ದಿನಕ್ಕೊಂದು ಕಥೆ 1044
*🌻ದಿನಕ್ಕೊಂದು ಕಥೆ🌻* *ಜಿಮ್ ಕಾರ್ಬೆಟ್* ಜಿಮ್ ಕಾರ್ಬೆಟ್ ಬೇಟೆಗಾರನಾಗಿದ್ದವರು ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು ರೋಚಕ ವ್ಯಕ್ತಿತ್ವ. ಇಂದು ಅವರ ಸಂಸ್ಮರಣೆ ದಿನ. ಎಡ್ವರ್ಡ್ ಜೇಮ್ಸ್ ಜಿಮ್ ಕಾರ್ಬೆಟ್ 1875ರ ಜುಲೈ 25ರಂದು ಭಾರತದ ನೈನಿತಾಲ್‍ನಲ್ಲಿ ಜನಿಸಿದರು. ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ 13 ಮಕ್ಕಳ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದರು. ತಂದೆ ವಿಲಿಯಮ್ ಕ್ರಿಸ್ಟಾಫರ್ ಕಾರ್ಬೆಟ್. ತಾಯಿ ಮೇರಿ ಜೇನ್ ಕಾರ್ಬೆಟ್. 1862ರಲ್ಲಿ ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ಇಲ್ಲಿಗೆ ವರ್ಗಾವಣೆಗೊಂಡರು. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ. ತಂದೆಯ ಪೋಸ್ಟ್ ಮಾಸ್ಟರ್ ಕೆಲಸ ಅವರ ಹಿರಿಯಣ್ಣ ಟಾಮ್ ಕಾರ್ಬೆಟ್ ಅವರಿಗೆ ದೊರಕಿತು. ಕಾರ್ಬೆಟ್ ಅವರ ಕುಟುಂಬ ಚಳಿಗಾಲದ ಸಮಯದಲ್ಲಿ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿ ನೆಲೆಗೊಳ್ಳುತ್ತಿತ್ತು. ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಕುರಿತಾದ ಆಕರ್ಷಣೆಗೊಳಗಾದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದರು. ನಿರಂತರ ಅಲೆಮಾರಿಯಾಗಿದ್ದ ಅವರಲ್ಲಿ ಕ್ರಮೇಣವಾಗಿ ಅನ್ವೇಷಕ ಪ್ರವೃತ್ತಿಯ ಬೇಟೆಗಾರ