ದಿನಕ್ಕೊಂದು ಕಥೆ 1060
ದಿನಕ್ಕೊಂದು ಕಥೆ ನಾನೇಕೆ ಅಪ್ಪನಾದೆ? ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು . ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ . ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ . ಆಳುತ್ತಿದ್ದ ಆತ , "ಅಪ್ಪ ಪಕ್ಕದ ಮನೆ ತ್ರಯಾಂಭಕ ಚೀವಿಂಗ್ ಗಮ್ ಕೊಟ್ಟನೆಂದು". "ಜೀವಮಾನದಲ್ಲಿ ಇನ್ನು ತಿನ್ನುವುದಿಲ್ಲ "ಎಂದು . ಕೋಲು ಪುಡಿ ಆಗುವ ತನಕ ಹೊಡೆದಿದ್ದೆ . ಆತ ಕೈ ಮುಗಿಯುತಿದ್ದ ..."ಇದೊಂದು ಸಾರಿ ಬಿಟ್ಟು ಬಿಡು ಅಪ್ಪ " ಎಂದು . ಮಗನ ಹದ್ದು ಬಸ್ತಿನಲ್ಲಿ ಇಟ್ಟಿದ್ದೆ . ಆದರೆ ನಾನು ಸಣ್ಣವನಿದ್ದಾಗ , ಅಪ್ಪನ "ಜೇಬಿನಿಂದ " ದುಡ್ಡು ಹಾರಿಸಿಕೊಂಡು ಹೋಗಿ ...ಶುಂಠಿ ಪೇಪರ್ ಮೆಂಟ್ , ಸೋಡಾ "ಕುಡಿದಿದ್ದು "ಮರೆತು ಹೋಗಿತ್ತು . ನಾಲ್ಕನೇ ವರ್ಷಕ್ಕೆ ಆತನ ಶಾಲೆಗೆ ಹಾಕುವಾಗ , ಪ್ರತಿ ಬಾರಿ ಆತನ "ಕಲಿಕೆಯ "ಮೇಲೆ ನನ್ನ ಗಮನ . "ನನ್ನ ಮಗ ನೂರರಲ್ಲಿ ಒಬ್ಬನಾಗಬೇಕು" ಎಂಬ ಹಂಬಲ ನನ್ನದು . ನನ್ನಾಕೆ ಯಾವತ್ತೂ , ನನ್ನ "ಆಸೆಗೆ "ಒತ್ತೆಯಾಗಿ ನಿಂತವಳು . ಮದುವೆ ಆಗಿ ಹೊಸದರಲ್ಲಿ , ನಾಲ್ಕು ವರ್ಷ ಮಕ್ಕಳು ಬೇಡ ಎಂದುಕೊಂಡಿದ್ದೆ . ಆದರೆ "ಅಚಾನಕ್ಕಾಗಿ "ಒಂದೇ ವರ್ಷದಲ