ದಿನಕ್ಕೊಂದು ಕಥೆ 1059

*🌻ದಿನಕ್ಕೊಂದು ಕಥೆ🌻*

*ಆಸ್ತಿಗಾಗಿ ತಂದೆಯನ್ನೇ ಕೋರ್ಟಿಗೆ ಎಳೆದ ಶ್ರೀಮಂತ ಮಗಳು; ಕೋರ್ಟಿನಲ್ಲಿಯ ದೃಶ್ಯ ನೋಡಿ ತಂದೆ ಫುಲ್ ಶಾಕ್!*

ನಿವೃತ್ತನಾಗಿ ಪೆನ್ಶನ್ ತೆಗೆದುಕೊಳ್ಳುತ್ತಿರುವ ತಂದೆಯ ವಿರುದ್ಧವೇ ಗಂಡನ ಮನೆಯಲ್ಲಿ ವಾಸಿಸುತ್ತಿದ್ದ ಮಗಳೊಬ್ಬಳು ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಳು. ನ್ಯಾಯಾಲಯದಲ್ಲಿ ಮಗಳು ನ್ಯಾಯಾಧೀಶರ ಮುಂದೆ ನನಗೆ ತಂದೆಯ ಆಸ್ತಿಯಲ್ಲಿ ನನ್ನದೇ ಆದ ಪಾಲು ಬೇಕಾಗಿದೆ ಎಂದಳು. ಇದಕ್ಕಾಗಿಯೇ ನಾನು ನನ್ನ ತಂದೆಯ ವಿರುದ್ಧ ಖಟ್ಲೆಯನ್ನು ದಾಖಲಿಸಿದ್ದೇನೆ ಎನ್ನುತ್ತಾಳೆ.
ಮಗನ ಹಾಗೆ ಮಗಳಿಗೂ ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ದೊರೆಯಬೇಕಾಗಿರುವುದು ಮಗಳ ಅಧಿಕಾರವಾಗಿದೆ. ಇದಕ್ಕಾಗಿ ವಿಚಾರಣೆಯ ಅವಶ್ಯಕತೆಯೇ ಇಲ್ಲ ಎಂದು ನ್ಯಾಯಾಧೀಶರು ಹೇಳುತ್ತಾರೆ. ತಂದೆಯಾದವನು ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಸಮನಾಗಿ ಪಾಲು ಮಾಡಿ ಕೊಟ್ಟೇ ಕೊಡುತ್ತಾರೆ ಇದು ಅವರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶರು ಹೇಳುತ್ತಾರೆ. ಆಗ ಮಗಳು, ನೋಡಿ ನಾನು ತುಂಬಾ ಶ್ರೀಮಂತಳಾಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ ಆದರೂ ಸಹ ನನಗೆ ತಂದೆಯ ಆಸ್ತಿಯಲ್ಲಿ ಪಾಲು ಬೇಕೆ ಬೇಕು ಎನ್ನುತ್ತಾಳೆ.
ನನಗೆ ನನ್ನ ತಂದೆಯ ಕಡೆಯಿಂದ ಪ್ರತಿ ತಿಂಗಳಿನ ಖರ್ಚು ತೆಗೆದುಕೊಳ್ಳಬೇಕಾಗಿದೆ ಎನ್ನುತ್ತಾಳೆ. ಇದನ್ನು ಕೇಳಿ ನ್ಯಾಯಾಧೀಶರು ಆಶ್ಚರ್ಯ ವ್ಯಕ್ತ ಮಾಡುತ್ತಾರೆ, ಹಾಗೂ ಆ ಮಗಳಿಗೆ ಕೇಳುತ್ತಾರೆ, ನೀನು ಇಷ್ಟೊಂದು ಶ್ರೀಮಂತಳಾಗಿರುವಾಗ ನಿನಗೆ ಹಣದ ಅವಶ್ಯಕತೆ ಯಾಕೆ ಬಿದ್ದಿದೆ ಎಂದು ಕೇಳುತ್ತಾರೆ. ಆಗ ಮಗಳು ಸುಮ್ಮನೆ, ತನ್ನ ತಂದೆಯ ಹೆಸರು ಮತ್ತು ವಿಳಾಸ ನ್ಯಾಯಾಧೀಶರಿಗೆ ಕೊಟ್ಟು ಮೊದಲು ನನ್ನ ತಂದೆಯನ್ನು ನ್ಯಾಯಾಲಯಕ್ಕೆ ಕರೆಯಿರಿ ಎಂದು ವಿನಂತಿಸುತ್ತಾಳೆ.

ನ್ಯಾಯಾಧೀಶರು ಮಗಳ ವಿನಂತಿಯ ಮೇರೆಗೆ ಆಕೆಯ ತಂದೆ ತಾಯಿಗೆ ನ್ಯಾಯಾಲಯಕ್ಕೆ ಕರೆಯಿಸಿಕೊಳ್ಳುತ್ತಾರೆ. ನಂತರ ನ್ಯಾಯಾಧೀಶರು ಪೋಷಕರಿಗೆ ಹೀಗೆ ಹೇಳುತ್ತಾರೆ, ನಿಮ್ಮ ಮಗಳಿಗೆ ನಿಮ್ಮ ಕಡೆಯಿಂದ ಪ್ರತಿ ತಿಂಗಳು ಖರ್ಚಿಗೆ ಅಂತ ಹಣ ಬೇಕಾಗಿದೆ. ಅದು ಎಷ್ಟೇ ಇರಲಿ ನಿಮ್ಮ ಜವಾಬ್ದಾರಿ ಅಥವಾ ಕರ್ತವ್ಯವೆಂದು ತಿಳಿದು ನಿಮಗೆ ಕೊಡಬೇಕಾಗುತ್ತದೆ ಎಂದರು. ನ್ಯಾಯಾಧೀಶರ ಮಾತು ಕೇಳಿ ತಂದೆ ಒಮ್ಮೆಲೆ ತಬ್ಬಿಬ್ಬಾಗುತ್ತಾರೆ ಮತ್ತು ನ್ಯಾಯಾಧೀಶರಿಗೆ, ನನ್ನ ಮಗಳು  ಶ್ರೀಮಂತೆಯೂ ಆಗಿದ್ದಾಳೆ ಎನ್ನುತ್ತಾರೆ.

ಹಾಗೆ ನೋಡಲಾಗಿ ಆಕೆಗೆ ಹಣದ ಆವಶ್ಯಕತೆಯೇ ಇಲ್ಲ ಆದರೂ ಆಕೆಗೆ ನನ್ನ ಕಡೆಯಿಂದ ಹಣವೇಕೆ ಡಿಮಾಂಡ್ ಮಾಡುತ್ತಿದ್ದಾಳೆ ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ತಂದೆ. ಅದಕ್ಕೆ ಉತ್ತರವಾಗಿ ನ್ಯಾಯಾಧೀಶರು ನಿಮ್ಮ ಮಗಳಿಗೆ ನಿಮ್ಮ ಕಡೆಯಿಂದ ಆಕೆಯ ಡಿಮಾಂಡ್ ಇದೆ, ಮೇಲಾಗಿ ಆಕೆಯ ಅಧಿಕಾರವೂ ಆಗಿದೆ ಎನ್ನುತ್ತಾರೆ. ಆಮೇಲೆ ಮಗಳು, ‘ನನಗೆ ನನ್ನ ತಂದೆಯಿಂದ ಪ್ರತಿ ತಿಂಗಳು 10 ರೂಪಾಯಿ ದೊರೆಯಬೇಕು ಅದೂ ನನ್ನ ತಂದೆಯೇ ಪ್ರತಿ ತಿಂಗಳು ಸ್ವತಃ ತಾವೇ ನನಗೆ ತಂದು ಕೊಡಬೇಕು ಎನ್ನುತ್ತಾಳೆ.

ನ್ಯಾಯಾಲಯ ತಂದೆಗೆ ಆದೇಶವನ್ನು ನೀಡುತ್ತದೆ, ಅದೇನೆಂದರೆ ಪ್ರತಿ ತಿಂಗಳು ತಪ್ಪದೆ ಮಗಳಿಗೆ 10 ರೂಪಾಯಿಗಳನ್ನು ಕೊಡಬೇಕೆಂದು. ನ್ಯಾಯಾಲಯದ ಕಾರ್ಯಕಲಾಪ ಎಲ್ಲವೂ ಮುಗಿದ ಮೇಲೆ ನ್ಯಾಯಾಧೀಶರಿಗೆ ಒಂದು ಪ್ರಶ್ನೆ ಕಾಡುತ್ತಿತ್ತು, ಅದಕ್ಕೆ ಅವರು ಮಗಳಿಗೆ ನಿಲ್ಲಿಸಿ, ಮಗಳೆ ಆಸ್ತಿಯಲ್ಲಿ ಪಾಲು ಕೇಳುವಾಗ ಬರೀ ತಿಂಗಳಿಗೆ ಹತ್ತೇ ರೂಪಾಯಿಗಳನ್ನು ಏಕೆ ಬೇಡಿದೆ ಎಂದು ಕೇಳುತ್ತಾರೆ. ಆಗ ಮಾತ್ರ ಆ ಮಗಳ ಕಣ್ಣಲ್ಲಿ ನೀರು ಬರಲು ಶುರುವಾಗುತ್ತದೆ.

ನನಗೆ ನನ್ನ ತಂದೆಯ ಮೇಲೆ ಆಪಾರ ಮಮತೆ ಇದೆ. ನನ್ನ ತಂದೆ ಕೆಲಸದಲ್ಲಿ ತುಂಬಾ ಬಿಜಿಯಾಗಿರುತ್ತಾರೆ. ಅವರಿಗೆ ನನ್ನನ್ನು ಭೇಟಿಯಾಗಲು ಸಹ ಸಮಯವಿರುವುದಿಲ್ಲ. ನಾವು ಫೋನಿನಲ್ಲಿ ಕೊನೆಯದಾಗಿ ಯಾವಾಗ ಮಾತನಾಡಿದ್ದೇವೆ ಅದೂ ಸಹ ನನಗೆ ನೆನಪಿಲ್ಲ, ನಾನು ನನ್ನ ತಂದೆಯ ವಿರುದ್ಧ ಕೇಸು ದಾಖಲಿಸಿದ ಕಾರಣವೇನೆಂದರೆ ಅವರು ಪ್ರತಿ ತಿಂಗಳು ನನ್ನನ್ನು ಭೇಟಿಯಾಗಲು ಬರಲಿ ಎನ್ನುವ ಉದ್ದೇಶಕ್ಕೆ ಕೇಸ್ ದಾಖಲಿಸಿದ್ದೇನೆ. ನನ್ನ ಮಕ್ಕಳು ತಮ್ಮ ಅಜ್ಜನಿಗೆ ನೋಡಿ ಆನಂದಿಸುತ್ತಾರೆ.

ಸ್ವಲ್ಪ ಸಮಯಕ್ಕಾದರೂ ನಾನು ನನ್ನ ತಂದೆಯ ಸಹವಾಸದಲ್ಲಿ ಇರುತ್ತೇನೆ ಎಂದು ಮಗಳು ಹೇಳಿದಾಗ, ಆಕೆಯ ಮಾತನ್ನು ಕೇಳಿ ನ್ಯಾಯಾಧೀಶರ ಕಣ್ಣಲ್ಲಿ ನೀರು ಬಂತು. ಈ ಎಲ್ಲ ಮಾತುಗಳನ್ನು ದೂರದಲ್ಲಿ ನಿಂತ ತಂದೆಯೂ ಕೇಳುತ್ತಿರುತ್ತಾರೆ. ತನ್ನ ಮಗಳ ಮನಸ್ಸಿನಲ್ಲಿಯ ಭಾವನೆಯನ್ನು ಕೇಳಿ ತಂದೆಯ ಕಣ್ಣಿನಿಂದ ಕಣ್ಣೀರು ಧಾರೆ ಹರಿಯಲು ಶುರುಮಾಡುತ್ತದೆ. ಮಗಳ ಹತ್ತಿರ ಹೋಗಿ ಪ್ರೀತಿಯಿಂದ ತಬ್ಬಿ ಕೊಳ್ಳುತ್ತಾರೆ ತಂದೆ. ಒಂದು ಮಗಳಿಗೆ ತಂದೆಯಿಂದ ಇದಕ್ಕಿಂತ ಹೆಚ್ಚು ಏನು ಬೇಕಾಗುತ್ತದೆ. ಜೀವನದ ಈ ಪ್ರವಾಸದಲ್ಲಿ ಸಾವಿರಾರು ಜನರು ಭೇಟಿಯಾಗುತ್ತಾರೆ. ಆದರೆ ನಾವು ಮಾಡಿದ ಸಾವಿರಾರು ತಪ್ಪುಗಳನ್ನು ಕ್ಷಮಿಸುವ ದೊಡ್ಡ ಹೃದಯದ ತಂದೆ ಎಂದಿಗೂ ಮತ್ತೊಮ್ಮೆ ಸಿಗುವುದಿಲ್ಲ, ಅಲ್ವಾ?

ಕೃಪೆ ಹಾಸ್ಯ ಹಾರಟೆ ಪೇಸ್ ಬುಕ್ ಪೇಜ್.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055