ದಿನಕ್ಕೊಂದು ಕಥೆ 1049

*🌞ದಿನಕ್ಕೊಂದು ಕಥೆ🌞*
            
 ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.
 
      ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ,ಮಹಾಸ್ವಾಮಿ ,ಒಂದು ಹಕ್ಕಿ ,ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ  ಹಾರಾಡುತ್ತದೆ ,ಆದರೆ ಇನ್ನೊಂದು ಏನು ಮಾಡಿದರೂ  ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ, ನಾನು  ಅದು  ಹಾರಲು ನನ್ನ ಬುದ್ದಿ ಯನ್ನೆಲ್ಲಾ   ಉಪಯೋಗಿಸಿದ್ದೇನೆ,ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.
     ಏನೋ ಅನಾರೋಗ್ಯ ಇರಬೇಕೆಂದು,ಭಾವಿಸಿದ ರಾಜ ,ವೈಧ್ಯರು,ಚಿಕಿತ್ಸಕರನ್ನು ಕರೆಸಿ ,ಔಷಧೋಪಚಾರ ಮಾಡಿಸಿದ,ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ. ರಾಜನಿಗೆ ತುಂಬಾ ಬೇಸರವಾಯ್ತ.
    ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ  ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ  ರೈತಾಪಿ  ವ್ಯಕ್ತಿ ಯನ್ನು  ಕರೆತಂದು ಇದರ  ವಿಷಯವನ್ನು ತಿಳಿಸಿದ.
       ಮರುದಿನ ಅಂತಃಪುರದ ಕಿಟಕಿಯಿಂದ  ನೋಡಿದಾಗ  ಈ ಗಿಡುಗ ,ಗರಿಗೆದರಿ  ಆಕಾಶದಲ್ಲಿ ಮುಕ್ತವಾಗಿ ಹಾರಾಡುವುದನ್ನು  ಕಂಡು  ರಾಜನಿಗೆ ಬಹಳ ಖುಷಿಯಾಯಿತು. ಅರೆ ಆ ರೈತ ಏನು ಚಮತ್ಕಾರ ಮಾಡಿದ ,ಆತನನ್ನು ಕರೆತನ್ನಿ ಎಂದು ಆದೇಶಮಾಡಿದ.
     ಏನು ಮಂತ್ರ ಮಾಡಿದೆ,ಈ ಹಕ್ಕಿಗೆ  ಹೇಳು ,ಎಂದು ರೈತನನ್ನು ಕೇಳಿದ,ಆಗ ರೈತ ಅತ್ಯಂತ ವಿನಯವಾಗಿ  ,ನಾನೇನು ಮಾಡಲಿಲ್ಲ ಮಹಾಸ್ವಾಮಿ,ಗಿಡುಗ ಕೂತಿದ್ದ ರಂಬೆಯನ್ನು ಕಡಿದು ಹಾಕಿದೆ ಅಷ್ಟೇ ,ಗಿಡುಗ ತಾನಾಗಿಯೇ ಮೇಲೆ ಹಾರಿತು, ಅಂದ.
    ಹೀಗೆಯೇ ನಾವೆಲ್ಲರೂ ಅಸಮಾನ್ಯ, ಪ್ರತಿಭೆಯನ್ನು  ಹೊತ್ತೇ ಹುಟ್ಟಿರುತ್ತೇವೆ,ಆದರೆ ಚಿರಪರಿಚಿತರನ್ನು ಹಿಡಿದು ,ಕೂತಲ್ಲೇ ಕೂತಿರುತ್ತೇವೆ,ಪರಿಚಿತ  ಸುಲಭಕರ ,ಸರ್ವ ಸಾಧಾರಣ  ವಿಷಯಕ್ಕೆ  ಅಂಟಿಕೊಂಡು ಕೂತಿರುತೇವೆ, ವಿಶಾಲ ಪ್ರಪಂಚದ  ಅರಿವೇ ಇರುವುದಿಲ್ಲ, ಇಷ್ಟೇ ಜೀವನ ಎಂಬ ಭಯದಲ್ಲಿ ಹುದುಗಿರುತ್ತೇವೆ. ಒಂದು ಸಲ ಭಯದ ಕೊಂಬೆಯನ್ನು ಕತ್ತರಿಸಿ ,ಸ್ವನಿರ್ಮಿತ ಬಂಧನದಿಂದ ಮುಕ್ತ ರಾದಾಗ, ಗರಿಗೆದರಿ ಹಾರುವ ಭವ್ಯತೆಯನ್ನು ಕಂಡುಕೊಳ್ಳಬಹುದು.
    
 ಕೃಪೆ:ಸುವರ್ಣಾಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059