ದಿನಕ್ಕೊಂದು ಕಥೆ 1063
ದಿನಕ್ಕೊಂದು ಕಥೆ ಅವಮಾನದಲ್ಲಿ ಬೆಳೆದು, ಅಸಾಮಾನ್ಯನಾದ... ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ. ಉಗ್ಗುವಿಕೆ ಆತನಿಗಿದ್ದ ನ್ಯೂನ್ಯತೆ. ಉಳಿದ ವಿದ್ಯಾರ್ಥಿಗಳು ಆತನನ್ನು ಗೇಲಿ ಮಾಡುತ್ತಿದ್ದರು. ಆತ ನೋಡಲು ಅಷ್ಟೊಂದು ಸುಂದರನೂ ಆಗಿರಲಿಲ್ಲ. ಅವನ ಮೈನೋಟ ಹಾಗೂ ಉಗ್ಗುವಿಕೆ ನೋಡಿ ಆತನ ಸ್ನೇಹ ಮಾಡಲು ಯಾರೂ ಮುಂದೆ ಬಾರದೆ ಆತ ಏಕಾಂಗಿಯಾಗಿದ್ದ. ಸಹವಿದ್ಯಾರ್ಥಿಗಳ ಟೀಕೆಗಳಿಂದ ಆತ ಜರ್ಝರಿತನಾಗಿದ್ದ. ಆತನ ರೂಪ ನೋಡಿ ‘ಏಲಿಯನ್’ ಎಂದು ಕಟುಕುತಿದ್ದರು. ರೋವನ್ ಅಟ್ಕಿನ್ಸನ್ ಎಂಬ ವಿದ್ಯಾರ್ಥಿ ಎಲ್ಲರಿಂದ ಬೇರ್ಪಟ್ಟ ನತದೃಷ್ಟನಂತೆ ತೋರುತ್ತಿದ್ದ. ದೇವರು ಎಲ್ಲರನ್ನೂ ಒಂದೇ ರೀತಿ ಸೃಷ್ಟಿಸಿಲ್ಲ. ಕೈ ಇಲ್ಲದವರು, ಕಾಲಿಲ್ಲದವರು, ಅಂಧರು, ಕಿವುಡರು, ಮೂಗರು, ಬುದ್ಧಿಮಾಂದ್ಯರು, ಇವೆಲ್ಲಾ ಸೃಷ್ಟಿಯಲ್ಲಿನ ನ್ಯೂನ್ಯತೆಗಳು. ಇವರೆಲ್ಲರಿಗೂ ಎಲ್ಲವನ್ನು ಕ್ರಮಬದ್ಧವಾಗಿ ಹೊಂದಿರುವ ನಮ್ಮಂತೆಯೇ ಬದುಕುವ ಹಕ್ಕಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರ ಹಕ್ಕುಗಳನ್ನು, ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಈ ರೀತಿಯ ತೀರಾ ನ್ಯೂನ್ಯತಯಲ್ಲದಿದ್ದರೂ, ಸ್ವಲ್ಪ ಮಟ್ಟಿನ ನ್ಯೂನ್ಯತೆಯಲ್ಲಿ ಹುಟ್ಟಿ ಬೆಳೆದ ಹುಡುಗನಾಗಿದ್ದ ರೋವನ್ ಆಟ್ಕಿನ್ಸನ್. ಆದರೂ ಆತ ಅನುಭವಿಸಿದ ವೇದನೆ ಕಡ