ದಿನಕ್ಕೊಂದು ಕಥೆ 1006
ದಿನಕ್ಕೊಂದು ಕಥೆ ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ. ಇದೀಗ ರೈಲು ಹತ್ತಿ ಇನ್ನೂ ಬಾಗಿಲ ಬಳಿಯೇ ಇದ್ದ, ಸಾದಾ ಖಾದಿ ಬಟ್ಟೆ ಧರಿಸಿದ್ದ ಹಿರಿಯರೊಬ್ಬರು, ಓಡೋಡಿ ಬರುತ್ತಿದ್ದ ಆ ಹುಡುಗನಿಗೆ ಕೈ ಕೊಟ್ಟು ಮೇಲೆ ಏರಲು ಸಹಾಯ ಮಾಡಿದರು. ರೈಲಿನಲ್ಲಿ ಆ ಹುಡುಗ ಮತ್ತು ಆ ಹಿರಿಯರು ಒಂದೇ ಸೀಟಿನಲ್ಲಿ ಕುಳಿತರು. ಆಗ ಹುಡುಗ ಉಶ್ ಎನ್ನುತ್ತ, "ರೈಲು ಹಿಡಿಯಬಾಕಾದರೆ ಸಾಕುಸಾಕಾಗಿ ಹೋಯಿತು" ಎಂದು ಎದುಸಿರು ಬಿಡುತ್ತ ತನ್ನ ಕರ್ಚೀಫ್ ತೆಗೆದು, ಮುಖ ಒರೆಸಿಕೊಂಡ ಆ ಹಿರಿಯರು ಆ ಹುಡುಗನ್ನು ಕುರಿತು, "ಮಗು ಇಷ್ಟು ಗಡಿಬಿಡಿಯಿಂದ ಎಲ್ಲಿಗೆ ಹೋಗುತ್ತಿರುವಿ ? ಏನು ಕೆಲಸ ?" ಎಂದರು. ಆಗ ಆ ಹುಡುಗ, "ಇವತ್ತು ಸಾಯಂಕಾಲ ಕಲಕತ್ತಾ ನಗರದಲ್ಲಿ, ಈಶ್ವರಚಂದ್ರ ವಿದ್ಯಾಸಾಗರ ಅವರ ಭಾರತ ಸ್ವಾತಂತ್ರ್ಯದ ಕುರಿತು ಬೃಹತ್ ಭಾಷಣದ ಕಾರ್ಯಕ್ರಮವಿದೆ ; ಅದನ್ನು ಕೇಳಲು ಹೋಗುತ್ತಿದ್ದೇನೆ. ನಮ್ಮ ತಂದೆಯವರ ಪ್ರಭಾವದಿಂದ ನನಗೆ ಆ ಕಾರ್ಯಕ್ರಮದಲ್ಲಿ, ಗಣ್ಯರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಗೌರವ ಪಾಸ್ ದೊರೆತಿದೆ, ಆ ಕಾರಣದಿಂದಾಗಿ, ನಾನು ವಿದ್ಯಾಸಾಗರರನ್ನು ಅತ್ಯಂತ ಸಮೀಪದಿಂದ ನೋಡಬಹುದು" ಎಂದು ತನ್ನ ಶ್ರೀಮಂತ ತಂದೆಯ ಬಗ್ಗೆ ಹೆಮ್ಮೆಯಿಂ