ದಿನಕ್ಕೊಂದು ಕಥೆ 1052

*🌞ದಿನಕ್ಕೊಂದು ಕಥೆ🌞*

ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. 

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು.. 
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... 

ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... ‘*

*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*

*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.

**************************************
*ಮಹಾವೀರ ಮತ್ತು ಕಳ್ಳ.*
    ಕಳ್ಳನೊಬ್ಬ,ಮರಣಶಯೈಯಲ್ಲಿದ್ದ, ಮಗನನ್ನು ಕರೆದು,ಇದು ನನ್ನ ಕೊನೆಯ ಮಾತು,ನೀನು ಮಹಾವೀರ ಎಂಬ ವ್ಯಕ್ತಿಯಿಂದ  ಯಾವಾಗಲೂ ದೂರ ಇರು,ನೀನಿರುವ ಹಳ್ಳಿಗೇನಾದರೂ  ಅವನು ಬಂದರೆ ಬೇರೆ  ಊರಿಗೆ ಹೋಗಿಬಿಡು,ನೀನು ಹೋಗುತ್ತಿರುವ ದಾರಿಯಲ್ಲಿ ಅವನು ಬರುವುದು ಗೊತ್ತಾದರೆ ,ಬಚ್ಚಿಟ್ಟುಕೊ, ಒಂದು ವೇಳೆ ,ಅವನ ಮಾತುಗಳು ನಿನ್ನ ಕಿವಿಗೆ ಬಿದ್ದರೆ, ಕಿವಿ ಕಣ್ಣು ಎರಡನ್ನೂ ಮುಚ್ಚಿಕೊಂಡುಬಿಡು,ಒಟ್ಟಿನಲ್ಲಿ ನೀನು ಅವನಿಂದ ಹುಷಾರಾಗಿರು ,ಎಂದ.
   ಮಗ ,ತಾನೇಕೆ ಮಹಾವೀರನಿಗೆ ಅಷ್ಟು ಹೆದರಬೇಕು ಎಂದು ಅಪ್ಪನನ್ನು ಕೇಳಿದ, ಹೇಳಿದಷ್ಟು ಕೇಳು,ನೀನೆನಾದರೂ ಅವನ ಬಳಿ ಹೋದರೆ,ನಮ್ಮ ಕಸಬು ಹಾಳಾಗಿ, ಹೆಂಡತಿ ಮಕ್ಕಳಿಗೆ ಉಪವಾಸವೇ ಗತಿ . ಎಂದು ಹೇಳಿ ತೀರಿಕೊಂಡ.
     ಆ ಕಳ್ಳನ ಮಗ ಅಪ್ಪ ಹೇಳಿದಂತೆ ಮಹಾವೀರನಿಂದ ಯಾವಾಗಲೂ ದೂರವೇ ಇರುತ್ತಿದ್ದ. ಆದರೆ ಒಂದು ದಿನ  ಮಹಾವೀರ  ಒಂದು ತೋಪಿನಲ್ಲಿ  ಮೌನವಾಗಿ ಕುಳಿತಿದ್ದ, ಅವನು ಕುಳಿತಿದ್ದು  ಕಳ್ಳನಿಗೆ ಗೊತ್ತಾಗದೆ ಅದೇ ಹಾದಿಯಲ್ಲಿ ನೆಡೆದು ಬಂದ,ಇದ್ದಕ್ಕಿದ್ದಂತೆ  ಮಹಾವೀರ ಮಾತನಾಡತೊಡಗಿದ,ಕಳ್ಳನಿಗೆ ಅರ್ಧ ಮಾತು  ಮಾತ್ರ  ಕೇಳಿಸಿತು,ತಕ್ಷಣ ಕಿವಿ  ಮುಚ್ಚಿ ,ಅಲ್ಲಿಂದ ಓಡಿದ,ಆದರೆ  ರಾಜ ಭಟರು ಅವನನ್ನು ಹುಡುಕುತ್ತಿದ್ದರು.ಅವನು ಮಾಡಿದ ಕಳ್ಳತನದಿಂದ   ಎಲ್ಲಾ ಕಡೆ ಅವನ ಹುಡುಕಾಟ  ನೆಡೆಯುತ್ತಿತ್ತು,ಕೊನೆಗೆ ಅ ನು ಸಿಕ್ಕಿ ಬಿದ್ದ.
     ಕಳ್ಳತನ ಅವನ ಕುಲದ ಕಸಬು, ಅದರಲ್ಲಿ ಅವನು ಪಳಗಿ ಬಿಟ್ಟಿದ್ದ,ಅವನೇ ಕಳ್ಳನೆಂದು ಎಲ್ಲರಿಗೂ ಗೊತ್ತಿತ್ತು ,ಆದರೆ ಯಾವ ಸಾಕ್ಷಿ ಪುರಾವೆಗಳನ್ನು  ಉಳಿಸುತ್ತಿರಲಿಲ್ಲಾ.ಆದ್ದರಿಂದ ಅವನು ಕಳ್ಳತನ  ಒಪ್ಪಿಕೊಳ್ಳುವಂತೆ ಮಾಡುವುದೇ ಏಕೈಕ ದಾರಿಯಾಗಿತ್ತು.
     ಅವನಿಗೆ ಜ್ಞಾನ ತಪ್ಪುವಷ್ಟು,ಮಧ್ಯಪಾನ ಮಾಡಿಸಿ ,ಅದೇ ಸ್ಥಿತಿಯಲ್ಲಿ ಮೂರು ದಿನ ಕಳೆಯುವಂತೆ ಮಾಡಲಾಯಿತು. ಎಚ್ಚರ ವಾದಾಗ ಮಂಪರು ಸ್ಥಿತಿ ಯಲ್ಲೇ ಇದ್ದ,ಅವನ ಸುತ್ತ ಸುಂದರ ತರುಣಿಯರು ಸುತ್ತುವರಿದಿದ್ದರು,ತಾನೆಲ್ಲಿದ್ದೇನೆ  ಎಂದು ಅವರನ್ನು ಕೇಳಿದ, ನೀನು ಸತ್ತು ಹೋಗಿದ್ದೀಯ, ನಿನ್ನನ್ನು ಸ್ವರ್ಗಕ್ಕೊ ನರಕಕ್ಕೊ  ಕರೆದುಕೊಂಡು ಹೋಗಲು ಸಿದ್ದತೆ ನೆಡೆಯುತ್ತಿರುವುದಾಗಿ ಅವರು ಹೇಳಿದರು. ನೀನು ಸತ್ಯ ಹೇಳಿದರೆ ಸ್ವರ್ಗಕ್ಕೆ, ಸುಳ್ಳು ಹೇಳಿದರೆ  ನರಕಕ್ಕೆ ಕಳಿಸುವುದಾಗಿ  ಹೇಳಿದರು.
    ಕಳ್ಳನಿಗೆ ಈಗ ತಾನು ಸತ್ಯ ವನ್ನೇ  ಹೇಳಿ ಸ್ವರ್ಗಕ್ಕೆ  ಹೋಗುವುದೇ  ಸರಿ ,ಹೇಗಿದ್ದರೂ  ತಾನು ಸತ್ತಿದ್ದೇನಲ್ಲಾ  ,ಈ ಅವಕಾಶವನ್ನು ಕಳೆದುಕೊಳ್ಳಬಾರದು ಎನ್ನಿಸಿತು. ಆದರೆ ಅವನಿಗೆ ಆ ಕ್ಷಣದಲ್ಲಿ  ಮಹಾವೀರನ ಅರ್ಧಂಬರ್ದ ನುಡಿಗಳು  ನೆನಪಾದವು, ಯಮಧೂತರ ಪಾದಗಳು  ಹಿಂದುಮುಂದಾಗಿರುತ್ತವೆ, ಎಂಬುದು, ಆದರೆ ಅವನ ಸುತ್ತ ನಿಂತಿದ್ದ ಜನರ ಪಾದಗಳೆಲ್ಲಾ ಸರಿಯಾಗೇ ಇರುವುದನ್ನು ಕಂಡು ಜಾಗೃತನಾದ,ತನ್ನ ತಪ್ಪನ್ನು ಒಪ್ಪಿಕೊಳ್ಳುವ  ಅಗತ್ಯ ವಿಲ್ಲವೆಂದು ಮನಗಂಡ.ಅಲ್ಲಿ ನೆಡೆಯುತ್ತಿರುವ ಮೋಸವನ್ನು ಅರಿತು ,ತಾನು ಯಾವುದೇ ಪಾಪಕಾರ್ಯ ಮಾಡಿಲ್ಲವೆಂದು ಹೇಳಿದ. ಹಾಗಾಗಿ ಅವನನ್ನು ಬಿಟ್ಟು ಬಿಟ್ಟರು.
    ಅಲ್ಲಿಂದ ಅವನು ಸೀದಾ ಮಹಾವೀರನಲ್ಲಿಗೆ  ಹೋಗಿ  ಅವನ ಪಾದಗಳಿಗೆ ಎರಗಿದ.ತಾನು ಕೇಳಿದ ಅರ್ಧ ಮಾತನ್ನು ,ಪೂರ್ಣ ಮಾಡಿ ಎಂದು ವಿನಂತಿಸಿಕೊಂಡ,ಮಹಾವೀರನಿಗೆ  ಸಂಪೂರ್ಣ ಶರಣಾದ.
     ಒಂದಲ್ಲ ಒಂದು ದಿನ  ಈ ಕಳ್ಳ ನೇಣುಗಂಬವನ್ನು  ಏರಲೇ ಬೇಕಾಗಿತ್ತು,ಮಹಾವೀರನ ಒಂದೇ ಒಂದು ನುಡಿ  ಅವನ ಜೀವನವನ್ನೇ ಉಳಿಸಿಬಿಟ್ಟಿತು.
    ಮಹಾವೀರ ಹೇಳುತ್ತಿದ್ದ,ಜ್ಞಾನೋದಯ ಹೊಂದಿದವರು ಹೇಳುವ ಮಾತನ್ನು ಅರ್ಧ ಕೇಳಿದರೂ ಸಹ ,ಒಂದಲ್ಲಾ ಒಂದು ದಿನ  ಉಪಯೋಗಕ್ಕೆ ಬಂದೇ ಬರುವುದು ಎಂದು.
     ಅದೇ ರೀತಿಯಲ್ಲಿ, ದೇವಸ್ಥಾನ ದ ಮುಂದೆ ಹಾದು ಹೋಗುವ ಮನುಷ್ಯ, ಅಲ್ಲಿಂದ  ಬರುವ ಗಂಟೆಗಳ ಶಬ್ದವನ್ನು ,ವೇಧಗೋಷಗಳನ್ನು  ಕೇಳಿಸಿಕೊಂಡಾಗ,ಸುವಾಸನೆಯನ್ನು ಸವಿದಾಗ,ಅದೂ ಸಹ ಅವನಿಗೆ  ಉಪಯೋಗವಾಗಬಲ್ಲದು.
     
ಕೃಪೆ: ಸುವರ್ಣಾ ಮೂರ್ತಿ
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097