ಸರಿ ಮಾಡಿಕೊಂಡು 17 ಸ್ನೇಹಿತರ ಜೊತೆ ಸೇರಿ ಅಲಿಬಾಬಾ ವೆಬ್ ಸೈಟ್ ಸೃಷ್ಟಿಸಿದರು…ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು .
ಇವರು ಅಲಿಬಾಬಾ ಕಂಪನಿಯನ್ನ ಸೃಷ್ಟಿ ಮಾಡಿದ ಕೆಲವೇ ವರ್ಷಗಳಲ್ಲಿ ebay ಕಂಪೆನಿಯನ್ನ ಚೈನಾದಿಂದ ಹೊರ ಹಾಕಲು ಯಶಸ್ವಿಯಾದರು.
ebay ಮತ್ತು Amazon ಎರಡು ಕಂಪನಿಗಳು ಗಳಿಸುವ ಹಣವನ್ನ ಅಲಿಬಾಬಾ ಕಂಪೆನಿಯೊಂದೇ ಗಳಿಸುತ್ತದೆ.
ಜಾಕ್ ಮಾ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಇವರ ಸಂಪತ್ತು 20 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿದೆ.
ಜಾಕ್ ಮಾ ತಮ್ಮ ಜೀವನದಿಂದ ಸೋಲು ಎಂದು ಶಾಶ್ವತವಲ್ಲ ಜೀವನದಲ್ಲಿ ಎಂದಿಗೂ ಪ್ರಯತ್ನ ನಿಲ್ಲಿಸಬಾರದು ಮತ್ತು ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂದು ತೋರಿಸಿಕೊಟ್ಟಿದ್ದಾರೆ…
ಕೃಪೆ: ಮುಖ ಪುಸ್ತಕ. ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment