ದಿನಕ್ಕೊಂದು ಕಥೆ 880
*🌻ದಿನಕ್ಕೊಂದು ಕಥೆ🌻* *ನೀವು ಅವರಿಗೆ ಇಂದು ‘ಹಲೋ’ ಹೇಳಿದಿರಾ?* ಕುತೂಹಲ ಹುಟ್ಟಿಸುವಂತಹ ವ್ಯಕ್ತಿತ್ವ ವಿಕಸನ ಉಪನ್ಯಾಸಕರೊಬ್ಬರು ಅಮೇರಿಕಾದಲ್ಲಿದ್ದಾರೆ. ಅವರ ಹೆಸರು ಚಾಲ್ಸರ್ ಅವರು ಒಂದು ವಿಚಿತ್ರ ಪ್ರಶ್ನೆ ಕೇಳಿಯೇ ತಮ್ಮ ಉಪನ್ಯಾಸಗಳನ್ನು ಪ್ರಾರಂಭಿಸುತ್ತಾರೆ. ಆ ಪ್ರಶ್ನೆ ಏನೆಂದರೆ ‘ನಿಮ್ಮ ಪ್ಯಾರಾಚೂಟನ್ನು ಇಂದು ಯಾರು ಪ್ಯಾಕ್ ಮಾಡಿಕೊಟ್ಟರು?’ ಬದುಕಿನಲ್ಲಿ ಎಂದೂ ವಿಮಾನವನ್ನೇರದ ಅಥವಾ ಪ್ಯಾರಾಚೂಟ್ ಬಳಸದ ಸಭಿಕರು ಈ ಪ್ರಶ್ನೆ ಕೇಳಿ ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಆಗ ಚಾಲ್ಸರ್ ತಮ್ಮ ನಿಜಜೀವನದ ಅನುಭವವನ್ನು ಹೀಗೆ ಹೇಳುತ್ತಾರೆ. ‘ನಾನು ವಿಯೇಟ್ನಾಮ್ನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದೆ. ಯಶಸ್ವಿಯಾಗಿ ಯುದ್ಧ ವಿಮಾನವನ್ನು ಚಲಾಯಿಸುತ್ತಿದ್ದೆ. ಆದರೆ ಕೊನೆಯ ಬಾರಿ ನಾನಿದ್ದ ಒಂದು ಕ್ಷಿಪಣಿಗೆ ತುತ್ತಾಗಿ ನುಚ್ಚು ನೂರಾಯಿತು. ಸುಟ್ಟು ಭಸ್ಮವಾಯಿತು. ಅದೃಷ್ಟವಶಾತ್ ನಾನು, ಕ್ಷಿಪಣಿ ಬಂದು ವಿಮಾನಕ್ಕೆ ಅಪ್ಪಳಿಸುವುದಕ್ಕೆ ಮುಂಚೆ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹೊರಕ್ಕೆ ಜಿಗಿದುಬಿಟ್ಟೆ. ಪ್ರಾಣವೇನೋ ಉಳಿಯಿತು. ಆದರೆ ನಾನು ಕಮ್ಯುನಿಸ್ ವಿಯೇಟ್ನಾಮಿನಲ್ಲಿ ಯುದ್ಧ ಖೈದಿಯಾಗಿ ಆರು ವರ್ಷ ಕಳೆಯಬೇಕಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ನಾನು ಪೈಲಟ್ ಕೆಲಸ ಬಿಟ್ಟು ‘ವ್ಯಕ್ತಿತ್ವ ವಿಕಸನ’ ಉಪನ್ಯಾಸಗಳನ್ನು ನೀಡುವ ವೃತ್ತಿಯನ್ನು ಕೈಗೆತ್ತಿಕೊಂಡೆ. ಒಮ್ಮೆ ನಾನು ಉಪಾಹಾರ ಗೃಹವೊಂದರಲ್ಲಿ ಕುಳಿತಿದ್ದಾಗ ಟೇಬಲ್ಲಿನಲ