ದಿನಕ್ಕೊಂದು ಕಥೆ 913
ದಿನಕ್ಕೊಂದು ಕಥೆ ವಿದ್ಯೆ ಕಲಿಸುವುದು ಶಾಲೆ ಬುದ್ಧಿ ಬೆಳೆಸುವುದು ಮನೆ* ಒಳ್ಳೆಯ ನೌಕರಿ ಸಿಗಬೇಕೆಂದರೆ ಫಸ್ಟ್ರ್ಯಾಂಕ್ ಒಂದೇ ಬಂದರೆ ಸಾಕಾಗುವುದಿಲ್ಲ. ಬುದ್ಧಿಶಕ್ತಿ, ಜ್ಞಾನ, ವಿಚಾರಶಕ್ತಿ ಮೊದಲಾದವು ಬೇಕಾಗುತ್ತವೆ. ಇವ್ಯಾವನ್ನೂ ಶಾಲೆಗಳಲ್ಲಿ ಹೇಳುವುದಿಲ್ಲ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದುವುದಕ್ಕೆ ಶಾಲೆ ಮಾತ್ರ ಸಾಲದು, ತಂದೆ-ತಾಯಿ ಮಕ್ಕಳಿಗೆ ಮೊದಲ ಗುರುಗಳು. ಮಕ್ಕಳನ್ನು ಬೆಳೆಸುವ ಕ್ರಮ ಅವರ ವಯಸ್ಸಿಗೆ ತಕ್ಕ ಹಾಗೆ ಬದಲಾಗಬೇಕು. ಸಣ್ಣವರಿರುವಾಗ ಪಕ್ಕದಲ್ಲಿ ಮಲಗಿಸಿಕೊಂಡು ಕಥೆಗಳನ್ನು ಹೇಳಬೇಕು. ಟೀನೇಜ್ ಬಂದಾಗ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಸಬೇಕು. ಪೇಪರ್ಗಳಲ್ಲಿನ ವಿಷಯಗಳನ್ನು ಡೈನಿಂಗ್ ಟೇಬಲ್ನಲ್ಲಿ ರ್ಚಚಿಸಿದರೆ ಮಕ್ಕಳಲ್ಲಿ ಲೋಕಜ್ಞಾನ ಮಾತ್ರವಲ್ಲದೆ, ಕುಟುಂಬ ಸದಸ್ಯರ ನಡುವೆ ಕಮ್ಯುನಿಕೇಷನ್ ಕೂಡ ಬೆಳೆಯುತ್ತದೆ. ಮಕ್ಕಳಿಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳಬೇಕು. ಅವು ಅರ್ಥವಾಗಬೇಕೆಂದರೆ ದೊಡ್ಡವರು ಓದಬೇಕು. ಎಲ್ಲಿ ಸಿಗುತ್ತವೆ ಎಂದು ಕೆಲವರು ಕೇಳುತ್ತಾರೆ. ಇಂಟರ್ನೆಟ್ನಲ್ಲಿ ಅಂತಹ ರಾಶಿರಾಶಿ ಕಥೆಗಳಿವೆ. ಉದಾಹರಣೆಗೆ ಈ ಕಥೆ ನೋಡಿ-ಒಬ್ಬ ಹುಡುಗ ಹತ್ತನೆಯ ವಯಸ್ಸಿನಲ್ಲಿ ಹಣ್ಣು ಕದಿಯುವಾಗ ಸಿಕ್ಕಿಬಿದ್ದ. ಅವನಿಗೆ ತೋಟದ ಮಾಲಿ ಹೊಡೆಯುತ್ತಿದ್ದಾಗ, ‘ನನಗೆ ಅಪ್ಪ ಇಲ್ಲ, ದಯವಿಟ್ಟು ಬಿಟ್ಟುಬಿ