ದಿನಕ್ಕೊಂದು ಕಥೆ 1065
*🌻ದಿನಕ್ಕೊಂದು ಕಥೆ🌻* *ಅಳಿಲಿನ ಜಾಣತನ* ವಿಕ್ರಮ ಎಂಬ ವ್ಯಕ್ತಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನಿಗೆ ಮರದ ಮೇಲಿಂದ ವಿಚಿತ್ರ ಶಬ್ಧವೊಂದು ಕೇಳಿಸಿತು. ಅದೇನೆಂದು ನೋಡಿದಾಗ, ಹಾವೊಂದು ಮರದ ರೆಂಬೆಯಲ್ಲಿ ತನ್ನ ಬಾಲ ಸಿಕ್ಕಿಸಿಕೊಂಡು ಒದ್ದಾಡುತ್ತಿತ್ತು. ಹಾವು ವಿಕ್ರಮನನ್ನು ಕಂಡು "ಅಯ್ಯಾ ನಿನ್ನ ಕತ್ತಿಯಿಂದ ಈ ರೆಂಬೆಯನ್ನು ಸೀಳು. ನನ್ನ ಬಾಲ ಬಿಡಿಸಿಕೊಳ್ತಿನಿ." ಎಂದು ಬೇಡಿಕೊಂಡಿತು. "ಅದು ಸರಿ, ಆದರೆ, ನೀನು ನನ್ನನ್ನು ಕಚ್ಚಿದರೆ?" ಎಂದು ಕೇಳಿದ ವಿಕ್ರಮ. ಹಾವು "ಖಂಡಿತ ಕಚ್ಚೋದಿಲ್ಲ" ಎಂದು ಮಾತು ಕೊಟ್ಟಿತು. ಅವನು ತನ್ನ ಕತ್ತಿಯಿಂದ ರೆಂಬೆಯ ಸಂದಿಯನ್ನು ಅಗಲಗೊಳಿಸಿದಾಗ ಹಾವು ತನ್ನ ಬಾಲವನ್ನು ಬಿಡಿಸಿಕೊಂಡಿತು. ಬಳಿಕ ಹಾವು "ಅಯ್ಯಾ, ನಿನ್ನ ಕೋಲನ್ನು ಮರದ ರೆಂಬೆಗೆ ಹಿಡಿ. ನಾನು ಕೆಳಗಿಳಿದು ಬರುತ್ತೇನೆ."ಎಂದು ನುಡಿಯಿತು. ಹಾವು ತನ್ನನ್ನು ಕಚ್ಚುವುದಿಲ್ಲ ಎಂದು ಮಾತು ಕೊಟ್ಟಿದ್ದುದರಿಂದ ವಿಕ್ರಮ ಧೈರ್ಯವಾಗಿ ಕೋಲನ್ನು ರೆಂಬೆಗೆ ಹಿಡಿದ. ಹಾವು ಕೆಳಗಿಳಿದು ಬಂದು ಅವನ ಮೈಸುತ್ತ ಬಲವಾಗಿ ಸುತ್ತಿಕೊಂಡಿತು. ಆಗ ಅವನು ಗಾಬರಿಯಿಂದ, "ಅಯ್ಯೋ ಇದೇನು ಮಾಡುತ್ತ ಇದ್ದೀಯಾ?" ಎಂದು ಕೇಳಿದ. "ನಿನ್ನನ್ನು ಸಾಯಿಸುತ್ತೇನೆ" ಎಂದಿತು ಹಾವು. "ನಿನ್ನ ಪ್ರಮಾಣ ಏನಾಯಿತು?" ಎಂದು ಸಂಕಟದಿಂದ ಕೇಳಿದ. "ನಾನು ಪ್ರಮಾಣ ಮಾಡಿದ್ದೇನೋ ನಿಜ. ಆದರೆ, ಅದು