ದಿನಕ್ಕೊಂದು ಕಥೆ 989
ದಿನಕ್ಕೊಂದು ಕಥೆ ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಭಾರತರತ್ನ ಪ್ರಶಸ್ತಿಯನ್ನು ಹೆಮ್ಮೆಯಿಂದ ಪಡೆದ ಕನ್ನಡಿಗ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿ ಕೊಡುವುದು ತುಂಬಾ ಕಷ್ಟ. ಮೈಸೂರು ಸಂಸ್ಥಾನದ ದಿವಾನರಾಗಿ ಹಾಗೂ ಮುಖ್ಯ ಇಂಜಿನಿಯರ್ ಆಗಿ ಅವರು ಹುಟ್ಟು ಹಾಕಿದ ಸಂಸ್ಥೆಗಳು ಅಸಂಖ್ಯ! ಅವರ ಬದುಕೇ ಒಂದು ಅದ್ಭುತ ಯಶೋಗಾಥೆ. ಅವರು ಮೊದಲು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು. ಅದರ ನಂತರ ಪೂನಾ ಇಂಜಿನಿಯರಿಂಗ್ ಕಾಲೇಜಿನಿಂದ BE ( civil) ಪದವಿ. ಮೊದಲು ಸೇವೆ ಸಲ್ಲಿಸಿದ್ದು ಮಹಾರಾಷ್ಟ್ರ ಸರಕಾರದ PWD ಇಲಾಖೆಯಲ್ಲಿ. ಈ ಅವಧಿಯಲ್ಲಿ ಮುಂಬೈ ಮಹಾನಗರದ ನೀರು ಸರಬರಾಜು, ಒಳಚರಂಡಿ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಮುಂದೆ ಹೈದರಾಬಾದ ಸರಕಾರವು ಅವರ ಸೇವೆಯನ್ನು ಪಡೆಯುವಲ್ಲಿ ಯಶಸ್ವಿ ಆಯಿತು. ಅಲ್ಲಿ ಪ್ರವಾಹದಿಂದ ನಗರದ ಕೆರೆಗಳು ತುಂಬಿ ಹರಿದು ಇಡೀ ನಗರವೇ ಕೊಚ್ಚಿಕೊಂಡು ಹೋಗುವ ಸಮಸ್ಯೆ ಇತ್ತು. ಅಲ್ಲಿನ ಕೆರೆಗಳ ಸಂರಕ್ಷಣೆ, ಒಳಚರಂಡಿ ಯೋಜನೆಯ ಯಶಸ್ವೀ ನಿರೂಪಣೆಯಿಂದ ಮತ್ತೆ ಹೈದರಾಬಾದ ನಗರದಲ್ಲಿ ನೆರೆ ಬರಲಿಲ್ಲ! ಅವರ ಕೀರ್ತಿ ಎಲ್ಲೆಡೆ ಹರಡಿದಂತೆ ಮೈಸೂರಿನ ಮಹಾರಾಜರು ಅವರನ್ನು ತುಂಬು ಗೌರವದಿಂದ ಮೈಸೂರು ಸಂಸ್ಥಾನದ ಸೇವೆಗೆ 1909ರಲ್ಲೀ ಆಮಂತ್ರಿಸಿದರು. ಸರ್ ಎಂವಿ ಅವರು ಸಂತೋಷದಿಂದ ಒಪ್ಪಿಕೊಂಡು ಮೈಸೂರ