ದಿನಕ್ಕೊಂದು ಕಥೆ. 526
🌻🌻 *ದಿನಕ್ಕೊಂದು ಕಥೆ* 🌻🌻 💐*ಐದು ಅಮೂಲ್ಯ ಪ್ರಶ್ನೆಗಳು*💐 ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಆಸ್ಥಾನಕ್ಕೆ ಒಮ್ಮೆ ಸುಜ್ಞಾನಿ ಎಂಬ ಪಂಡಿತ ಬಂದ. ಅವನು ರಾಜನನ್ನು ಕುರಿತು, "ಮಹಾರಾಜರೇ, ನಿಮ್ಮ ಆಸ್ಥಾನದ ಪಂಡಿತರು ಕೇಳಿದ ಯಾವುದೇ ಪ್ರಶ್ನೆಗೆ ತೃಪ್ತಿಕರ ಉತ್ತರ ನೀಡುವೆ. ನಿಮಗೆ ಸರಿ ಎನಿಸಿದರೆ ತಕ್ಕ ಕಾಣಿಕೆ ನೀಡಿರಿ" ಎಂದು ಬೇಡಿಕೊಂಡನು. ರಾಜನ ಒಪ್ಪಿಗೆಯ ಮೇರೆಗೆ ಸಭೆ ಕರೆಯಲಾಯಿತು. ಒಬ್ಬ ಆಸ್ಥಾನದ ಪಂಡಿತನು ಸುಜ್ಞಾನಿಯನ್ನು ಕುರಿತು. "ಸಕಲ ಮಾನವ, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಗಳು ಹಾಗೂ ಗಿಡ ಮರಗಳನ್ನು ಕಾಪಾಡುವ ಕರುಣಾಮ ತಾಯಿ ಯಾರು? ಎಂದು ಕೇಳಿದನು. ಸುಜ್ಞಾನಿ ಪಂಡಿತನು. "ಭೂಮಿ ತಾಯಿ. ಮಾನವನಿಗೆ ಮನೆ ಕಟ್ಟಲು ಕಲ್ಲು - ಮಣ್ಣು, ಕಟ್ಟಿಗೆ ಕೊಡುವವಳು ಭೂಮಿತಾಯಿ. ಜೋಳ - ಗೋಧಿ ಮುಂತಾದ ಆಹಾರ ಧಾನ್ಯ ಬೆಳೆಯುವವಳು ಅವಳು. ಗಿಡಗಳ ಮೂಲಕ ಹಣ್ಣು, ಕಾಯಿ ನೀಡುವಳು. ಹೊಳೆ, ಕೆರೆ, ಸರೋವರ ಮೂಲಕ ನೀರು ಕೊಡುವವಳು ಭೂಮಿ ತಾಯಿಯೇ" ಎಂದು ಉತ್ತರಿಸಿದನು. ಎರಡನೆಯ ಪಂಡಿತನು, "ಸಕಲ ಜೀವಿಗಳನ್ನು ರಕ್ಷಣೆ ಮಾಡುವ ನಿಜವಾದ ರಾಜನು ಯಾರು" ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು "ನಿಜವಾದ ರಾಜನೆಂದರೆ ಮಳೆರಾಜನೆ. ಮಳೆರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರ ಧಾನ್ಯ ಬೆಳೆಯುತ್ತಾನೆ. ಲತೆಗಳು ಹೂ ಕೊಡುವವು. ಗಿ