ದಿನಕ್ಕೊಂದು ಕಥೆ 911
*🌻ದಿನಕ್ಕೊಂದು ಕಥೆ🌻* ಬುದ್ಧನು ಒಂದು ದಿನ ಭಿಕ್ಷೆಗಾಗಿ ಒಬ್ಬ ಧನಿಕನ ಮನೆಗೆ ಹೋದ. ಸಿರಿತನದ ಅಹಂಭಾವದಿಂದ ಕೊಬ್ಬಿದ್ದ ಧನಿಕನು, ‘ಭಿಕ್ಷುವೇ, ನಿನಗೇನು ಬೇಕೋ ಕೋರಿಕೋ.! ಚಿನ್ನದ ನಾಣ್ಯಗಳೇ, ರತ್ನಾರಣಗಳೇ, ಹೊಟ್ಟೆ ತುಂಬ ಮೃಷ್ಟಾನ್ನದೂಟವೇ? ಏನು ಬೇಕಿದ್ದರೂ ಸಂಕೋಚವಿಲ್ಲದೆ ಕೇಳು, ಕೊಡುತ್ತೇನೆ’ ಎಂದ. ‘ನನಗೆ ಅಂಥ ಮಹತ್ತರವಾದ ಬೇಡಿಕೆಗಳು ಏನೂ ಇಲ್ಲ. ಆದರೂ ನಿನ್ನದು ಅಂತ ಇದ್ದರೆ ಏನಾದರೂ ಒಂದು ತಂದುಕೊಡು. ಅದನ್ನೇ ಸ್ವೀಕರಿಸುತ್ತೇನೆ’ ಬುದ್ಧ ಮುಗುಳ್ನಗುತ್ತ ಹೇಳಿದ. ‘ಇಲ್ಲಿರುವುದೆಲ್ಲ ನನ್ನದೇ ತಾನೆ! ಏನು ಬೇಕಿದ್ದರೂ ಕೊಡಬಲ್ಲೆ. ತೆಗೆದುಕೋ, ಈ ರತ್ನಖಚಿತ ಒಡವೆಯೊಂದನ್ನು ನಿನಗೆ ತಂದುಕೊಡುತ್ತೇನೆ’ ಧನಿಕ ಒಡವೆಯನ್ನು ಅವನೆದುರು ಚಾಚಿದ. ಆದರೆ ಬುದ್ಧ ಅದನ್ನು ಸ್ವೀಕರಿಸಲಿಲ್ಲ. ‘ಇದು ನಿನ್ನದು ಹೇಗಾಗುತ್ತದೆ? ಬಡವರಿಗೆ ಹಣ ಸಾಲ ಕೊಟ್ಟು ಬಡ್ಡಿ ವಿಧಿಸಿ ಅವರಿಂದ ಅದನ್ನು ಮರಳಿಸಲಾಗದೆ ಬಿಟ್ಟುಹೋದ ಒಡವೆ ಇದಲ್ಲವೆ? ನಿನ್ನದಲ್ಲದ್ದು ನನಗೂ ಬೇಡ’ ಎಂದು ನಿರಾಕರಿಸಿದ. ‘ಹೋಗಲಿ, ಪೆಟ್ಟಿಗೆ ತುಂಬ ಹಣ ಇದೆ. ಇದು ನನ್ನದೇ,ಇನ್ನೊಬ್ಬರದಲ್ಲ. ತೆಗೆದುಕೋ’ ಧನಿಕ ಹಣವನ್ನು ತಂದು ಬುದ್ಧನ ಎದುರಿಗಿರಿಸಿದ. ಬುದ್ಧ ಸಂತೃಪ್ತನಾಗಿರಲಿಲ್ಲ . ‘ಇದು ನಿನ್ನದಲ್ಲ. ಹಿರಿಯರು ಗಳಿಸಿಟ್ಟದ್ದು ನಿನ್ನದಾಗುವುದು ಹೇಗೆ? ನಿನ್ನದು ಮಾತ್ರ ನನಗೆ ಬೇಕು’ ಎಂದ ಆತ. ಧನಿಕನು ಒಂದೊಂದಾಗಿ ವಸ್ತುಗಳನ್ನು ತಂದು ಕೊಡುತ್ತಲೇ ಹೋದ. ಬುದ್ಧನು ಅದನ್ನು ತಿರಸ