Posts

Showing posts from December, 2021

ದಿನಕ್ಕೊಂದು ಕಥೆ 1035

*🌻ದಿನಕ್ಕೊಂದು ಕಥೆ🌻* *ವಿದ್ಯಾ ದದಾತಿ ವಿನಯಂ* ಚಂದ್ರಗುಪ್ತ ನೆಂಬ ರಾಜನು ವಿದ್ಯಾಕಾಶಿಯನ್ನು ಆಳುತ್ತಿದ್ದನು. ಚತುರನು, ವಿದ್ಯಾವಂತನು, ಬುದ್ಧಿವಂತನು, ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ರಾಜನಿಗೆ ಅಧ್ಯಾತ್ಮದತ್ತ ಒಲವು ಮೂಡಿತು. ಆಧ್ಯಾತ್ಮವನ್ನು ಕಲಿತು ತಿಳಿದುಕೊಳ್ಳಬೇಕೆಂಬ ಹಂಬಲದಿಂದ, ಆತನು ತನ್ನ ಮಂತ್ರಿಯನ್ನು ಕರೆದು ಮಹಾಮಂತ್ರಿಗಳೆ ನಾನು ಆಧ್ಯಾತ್ಮವನ್ನು ಕಲಿತುಕೊಳ್ಳಬೇಕು ನಮ್ಮ ರಾಜ್ಯದಲ್ಲಿರುವ ಎಲ್ಲಾ ಗುರುಕುಲಗಳನ್ನು ವಿಚಾರಿಸಿ, ಶ್ರೇಷ್ಠವಾದ ಆಧ್ಯಾತ್ಮ ಅನುಭವವಿರುವ ಗುರುವನ್ನು ಗುರುತಿಸಿ, ಪ್ರತಿದಿನ ಅರಮನೆಗೆ ಬಂದು ನನಗೆ ಆಧ್ಯಾತ್ಮ ಕಲಿಸಿಕೊಡುವಂತೆ ತಿಳಿಸಿ ಎಂದನು .  ಸ್ವಲ್ಪ ದೂರದ ಕಾಡಿನಲ್ಲಿ 'ಸುಗುಣಾನಂದ' ಎಂಬ ಅನುಭವಿ ಆಧ್ಯಾತ್ಮ ಗುರುಗಳು ವಾಸಿಸುತ್ತಿದ್ದಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅರಮನೆಗೆ ಬರಲು ಒಪ್ಪುವರೇ ಎಂಬ ಅನುಮಾನ ನನಗೆ ಇದೆ ಎಂದು ಮಂತ್ರಿಯು ಹೇಳಿದನು. ಅದಕ್ಕೆ ರಾಜನು ಮಂತ್ರಿಗಳೆ, ನೀವು ರಥವನ್ನು ತೆಗೆದುಕೊಂಡು ಹೋಗಿ ಗೌರವಾದರದಿಂದ ಮಾತನಾಡಿಸಿ ಅವರನ್ನು ಹೇಗಾದರೂ ಮಾಡಿ ಅರಮನೆಗೆ ಕರೆತನ್ನಿ ಎಂದನು.  ರಾಜನ ಮಾತಿನಂತೆ ಮಂತ್ರಿ ರಥದಲ್ಲಿ ಹೊರಟು ಗುರುಗಳ ಆಶ್ರಮಕ್ಕೆ ಬಂದನು. ಗುರುಗಳನ್ನು ಕಂಡು ವಿನಯದಿಂದ ನಮಸ್ಕರಿಸಿ, ಸ್ವಾಮಿ ನಾನು ಅರಮನೆಯಿಂದ ಬಂದಿದ್ದೇನೆ. ನಮ್ಮ ರಾಜರಿ